AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Operation Ganga: ವಿಶೇಷ ವಿಮಾನದ ಮೂಲಕ ಉಕ್ರೇನ್​ನಿಂದ 6,200 ಭಾರತೀಯರ ಶಿಫ್ಟ್​; ಇನ್ನೆರಡು ದಿನದಲ್ಲಿ 7,400 ಜನರ ಸ್ಥಳಾಂತರ

ಮುಂದಿನ ಎರಡು ದಿನಗಳಲ್ಲಿ ವಿಶೇಷ ವಿಮಾನಗಳ ಮೂಲಕ ಉಕ್ರೇನ್​ನಿಂದ 7400ಕ್ಕೂ ಹೆಚ್ಚು ಜನರನ್ನು ಕರೆತರುವ ನಿರೀಕ್ಷೆಯಿದೆ. ನಾಳೆ 3500 ಮತ್ತು ಮಾರ್ಚ್ 5ರಂದು 3900ಕ್ಕೂ ಹೆಚ್ಚು ಜನರನ್ನು ಕರೆತರುವ ನಿರೀಕ್ಷೆಯಿದೆ.

Operation Ganga: ವಿಶೇಷ ವಿಮಾನದ ಮೂಲಕ ಉಕ್ರೇನ್​ನಿಂದ 6,200 ಭಾರತೀಯರ ಶಿಫ್ಟ್​; ಇನ್ನೆರಡು ದಿನದಲ್ಲಿ 7,400 ಜನರ ಸ್ಥಳಾಂತರ
ಏರ್ ಇಂಡಿಯಾ
TV9 Web
| Updated By: ಸುಷ್ಮಾ ಚಕ್ರೆ|

Updated on: Mar 03, 2022 | 7:40 PM

Share

ನವದೆಹಲಿ: ವಿಶೇಷ ನಾಗರಿಕ ವಿಮಾನಗಳ ಮೂಲಕ 6200 ಭಾರತೀಯರು ಉಕ್ರೇನ್‌ನಿಂದ  (Ukraine) ಹಿಂತಿರುಗಿದ್ದಾರೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಮರಳಿ ಕರೆತರಲು ಭಾರತವು ‘ಆಪರೇಷನ್ ಗಂಗಾ’ (Operation Ganga) ಹೆಸರಿನ ಬೃಹತ್ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ನಾಗರಿಕ ವಿಮಾನಯಾನ ಸಚಿವಾಲಯದೊಂದಿಗೆ ನಿಕಟ ಸಮನ್ವಯದೊಂದಿಗೆ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ವೇಗವಾಗಿ ಕರೆತರಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ತಮ್ಮ ಸಂಪನ್ಮೂಲಗಳನ್ನು ವೇಗವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ತೊಡಗಿಸುತ್ತಿವೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಯ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿ.ಕೆ. ಸಿಂಗ್ ವಹಿಸಿಕೊಂಡಿದ್ದು, ಅದಕ್ಕೆಂದು ಈಗಾಗಲೇ ಉಕ್ರೇನ್‌ಗೆ ಹೊಂದಿಕೊಂಡಿರುವ ದೇಶಗಳಿಗೆ ಹೋಗಿದ್ದಾರೆ. ಭಾರತೀಯ ನಾಗರಿಕ ವಿಮಾನಗಳು ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ನಿಯಮಿತವಾಗಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುತ್ತಿವೆ.

ಫೆಬ್ರವರಿ 22ರಂದು ಪ್ರಾರಂಭವಾದ ಉಕ್ರೇನ್​ನಿಂದ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆಯು 10 ವಿಶೇಷ ನಾಗರಿಕ ವಿಮಾನಗಳ ಮೂಲಕ ಇಂದು ಬರುತ್ತಿರುವ 2,185 ವ್ಯಕ್ತಿಗಳು ಸೇರಿದಂತೆ ಇದುವರೆಗೆ 6,200 ಜನರನ್ನು ಮರಳಿ ಕರೆತಂದಿದೆ. ಇಂದಿನ ವಿಮಾನಗಳಲ್ಲಿ ಬುಕಾರೆಸ್ಟ್‌ನಿಂದ 5, ಬುಡಾಪೆಸ್ಟ್‌ನಿಂದ 2, ಕೊಸಿಸ್‌ನಿಂದ 1 ಮತ್ತು ಸಿವಿಲಿಯನ್ ಏರ್‌ಲೈನ್ಸ್‌ನಿಂದ ರ್ಜೆಸ್ಜೋವ್‌ನಿಂದ 2 ವಿಮಾನಗಳು ಸೇರಿವೆ. ಇದಲ್ಲದೆ, 3 IAF ವಿಮಾನಗಳು ಇಂದು ಹೆಚ್ಚಿನ ಭಾರತೀಯರನ್ನು ಕರೆತರುತ್ತಿವೆ. ನಾಗರಿಕ ವಿಮಾನಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುವುದು ಮತ್ತು ಮುಂದಿನ ಎರಡು ದಿನಗಳಲ್ಲಿ ವಿಶೇಷ ವಿಮಾನಗಳ ಮೂಲಕ 7400ಕ್ಕೂ ಹೆಚ್ಚು ಜನರನ್ನು ಕರೆತರುವ ನಿರೀಕ್ಷೆಯಿದೆ. ನಾಳೆ 3500 ಮತ್ತು ಮಾರ್ಚ್ 5ರಂದು 3900ಕ್ಕೂ ಹೆಚ್ಚು ಜನರನ್ನು ಕರೆತರುವ ನಿರೀಕ್ಷೆಯಿದೆ.

ಒಟ್ಟಾರೆಯಾಗಿ, 31 ವಿಮಾನಗಳು ಮಾರ್ಚ್ 8ರವರೆಗೆ ಕಾರ್ಯ ನಿರ್ವಹಿಸಲಿದ್ದು, 6,300ಕ್ಕೂ ಹೆಚ್ಚು ಜನರೊಂದಿಗೆ ಕರೆತರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ವಿಮಾನಗಳು ಸುಮಾರು 180 ಜನರ ಸಾಮರ್ಥ್ಯವನ್ನು ಹೊಂದಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ಕ್ರಮವಾಗಿ 250 ಮತ್ತು 216 ಪ್ರಯಾಣಿಕರನ್ನು ಸಾಗಿಸಬಹುದು ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಒಟ್ಟು 7 ವಿಮಾನಗಳನ್ನು ನಿರ್ವಹಿಸುತ್ತಿದ್ದರೆ, ಸ್ಪೈಸ್‌ಜೆಟ್ 4 ವಿಮಾನಗಳನ್ನು ಸೇವೆಗೆ ನೀಡಲಿದೆ. ಏರ್ ಇಂಡಿಯಾ 7 ವಿಮಾನಗಳನ್ನು ನಿರ್ವಹಿಸಲಿದೆ ಮತ್ತು ಇಂಡಿಗೋ 12 ವಿಮಾನಗಳಲ್ಲಿ ಭಾರತದ ಜನರನ್ನು ಕರೆತರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಏರ್ ಇಂಡಿಯಾ ಬುಕಾರೆಸ್ಟ್‌ನಿಂದ ಹಾರಾಟ ನಡೆಸಲಿದ್ದು, ಇಂಡಿಗೋ ಬುಕಾರೆಸ್ಟ್, ಬುಡಾಪೆಸ್ಟ್ ಮತ್ತು ರ್ಜೆಸ್ಜೋವ್‌ನಿಂದ ತಲಾ 4 ವಿಮಾನಗಳನ್ನು ಯೋಜಿಸಿದೆ. ಸ್ಪೈಸ್‌ಜೆಟ್ ಬುಕಾರೆಸ್ಟ್‌ನಿಂದ 2, ಬುಡಾಪೆಸ್ಟ್‌ನಿಂದ 1 ಮತ್ತು ಸ್ಲೋವಾಕಿಯಾದ ಕೊಸೈಸ್‌ನಿಂದ 1 ವಿಮಾನಗಳು ಕಾರ್ಯ ನಿರ್ವಹಿಸಲಿದೆ.

ಇದನ್ನೂ ಓದಿ: Covid 4th Wave: ಕೊವಿಡ್ 4ನೇ ಅಲೆ ಡೆಲ್ಟಾದಷ್ಟೇ ಅಪಾಯಕಾರಿಯಾಗಿರುತ್ತಾ?; ವಿಜ್ಞಾನಿಗಳ ಉತ್ತರ ಹೀಗಿದೆ

Ukraine Crisis: ಉಕ್ರೇನ್​​ನಲ್ಲಿದ್ದ 20,000 ಭಾರತೀಯರಲ್ಲಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್; ರಾಜ್ಯದ 149 ವಿದ್ಯಾರ್ಥಿಗಳು ವಾಪಸ್

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ