ಸಿಂಧನೂರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಕತ್ತು ಸೀಳಿ ಬರ್ಬರ ಹತ್ಯೆ: ಓರ್ವ ಅರೆಸ್ಟ್
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಎಂಎಸ್ಸಿ ವಿದ್ಯಾರ್ಥಿನಿಯ ಕತ್ತು ಸೀಳಿ ಹತ್ಯೆ ಮಾಡಲಾಗಿದೆ. ಲಿಂಗಸುಗೂರಿನ ನಿವಾಸಿವಾಗಿರುವ ಮೃತ ವಿದ್ಯಾರ್ಥಿನಿ, ಸಿಂಧನೂರು ಸರ್ಕಾರಿ ಕಾಲೇಜಿನ ಓದುತ್ತಿದ್ದರು. ಪರಿಚಯಸ್ಥರೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ರಾಯಚೂರು, ಜನವರಿ 30: ಕತ್ತು ಸೀಳಿ ಎಂಎಸ್ಸಿ ವಿದ್ಯಾರ್ಥಿನಿಯ (student) ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಸಿಂಧನೂರಿನ ಹೊರ ಭಾಗದಲ್ಲಿ ನಡೆದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂಎಸ್ಸಿ ಓದುತ್ತಿದ್ದ ಶಿಫಾ (22) ಮೃತ ವಿದ್ಯಾರ್ಥಿನಿ. ಹಾಡಹಗಲೇ ನಡುರಸ್ತೆಯಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮುಬಿನ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸಿಂಧನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಿಂಗಸುಗೂರಿನ ನಿವಾಸಿಯಾಗಿರುವ ಶಿಫಾಳನ್ನು ಪರಿಚಯಸ್ಥರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಸಿಂಧನೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪಾಳು ಬಿದ್ದ ಕಟ್ಟಡದಿಂದ ಬಿದ್ದು ಯುವಕ ಅನುಮಾನಾಸ್ಪದ ಸಾವು
ಪಾಳು ಬಿದ್ದ ಕಟ್ಟಡದಿಂದ ಬಿದ್ದು ಯುವಕ ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಮಾರತ್ತಹಳ್ಳಿ ಸಮೀಪದ ದೊಡ್ಡನೆಕ್ಕುಂದಿಯಲ್ಲಿ ನಡೆದಿದೆ. ರಾಯಚೂರು ಮೂಲದ ಪ್ರಕಾಶ್ (19) ಮೃತ ಯುವಕ.
ಇದನ್ನೂ ಓದಿ: ಬಿಡದಿಯಲ್ಲಿ ಯುವತಿ ಮೇಲೆ ಅತ್ಯಾಚಾರ: ಸಂತ್ರಸ್ತೆ ಪರಿಸ್ಥಿತಿ ಕಂಡು ಪೊಲೀಸರೇ ಶಾಕ್
ಔಟರ್ ರಿಂಗ್ ರಸ್ತೆ ಪಕ್ಕದಲ್ಲಿ ದೊಡ್ಡದಾದ ಮಾಲ್ ಒಂದು ನಿರ್ಮಾಣವಾಗುತ್ತಿತ್ತು. ಆದರೆ ಕಾರಣಾಂತರದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಅದೇ ಕಟ್ಟಡದ ಮೇಲಿಂದ ಯುವಕ ಬಿದ್ದು ಸಾವನ್ನಪ್ಪಿದ್ದಾನೆ.
ಮೃತ ಯುವಕ ಪ್ರಕಾಶ್ನ ತಂದೆ ಚಾಲಕರಾಗಿದ್ದು, ತಾಯಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ಹಿಂದೆಯೂ ಅಪಘಾತವಾಗಿ ಪ್ರಕಾಶ್ ಕಾಲಿಗೆ ಪೆಟ್ಟಾಗಿತ್ತು. ಸದ್ಯ ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ದರೋಡೆಕೋರರ ಗ್ಯಾಂಗ್ನಿಂದ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ: ಜೀವನ್ಮರಣ ಹೋರಾಟ
ದರೋಡೆಕೋರರಿಂದ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವಂತಹ ಘಟನೆ ವಿಜಯಪುರ ನಗರದ ಜೈನಾಪೂರ ಕಾಲೋನಿಯಲ್ಲಿ ನಡೆದಿದೆ. ದರೋಡೆ ಮಾಡಲು ಬಂದ ಐವರ ಗ್ಯಾಂಗ್ನಿಂದ ಸಂತೋಷ್ ಕನ್ನಾಳ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: 500 ರೂ ಕದ್ದಿದ್ದಾನೆಂದು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿ ಕಿಡ್ನ್ಯಾಪ್: ಕಂಬಕ್ಕೆ ಕಟ್ಟಿ ಥಳಿತ
ಚಾಕೂವಿನಿಂದ ಎದೆ, ಬೆನ್ನಿಗೆ ಇರಿದು ಮೊದಲ ಮಹಡಿಯಿಂದ ಕೆಳಗೆ ಬಿಸಾಡಿದ್ದಾರೆ. ಪರಿಣಾಮ ತೀವ್ರ ಹಲ್ಲೆಗೊಳಗಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸಂತೋಷ್ ಆರೋಗ್ಯ ಉಲ್ಬಣವಾದ ಹಿನ್ನಲೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸಂತೋಷ್ ಕಿಡ್ನಿಗೆ ಸೋಂಕು ತಗುಲಿದ್ದು ಹೀಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಲು ವೈದ್ಯರ ಸೂಚನೆ ಮೆರೆಗೆ ಬೆಂಗಳೂರಿನ ಬನ್ನೇರುಘಟ್ಟದ ಆಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.