Ukraine Crisis: ಉಕ್ರೇನ್​​ನಲ್ಲಿದ್ದ 20,000 ಭಾರತೀಯರಲ್ಲಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್; ರಾಜ್ಯದ 149 ವಿದ್ಯಾರ್ಥಿಗಳು ವಾಪಸ್

Operation Ganga | Russia Ukraine War: ‘ಆಪರೇಷನ್ ಗಂಗಾ’ ಮೂಲಕ ಉಕ್ರೇನ್​ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ನಡೆಯುತ್ತಿದೆ. ಇದುವರೆಗೆ ಎಷ್ಟು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ? ಭಾರತದ ಎಷ್ಟು ವಿದ್ಯಾರ್ಥಿಗಳು ಇನ್ನೂ ಅಲ್ಲಿ ಸಿಲುಕಿಕೊಂಡಿದ್ದಾರೆ? ಈ ಎಲ್ಲಾ ಮಾಹಿತಿ ಇಲ್ಲಿದೆ.

Ukraine Crisis: ಉಕ್ರೇನ್​​ನಲ್ಲಿದ್ದ 20,000 ಭಾರತೀಯರಲ್ಲಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್; ರಾಜ್ಯದ 149 ವಿದ್ಯಾರ್ಥಿಗಳು ವಾಪಸ್
ಸಾಂಕೇತಿಕ ಚಿತ್ರ
Follow us
TV9 Web
| Updated By: shivaprasad.hs

Updated on: Mar 03, 2022 | 1:49 PM

ಉಕ್ರೇನ್​ನಲ್ಲಿ (Russia Ukraine War) ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್​ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರೂ ಆಗಿರುವ ಅವರು, ‘‘ಖಾರ್ಕಿವ್​ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ವಿದ್ಯಾರ್ಥಿಗಳು ಖಾರ್ಕಿವ್​​​ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಕೂಡ ಖಾರ್ಕಿವ್​ನಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ರಾಜ್ಯದ 693 ವಿದ್ಯಾರ್ಥಿಗಳ ಪೈಕಿ 149 ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಉಳಿದ 544 ವಿದ್ಯಾರ್ಥಿಗಳ ರಕ್ಷಣೆಗಾಗಿ ಪ್ರಯತ್ನ ನಡೆಯುತ್ತಿದೆ ಎಂದು ಮನೋಜ್ ರಾಜನ್​ ಹೇಳಿಕೆ ನೀಡಿದ್ದಾರೆ. ಉಕ್ರೇನ್​ನಿಂದ ನಾಳೆ 16 ವಿಮಾನಗಳು ಭಾರತಕ್ಕೆ ಬರಲಿವೆ. ನಾಳೆ ಬರುವ ವಿಮಾನಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಬರುತ್ತಾರೆ ಎಂದು ಅವರು ಹೇಳಿದ್ದಾರೆ.

  1. ಖಾರ್ಕಿವ್​ನಿಂದ ಹೊರ ಬಂದ ಭಾರತದ ವಿದ್ಯಾರ್ಥಿಗಳು: ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಖಾರ್ಕಿವ್​ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ಎಲ್ಲ ವಿದ್ಯಾರ್ಥಿಗಳು ಖಾರ್ಕಿನ್​ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಖಾರ್ಕಿವ್​ನಿಂದ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್​ ಹೇಳಿದ್ದಾರೆ.
  2. ಮನೋಜ್ ರಾಜನ್ ಮಾಹಿತಿ:

  3. ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆದ 17,000 ಭಾರತೀಯರು: ಉಕ್ರೇನ್​​ನಲ್ಲಿದ್ದ 20 ಸಾವಿರ ಭಾರತೀಯ ವಿದ್ಯಾರ್ಥಿಗಳಲ್ಲಿ 17 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. 3,000 ಭಾರತದ ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಹೇಳಿಕೆ ನೀಡಿದ್ದಾರೆ. IAFನ‌ C-17 ವಿಮಾನಗಳ‌ ಮೂಲಕ ವಿದ್ಯಾರ್ಥಿಗಳ ಶಿಫ್ಟ್ ಮಾಡಲಾಗುತ್ತಿದೆ. ಈವರೆಗೆ 798 ವಿದ್ಯಾರ್ಥಿಗಳು ಹಂಗೇರಿ, ಪೋಲೆಂಡ್, ರೊಮೇನಿಯಾ ಮೂಲಕ ಭಾರತಕ್ಕೆ ವಾಪಸಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
  4. ಉಕ್ರೇನ್​ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್?: ಉಕ್ರೇನ್​ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್ ನಡೆಸಲಾಗುತ್ತಾ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ. 600ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್ ನಡೆಸುವ ಯೋಜನೆ ಇದೆಯಾ ಎಂಬ ಬಗ್ಗೆ ಹೇಳಲಾಗುತ್ತಿದೆ. ಉಕ್ರೇನ್​ನಲ್ಲಿ ಪರಿಸ್ಥಿತಿ ಸರಿಹೋಗುವವರೆಗೂ ಆನ್​ಲೈನ್ ಕ್ಲಾಸ್ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ.
  5. ಆನ್​ಲೈನ್ ಕ್ಲಾಸ್ ಬಗ್ಗೆ ಸಭೆ: ಆನ್​ಲೈನ್ ಕ್ಲಾಸ್ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಜತೆ ಸಭೆ ನಡೆಸಲಾಗುತ್ತದೆ. ಉಕ್ರೇನ್​ನಿಂದ ಬಂದವರಿಗೆ ಇಲ್ಲಿ ಶಿಕ್ಷಣ ನೀಡೋದು ಕಷ್ಟ. ಇಲ್ಲಿ ನೀಟ್ ಪರೀಕ್ಷೆ ಬರೆದ ಮಕ್ಕಳಿಗೆ ಸೀಟ್ ನೀಡಲಾಗಿದೆ. ಉಕ್ರೇನ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ತರಗತಿಗೆ ಅವಕಾಶವಿದೆ. ಪಠ್ಯ ಕ್ರಮ ಸ್ವಲ್ಪ ಬದಲಾಗಿದ್ರೂ ಆನ್​ಲೈನ್​ ತರಗತಿ ಸಾಧ್ಯ. ಉಕ್ರೇನ್ ವಿದ್ಯಾರ್ಥಿಗಳಿಗೆ ಇಲ್ಲಿಯೇ ಸೀಟ್ ನೀಡೋದು ಕಷ್ಟ. ಇಂದು ಸಿಎಂ ಜೊತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಚರ್ಚೆ ನಡೆಸುತ್ತೇವೆ. ಆನ್​ಲೈನ್​ ತರಗತಿ ಸೇರಿ ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿದ್ದಾರೆ.

ಇದನ್ನೂ ಓದಿ:

Russia Ukraine War Live: ರಷ್ಯಾದ 5,840 ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡ ಉಕ್ರೇನ್

ಉಕ್ರೇನ್​ನಲ್ಲಿ ವಿದ್ಯಾರ್ಥಿ ನವೀನ್​ ಸಾವು; ನಿವಾಸದಲ್ಲಿ 3ನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು