ಜಿಲ್ಲಾಧ್ಯಕ್ಷರ ಚುನಾವಣಾ ಪ್ರಕ್ರಿಯೆಯಲ್ಲಿ ಮೂಗು ತೂರಿಸುವ ಕೆಲಸ ನಾನು ಮಾಡಿಲ್ಲ: ಬಿವೈ ವಿಜಯೇಂದ್ರ
ಡಾ ಕೆ ಸುಧಾಕರ್ ಅವರು ತಮ್ಮ ವಿರುದ್ಧ ಜೆಪಿ ನಡ್ಡಾ ಅವರಿಗೆ ದೂರ ಸಲ್ಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರ, ಚುನಾವಣೆಗಳನ್ನು ರಾಷ್ಟ್ರೀಯ ಉಪಾಧ್ಯಕ್ಷ ಲಕ್ಷ್ಮಣ್ ಅವರು ನೋಡಿಕೊಳ್ಳುತ್ತಿದ್ದಾರೆ, ದೂರು ಅವರಿಗೆ ಸಲ್ಲಿಸಬೇಕು; ತನ್ನನ್ನು ಹುದ್ದೆಯಿಂದ ಸರಿಸಬೇಕೆಂದು ತವಕಿಸುತ್ತಿರುವವರಿಗೆ ಒಳ್ಳೆಯದಾಗಲಿ ಎಂದು ದತ್ತಾತ್ರೇಯನ ಸನ್ನಿಧಿಯಲ್ಲಿ ನಿಂತು ಹೇಳುತ್ತಿದ್ದೇನೆ ಎಂದರು.
ಕಲಬುರಗಿ: ಜಿಲ್ಲೆಯ ಗಾಣಗಾಪುರ ಧಾರ್ಮಿಕ ಕ್ಷೇತ್ರದಲ್ಲಿ ದತ್ತಾತ್ರೇಯನಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 25 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವ ಕೆಲಸ ಪೂರ್ಣಗೊಂಡಿದೆ, ಚುನಾವಣಾ ಪ್ರಕ್ರಿಯೆಯು ಹೈಕಮಾಂಡ್ ಸೂಚನೆ ಮೇರೆಗೆ, ವರಿಷ್ಠರು ಹೇಳಿದಂತೆ ನಡೆದಿದೆ, ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ತಾನು ರಾಜ್ಯಾಧ್ಯಕ್ಷನೆಂಬ ಕಾರಣಕ್ಕೆ ಮೂಗು ತೂರಿಸುವ ಕೆಲಸ ಮಾಡಿಲ್ಲ ಎಂದು ವಿಜಯೇಂದ್ರ ಹೇಳಿದರು. ತಾನು ಶಿಕಾರಿಪುರದ ಶಾಸಕನಾಗಿರುವುದರಿಂದ ಶಿವಮೊಗ್ಗ ಜಲ್ಲಾಧ್ಯಕ್ಷನ ಆಯ್ಕೆಗೆ ಸಂಬಂಧಿಸಿದಂತೆ ಅಭಿಪ್ರಾಯ ಮಂಡಿಸಬಹುದು, ಬೇರೆ ಜಿಲ್ಲೆಗಳ ವಿಷಯದಲ್ಲಿ ತಾನೂ ಕೂಡ ಮಾತಾಡುವಂತಿಲ್ಲ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸುಧಾಕರ್ ಆಡಿರುವ ಮಾತುಗಳು ಅವರಿಗಾಗಲೀ ನನಗಾಗಲೀ ಶೋಭೆ ನೀಡಲ್ಲ: ಬಿವೈ ವಿಜಯೇಂದ್ರ
Latest Videos