ಆನ್​ಲೈನ್​ನಲ್ಲಿ ಬಟನ್ ಚಾಕು ತರಿಸಿಕೊಂಡು ಶಿಫಾಳ ಹತ್ಯೆ: ತನಿಖೆಯಲ್ಲಿ ಲವ್ ಸ್ಟೋರಿ ರಿವೀಲ್

.ಪ್ರೀತಿ ಪ್ರೇಮ ಅನ್ನೋದು ಪುಸ್ತಕದ ಬದನೆಕಾಯಿ ಅಂತ ಅದೆಷ್ಟೋ ಸಿನೆಮಾಗಳಲ್ಲಿ ಹೇಳಿ ಯುವ ಜನಾಂಗಕ್ಕೆ ಹೇಳುತ್ತಲೇ ಇದ್ದಾರೆ. ಆದ್ರೆ ಪ್ರೀತಿ ಅನ್ನೋ ಮಾಯಾ ಜಾಲದಲ್ಲಿ ಸಿಲುಕಿದ್ದವರ ಪಾಡು ಮಾತ್ರ ಘೋರ,ಘನ ಘೋರ. ಪ್ರೀತಿ ಅನ್ನೋ ಮಾಯಾ ಜಿಂಕೆ ಏನು ಬೇಕಾದ್ರೂ ಮಾಡಿಸಿಯೇ ಬಿಡತ್ತೆ. ಆ ಕ್ಷಣ, ಆ ಒಂದು ಕ್ಷಣ ಕೋಪ ಇಡೀ ಬದುಕನ್ನೇ ನರಕ ಮಾಡಿಬಿಡತ್ತೆ ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿ. ಇನ್ನು ಹಂತಕ ತನಿಖೆ ವೇಳೆ ಮೃತಳ ಜೊತೆಗಿನ ಲವ್ ಸ್ಟೋರಿ ರಿವೀಲ್ ಮಾಡಿದ್ದಾನೆ.

ಆನ್​ಲೈನ್​ನಲ್ಲಿ ಬಟನ್ ಚಾಕು ತರಿಸಿಕೊಂಡು ಶಿಫಾಳ ಹತ್ಯೆ: ತನಿಖೆಯಲ್ಲಿ ಲವ್ ಸ್ಟೋರಿ ರಿವೀಲ್
Shifa Murder Case
Follow us
ಭೀಮೇಶ್​​ ಪೂಜಾರ್
| Updated By: ರಮೇಶ್ ಬಿ. ಜವಳಗೇರಾ

Updated on:Jan 31, 2025 | 8:24 PM

ರಾಯಚೂರು, (ಜನವರಿ 31): ಜಿಲ್ಲೆಯ ಸಿಂಧನೂರಿನಲ್ಲಿ ಎಂಎಸ್​ಸಿ ವಿದ್ಯಾರ್ಥಿನಿ ಶಿಫಾ ಕೊಲೆ ಪ್ರಕರಣದ ತನಿಖೆ ವೇಳೆ ಬೆಚ್ಚಿ ಬೀಳಿಸುವ ಸತ್ಯ ಬಯಲಾಗಿದೆ. ಹಂತಕನ ಫೋನ್ ಬ್ಲಾಕ್ ಮಾಡಿದ್ದ ಕೋಪ, ಮದುವೆಯಾಗಲು ಒಪ್ಪುತ್ತಿಲ್ಲ ಎಂದು ಮುಬಿನ್ ಎನ್ನುವಾತ ಶಿಫಾಳನ್ನು ಹತ್ಯೆಗೆ ಸ್ಕೆಚ್ ಹಾಕಿದ್ದ. ಕೊಲೆ ಮಾಡಲೆಂದೇ ಫ್ಲಿಪ್​ಕಾರ್ಟ್​ನಲ್ಲಿ ಬಟನ್ ಚಾಕು ಆರ್ಡರ್ ಮಾಡಿದ್ದು, ಬಳಿಕ ಅದೇ ಚಾಕುವಿನಿಂದ ಶಿಫಾಳ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ತನಗೆ ಸಿಗದ ಶಿಫಾ ಬೇರೆಯವರಿಗೆ ಸಿಗಬಾರದು ಎಂದು ಈ ಕೃತ್ಯ ಎಸಗಿದ್ದಾನೆ.

ಖಾಕಿ ಎದುರು ಲವ್ ಸ್ಟೋರಿ ರಿವೀಲ್..!

ಗಡಿ ಜಿಲ್ಲೆ ರಾಯಚೂರಿನಲ್ಲಿ ನಿನ್ನೆ(ಜನವರಿ 30) ಘನ ಘೋರ ದುರಂತ ನಡೆದಿತ್ತು. ಶಿಫಾ ಎನ್ನುವ 23 ವರ್ಷದ ಎಂಎಸ್​ಸಿ ಓದುತ್ತಿದ್ದ ವಿದ್ಯಾರ್ಥಿನಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಹೊರಭಾಗದ ಖಾಲಿ ಲೇಔಟ್​ವೊಂದರಲ್ಲಿ ಆಕೆ ಹತ್ಯೆಯಾಗಿತ್ತು .ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸಿಂಧನೂರು ಟೌನ್ ಪೊಲೀಸರು ಆರೋಪಿ ಮುಬಿನ್ ಹೆಡೆಮುರಿ ಕಟ್ಟಿದ್ರು. ಮೃತ ಶಿಫಾ ಹಾಗೂ ಆರೋಪಿ ಮುಬಿನ್ ಮೂಲತಃ ಲಿಂಗಸುಗೂರಿನವರಾಗಿದ್ದು, ಶಿಫಾ ಮದುವೆಗೆ ನಿರಾಕರಿಸಿದ್ದ ಹಿನ್ನೆಲೆ ಆಕೆ ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ಮೊದಲಿಗೆ ಬಯಲಾಗಿತ್ತು. ಆದ್ರೆ ಪೊಲೀಸ್ ತನಿಖೆ ವೇಳೆ ಆರೋಪಿ ಮುಬಿನ್ ಶಿಫಾಳ ಜೊತೆಗಿನ ಲವ್ ಸ್ಟೋರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಇದನ್ನೂ ಓದಿ: ಸಿಂಧನೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಹತ್ಯೆ: ಓರ್ವ ಅರೆಸ್ಟ್

ಒಂದೇ ಏರಿಯಾ, ಒಂದೇ ಕಡೆ ಅಕ್ಕಪಕ್ಕದ ಮನೆಯವರಾಗಿದ್ದ ಹಿನ್ನೆಲೆ ಇಬ್ಬರಿಗೂ ಹೈಸ್ಕೂಲ್ ನಿಂದಲೇ ಪರಿಚಯವಿತ್ತಂತೆ. ಹೀಗಾಗಿ ಪರಿಚಯ ಲವ್​ಗೆ ತಿರುಗಿದೆ. ಆದ್ರೆ ಆತ ಮದುವೆಗೆ ಒತ್ತಾಯಿಸಿದಾಗ ಶಿಫಾ ನಿರಾಕರಿಸಿದ್ದಾಳೆ. ಅಲ್ಲದೇ ಆಕೆ ಆತನ ಫೋನ್ ನಂಬರ್ ಬ್ಲಾಕ್ ಮಾಡಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಆರೋಪಿ ಮುಬಿನ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಆರೋಪಿ ಮುಬಿನ್ ಶಿಫಾಳನ್ನ ಕೋಪದಲ್ಲಿ ಕೊಂದಿರುವ ಹಾಗೆ ಕಾಣುತ್ತಿಲ್ಲ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಮುಬಿನ್ ಮೊದಲೆ ಪ್ಲಾನ್ ಮಾಡಿಕೊಂಡು ಬಂದು ಹತ್ಯೆಗೈದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಯಾಕಂದ್ರೆ ಕಳೆದ ಐದು ತಿಂಗಳಿನಿಂದ ಶಿಫಾ ಹಾಗೂ ಮುಬಿನ್ ನಡುವೆ ಯಾವುದು ಸರಿ ಇರಲಿಲ್ಲ. ಆಕೆ ಮದುವೆಗೆ ನಿರಾಕರಿಸಿ ಫೋನ್ ನಂಬರ್ ಬ್ಲಾಕ್ ಮಾಡಿದ ಹಿನ್ನೆಲೆಯನ್ನು ಮುಬಿನ್​ ಆಕ್ರೋಶಗೊಂಡಿದ್ದ. ಅಲ್ಲದೇ ಆಕೆ ಬೇರೆ ಯುವಕರ ಜೊತೆ ಮಾತನಾಡುತ್ತಿದ್ದಾಳೆಂದು ತಪ್ಪಾಗಿ ತಿಳಿದುಕೊಳ್ತಿದ್ದನಂತೆ. ಹೀಗಾಗಿ ಶಿಫಾ ತನಗೆ ಮಾತ್ರ ಸಿಗಬೇಕು. ಬೇರೆಯವರಿಗೆ ಸಿಗಬಾರದು ಅಂತಲೇ ಆಕೆಯನ್ನು ಕೊಲ್ಲಲು ಪ್ಲಾನ್ ಮಾಡಿಕೊಂಡಿದ್ದ.

ಇದರ ಭಾಗವಾಗಿ ಆರೋಪಿ ಫ್ಲಿಪ್​ಕಾರ್ಟ್​​ನಿಂದ ಬಟನ್ ಚಾಕು ಖರೀದಿಸಿದ್ದ. ನಂತರ ಆಕೆ ಕಾಲೇಜಿಗೆ ಬರೋದನ್ನ ನೋಡಿ ಫ್ಲಿಪ್​ಕಾರ್ಟ್​​ನಲ್ಲಿ ಖರೀದಿಸಿದ್ದ ಚಾಕು ಸಮೇತ ಸಿಂಧನೂರಿಗೆ ಬಂದಿದ್ದ. ಬಳಿಕ ಆಕೆಯನ್ನ ಮಾತುಕತೆಗೆ ಕರೆದೊಯ್ದಿದ್ದಾನೆ. ಮೊದಲು ಆಕೆ ಫೋನ್ ಕಸಿದುಕೊಂಡು ನಂಬರ್ ಅನ್ ಬ್ಲಾಕ್ ಮಾಡಿದ್ದನಂತೆ. ಬಳಿಕ ಮದುವೆಯಾಗು ಅಂತ ಮತ್ತೆ ಮತ್ತೆ ಒತ್ತಾಯಿಸಿದ್ದಾನೆ. ಆದ್ರೆ ಆಕೆ ಒಪ್ಪಿಲ್ಲ. ಆಗ ಮಾತುಕತೆ ವಿಫಲವಾಗ್ತಿದ್ದಂತೆ ಮುಬಿನ್​​ ಶಿಫಾಳ ಕುತ್ತಿಗೆ ಸೀಳಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರ ತನಿಖೆ ವೇಳೆ ಬಯಲಾಗಿದೆ. ಅಲ್ಲದೇ ಆರೋಪಿ ತಮ್ಮಿಬ್ಬರ ಲವ್ ಸ್ಟೋರಿ ಬಗ್ಗೆ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಸದ್ಯ ಸಿಂಧನೂರು ಟೌನ್ ಪೊಲೀಸರು ಆರೋಪಿಯನ್ನ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ..ಆದ್ರೆ ಈ ರೀತಿ ಬೆಳೆದ ಮಗಳು ಹೆಣವಾಗಿದ್ದನ್ನ ಕಂಡು ಆಕೆ ಪೋಷಕರು ಅಕ್ಷರಶಃ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:23 pm, Fri, 31 January 25

ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ಲೋಕಾಯುಕ್ತ ತನಿಖೆಗೆ ಆಗ್ರಹಿಸಿದ್ದು ಖುದ್ದು ಸ್ನೇಹಮಯಿ ಕೃಷ್ಣ: ಶಿವಣ್ಣ
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ರಾಜ್ಯದ ಮಂತ್ರಿಗಳು ಹಣಕಾಸು ಸಚಿವೆಯನ್ನು ಭೇಟಿಯಾಗಿದ್ದಾರೆ: ಶಿವಕುಮಾರ್
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಹಾವೇರಿ: ದೇವಸ್ಥಾನದ ಕಳಸಾರೋಹಣದ ವೇಳೆ ಮುರಿದ ಕ್ರೇನ್​ ಬಕೆಟ್​, ಓರ್ವ ಸಾವು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಕಳೆದ ವರ್ಷ ಮಾರ್ಚ್​ನಲ್ಲಿ ಯಡಿಯೂರಪ್ಪ ವಿರುದ್ಧ ದಾಖಲಾಗಿದ್ದ ದೂರು
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಮದುವೆ ಮಂಟಪಕ್ಕೆ ತಮ್ಮ ರಾಣಾನ ಕರೆತಂದ ರಕ್ಷಿತಾ
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್
ಸಿಬಿಐಗೆ ರಾಜ್ಯಸರ್ಕಾರ ಅನುಮತಿಯ ಅವಶ್ಯಕತೆ ಇರುತ್ತದೆ: ಪರಮೇಶ್ವರ್