Russia Ukraine War highlights: ಉಕ್ರೇನ್​ನಲ್ಲಿ ಮುಂದುವರಿದ ಯುದ್ಧ- ವರ್ಚುವಲ್​ ಮೂಲಕ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ

TV9 Web
| Updated By: shivaprasad.hs

Updated on:Mar 04, 2022 | 7:19 AM

Russia Ukraine Conflict Highlights: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರೆದಿದೆ. ಭಾರತವು ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತೀಯರನ್ನು ಉಕ್ರೇನ್​ನಿಂದ ಕರೆಸಿಕೊಳ್ಳುವ ಸತತ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಬೆಳವಣಿಗೆಗಳ ಲೈವ್ ಇಲ್ಲಿ ಲಭ್ಯವಿದೆ.

Russia Ukraine War highlights: ಉಕ್ರೇನ್​ನಲ್ಲಿ ಮುಂದುವರಿದ ಯುದ್ಧ- ವರ್ಚುವಲ್​ ಮೂಲಕ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ
ಯುದ್ಧದ ಭೀಕರತೆ ಸಾರುವ ಚಿತ್ರ

Russia Ukraine Conflict | ರಷ್ಯಾದ ಮೇಲೆ ಹಲವು ರೀತಿಯ ನಿರ್ಬಂಧ ವಿಧಿಸುವುದರ ಮೂಲಕ ಯುದ್ಧದಿಂದ ಹಿಂದೆ ಸರಿಯವಂತೆ (Russia Ukraine War) ಜಾಗತಿಕ ರಾಷ್ಟ್ರಗಳು ಪ್ರಯತ್ನ ಮುಂದುವರೆಸುತ್ತಿವೆ. ಆದರೆ ಇದಕ್ಕೆ ರಷ್ಯಾ ಬಗ್ಗಿಲ್ಲ. ಬದಲಾಗಿ ಉಕ್ರೇನ್​ ನಗರಗಳ ಮೇಲೆ ತನ್ನ ದಾಳಿ ಮುಂದುವರೆಸಿದೆ. ಉಕ್ರೇನ್​ನ ಖೇರ್ಸನ್ ನಗರವನ್ನು ರಷ್ಯಾ ಪ್ರಸ್ತುತ ವಶಪಡಿಸಿಕೊಂಡಿದೆ. ಇದು ತಂತ್ರಾತ್ಮಕವಾಗಿ ಉಕ್ರೇನ್​ಗೆ ಮುಖ್ಯವಾದ ನಗರವಾಗಿತ್ತು. ಇತ್ತ ಭಾರತ ಉಕ್ರೇನ್​ನಲ್ಲಿರುವ ತನ್ನ ನಾಗರಿಕರನ್ನು ಕರೆತರು ‘ಆಪರೇಷನ್ ಗಂಗಾ’ ಮೂಲಕ ನಿರಂತರ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. ರಷ್ಯಾ ಮೊದಲ ಬಾರಿಗೆ ತನ್ನ ಸೈನ್ಯದ ಸಾವು- ನೋವಿನ ಕುರಿತು ಮಾಹಿತಿ ನೀಡಿದೆ. ಅದು ನೀಡಿರುವ ಮಾಹಿತಿಯಂತೆ, ಉಕ್ರೇನ್‌ನಲ್ಲಿ 498 ರಷ್ಯನ್ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದಂತೆ, ಬುಧವಾರದಂದು 2,000 ಕ್ಕೂ ಹೆಚ್ಚು ನಾಗರಿಕರು (ಮಿಲಿಟರಿ ಸಿಬ್ಬಂದಿಗಳ ಸೇರಿ) ಸಾವನ್ನಪ್ಪಿದ್ದಾರೆ. ಆದರೆ ಉಕ್ರೇನ್ ರಷ್ಯನ್ ಸೈನಿಕರ ಸಾವಿನ ಪ್ರಮಾಣದ ಲೆಕ್ಕವನ್ನು ಬೇರೆಯದೇ ರೀತಿಯಲ್ಲಿ ನೀಡಿದೆ. ಆದ್ದರಿಂದ ಎರಡೂ ದೇಶಗಳ ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ವಿಶ್ವಸಂಸ್ಥೆಯ ಪ್ರಕಾರ, ಯುದ್ಧದಲ್ಲಿ 227 ನಾಗರಿಕರು ಮೃತಪಟ್ಟಿದ್ದಾರೆ. ನಿರಾಶ್ರಿತರ ಸಂಖ್ಯೆ ಒಂದು ಮಿಲಿಯನ್ ದಾಟಿದೆ.

ಆಪರೇಷನ್ ಗಂಗಾ ಯೋಜನೆಯಡಿಯಲ್ಲಿ ಇಂದು 3726 ಭಾರತೀಯರು ಆಗಮಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬುಕಾರೆಸ್ಟ್​ನಿಂದ 8, ಸುಕೇವಾದಿಂದ 2, ಕೊಸೈಸ್​ನಿಂದ 1, ಬುಡಾಪೆಸ್ಟ್​​ನಿಂದ 5, ರೊಮೇನಿಯಾದಿಂದ 3 ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿದ್ದ ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಮರಳುತ್ತಿದ್ದಾರೆ. ಎರಡನೆ ಬ್ಯಾಚ್ ನಲ್ಲಿ 04 ಜನ ವಿದ್ಯಾರ್ಥಿಗಳು ವಾಪಸ್ಸಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತವರಿಗೆ ಮರಳುತ್ತಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳ ಸೂಚನೆಯಂತೆ ಕನ್ನಡಿಗ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ವಿದ್ಯಾರ್ಥಿಗಳು ಕೋಲಾರ ಬೆಂಗಳೂರು ಮತ್ತು ದಾವಣಗೆರೆ ಮೂಲದವರಾಗಿದ್ದಾರೆ. ಸೂರಜ್, ಭರತ್, ನಿಧಿಶ್ರೀ, ಪುಷ್ವಂತಗೌಡ ಬೆಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಗಳಾಗಿದ್ದಾರೆ.

ಖಾರ್ಕಿವ್‌ನಲ್ಲಿ ಭಾರತದ ವಿದ್ಯಾರ್ಥಿ ಸಾವು ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾವು, ಉಕ್ರೇನ್ ವಿದ್ಯಾರ್ಥಿಗಳನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ರಿಪಬ್ಲಿಕ್ ವರದಿ ಮಾಡಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ನಡುವೆಯೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ ಎಂದು ರಷ್ಯಾ ವಿದೇಶಾಂಗ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಹೇಳಿಕೆ ನೀಡಿದ್ದಾರೆ.

LIVE NEWS & UPDATES

The liveblog has ended.
  • 03 Mar 2022 11:03 PM (IST)

    ವರ್ಚುವಲ್​ ಮೂಲಕ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ

    ವರ್ಚುವಲ್​ ಮೂಲಕ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಇಂಡೋ ಫೆಸಿಫಿಕ್​ನಲ್ಲಿ ಉಕ್ರೇನ್​ ಮೇಲೆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸಬೇಕು. ಈ ವಿಚಾರವಾಗಿ ಕ್ವಾಡ್​​ ಗಮನಹರಿಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಮಾತನಾಡಿದ್ದಾರೆ.

  • 03 Mar 2022 10:44 PM (IST)

    ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆ ಇಟ್ಟುಕೊಂಡಿದೆ -ರಷ್ಯಾ ಅಧ್ಯಕ್ಷ ಪುಟಿನ್‌ ಗಂಭೀರ ಆರೋಪ

    ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆ ಇಟ್ಟುಕೊಂಡಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಚೀನಾದವರನ್ನೂ ಉಕ್ರೇನ್ ಒತ್ತೆ ಇಟ್ಟುಕೊಂಡಿದೆ. ಒತ್ತೆ ಇಟ್ಟುಕೊಂಡ ಬಗ್ಗೆ ರಷ್ಯಾ ಬಳಿ ಸಾಕ್ಷ್ಯಾಧಾರವಿದೆ.  ವಿದೇಶಿಯರು ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ರಷ್ಯಾ ಅವಕಾಶ ನೀಡಿದೆ. ಆದ್ರೆ ಸುರಕ್ಷಿತ ಸ್ಥಳಕ್ಕೆ ತೆರಳಲು ಉಕ್ರೇನ್‌ ಅವಕಾಶ ನೀಡ್ತಿಲ್ಲ. ಖಾರ್ಕಿವ್‌ನಲ್ಲಿ 3000 ಭಾರತೀಯ ವಿದ್ಯಾರ್ಥಿಗಳ ಒತ್ತೆ ಇಟ್ಟುಕೊಳ್ಳಲಾಗಿದೆ. ಸುಮಿ ನಗರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಒತ್ತೆ ಎಂದು ಉಕ್ರೇನ್‌ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್‌ ಗಂಭೀರ ಆರೋಪ ಮಾಡಿದ್ದಾರೆ.

  • 03 Mar 2022 10:37 PM (IST)

    ರಷ್ಯಾ ದಾಳಿಗೆ ಉಕ್ರೇನ್​ನಿಂದ ಕೌಂಟರ್​ ಅಟ್ಯಾಕ್

    ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ್ದು ರಷ್ಯಾ ದಾಳಿಗೆ ಉಕ್ರೇನ್​ನಿಂದ ಕೌಂಟರ್​ ಅಟ್ಯಾಕ್ ಮಾಡಿದೆ. ಉಕ್ರೇನ್​  ಕೀವ್​​ನಲ್ಲಿ ರಷ್ಯಾದ ಕ್ರೂಸ್ ಕ್ಷಿಪಣಿ  ಹೊಡೆದುರುಳಿಸಿದೆ.

  • 03 Mar 2022 10:19 PM (IST)

    ರಷ್ಯಾದ ಮೇಲೆ ಪ್ರಯಾಣ ನಿಷೇಧ ಸೇರಿ ಮತ್ತಷ್ಟು ನಿರ್ಬಂಧ ಹೇರಿದ ಅಮೆರಿಕ

    ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆ ರಷ್ಯಾದ ಮೇಲೆ ಅಮೆರಿಕ ಮತ್ತಷ್ಟು ನಿರ್ಬಂಧ ಹೇರಿದೆ. ಪ್ರಯಾಣ ನಿಷೇಧ ಸೇರಿ ರಷ್ಯಾದ ಮೇಲೆ ಮತ್ತಷ್ಟು ನಿರ್ಬಂಧ ಹೇರಿದೆ.

  • 03 Mar 2022 10:13 PM (IST)

    ಪುಟಿನ್​ ಜತೆ ಮಾತಾಡಿದ್ರೆ ಮಾತ್ರ ಈ ಯುದ್ಧ ನಿಲ್ಲುತ್ತೆ -ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಭಿಪ್ರಾಯ

    ನೇರವಾಗಿ ರಷ್ಯಾ ಅಧ್ಯಕ್ಷ ಪುಟಿನ್​ ಜತೆ ಮಾತಾಡಬೇಕು. ಪುಟಿನ್​ ಜತೆ ಮಾತಾಡಿದ್ರೆ ಮಾತ್ರ ಈ ಯುದ್ಧ ನಿಲ್ಲುತ್ತೆ. ಅದೊಂದೇ ಯುದ್ಧ ನಿಲ್ಲಿಸಲು ಇರುವ ಏಕೈಕ ಮಾರ್ಗ ಎಂದು ಉಕ್ರೇನ್​ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಭಿಪ್ರಾಯ ಪಟ್ಟಿದ್ದಾರೆ.

  • 03 Mar 2022 09:37 PM (IST)

    ಉಕ್ರೇನ್‌ನ ಚೆರ್ನಿಹಿವ್‌ನಲ್ಲಿ ರಷ್ಯಾ ದಾಳಿಯಿಂದ 22 ನಾಗರಿಕರ ಸಾವು

    ಉಕ್ರೇನ್‌ನ ಚೆರ್ನಿಹಿವ್‌ನಲ್ಲಿ ರಷ್ಯಾ ದಾಳಿಯಿಂದ 22 ನಾಗರಿಕರ ಸಾವು. 22 ನಾಗರಿಕರ ಹತ್ಯೆ ಬಗ್ಗೆ ಉಕ್ರೇನ್​ ಮಾಧ್ಯಮಗಳ ವರದಿ. ಇನ್ನು ಮತ್ತೊಂದೆಡೆ ಜೀವ ಉಳಿಸಿಕೊಳ್ಳಲು ಜನ ಉಕ್ರೇನ್​ ತೊರೆಯುತ್ತಿದ್ದಾರೆ. ಉಕ್ರೇನ್ ನಿರಾಶ್ರಿತರಿಗೆ ಯುರೋಪಿಯನ್ ಒಕ್ಕೂಟ ರಕ್ಷಣೆ ನೀಡಲು ಮುಂದಾಗಿದೆ. ನಿರಾಶ್ರಿತರಿಗೆ ತಾತ್ಕಾಲಿಕ ರಕ್ಷಣೆ ನೀಡುವುದಾಗಿ EU ಘೋಷಿಸಿದೆ.

  • 03 Mar 2022 08:41 PM (IST)

    ರಷ್ಯಾ ತನ್ನ ಗುರಿಯನ್ನ ಸಾಧಿಸಿಯೇ ಸಾಧಿಸುತ್ತದೆ -ಪುಟಿನ್

    ರಷ್ಯಾ ಅಧ್ಯಕ್ಷ ಪುಟಿನ್ ಗುರುವಾರ ಫ್ರೆಂಚ್ ನಾಯಕ ಎಮ್ಯಾನುಯೆಲ್ ಮ್ಯಾಕ್ರೋನ್‌ ಜೊತೆ ಕರೆ ಮೂಲಕ ಚರ್ಚೆ ನಡೆಸಿದ್ದು ಚರ್ಚೆ ವೇಳೆ ರಷ್ಯಾ ತನ್ನ ಗುರಿಯನ್ನ ಸಾಧಿಸಿಯೇ ತೀರುತ್ತದೆ ಎಂದು ತಿಳಿಸಿದ್ದಾರೆ. ಉಕ್ರೇನ್‌ನಲ್ಲಿ ಏನಿದ್ದರೂ ತನ್ನ ಮಿಲಿಟರಿ ಹಸ್ತಕ್ಷೇಪದ ಗುರಿಗಳನ್ನು ರಷ್ಯಾ ಸಾಧಿಸುತ್ತದೆ ಎಂದು ಹೇಳಿದ್ದಾರೆ.

  • 03 Mar 2022 08:37 PM (IST)

    ಮುಂದುವರೆದ ಎರಡನೇ ಸುತ್ತಿನ ರಷ್ಯಾ, ಉಕ್ರೇನ್ ಶಾಂತಿ ಮಾತುಕತೆ

    ಉಕ್ರೇನ್​, ರಷ್ಯಾ ನಿಯೋಗದ ಶಾಂತಿ ಮಾತುಕತೆ ಆರಂಭವಾಗಿದ್ದು ಬೆಲಾರಸ್-ಪೋಲೆಂಡ್ ಗಡಿಯಲ್ಲಿ ಎರಡನೇ ಸುತ್ತಿನ ರಷ್ಯಾ, ಉಕ್ರೇನ್ ಶಾಂತಿ ಮಾತುಕತೆ ಮುಂದುವರೆದಿದೆ. ಸದ್ಯದ ಈ ಪರಿಸ್ಥಿತಿ ಕೊನೆಗೊಳಿಸುವ ನಿರೀಕ್ಷೆ ಇದೆ. ಡಾನ್ಬಾಸ್​ನಲ್ಲಿ ಶಾಂತಿಯ ಪುನಃಸ್ಥಾಪನೆಯಾಗುತ್ತೆ ಮತ್ತು ಉಕ್ರೇನ್‌ನಲ್ಲಿರುವ ಎಲ್ಲಾ ಜನರು ಶಾಂತಿಯುತ ಜೀವನಕ್ಕೆ ಮರಳಲು ಅನುವು ಮಾಡಿಕೊಡುತ್ತಾರೆ ಎಂದು ನಾವು ಭಾವಿಸುತ್ತೇವೆ:ರಷ್ಯಾದ ವಿದೇಶಾಂಗ ಸಚಿವಾಲಯ

  • 03 Mar 2022 08:22 PM (IST)

    ಚೆರ್ನಿಹಿವ್ ದಾಳಿಯಲ್ಲಿ ರಷ್ಯಾದ 9 ಸೈನಿಕರ ಹತ್ಯೆ

    ಚೆರ್ನಿಹಿವ್ ದಾಳಿಯಲ್ಲಿ ರಷ್ಯಾದ 9 ಸೈನಿಕರ ಹತ್ಯೆಯಾಗಿದೆ. ರಷ್ಯಾ ಸೈನಿಕರ ಹತ್ಯೆ ಬಗ್ಗೆ ಉಕ್ರೇನ್​ ಮಾಧ್ಯಮಗಳ ವರದಿ.

  • 03 Mar 2022 08:07 PM (IST)

    ಉಕ್ರೇನ್​, ರಷ್ಯಾ ನಿಯೋಗದ ಶಾಂತಿ ಮಾತುಕತೆ ಆರಂಭ

    ಉಕ್ರೇನ್​ ಮತ್ತು ರಷ್ಯಾ ನಿಯೋಗದ ಶಾಂತಿ ಮಾತುಕತೆ ಆರಂಭಗೊಂಡಿದೆ. ಬೆಲಾರಸ್ ಗಡಿಯಲ್ಲಿ ಶಾಂತಿ ಮಾತುಕತೆ ನಡೆಯುತ್ತಿದೆ.

  • 03 Mar 2022 08:05 PM (IST)

    ಉಕ್ರೇನ್​​​ನಲ್ಲಿ ಕೆಟ್ಟ ದಿನಗಳು ಬರಲಿವೆ -ಫ್ರಾನ್ಸ್​ ಅಧ್ಯಕ್ಷ ಅಭಿಪ್ರಾಯ

    ಉಕ್ರೇನ್​​​ನಲ್ಲಿ ಕೆಟ್ಟ ದಿನಗಳು ಬರಲಿವೆ ಎಂದು ಪುಟಿನ್​​ಗೆ ಕರೆ ಮಾಡಿದ ಬಳಿಕ ಫ್ರಾನ್ಸ್​ ಅಧ್ಯಕ್ಷ ಅಭಿಪ್ರಾಯ ಪಟ್ಟಿದ್ದಾರೆ. ಕರೆ ಮಾಡಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್​ ಸುಳ್ಳುಗಳನ್ನ ಮ್ಯಾಕ್ರನ್​​ ಖಂಡಿಸಿದ್ದಾರೆ. ಪುಟಿನ್ ಉಕ್ರೇನ್​​ ವಶಕ್ಕೆ ಪಡೆಯುವ ಗುರಿ ಹೊಂದಿದ್ದಾರೆ. ಪುಟಿನ್​ಗೆ ಕರೆ ಬಳಿಕ ಫ್ರಾನ್ಸ್​ ಅಧ್ಯಕ್ಷ ಮ್ಯಾಕ್ರನ್​ ಈ ಹೇಳಿಕೆ ನೀಡಿದ್ದಾರೆ.

  • 03 Mar 2022 08:02 PM (IST)

    ಉಕ್ರೇನ್​, ರಷ್ಯಾ ನಿಯೋಗದ ಶಾಂತಿ ಮಾತುಕತೆಗೆ ಕ್ಷಣಗಣನೆ

    ಉಕ್ರೇನ್​, ರಷ್ಯಾ ನಿಯೋಗದ ಶಾಂತಿ ಮಾತುಕತೆಗೆ ಕ್ಷಣಗಣನೆ ಆರಂಭವಾಗಿದೆ. ಉಕ್ರೇನ್​ ನಿಯೋಗ ಹೆಲಿಕಾಪ್ಟರ್​​​ನಲ್ಲಿ ಬೆಲಾರಸ್​ಗೆ ಆಗಮಿಸಿದೆ.

  • 03 Mar 2022 07:49 PM (IST)

    ಉಕ್ರೇನ್​​ನಲ್ಲಿರುವ ರಷ್ಯಾ ನಾಗರಿಕರ ಆಸ್ತಿ ಮುಟ್ಟುಗೋಲು ಹಾಕುವ ಕಾನೂನಿಗೆ ಅನುಮೋದನೆ

    ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್​​ನಲ್ಲಿರುವ ರಷ್ಯಾ ನಾಗರಿಕರ ಆಸ್ತಿ ಮುಟ್ಟುಗೋಲು ಹಾಕುವ ಕಾನೂನಿಗೆ ಉಕ್ರೇನ್‌ ಸಂಸತ್​​ನಲ್ಲಿ ಅನುಮೋದನೆ ನೀಡಲಾಗಿದೆ.

  • 03 Mar 2022 07:25 PM (IST)

    ನವೀನ್ ಮೃತ ದೇಹವನ್ನು ಭಾರತಕ್ಕೆ ತರಲು ಯತ್ನಿಸ್ತಿದ್ದೇವೆ -ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ

    ಉಕ್ರೇನ್​ನಲ್ಲಿ ಹಾವೇರಿ ವಿದ್ಯಾರ್ಥಿ ನವೀನ್​ ಸಾವು ಘಟನೆ ಸಂಬಂಧಿಸಿ ನವೀನ್ ಮೃತ ದೇಹವನ್ನು ಭಾರತಕ್ಕೆ ತರಲು ಯತ್ನಿಸ್ತಿದ್ದೇವೆ. ನಾವು ಉಕ್ರೇನ್ ರಾಯಭಾರ ಕಚೇರಿಯನ್ನ ಸಂಪರ್ಕಿಸಿದ್ದೇವೆ. ನಮ್ಮ ಸರ್ಕಾರ ನವೀನ್​ ಮೃತದೇಹ ತರಲು ಯತ್ನಿಸುತ್ತಿದೆ ಎಂದು ಕೇಂದ್ರ ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ.

  • 03 Mar 2022 07:06 PM (IST)

    ಸುಮಾರು 15 ಸಾವಿರ ಭಾರತೀಯರ ಏರ್‌ಲಿಫ್ಟ್‌ಗೆ ಕೇಂದ್ರದಿಂದ ಪ್ಲ್ಯಾನ್‌

    ‘ಆಪರೇಷನ್ ಗಂಗಾ’ ಹೆಸರಲ್ಲಿ ಭಾರತೀಯರ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ಸುಮಾರು 15 ಸಾವಿರ ಭಾರತೀಯರ ಏರ್‌ಲಿಫ್ಟ್‌ಗೆ ಪ್ಲ್ಯಾನ್‌ ಮಾಡಲಾಗಿದೆ. ಸ್ಪೆಷಲ್ ಫ್ಲೈಟ್‌ಗಳಲ್ಲಿ ಈಗಾಗಲೇ 6,200 ಜನರು ವಾಪಸ್‌ ಆಗಿದ್ದಾರೆ. 2 ದಿನಗಳಲ್ಲಿ 7,400 ಭಾರತೀಯರನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ‘ಆಪರೇಷನ್ ಗಂಗಾ’ ಬಗ್ಗೆ ಕೇಂದ್ರ ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ. ‘ಆಪರೇಷನ್ ಗಂಗಾ’ ವಿದೇಶಾಂಗ & ನಾಗರಿಕ ವಿಮಾನಯಾನ ಇಲಾಖೆ ಮಿಷನ್ ಆಗಿದ್ದು ಫೆಬ್ರವರಿ 22ರಿಂದ ಆರಂಭವಾಗಿತ್ತು.

  • 03 Mar 2022 06:43 PM (IST)

    ಉಕ್ರೇನ್​​ನ ಬಂದರು ನಗರಗಳನ್ನ ದಿಗ್ಬಂಧನ ಮಾಡಲು ಯತ್ನ

    ಉಕ್ರೇನ್​​ನ ಬಂದರು ನಗರಗಳನ್ನ ದಿಗ್ಬಂಧನ ಮಾಡಲು ಯತ್ನ ನಡೆದಿದೆ. ರಷ್ಯಾದ ಸೇನಾ ಪಡೆಗಳು ‘ದಿಗ್ಬಂಧನ’ ಮಾಡಲು ಯತ್ನಿಸ್ತಿವೆ ಎಂದು ಉಕ್ರೇನ್​​​ನ ಮಾರಿಯುಪೋಲ್ ಮೇಯರ್ ತಿಳಿಸಿದ್ದಾರೆ.

  • 03 Mar 2022 06:40 PM (IST)

    ಇಂದು ಸಂಜೆ 7.30ಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ

    ಇಂದು ಸಂಜೆ 7.30ಕ್ಕೆ ಕ್ವಾಡ್ ರಾಷ್ಟ್ರಗಳ ನಾಯಕರ ಸಭೆ ನಡೆಯಲಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಇಂಡೋ ಫೆಸಿಫಿಕ್​ನಲ್ಲಿ ಉಕ್ರೇನ್​ ಮೇಲೆ ಯುದ್ಧದ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕ್ವಾಡ್​ನಲ್ಲಿರುವ ಅಮೆರಿಕ, ಭಾರತ, ಜಪಾನ್, ಆಸ್ಟ್ರೇಲಿಯಾ ದೇಶಗಳು.

  • 03 Mar 2022 06:37 PM (IST)

    ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರದ ವಿದೇಶಾಂಗ ಇಲಾಖೆಯ ವಕ್ತಾರ ಅರವಿಂದ್ ಬಗುಚಿ

    ಇದುವರೆಗೆ 18 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದಾರೆ. ಉಕ್ರೇನ್​ನ‌ ಪಶ್ಚಿಮ ಭಾಗದಲ್ಲಿ ಗಡಿ ದಾಟಲು ಕಾಯುತ್ತಿರುವ ವಿದ್ಯಾರ್ಥಿಗಳ ‌ಸಂಖ್ಯೆ ಕಡಿಮೆಯಾಗಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಉಕ್ರೇನ್ ವಿದೇಶಾಂಗ ಕಾರ್ಯದರ್ಶಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಭಾರತೀಯರ ಸುರಕ್ಷತೆ ತೆರವು ಕಾರ್ಯಾಚರಣೆ ಬಗ್ಗೆ ಮಾತುಕತೆ ನಡೆದಿದೆ. ಭಾರತವು ರಷ್ಯಾ- ಉಕ್ರೇನ್ ಜೊತೆಗೆ ಸಂಪರ್ಕದಲ್ಲಿದೆ. ಭಾರತೀಯರ ರಕ್ಷಣಾ ಕಾರ್ಯಾಚರಣೆಗೆ ಉಕ್ರೇನ್ ಸಹಕಾರಕ್ಕೆ ಶ್ಲಾಘನೆ. ಮುಂದಿನ 24 ಗಂಟೆಯಲ್ಲಿ 18 ವಿಮಾನಗಳು ಭಾರತಕ್ಕೆ ಬರಲಿವೆ ಎಂದು ಕೇಂದ್ರದ ವಿದೇಶಾಂಗ ಇಲಾಖೆಯ ವಕ್ತಾರ ಅರವಿಂದ್ ಬಗುಚಿ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

  • 03 Mar 2022 05:46 PM (IST)

    ಉಕ್ರೇನ್​ನಿಂದ ವಾಪಸಾದ ವಿದ್ಯಾರ್ಥಿಗಳ ಜತೆ ಮೋದಿ ಮಾತು

    ಉಕ್ರೇನ್​ನಿಂದ ವಾಪಸಾದ ವಿದ್ಯಾರ್ಥಿಗಳ ಜತೆ ಮೋದಿ ಮಾತುಕತೆ ನಡೆಸಿದ್ದಾರೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿದ್ಯಾರ್ಥಿಗಳ ಜತೆ ಮಾತನಾಡಿದ್ದು ಉಕ್ರೇನ್​​ನಲ್ಲಿನ ಅನುಭವಗಳನ್ನ ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ.

  • 03 Mar 2022 05:16 PM (IST)

    ರಷ್ಯಾ ಅಧ್ಯಕ್ಷ ಪುಟಿನ್​ಗೆ ಫ್ರಾನ್ಸ್​​ ಅಧ್ಯಕ್ಷ ಮ್ಯಾಕ್ರನ್ ಕರೆ

    ರಷ್ಯಾ ಅಧ್ಯಕ್ಷ ಪುಟಿನ್​ಗೆ ಫ್ರಾನ್ಸ್​​ ಅಧ್ಯಕ್ಷ ಮ್ಯಾಕ್ರನ್ ಕರೆ ಮಾಡಿ 90 ನಿಮಿಷ ಮಾತನಾಡಿದ್ದಾರೆ.

  • 03 Mar 2022 05:14 PM (IST)

    ಖಾರ್ಕಿವ್​​ನ ಪ್ರಾದೇಶಿಕ ಆಡಳಿತ ಕಚೇರಿ ಕಟ್ಟಡ ವಶಕ್ಕೆ

    ಖಾರ್ಕಿವ್​​ನ ಪ್ರಾದೇಶಿಕ ಆಡಳಿತ ಕಚೇರಿ ಕಟ್ಟಡ ನಿಯಂತ್ರಣಕ್ಕೆ ಪಡೆದ ರಷ್ಯಾ ಸೇನಾ ಪಡೆಗಳು.

  • 03 Mar 2022 05:04 PM (IST)

    ಉಕ್ರೇನ್​ಗೆ 90 ಡ್ರೋನ್​​​ ಕಳಿಸಿದ ಲಾಟ್ವಿಯಾ ದೇಶ

    ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ಲಾಟ್ವಿಯಾ ದೇಶ ಉಕ್ರೇನ್​ಗೆ 90 ಡ್ರೋನ್​​​ ಕಳಿಸಿದೆ.

  • 03 Mar 2022 04:47 PM (IST)

    ಮರಿಯುಪೋಲ್ ನಗರದಲ್ಲಿ ರಷ್ಯಾದಿಂದ ಶೆಲ್​ ದಾಳಿ

    ಉಕ್ರೇನ್​ನ ಜನವಸತಿ ಪ್ರದೇಶಗಳನ್ನ ಗುರಿಯಾಗಿಸಿ ರಷ್ಯಾ ದಾಳಿ ಮುಂದುವರೆಸಿದೆ. ಮರಿಯುಪೋಲ್ ನಗರದಲ್ಲಿ ರಷ್ಯಾದಿಂದ ಶೆಲ್​ ದಾಳಿ ನಡೆಯುತ್ತಿದೆ. ಖಾರ್ಕಿವ್​​, ಮರಿಯುಪೋಲ್, ಕೀವ್​ನಲ್ಲಿ ರಷ್ಯಾ ದಾಳಿ ನಡೆಸುತ್ತಿದೆ.

  • 03 Mar 2022 04:44 PM (IST)

    ಉಕ್ರೇನ್ ದೇಶಕ್ಕೆ ವಿಶ್ವಸಂಸ್ಥೆಯಿಂದ 1.5 ಬಿಲಿಯನ್ ಡಾಲರ್ ನೆರವು

    ಉಕ್ರೇನ್​ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಸದ್ಯ ಉಕ್ರೇನ್ ದೇಶಕ್ಕೆ ವಿಶ್ವಸಂಸ್ಥೆಯಿಂದ 1.5 ಬಿಲಿಯನ್ ಡಾಲರ್ ನೆರವು ನೀಡಲಾಗಿದೆ. ತುರ್ತು ಸಹಾಯಕ್ಕಾಗಿ ಉಕ್ರೇನ್​​ಗೆ ಯುಎನ್​ ನೆರವು ನೀಡಿದೆ.

  • 03 Mar 2022 04:24 PM (IST)

    ಬೇಕೆಂದಲೇ ಉಕ್ರೇನ್ ಶಾಂತಿ ಮಾತುಕತೆ ವಿಳಂಬ ಮಾಡ್ತಿದೆ -ರಷ್ಯಾ ಆರೋಪ

    ಬೇಕೆಂದಲೇ ಉಕ್ರೇನ್ ಮಾತುಕತೆ ವಿಳಂಬ ಮಾಡ್ತಿದೆ. ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ರಷ್ಯಾ ಸಿದ್ಧವಿದೆ. ಶಾಂತಿ ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ಸಿದ್ಧವಿದೆ ಎಂದು ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಆರೋಪಿಸಿದೆ.

  • 03 Mar 2022 04:21 PM (IST)

    ನಾಳೆ ಸಂಜೆ ಮೃತ ನವೀನ್ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ

    ಉಕ್ರೇನ್​ನಲ್ಲಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿ ನವೀನ್ ಮೃತಪಟ್ಟ ಹಿನ್ನೆಲೆ ನಾಳೆ ಸಂಜೆ ನವೀನ್ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಲಿದ್ದಾರೆ. ನವೀನ್ ಪೋಷಕರಿಗೆ ಸಾಂತ್ವನ ಹೇಳಲಿದ್ದಾರೆ.

  • 03 Mar 2022 04:19 PM (IST)

    ಉಕ್ರೇನ್ ಸೇನೆಯ ಹಿಡಿತದಲ್ಲಿರುವ ಡ್ನಿಪ್ರೊ ನಗರ

    ಉಕ್ರೇನ್‌ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದ್ದು ಡ್ನಿಪ್ರೊ ನಗರ ಉಕ್ರೇನ್ ಸೇನೆಯ ಹಿಡಿತದಲ್ಲಿದೆ.

  • 03 Mar 2022 04:18 PM (IST)

    ಭಾರತ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಪಂದನೆ ವಿಳಂಬ -ಸಮಾಲೋಚನಾ ಸಭೆಯಲ್ಲಿ ರಾಹುಲ್​ ಗಾಂಧಿ ಅಭಿಪ್ರಾಯ

    ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆ ಮುಕ್ತಾಯಗೊಂಡಿದ್ದು ಸಮಾಲೋಚನಾ ಸಭೆಯಲ್ಲಿ ರಾಹುಲ್​ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದ ವಿದ್ಯಾರ್ಥಿಗಳ ಏರ್​ಲಿಫ್ಟ್ ತಡವಾಗಿ ಆರಂಭವಾಯಿತು. ಈಗ ಭಾರತೀಯರ ಏರ್​​ಲಿಫ್ಟ್ ಮಾಡಲು ನಮ್ಮ ಆದ್ಯತೆ. ಚೀನಾ, ಪಾಕಿಸ್ತಾನ ದೇಶಗಳು ರಷ್ಯಾಕ್ಕೆ ಹತ್ತಿರವಾಗುತ್ತಿವೆ. ಭಾರತ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಸ್ಪಂದನೆ ವಿಳಂಬವಾಗುತ್ತಿದೆ. ಉಕ್ರೇನ್ ಬಿಟ್ಟು ಬರುವಂತೆ ನೀಡಿದ್ದ ಸಲಹೆ ಗೊಂದಲಕಾರಿಯಾಗಿದೆ ಎಂದು ಸಮಾಲೋಚನಾ ಸಮಿತಿ‌‌ ಸಭೆಯಲ್ಲಿ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ತಮ್ಮ ಟ್ವೀಟ್​ಗಳನ್ನು ಫೇಕ್ ಎಂದಿದ್ದಕ್ಕೆ ರಾಯಭಾರ ಕಚೇರಿ ಬಗ್ಗೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಅಸಮಾಧಾನ ಹೊರ ಹಾಕಿದ್ದಾರೆ. ಹಾಗೂ ಸಭೆ ಅತ್ಯುತ್ತಮವಾಗಿ ನಡೆಯಿತು ಎಂದು ಶಶಿ ತರೂರ್ ತಿಳಿಸಿದ್ದಾರೆ.

  • 03 Mar 2022 04:13 PM (IST)

    ಉಕ್ರೇನ್‌ ಮೇಲಿನ ಯುದ್ಧವನ್ನು ಮುಂದುವರಿಸುತ್ತೇವೆ -ರಷ್ಯಾ ಘೋಷಣೆ

    ಉಕ್ರೇನ್‌ ಮೇಲಿನ ಯುದ್ಧವನ್ನು ಮುಂದುವರಿಸುತ್ತೇವೆ. ಯಾವುದೇ ಕಾರಣಕ್ಕೂ ಯುದ್ಧವನ್ನು ನಿಲ್ಲಿಸುವುದಿಲ್ಲ ಎಂದು ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾ ಘೋಷಣೆ ಮಾಡಿದೆ. ಈ ಬಗ್ಗೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿಕೆ ನೀಡಿದ್ದಾರೆ.

  • 03 Mar 2022 03:58 PM (IST)

    ನವೀನ್ ಸಾವಿಗೆ ರಷ್ಯಾ ಮೊದಲ ಪ್ರತಿಕ್ರಿಯೆ

    ಖಾರ್ಕಿವ್‌ನಲ್ಲಿ ಭಾರತದ ಕರ್ನಾಟಕದ ವಿದ್ಯಾರ್ಥಿ ನವೀನ್ ಸಾವು ವಿಚಾರಕ್ಕೆ ರಷ್ಯಾ ಮೊದಲ ಪ್ರತಿಕ್ರಿಯೆ ನೀಡಿದೆ. ವಿದ್ಯಾರ್ಥಿಗಳನ್ನು ಮಾನವ ಗುರಾಣಿಯಾಗಿ ಉಕ್ರೇನ್ ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ಆರೋಪಿಸಿದೆ. ನವೀನ್ ಸಾವು ಸಂಬಂಧ ಪುಟಿನ್‌ ಜೊತೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರ ಸುರಕ್ಷತೆ ಬಗ್ಗೆ ಚರ್ಚೆ ನಡೆದಿದ್ದು, ಭಾರತೀಯರ ಸುರಕ್ಷತೆ ಬಗ್ಗೆ ಪುಟಿನ್ ಭರವಸೆ ನೀಡಿದ್ದಾರೆ ಎಂದು ರಷ್ಯಾ ತಿಳಿಸಿದೆ.

  • 03 Mar 2022 03:48 PM (IST)

    ರಷ್ಯಾ ಸೇನೆಯ ಮೇಜರ್ ಜನರಲ್ ಹತ್ಯೆ: ಉಕ್ರೇನ್ ಹೇಳಿಕೆ

    ರಷ್ಯಾ ಸೇನೆಯ ಮೇಜರ್‌ ಜನರಲ್‌ರನ್ನು ಹತ್ಯೆಗೈದಿದ್ದೇವೆ ಎಂದು ಉಕ್ರೇನ್ ಮಾಹಿತಿ ನೀಡಿದೆ. ಈ ಕುರಿತು ಆಜ್​ತಕ್ ವರದಿ ಮಾಡಿದೆ.

  • 03 Mar 2022 03:47 PM (IST)

    ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆ ಮುಕ್ತಾಯ; ಏರ್​​ಲಿಫ್ಟ್ ಬಗ್ಗೆ ಸರ್ವ ಸಮ್ಮತ ನಿರ್ಧಾರ

    ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆ ಮುಕ್ತಾಯವಾಗಿದ್ದು, ಉಕ್ರೇನ್​ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಭಾರತೀಯರ ಏರ್​​ಲಿಫ್ಟ್ ಬಗ್ಗೆ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಗಿದ್ದು, ಉಕ್ರೇನ್​ನಲ್ಲಿ ಯುದ್ಧ ಹಿನ್ನೆಲೆ ಭಾರತದ ಕಾರ್ಯತಂತ್ರ ಮತ್ತು ಮಾನವೀಯ ನೆಲೆಯಲ್ಲಿ ಕೈಗೊಳ್ಳಬೇಕಾದ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಭೆ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಹೇಳಿಕೆ‌ ನೀಡಿದ್ದಾರೆ.

  • 03 Mar 2022 03:39 PM (IST)

    ಉಕ್ರೇನ್ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವುದರಲ್ಲಿ ಸಂದೇಹವಿಲ್ಲ: ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್

    ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ಉಕ್ರೇನ್‌ನಲ್ಲಿನ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಎರಡೂ ದೇಶಗಳ ಮಾತುಕತೆಯ ನಡುವೆ ನಿರೀಕ್ಷೆಗಳು ಮೂಡಿವೆ. ರಷ್ಯಾದ ಬೇಡಿಕೆಗಳು ಬಹಳ ಕಡಿಮೆಯಿವೆ ಎಂದಿರುವ ಲಾವ್ರೊವ್, ಕೀವ್​ನಿಂದ ರಷ್ಯಾಗೆ ಬೆದರಿಕೆ ಉಂಟಾಗುವುದನ್ನು ಅನುಮತಿಸುವುದಿಲ್ಲ ಎಂದಿದ್ದಾರೆ. ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವಿನ ಮುಂದಿನ ಸುತ್ತಿನ ಮಾತುಕತೆಗಳು ಗುರುವಾರದ ನಂತರ ನಡೆಯಲಿವೆ ಎಂದು ರಷ್ಯಾದ ವಿದೇಶಾಂಗ ಸಚಿವರು ಬಹಿರಂಗಪಡಿಸಿದ್ದಾರೆ.

  • 03 Mar 2022 03:33 PM (IST)

    ಉಕ್ರೇನ್ ರಷ್ಯನ್ ಸೈನಿಕರ ದೇಹದಿಂದ ಆವೃತವಾಗುವುದನ್ನು ಬಯಸುವುದಿಲ್ಲ: ಝೆಲೆನ್ಸ್ಕಿ ಹೇಳಿಕೆ

    ಕಳೆದ ವಾರದಲ್ಲಿ ಸುಮಾರು 9,000 ರಷ್ಯನ್ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ‘‘ಉಕ್ರೇನ್ ರಷ್ಯಾ ಸೈನಿಕರ ದೇಹದಿಂದ ಆವೃತವಾಗುವುದನ್ನು ಬಯಸುವುದಿಲ್ಲ. ಎಲ್ಲರೂ ಮರಳಿ’’ ಎಂದು ಝೆಲೆನ್ಸ್ಕಿ ಎಚ್ಚರಿಕೆ ನೀಡಿದ್ದಾರೆ.

  • 03 Mar 2022 03:21 PM (IST)

    ಉಕ್ರೇನ್​ನಲ್ಲಿ ಮೃತಪಟ್ಟ ನವೀನ್ ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಷ್ಯಾ

    ಉಕ್ರೇನ್ ವಿದ್ಯಾರ್ಥಿಗಳನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ಆರೋಪ

    ಖಾರ್ಕಿವ್‌ನಲ್ಲಿ ಭಾರತದ ವಿದ್ಯಾರ್ಥಿ ಸಾವು ವಿಚಾರಕ್ಕೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಷ್ಯಾವು, ಉಕ್ರೇನ್ ವಿದ್ಯಾರ್ಥಿಗಳನ್ನು ಮಾನವ ಗುರಾಣಿಗಳಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ. ಈ ಕುರಿತು ರಿಪಬ್ಲಿಕ್ ವರದಿ ಮಾಡಿದೆ. ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ನಡುವೆಯೇ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತೇವೆ ಎಂದು ರಷ್ಯಾ ವಿದೇಶಾಂಗ ಇಲಾಖೆ ಸಚಿವ ಸೆರ್ಗೆ ಲಾವ್ರೊವ್ ಹೇಳಿಕೆ ನೀಡಿದ್ದಾರೆ.

  • 03 Mar 2022 03:04 PM (IST)

    ಖಾರ್ಕಿವ್ ಸಮೀಪ ಸಿಲುಕಿರುವ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಅಭಯ

    ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಜತೆ ಸಿಎಂ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿದ್ದು, ಎಂಬಿಬಿಎಸ್​ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ. ಸಿಎಂಗೆ ಪರಿಸ್ಥಿತಿ ವಿವರಿಸಿದ ವಿದ್ಯಾರ್ಥಿಗಳು, ಸುಮಾರು 200 ಜನರು ಸಿಲುಕಿರುವುದಾಗಿ ಮಾಹಿತಿ ನೀಡಿದ್ದಾರೆ. ಖಾರ್ಕಿವ್​ನಿಂದ 20 ಕಿ.ಮೀ. ನಡೆದು ಬಂದಿರುವ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ. ರಾಜ್ಯದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಸಿಎಂ ಬೊಮ್ಮಾಯಿ, ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಅಲ್ಲಿರುವ ನಿಮಗೆ ಎಲ್ಲಾ ಸಹಕಾರ ಸಿಗುವ ನಿಟ್ಟಿನಲ್ಲಿ ಪ್ರಯತ್ನಿಸುವೆ. ನಿಮ್ಮನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.

  • 03 Mar 2022 02:54 PM (IST)

    ರಷ್ಯಾದ ಸುಖೋಯ್‌ ಎಸ್‌ಯು-30 ಯುದ್ಧ ವಿಮಾನ ಧ್ವಂಸಗೊಳಿಸಿದ ಉಕ್ರೇನ್

    ರಷ್ಯಾದ ಸುಖೋಯ್‌ ಎಸ್‌ಯು-30 ಯುದ್ಧ ವಿಮಾನವನ್ನು ಉಕ್ರೇನ್ ಧ್ವಂಸಗೊಳಿಸಿದೆ ಎಂದು ರಿಪಬ್ಲಿಕ್ ವರದಿ ಮಾಡಿದೆ.

  • 03 Mar 2022 02:52 PM (IST)

    ರಷ್ಯಾ ಉಕ್ರೇನ್​ನ ಎಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿದೆ? ಇಲ್ಲಿದೆ ಚಿತ್ರ

    ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್​ನ ಪ್ರಬಲ ಪ್ರತಿರೋಧದ ನಡುವೆಯೂ ದಿನದಿಂದ ದಿನಕ್ಕೆ ರಷ್ಯಾ ಸೇನೆ ಮುಂದುವರೆಯುತ್ತಿದೆ. ಇದನ್ನು ಸೂಚಿಸುವ ನಕ್ಷೆ ಇಲ್ಲಿದೆ.

  • 03 Mar 2022 02:46 PM (IST)

    ರಷ್ಯಾ ತೊರೆಯುವಂತೆ ತನ್ನ ನಾಗರಿಕರಿಗೆ ಸೂಚಿಸಿದ ಫ್ರಾನ್ಸ್

    ಫ್ರಾನ್ಸ್ ದೇಶವು ರಷ್ಯಾದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರಿಗೆ ಶೀಘ್ರ ಮರಳುವಂತೆ ಸೂಚಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ.

  • 03 Mar 2022 02:42 PM (IST)

    ಮುನ್ನೆಚ್ಚರಿಕಾ ಕ್ರಮವಾಗಿ ರಷ್ಯಾದಿಂದಲೂ ಮರಳುತ್ತಿರುವ ಭಾರತೀಯ ವಿದ್ಯಾರ್ಥಿಗಳು

    ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ದ ಹಿನ್ನೆಲೆಯಲ್ಲಿ ರಷ್ಯಾದಲ್ಲಿದ್ದ ವಿದ್ಯಾರ್ಥಿಗಳು ಕೂಡ ಭಾರತಕ್ಕೆ ಮರಳುತ್ತಿದ್ದಾರೆ. ಎರಡನೆ ಬ್ಯಾಚ್ ನಲ್ಲಿ 04 ಜನ ವಿದ್ಯಾರ್ಥಿಗಳು ವಾಪಸ್ಸಾಗಿದ್ದು, ಮುಂಜಾಗ್ರತಾ ಕ್ರಮವಾಗಿ ತವರಿಗೆ ಮರಳುತ್ತಿರುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳ ಸೂಚನೆಯಂತೆ ಕನ್ನಡಿಗ ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ವಿದ್ಯಾರ್ಥಿಗಳು ಕೋಲಾರ ಬೆಂಗಳೂರು ಮತ್ತು ದಾವಣಗೆರೆ ಮೂಲದವರಾಗಿದ್ದಾರೆ. ಸೂರಜ್, ಭರತ್, ನಿಧಿಶ್ರೀ, ಪುಷ್ವಂತಗೌಡ ಬೆಂಗಳೂರಿಗೆ ಆಗಮಿಸಿದ ವಿದ್ಯಾರ್ಥಿಗಳಾಗಿದ್ದಾರೆ.

    ರಷ್ಯಾ, ಉಕ್ರೇನ್​ ಯುದ್ಧದಿಂದ ನಮಗೂ ಆತಂಕ ಕಾಡುತ್ತಿದೆ. ರಾಯಭಾರ ಕಚೇರಿ ಸೂಚನೆ ಮೇರೆಗೆ ತವರಿಗೆ ಹಿಂದಿರುಗಿದ್ದೇವೆ ಎಂದು ರಷ್ಯಾದಿಂದ ಬೆಂಗಳೂರಿಗೆ ಮರಳಿದ ವಿದ್ಯಾರ್ಥಿನಿ ನಿಧಿಶ್ರೀ ಹೇಳಿಕೆ ನೀಡಿದ್ದಾರೆ. ಕಾಲೇಜಿನಿಂದ ಆನ್​ಲೈನ್ ಕ್ಲಾಸ್ ಮಾಡುತ್ತಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರಬಾರದು ಎಂದು ತವರಿಗೆ ಮರಳಿದ್ದೇವೆ. ಯುದ್ಧದಿಂದ ರಷ್ಯಾದಲ್ಲಿ ಎಲ್ಲ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಾವು ತವರಿಗೆ ಬಂದಿದ್ದೇವೆ ಎಂದು ಟಿವಿ9ಗೆ ದಾವಣಗೆರೆ ಮೂಲದ ವಿದ್ಯಾರ್ಥಿನಿ ನಿಧಿಶ್ರೀ ಹೇಳಿದ್ದಾರೆ.

  • 03 Mar 2022 02:34 PM (IST)

    ಚಳಿಗಾಲದ ಪ್ಯಾರಾಲಂಪಿಕ್ಸ್​ನಿಂದ ರಷ್ಯಾ, ಬೆಲಾರಸ್ ಬ್ಯಾನ್!

    ರಷ್ಯನ್ ಮತ್ತು ಬೆಲಾರಸ್​​ನ ಕ್ರೀಡಾಪಟುಗಳನ್ನು ಚಳಿಗಾಲದ ಪ್ಯಾರಾಲಂಪಿಕ್ಸ್​ನಿಂದ ಬ್ಯಾನ್ ಮಾಡಿ ಅಂತಾರಾಷ್ಟ್ರೀಯ ಪ್ಯಾರಾಲಂಪಿಕ್  ಕಮಿಟಿ ಆದೇಶ ಹೊರಡಿಸಿದೆ.

  • 03 Mar 2022 02:06 PM (IST)

    ಖಾರ್ಕಿವ್​ನಿಂದ ಹೊರಬಂದು ಸುರಕ್ಷಿತ ಸ್ಥಳದಲ್ಲಿರುವ ಕಲಬುರಗಿಯ ಮಲ್ಲಿನಾಥ್

    ದೂತವಾಸದವರು ಕರೆ ಸ್ವೀಕರಿಸುತ್ತಿಲ್ಲ ಎಂದ ವಿದ್ಯಾರ್ಥಿ

    ಖಾರ್ಕಿವ್​ ಹೊರವಲಯದಲ್ಲಿರುವ ಮಲ್ಲಿನಾಥ್ ಜಾಮಗೊಂಡ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾರೆ. 2021ರ ಡಿಸೆಂಬರ್​ನಲ್ಲಿ ಕಲಬುರಗಿಯಿಂದ ಖಾರ್ಕಿವ್​ಗೆ ತೆರಳಿದ್ದ ಅವರು, ಅಲ್ಲಿಂದ ಪಾರಾಗಲು 12 ಕಿ.ಮೀ. ನಡೆದುಕೊಂಡು ಬಂದಿದ್ದಾರೆ. ಖಾರ್ಕಿವ್​ನಿಂದ ಕಾಲ್ನಡಿಗೆಯಲ್ಲಿ ಸುರಕ್ಷಿತ ಸ್ಥಳಕ್ಕೆ ಅವರು ತೆರಳಿದ್ದಾರೆ. ರೈಲು ನಿಲ್ದಾಣಕ್ಕೆ ಹೋದರೂ ಸ್ಥಳೀಯರು ರೈಲು ಹತ್ತಲು ಬಿಡುತ್ತಿಲ್ಲ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ಬಂದಿರುವೆ ಎಂದು ಮಲ್ಲಿನಾಥ್ ಜಾಮಗೊಂಡ ಹೇಳಿದ್ದಾರೆ. ರಾಯಭಾರ ಕಚೇರಿಯ ಅಧಿಕಾರಿಗಳು ಸಹಾಯ ಮಾಡುತ್ತಿಲ್ಲ. ದೂತಾವಾಸಕ್ಕೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲವೆಂದು ಅವರು ಅಳಲು ತೋಡಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮಲ್ಲಿನಾಥ್​ ತಂದೆ ಅರವಿಂದ್​ ಮನವಿ ಮಾಡಿದ್ದಾರೆ.

  • 03 Mar 2022 02:05 PM (IST)

    9,000 ಯೋಧರನ್ನು ಕೊಂದಿರುವುದಾಗಿ ಹೇಳಿಕೊಂಡ ಉಕ್ರೇನ್

    ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರೆದಿದ್ದು, ರಷ್ಯಾದ 9,000 ಯೋಧರನ್ನ ಹತ್ಯೆಗೈದಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ. ರಷ್ಯಾದ 217 ಟ್ಯಾಂಕರ್, 30 ಫೈಟರ್ ಜೆಟ್, 31 ಹೆಲಿಕಾಪ್ಟರ್, 91 ಆರ್ಟಿಲರಿ ಸಿಸ್ಟಂ ಧ್ವಂಸಗೊಳಿಸಿದ್ದಾಗಿ ಉಕ್ರೇನ್ ಹೇಳಿಕೊಂಡಿದ್ದಾಗಿ ವರದಿಯಾಗಿದೆ.​

  • 03 Mar 2022 02:05 PM (IST)

    ರಷ್ಯಾದಿಂದಲೂ ತವರಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳು

    ಉಕ್ರೇನ ಮತ್ತು ರಷ್ಯಾ ನಡುವೆ ವಾರ್ ಹಿನ್ನೆಲೆಯಲ್ಲಿ ರಷ್ಯಾ ಯೂನಿವರ್ಸಿಟಿಗಳಲ್ಲಿದ್ದ ವಿದ್ಯಾರ್ಥಿಗಳು ತವರಿಗೆ ವಾಪಸ್ ಆಗುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಜೆ ಮೇಲೆ ಅವರು ವಾಪಸ್ ಬರುತ್ತಿದ್ದಾರೆ. ಇಂದು ರಷ್ಯಾದಿಂದ ದೆಹಲಿಗೆ ಬಂದು ದೆಹಲಿಯಿಂದ ಬೆಂಗಳೂರಿಗೆ ಐವರು ವಿದ್ಯಾರ್ಥಿಗಳ ಆಗಮಿಸಲಿದ್ದಾರೆ.

  • 03 Mar 2022 02:04 PM (IST)

    ಉಕ್ರೇನ್‌ನ ಚೆರ್ನಿಹಿವ್‌ನ ತೈಲ ಡಿಪೋ ಮೇಲೆ ರಷ್ಯಾ ದಾಳಿ

    ಉಕ್ರೇನ್‌ನ ಚೆರ್ನಿಹಿವ್‌ನ ತೈಲ ಡಿಪೋ ಮೇಲೆ ರಷ್ಯಾ ದಾಳಿ ಮಾಡಿದ್ದು, ಕ್ಷಿಪಣಿ ದಾಳಿಯಿಂದ ದೊಡ್ಡ ತೈಲ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

  • 03 Mar 2022 01:43 PM (IST)

    ಸುರಕ್ಷಿತ ಸ್ಥಳಕ್ಕೆ ತಲುಪಿದ ಬಾಗಲಕೋಟೆಯ ಕಿರಣ್ ಸವದಿ ಮತ್ತು ತಂಡ

    ಖಾರ್ಕಿವ್​ನಿಂದ ಫೆಸೋಚಿನ್ ತಲುಪಿದ ಭಾರತದ 600-800 ವಿದ್ಯಾರ್ಥಿಗಳು

    ಉಕ್ರೇನ್​ನ ಖಾರ್ಕೀವ್​ನಲ್ಲಿ ಅಪಾಯದಲ್ಲಿದ್ದ ವಿದ್ಯಾರ್ಥಿಗಳು ಸುರಕ್ಷಿತ ಜಾಗಕ್ಕೆ ತೆರಳಿದ್ದಾರೆ. ಬಾಗಲಕೋಟೆಯ ಜಿಲ್ಲೆಯ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಬಹುತೇಕ ವಿದ್ಯಾರ್ಥಿಗಳು ಸದ್ಯ ಸೇಫ್ ಆಗಿದ್ದಾರೆ. ನಿನ್ನೆ ರಾತ್ರಿ ಉಕ್ರೇನ್​ನ ಫೇಸೋಚಿನ್​ಗೆ ವಿದ್ಯಾರ್ಥಿಗಳು ತಲುಪಿದ್ದಾರೆ. ಇಂದಿಗೂ ಊಟ, ಉಪಹಾರಕ್ಕಾಗಿ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿದ್ದಾರೆ. ಫೇಸೋಚಿನ್ ಪ್ರದೇಶದ ಖಾಸಗಿ ಹೋಟೆಲ್​ನಲ್ಲಿರುವ ವಿದ್ಯಾರ್ಥಿಗಳು ಮಾಹಿತಿ ನೀಡಿ, ಸದ್ಯ ಸೇಫ್ ಪ್ರದೇಶಕ್ಕೆ ಬಂದಿದ್ದೇವೆ. ಆದರೆ ಊಟ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ ಎಂದು ದೂರವಾಣಿ ಮೂಲಕ ಸಮಸ್ಯೆ ತೋಡಿಕೊಂಡಿದ್ದಾರೆ. ನಿನ್ನೆ ರಾತ್ರಿಇಂದ ಊಟ ಉಪಹಾರವಿಲ್ಲ. ಬೆಳಿಗ್ಗೆ ಉಪಹಾರ ಕೊಡ್ತೀವಿ ಎಂದು ಭಾರತೀಯ ಎಂಬಸ್ಸಿಯವರು ಹೇಳಿದ್ದರು. ಇಲ್ಲಿಯವರೆಗೆ ಊಟ ಉಪಹಾರ ಸಿಗದೇ ಬಿಸ್ಕೇಟ್ ಬ್ರೆಡ್ ತಿಂದು ಜೀವಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

    ಖಾರ್ಕೀವ್ ನಿಂದ 20ಕಿಲೋ‌ ಮೀಟರ್ ದೂರದಲ್ಲಿರೋ ಫೆಸೊಚಿನ್​ಗೆ ನಿನ್ನೆ 20 ಕಿಮಿ ನಡೆದುಕೊಂಡೇ ಬಂದು ಫೆಸೋಚಿನ್ ಅನ್ನು ಭಾರತೀಯ ವಿದ್ಯಾರ್ಥಿಗಳು ತಲುಪಿದ್ದಾರೆ. ಸುಮಾರು 600-800 ಭಾರತೀಯ ವಿದ್ಯಾರ್ಥಿಗಳು ಖಾರ್ಕಿವ್​ನಿಂದ ಫೆಸೋಚಿನ್ ತಲುಪಿ ಸುರಕ್ಷಿತರಾಗಿದ್ದಾರೆ.

  • 03 Mar 2022 01:39 PM (IST)

    ತವರಿಗೆ ಮರಳಿದ ಬೆಂಗಳೂರು ಮೂಲದ ಈರ್ವರು ವಿದ್ಯಾರ್ಥಿಗಳು

    ಉಕ್ರೇನ್​ನಿಂದ ಇಬ್ಬರು ವಿದ್ಯಾರ್ಥಿಗಳು ತವರಿಗೆ ಮರಳಿದ್ದಾರೆ. ರೊಮೇನಿಯಾದಿಂದ ಮುಂಬೈಗೆ ಬಂದು ಅಲ್ಲಿಂದ ಬೆಂಗಳೂರಿಗೆ ಕೆ.ಆರ್.ಪುರಂ ಮೂಲದ ಆಕಾಂಕ್ಷ, ಶೋಯಬ್ ಆಗಮಿಸಿದ್ದಾರೆ. ಕೀವ್​ನಲ್ಲಿ 3ನೇ ವರ್ಷದ ಎಂಬಿಬಿಎಸ್​ಅನ್ನು ವಿದ್ಯಾರ್ಥಿಗಳು ಓದುತ್ತಿದ್ದರು. ಫೆಬ್ರವರಿ 23ರಂದು ​ರಿಸ್ಕ್ ತೆಗೆದುಕೊಂಡು​ ಕೀವ್​ನಿಂದ ಹೊರಟಿದ್ದರು. ಅನ್ನ ನೀರಿಲ್ಲದೆ ನಡೆದುಕೊಂಡು, ಟ್ಯಾಕ್ಸಿಯಲ್ಲಿ ಗಡಿ ತಲುಪಿದ್ದರು. ರೊಮೇನಿಯಾ ಗಡಿ ತಲುಪಲು 4 ದಿನ ತೆಗೆದುಕೊಂಡಿದ್ದರು. ಇದೀಗ ತವರಿಗೆ ಮರಳಿದ ಬಳಿಕ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಅವರು ಮನವಿ ಮಾಡಿದ್ದಾರೆ.

  • 03 Mar 2022 01:34 PM (IST)

    ಉಕ್ರೇನ್‌ಗೆ ಮತ್ತೆ 2,700 ವಾಯುವಿರೋಧಿ ಕ್ಷಿಪಣಿ ನೀಡಲಿರುವ ಜರ್ಮನಿ

    ಉಕ್ರೇನ್‌ಗೆ ಮತ್ತೆ 2,700 ವಾಯುವಿರೋಧಿ ಕ್ಷಿಪಣಿಯನ್ನು ಜರ್ಮನಿ ನೀಡಲಿದೆ. ಈ ಕುರಿತು ಜರ್ಮನಿ ಘೋಷಿಸಿದೆ.

  • 03 Mar 2022 01:26 PM (IST)

    ಉಕ್ರೇನ್​ಗೆ ಭಾರತದಿಂದ ಮಾನವೀಯ ನೆರವು

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಭಾರತ ಉಕ್ರೇನ್​ಗೆ ಮಾನವೀಯ ನೆರವು ನೀಡಲು ಮುಂದಾಗಿದೆ. ಉಕ್ರೇನ್‌ಗೆ ಔಷಧ, ಬ್ಲಾಂಕೆಟ್, ಟಾರ್ಪಾಲಿನ್, ಪರಿಹಾರ ಸಾಮಗ್ರಿ ಸೇರಿ ಇತರ ವಸ್ತುಗಳನ್ನು ದೇಶವು ರವಾನಿಸಿದೆ.

  • 03 Mar 2022 01:17 PM (IST)

    ‘ಜೀವಂತವಾಗಿರುವವರನ್ನೇ ಏರ್​ಲಿಫ್ಟ್ ಮಾಡುವುದು ಕಷ್ಟ; ನವೀನ್ ಮೃತದೇಹ ತರಲು ಪ್ರಯತ್ನ ನಡೆದಿದೆ’

    ಧಾರವಾಡದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್​​ ಹೇಳಿಕೆ

    ಉಕ್ರೇನ್​ನಿಂದ ವಿದ್ಯಾರ್ಥಿ ನವೀನ್ ಮೃತದೇಹ ತರುವ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅರವಿಂದ ಬೆಲ್ಲದ್​​, ‘ವಿದೇಶಾಂಗ ಇಲಾಖೆ ಮೃತದೇಹ ತರುವ ಕೆಲಸ ಮಾಡುತ್ತಿದೆ. ಜೀವಂತವಾಗಿರುವವರನ್ನೇ ಏರ್​ಲಿಫ್ಟ್ ಮಾಡುವುದು ಕಷ್ಟ. ಸಾಧ್ಯವಾದರೆ ನವೀನ್ ಮೃತದೇಹ ತರುವ ಕೆಲಸ ಆಗಲಿದೆ. ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗ‌ ಬೇಕು. ಮೃತದೇಹದ ಜಾಗದಲ್ಲಿ 8 ರಿಂದ 10 ಜನ ಬರಬಹುದು ಎಂದು ಅವರು ಹೇಳಿದ್ದಾರೆ.

  • 03 Mar 2022 01:05 PM (IST)

    3,000 ವಿದ್ಯಾರ್ಥಿಗಳು ಉಕ್ರೇನ್​ನಲ್ಲಿದ್ದಾರೆ: ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಹೇಳಿಕೆ

    ಉಕ್ರೇನ್​​ನಲ್ಲಿದ್ದ 20 ಸಾವಿರ ಭಾರತೀಯ ವಿದ್ಯಾರ್ಥಿಗಳಲ್ಲಿ 17 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ. 3,000 ಭಾರತದ ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಹೇಳಿಕೆ ನೀಡಿದ್ದಾರೆ. IAFನ‌ C-17 ವಿಮಾನಗಳ‌ ಮೂಲಕ ವಿದ್ಯಾರ್ಥಿಗಳ ಶಿಫ್ಟ್ ಮಾಡಲಾಗುತ್ತಿದೆ. ಈವರೆಗೆ 798 ವಿದ್ಯಾರ್ಥಿಗಳು ಹಂಗೇರಿ, ಪೋಲೆಂಡ್, ರೊಮೇನಿಯಾ ಮೂಲಕ ಭಾರತಕ್ಕೆ ವಾಪಸಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

  • 03 Mar 2022 01:03 PM (IST)

    ರಷ್ಯಾದ 5,840 ಸೈನಿಕರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಿಕೊಂಡ ಉಕ್ರೇನ್

    ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರಿದಿದ್ದು, ರಷ್ಯಾದ ಸರಟೋವ್ ಯುನಿಟ್‌ನ ಶೇ.80ರಷ್ಟು ಸೈನಿಕರ ಹತ್ಯೆ ಮಾಡಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ. ಮಾರ್ಚ್ 2ರವರೆಗೆ ರಷ್ಯಾ ಸೇನಾ ಪಡೆಯ 5,840 ಸೈನಿಕರ ಹತ್ಯೆ ಮಾಡಲಾಗಿದೆ. ರಷ್ಯಾದ 30 ಜೆಟ್​, 31 ಹೆಲಿಕಾಪ್ಟರ್, 211 ಯುದ್ಧ ಟ್ಯಾಂಕರ್, 862 ಸೇನಾ ವಾಹನ, 2 ಹಡಗು ಧ್ವಂಸ ಮಾಡಿದ್ದೇವೆ ಎಂದು ಉಕ್ರೇನ್ ಹೇಳಿದೆ. ಆದರೆ ರಷ್ಯಾ ನೀಡಿರುವ ಅಂಕಿಅಂಶಗಳು ಇದಕ್ಕೆ ವ್ಯತಿರಿಕ್ತವಾಗಿದ್ದು, ತನ್ನ ಸೇನೆಯ 498 ಸೈನಿಕರು ಮೃತಪಟ್ಟಿದ್ದಾಗಿ ಹೇಳಿಕೊಂಡಿತ್ತು.

  • 03 Mar 2022 12:59 PM (IST)

    ಮುಂದುವರೆದ ರಷ್ಯಾ ದಾಳಿ; ಖಾರ್ಕಿವ್​ನಲ್ಲಿ ಮಕ್ಕಳು ಸೇರಿ 8 ಜನರ ಸಾವು

    ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಖಾರ್ಕಿವ್‌ನಲ್ಲಿ ರಷ್ಯಾ ಬಾಂಬ್ ದಾಳಿಯಲ್ಲಿ ಮಕ್ಕಳು ಸೇರಿದಂತೆ 8 ಜನರು ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ.

  • 03 Mar 2022 12:57 PM (IST)

    ಉಕ್ರೇನ್​ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್?

    ರಾಜ್ಯ ಸರ್ಕಾರದಿಂದ ಉಕ್ರೇನ್ ವಿದ್ಯಾರ್ಥಿಗಳಿಗೆ ಉಕ್ರೇನ್​ನಲ್ಲಿ ಪರಿಸ್ಥಿತಿ ಸರಿಹೋಗುವವರೆಗೂ ಆನ್​ಲೈನ್ ಕ್ಲಾಸ್ ನಡೆಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ. ಆನ್​ಲೈನ್ ಕ್ಲಾಸ್ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಜತೆ ಸಭೆ ಇದೆ. ಉಕ್ರೇನ್​ನಿಂದ ಬಂದವರಿಗೆ ಇಲ್ಲಿ ಶಿಕ್ಷಣ ನೀಡೋದು ಕಷ್ಟ. ಇಲ್ಲಿ ನೀಟ್ ಪರೀಕ್ಷೆ ಬರೆದ ಮಕ್ಕಳಿಗೆ ಸೀಟ್ ನೀಡಲಾಗಿದೆ. ಉಕ್ರೇನ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ತರಗತಿಗೆ ಅವಕಾಶವಿದೆ. ಪಠ್ಯ ಕ್ರಮ ಸ್ವಲ್ಪ ಬದಲಾಗಿದ್ದರೂ ಆನ್​ಲೈನ್​ ತರಗತಿ ಸಾಧ್ಯವಿದೆ. ಆದರೆ ಉಕ್ರೇನ್ ವಿದ್ಯಾರ್ಥಿಗಳಿಗೆ ಇಲ್ಲಿಯೇ ಸೀಟ್ ನೀಡೋದು ಕಷ್ಟ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ.

  • 03 Mar 2022 12:52 PM (IST)

    ರಾಜ್ಯದ 149 ವಿದ್ಯಾರ್ಥಿಗಳು ವಾಪಸ್; ಉಳಿದ 544 ಜನರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ: ಮನೋಜ್ ರಾಜನ್

    ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್​ ಹೇಳಿಕೆ ನೀಡಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರೂ ಆಗಿರುವ ಅವರು, ‘‘ಖಾರ್ಕಿವ್​ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರುತ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ವಿದ್ಯಾರ್ಥಿಗಳು ಖಾರ್ಕಿವ್​​​ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಕೂಡ ಖಾರ್ಕಿವ್​ನಿಂದ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಉಕ್ರೇನ್​ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ. ರಾಜ್ಯದ 693 ವಿದ್ಯಾರ್ಥಿಗಳ ಪೈಕಿ 149 ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಉಳಿದ 544 ವಿದ್ಯಾರ್ಥಿಗಳ ರಕ್ಷಣೆಗಾಗಿ ಪ್ರಯತ್ನ ನಡೆಯುತ್ತಿದೆ ಎಂದು ಮನೋಜ್ ರಾಜನ್​ ಹೇಳಿಕೆ ನೀಡಿದ್ದಾರೆ. ಉಕ್ರೇನ್​ನಿಂದ ನಾಳೆ 16 ವಿಮಾನಗಳು ಭಾರತಕ್ಕೆ ಬರಲಿವೆ. ನಾಳೆ ಬರುವ ವಿಮಾನಗಳಲ್ಲಿ ರಾಜ್ಯದ ವಿದ್ಯಾರ್ಥಿಗಳು ಬರುತ್ತಾರೆ ಎಂದು ಅವರು ಹೇಳಿದ್ದಾರೆ.

  • 03 Mar 2022 12:46 PM (IST)

    ಇದುವರೆಗೆ 138 ಕನ್ನಡ ವಿದ್ಯಾರ್ಥಿಗಳು ದೆಹಲಿಗೆ ಆಗಮನ

    ಆಪರೇಷನ್ ಗಂಗಾ ಯೋಜನೆ ಮುಂದುವರೆದಿದ್ದು, ಇಂದು ದೆಹಲಿಗೆ 41 ಕನ್ನಡಿಗ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ದೆಹಲಿಗೆ ಇದುವರೆಗೆ 138 ಕನ್ನಡಿಗ ವಿದ್ಯಾರ್ಥಿಗಳ ಆಗಮಿಸಿದ್ದು, 76 ವಿದ್ಯಾರ್ಥಿಗಳು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ ವೇಳೆಗೆ 62 ವಿದ್ಯಾರ್ಥಿಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

  • 03 Mar 2022 12:44 PM (IST)

    ಪ್ಯಾರಿಸ್‌ನ ಗ್ರೆವಿನ್ ಮ್ಯೂಸಿಯಂನಿಂದ  ವ್ಲಾಡಿಮಿರ್ ಪುಟಿನ್ ಪ್ರತಿಮೆ ತೆರವು

    ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ಸಂಬಂಧಿಸಿದ ಸಂಪರ್ಕಗಳನ್ನು ಹಿಂಪಡೆಯಲು ಎಲ್ಲಾ ದೇಶಗಳು ಮುಂದಾಗುತ್ತಿವೆ. ಇದೀಗ ಪ್ಯಾರಿಸ್‌ನ ಗ್ರೆವಿನ್ ಮ್ಯೂಸಿಯಂನಿಂದ  ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಮೆಯನ್ನು ತೆರವು ಮಾಡಲಾಗಿದೆ.

  • 03 Mar 2022 12:39 PM (IST)

    ಚಿಕ್ಕಬಳ್ಳಾಪುರ ಜಿಲ್ಲೆಯ 12 ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ

    ಚಿಕ್ಕಬಳ್ಳಾಪುರ ಜಿಲ್ಲೆಯ 12 ವಿದ್ಯಾರ್ಥಿಗಳು ಉಕ್ರೇನ್​ನಲ್ಲಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ಉಕ್ರೇನ್​ನಿಂದ ಜಿಲ್ಲೆಗೆ ವಾಪಸಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತದಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ಆಯಾ ತಾಲೂಕುಗಳ ತಹಶೀಲ್ದಾರ್​​ಗಳಿಗೆ ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ಧೈರ್ಯ ತುಂಬುವ ಜವಾಬ್ದಾರಿ ನೀಡಲಾಗಿದೆ.

  • 03 Mar 2022 12:33 PM (IST)

    ಉಕ್ರೇನ್ ಸೈನಿಕರು ಸಹಾಯ ಮಾಡುತ್ತಿದ್ದಾರೆ; ಮೃತ ನವೀನ್ ಸ್ನೇಹಿತನ ಹೇಳಿಕೆ

    ಖಾರ್ಕಿವ್ ನಗರದಿಂದ ಮೃತ ನವೀನ್ ಸ್ನೇಹಿತ ರಾಯಚೂರಿನ ಲಕ್ಷ್ಮೀ ನಾರಾಯಣ್ ವಾಪಸಾಗಿದ್ದು, ಅಲ್ಲಿನ ಪರಿಸ್ಥಿತಿಯನ್ನು ಹಂಚಿಕೊಂಡಿದ್ದಾರೆ. ‘‘ಹಾವೇರಿಯ ನವೀನ್ ಜತೆ ಒಂದು ವರ್ಷ ಜೊತೆಗಿದ್ದೆ. ನವೀನ್ ಮೃತದೇಹವನ್ನು ಭಾರತಕ್ಕೆ ತರುವುದು ಸುಲಭವಿಲ್ಲ. ಉಕ್ರೇನ್​ನ ಖಾರ್ಕಿವ್ ನಗರದಲ್ಲಿ ನನ್ನ ಸ್ನೇಹಿತರಿದ್ದಾರೆ. ಬಂಕರ್​ಗಳಲ್ಲಿರುವ ನನ್ನ ಸ್ನೇಹಿತರನ್ನ ರಕ್ಷಿಸಬೇಕಾಗಿದೆ. ಉಕ್ರೇನ್​ನ ಸೈನಿಕರು ನಮಗೆ ಸಹಾಯ ಮಾಡಿದ್ದಾರೆ. ಉಕ್ರೇನ್ ಸೈನಿಕರು ಭಾರತೀಯರನ್ನ ಒತ್ತೆಯಾಳಾಗಿ ಇಟ್ಟಿಲ್ಲ ಎಂದು ಲಕ್ಷ್ಮೀ ನಾರಾಯಣ್ ನುಡಿದಿದ್ದಾರೆ.

  • 03 Mar 2022 12:23 PM (IST)

    ಉಕ್ರೇನ್​ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್?

    ಉಕ್ರೇನ್​ನಲ್ಲಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್ ನಡೆಸಲಾಗುತ್ತಾ ಎಂಬ ಬಗ್ಗೆ ಪ್ರಶ್ನೆಗಳು ಮೂಡಿವೆ. 600ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳಿಗೆ ಆನ್​ಲೈನ್ ಕ್ಲಾಸ್ ನಡೆಸುವ ಯೋಜನೆ ಇದೆಯಾ ಎಂಬ ಬಗ್ಗೆ ಹೇಳಲಾಗುತ್ತಿದೆ. ಉಕ್ರೇನ್​ನಲ್ಲಿ ಪರಿಸ್ಥಿತಿ ಸರಿಹೋಗುವವರೆಗೂ ಆನ್​ಲೈನ್ ಕ್ಲಾಸ್ ಎಂಬ ಬಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿಕೆ ನೀಡಿದ್ದಾರೆ.

    ಆನ್​ಲೈನ್ ಕ್ಲಾಸ್ ಬಗ್ಗೆ ಇಂದು ಸಿಎಂ ಬೊಮ್ಮಾಯಿ ಜತೆ ಸಭೆ ನಡೆಸಲಾಗುತ್ತದೆ. ಉಕ್ರೇನ್​ನಿಂದ ಬಂದವರಿಗೆ ಇಲ್ಲಿ ಶಿಕ್ಷಣ ನೀಡೋದು ಕಷ್ಟ. ಇಲ್ಲಿ ನೀಟ್ ಪರೀಕ್ಷೆ ಬರೆದ ಮಕ್ಕಳಿಗೆ ಸೀಟ್ ನೀಡಲಾಗಿದೆ. ಉಕ್ರೇನ್ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ತರಗತಿಗೆ ಅವಕಾಶವಿದೆ. ಪಠ್ಯ ಕ್ರಮ ಸ್ವಲ್ಪ ಬದಲಾಗಿದ್ರೂ ಆನ್​ಲೈನ್​ ತರಗತಿ ಸಾಧ್ಯ. ಉಕ್ರೇನ್ ವಿದ್ಯಾರ್ಥಿಗಳಿಗೆ ಇಲ್ಲಿಯೇ ಸೀಟ್ ನೀಡೋದು ಕಷ್ಟ. ಇಂದು ಸಿಎಂ ಜೊತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಚರ್ಚೆ ನಡೆಸುತ್ತೇವೆ. ಆನ್​ಲೈನ್​ ತರಗತಿ ಸೇರಿ ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶಕ ಗಿರೀಶ್ ಹೇಳಿದ್ದಾರೆ.

  • 03 Mar 2022 12:23 PM (IST)

    ಭಾರತದ ಎಲ್ಲ ವಿದ್ಯಾರ್ಥಿಗಳು ಖಾರ್ಕಿನ್​ನಿಂದ ಹೊರಬಂದಿದ್ದಾರೆ

    ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬಸ್ಥರ ಭೇಟಿ ಮಾಡಿ ಮಾಹಿತಿ ಪಡೆದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಖಾರ್ಕಿವ್​ನಿಂದ ವಿದ್ಯಾರ್ಥಿಗಳು ನಡೆದುಕೊಂಡು ಬರ್ತಿದ್ದಾರೆ. ಕೇಂದ್ರ ಸರ್ಕಾರ ಸೂಚಿಸಿರುವ ಸ್ಥಳಕ್ಕೆ ವಿದ್ಯಾರ್ಥಿಗಳು ಬಂದಿದ್ದಾರೆ. ಭಾರತದ ಎಲ್ಲ ವಿದ್ಯಾರ್ಥಿಗಳು ಖಾರ್ಕಿನ್​ನಿಂದ ಹೊರಬಂದಿದ್ದಾರೆ. ಕರ್ನಾಟಕದ ಎಲ್ಲಾ ವಿದ್ಯಾರ್ಥಿಗಳು ಖಾರ್ಕಿವ್​ನಿಂದ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯದ ನೋಡಲ್ ಅಧಿಕಾರಿ ಮನೋಜ್ ರಾಜನ್​ ಹೇಳಿದ್ದಾರೆ.

  • 03 Mar 2022 12:17 PM (IST)

    ಉಕ್ರೇನ್​​ನಲ್ಲಿದ್ದ 20,000 ಭಾರತೀಯ ವಿದ್ಯಾರ್ಥಿಗಳ ಪೈಕಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​

    ಉಕ್ರೇನ್​​ನಲ್ಲಿದ್ದ 20 ಸಾವಿರ ಭಾರತೀಯ ವಿದ್ಯಾರ್ಥಿಗಳ ಪೈಕಿ 17 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​ ಮಾಡಲಾಗಿದೆ. 3,000 ಭಾರತದ ವಿದ್ಯಾರ್ಥಿಗಳು ಉಕ್ರೇನ್​​ನಲ್ಲಿದ್ದಾರೆ. IAFನ‌ C-17 ವಿಮಾನಗಳ‌ ಮೂಲಕ ವಿದ್ಯಾರ್ಥಿಗಳ ಶಿಫ್ಟ್ ಮಾಡಲಾಗಿದೆ. ಈವರೆಗೆ 798 ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಿದ್ದಾರೆ. ಹಂಗೇರಿ, ಪೋಲೆಂಡ್, ರೊಮೇನಿಯಾ ಮೂಲಕ ವಾಪಸ್ ಆಗಿದ್ದಾರೆ ಎಂದು ನವದೆಹಲಿಯಲ್ಲಿ ವಿದೇಶಾಂಗ ಇಲಾಖೆ ವಕ್ತಾರ ಅರೀಂದಮ್ ಬಗಚಿ ಹೇಳಿಕೆ ನೀಡಿದ್ದಾರೆ.

  • 03 Mar 2022 12:15 PM (IST)

    ಉಕ್ರೇನ್​ನಲ್ಲಿ ಸಿಲುಕಿರುವ 693 ಕನ್ನಡಿಗರ ಪೈಕಿ ಒಟ್ಟು 149 ಜನ ಭಾರತಕ್ಕೆ ಬಂದಿದ್ದಾರೆ

    ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಕಾರ್ಯಾಚರಣೆ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ ಮನೋಜ್ ರಾಜನ್ ಸುದ್ದಿಗೋಷ್ಠಿ ನಡೆಸಿದ್ದಾರೆ. ರಾಜ್ಯ ನೋಡೆಲ್ ಅಧಿಕಾರಿ ಆಗಿರುವ ಮನೋಜ್ ರಾಜನ್, ಈ ವರೆಗೂ ಉಕ್ರೇನ್ ನಲ್ಲಿ ಸಿಲುಕಿರುವ 693 ಜನರ ಪೈಕಿ ಒಟ್ಟು 149 ಜನ ಭಾರತಕ್ಕೆ ಬಂದಿದ್ದಾರೆ. ನಾಳೆ ಉಕ್ರೇನ್ ನಿಂದ 16 ವಿಮಾನಗಳು ಭಾರತಕ್ಕೆ ಬರಲಿದೆ, ಅದರಲ್ಲಿ ಕನ್ನಡಿಗರು ಬರಲಿದ್ದಾರೆ ಎಂದು ತಿಳಿಸಿದ್ದಾರೆ.

  • 03 Mar 2022 12:14 PM (IST)

    ಮಾರ್ಚ್ 2ರವರೆಗೆ ರಷ್ಯಾ ಸೇನಾ ಪಡೆಯ 5,840 ಸೈನಿಕರ ಹತ್ಯೆ: ಉಕ್ರೇನ್ ಹೇಳಿಕೆ

    ಉಕ್ರೇನ್-ರಷ್ಯಾ ಮಧ್ಯೆ 8ನೇ ದಿನವೂ ಯುದ್ಧ ಮುಂದುವರಿದಿದೆ. ರಷ್ಯಾದ ಸರಟೋವ್ ಯುನಿಟ್‌ನ ಶೇ.80ರಷ್ಟು ಸೈನಿಕರ ಹತ್ಯೆ ಆಗಿದೆ. ಶೇಕಡಾ 80ರಷ್ಟು ಸೈನಿಕರನ್ನು ಹತ್ಯೆಗೈದಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ. ಮಾರ್ಚ್ 2ರವರೆಗೆ ರಷ್ಯಾ ಸೇನಾ ಪಡೆಯ 5,840 ಸೈನಿಕರ ಹತ್ಯೆ ಆಗಿದೆ. ರಷ್ಯಾದ 30 ಜೆಟ್​, 31 ಹೆಲಿಕಾಪ್ಟರ್, 211 ಯುದ್ಧ ಟ್ಯಾಂಕರ್​, 862 ಸೇನಾ ವಾಹನ, 2 ಹಡಗು ಧ್ವಂಸಗೊಳಿಸಿದ್ದಾಗಿ ಹೇಳಿಕೆ ನೀಡಲಾಗಿದೆ.

  • 03 Mar 2022 11:54 AM (IST)

    ಸ್ಲೊವೇಕಿಯಾದಿಂದ ಹೊರಡಲಿರುವ ವಿದ್ಯಾರ್ಥಿಗಳೊಂದಿಗೆ ಸಚಿವ ಕಿರಣ್ ರಿಜಿಜು ಮಾತುಕತೆ

    ಕೇಂದ್ರ ಸಚಿವ ಕಿರಣ್ ರಿಜಿಜು ಸ್ಲೊವೇಕಿಯಾದಿಂದ ವಿಮಾನ ಹೊರಡುವ ಮುನ್ನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

  • 03 Mar 2022 11:49 AM (IST)

    ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆಯಲ್ಲಿ ರಾಹುಲ್ ಗಾಂಧಿ ಭಾಗಿ; ಉಕ್ರೇನ್ ಸ್ಥಿತಿಗತಿ ಚರ್ಚೆ

    ದೆಹಲಿಯಲ್ಲಿ ವಿದೇಶಾಂಗ ಇಲಾಖೆಯ ಸಮಾಲೋಚನಾ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗಿಯಾಗಿದ್ದಾರೆ. ಉಕ್ರೇನ್ ಸ್ಥಿತಿಗತಿ, ವಿದ್ಯಾರ್ಥಿಗಳ ಏರ್ ಲಿಫ್ಟ್ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಏರ್ ಲಿಫ್ಟ್ ಕಾರ್ಯಾಚರಣೆ ಮಾಹಿತಿ ನೀಡುವಂತೆ ರಾಹುಲ್ ಗಾಂಧಿ ಆಗ್ರಹಿಸಿದ್ದು, ತ್ವರಿತ ಗತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

  • 03 Mar 2022 11:41 AM (IST)

    ಆಪರೇಷನ್ ಗಂಗಾ ಯೋಜನೆಯಡಿಯಲ್ಲಿ ಇಂದು ಆಗಮಿಸಲಿದ್ದಾರೆ 3,726 ಭಾರತೀಯರು

    ಆಪರೇಷನ್ ಗಂಗಾ ಯೋಜನೆಯಡಿಯಲ್ಲಿ ಇಂದು 3726 ಭಾರತೀಯರು ಆಗಮಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಬುಕಾರೆಸ್ಟ್​ನಿಂದ 8, ಸುಕೇವಾದಿಂದ 2, ಕೊಸೈಸ್​ನಿಂದ 1, ಬುಡಾಪೆಸ್ಟ್​​ನಿಂದ 5, ರೊಮೇನಿಯಾದಿಂದ 3 ವಿಮಾನಗಳಲ್ಲಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದಿದ್ದಾರೆ.

  • 03 Mar 2022 11:35 AM (IST)

    ಉಕ್ರೇನ್- ರಷ್ಯಾ ಯುದ್ಧದ ಮಧ್ಯೆ ಇಂದು QUAD ಸಭೆಯಲ್ಲಿ ಪ್ರಧಾನಿ ಮೋದಿ ಭಾಗಿ

    ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ಇಂದು QUAD ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಜತೆ ಕ್ವಾಡ್ ನಾಯಕರ ಸಭೆಯಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ವರ್ಚುವಲ್ ಆಗಿ QUAD ನಾಯಕರ ಸಭೆ ನಡೆಯಲಿದೆ.

  • 03 Mar 2022 11:34 AM (IST)

    ನಾವು ಈಗ ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗುತ್ತಾ?- ಸಿಜೆಐ

    ಉಕ್ರೇನ್ ನಲ್ಲಿ ಸಿಲುಕಿದ ಭಾರತದ ವಿದ್ಯಾರ್ಥಿಗಳ ರಕ್ಷಣೆಗೆ ಸರ್ಕಾರಕ್ಕೆ ನಿರ್ದೇಶನ ಕೊಡಿ ಎಂದು ಸುಪ್ರೀಂ ಕೋರ್ಟ್​ಗೆ ಕಾಶ್ಮೀರದ ವ್ಯಕ್ತಿಯಿಂದ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಸಿಜೆ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಕೇಂದ್ರ ಸರ್ಕಾರ ಉಕ್ರೇನ್​ನಿಂದ ವಿದ್ಯಾರ್ಥಿಗಳ ತೆರವಿಗೆ ಉತ್ತಮ ಪ್ರಯತ್ನ ಮಾಡುತ್ತಿದೆ ಎಂದು ಮಾಧ್ಯಮಗಳ ವರದಿ ಆಧಾರದ ಮೇಲೆ ನ್ಯಾಯಾಲಯ ಹೇಳಿದೆ. ನಾವು ಈಗ ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿದ ಸಿಜೆಐ, ಉಕ್ರೇನ್​ನಲ್ಲಿ ಸಿಲುಕಿದ ಭಾರತದ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ಇದೆ ಎಂದಿದ್ದಾರೆ. ಈ ಬಗ್ಗೆ ಅಟಾರ್ನಿ ಜನರಲ್ ಅಭಿಪ್ರಾಯ ಏನು? ಎಂದೂ ಅವರು ಪ್ರಶ್ನಿಸಿದ್ದಾರೆ.

  • 03 Mar 2022 11:21 AM (IST)

    ಉಕ್ರೇನ್ ನಿರಾಶ್ರಿತರನ್ನು ಸ್ವಾಗತಿಸಿದ ಬರ್ಲಿನ್ ಸಾರ್ವಜನಿಕರು; ವಿಡಿಯೋ ಇಲ್ಲಿದೆ

  • 03 Mar 2022 11:18 AM (IST)

    ಏರಿಕೆಯಾಗುತ್ತಿರುವ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ

    ರಷ್ಯಾ- ಉಕ್ರೇನ್ ಬಿಕ್ಕಟ್ಟಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಗುರುವಾರ ಬ್ರೆಂಟ್ ಪ್ರತಿ ಬ್ಯಾರೆಲ್​ಗೆ 118 ಡಾಲರ್​​ಗಿಂತ ಹೆಚ್ಚಾಗಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ ಬ್ಯಾರೆಲ್‌ಗೆ $ 118.22 ರಷ್ಟು ಏರಿಕೆಯಾಗಿದ್ದು, ಇದು ಫೆಬ್ರವರಿ 2013 ರಿಂದ ಅತ್ಯಧಿಕವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

  • 03 Mar 2022 11:16 AM (IST)

    ಉಕ್ರೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡಲು 1 ಮಿಲಿಯನ್ ಡಾಲರ್ ನೀಡಿದ ವೆಲ್ಸ್ ಫಾರ್ಗೊ, ಬ್ಯಾಂಕ್ ಆಫ್ ಅಮೇರಿಕಾ

    ಅಮೆರಿಕನ್ ಮೂಲದ ವೆಲ್ಸ್ ಫಾರ್ಗೊ, ಬ್ಯಾಂಕ್ ಆಫ್ ಅಮೇರಿಕಾ ಕಂಪನಿಗಳು ಉಕ್ರೇನಿಯನ್ ನಿರಾಶ್ರಿತರಿಗೆ ಸಹಾಯ ಮಾಡುತ್ತಿರುವ ಅಮೇರಿಕನ್ ರೆಡ್​ ಕ್ರಾಸ್ ಸಂಸ್ಥೆ ಹಾಗೂ ಇತರ ನಾನ್ ಪ್ರಾಫಿಟ್ ಸಂಸ್ಥೆಗಳಿಗೆ ಒಟ್ಟಾಗಿ 1 ಮಿಲಿಯನ್ ಡಾಲರ್ ಅನುದಾನ ನೀಡುತ್ತಿರುವುದಾಗಿ ಘೋಷಿಸಿವೆ.

  • 03 Mar 2022 11:11 AM (IST)

    ಕೀವ್ ಮತ್ತು ಖಾರ್ಕಿವ್​ನಲ್ಲಿ ಸಿಲುಕಿರುವವರನ್ನು ಬೇಗ ಕರೆತನ್ನಿ; ಭಾರತಕ್ಕೆ ಮರಳಿದ ವಿದ್ಯಾರ್ಥಿಗಳ ಮನವಿ

    ಕೀವ್ ಮತ್ತು ಖಾರ್ಕಿವ್​ನಲ್ಲಿ ಸಿಲುಕಿರುವವರನ್ನು ಬೇಗ ಕರೆತನ್ನಿ ಎಂದು ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ. ಉಕ್ರೇನ್​ನಲ್ಲಿ ಸಿಲುಕಿರುವವರನ್ನು ಕರೆತರಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಭಾರತೀಯರು ಎನ್ನುವುದಕ್ಕೆ ಹೆಮ್ಮೆ ಆಗುತ್ತಿದೆ. ಆದರೆ ಹಲವರು ಕೀವ್ ಮತ್ತು ಖಾರ್ಕಿವ್​ನಲ್ಲಿ ಸಿಲುಕಿದ್ದಾರೆ. ಅವರನ್ನು ಆದಷ್ಟು ಬೇಗ ಕರೆತನ್ನಿ ಎಂದು ಇಂದು ದೆಹಲಿಗೆ ಬಂದಿಳಿದ ವಿದ್ಯಾರ್ಥಿಗಳು ಎಎನ್​ಐ ಜತೆ ಮಾತನಾಡುತ್ತಾ ತಿಳಿಸಿದ್ದಾರೆ.

  • 03 Mar 2022 10:54 AM (IST)

    ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಸಮರ್ಥನೆಯೇನು? ಇಲ್ಲಿದೆ ಪೂರ್ಣ ವಿವರ

    ರಷ್ಯಾ ಮತ್ತು ಉಕ್ರೇನ್ ನಡುವಣ ಸಂಘರ್ಷ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಉಕ್ರೇನ್ ಮೇಲೆ ಮಾಡಿರುವ ದಾಳಿ ಅಚಾನಕ್ ಆದುದಲ್ಲ, ಇದು ತುಂಬಾ ಯೋಚಿಸಿ ತೆಗೆದುಕೊಂಡ ನಿರ್ಧಾರ ಎಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ತಮ್ಮ ನಿರ್ಧಾನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅಮೆರಿಕದೊಂದಿಗೆ ಗಡಿ ಹಂಚಿಕೊಂಡಿರುವ ಮೆಕ್ಸಿಕೊ ಅಥವಾ ಕೆನಡಾಗಳಲ್ಲಿ ನಾವು ಸೇನಾ ನೆಲೆ ಸ್ಥಾಪಿಸಿ, ನಮ್ಮ ಕ್ಷಿಪಣಿಗಳನ್ನು ನಿಯೋಜಿಸಿದರೆ ಅಮೆರಿಕ ಸುಮ್ಮನಿರುವುದೇ ಎನ್ನುವುದು ಅವರ ಪ್ರಶ್ನೆ. ಈ ಪ್ರಶ್ನೆಯನ್ನೇ ಅವರು ಉಕ್ರೇನ್ ಮೇಲಿನ ದಾಳಿಗೆ ಸಮರ್ಥನೆಯಾಗಿಯೂ ಬಳಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸಂವಾದವೊಂದರಲ್ಲಿ ಪುಟಿನ್ ಮಡಿರುವ ಭಾಷಣದ ಕನ್ನಡ ಅನುವಾದ ಇಲ್ಲಿದೆ:

    ಮೆಕ್ಸಿಕೊದಲ್ಲಿ ಸೇನಾನೆಲೆ ಸ್ಥಾಪಿಸಿ ಕ್ಷಿಪಣಿ ನಿಲ್ಲಿಸಿದರೆ ಅಮೆರಿಕ ಸುಮ್ಮನಿರುತ್ತಾ: ಉಕ್ರೇನ್ ಮೇಲಿನ ದಾಳಿಗೆ ರಷ್ಯಾ ಕೊಡುವ ಸಮರ್ಥನೆ ಇದು

  • 03 Mar 2022 10:50 AM (IST)

    ಉಕ್ರೇನ್​ ದೇಶದಲ್ಲಿ ಕರ್ನಾಟಕ ವಿದ್ಯಾರ್ಥಿಗಳ ಸಂಕಷ್ಟ

    ಉಕ್ರೇನ್​ ದೇಶದಲ್ಲಿ ಕರ್ನಾಟಕ ವಿದ್ಯಾರ್ಥಿಗಳು ಸಂಕಷ್ಟದಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದೆ. ಖಾರ್ಕಿವ್, ಸುಮ್ಮಿ ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದಿಂದ ಸೇಫ್ ಸಿಟಿಯಲ್ಲಿರುವವರ ರಕ್ಷಣೆ ಮಾಡಲಾಗುತ್ತಿದೆ. ಖಾರ್ಕಿವ್​ನಲ್ಲಿರುವ ನಮಗೆ ಯಾರು ಸಹಾಯ ಮಾಡ್ತಿಲ್ಲ. ನೀವು ಬಾರ್ಡರ್​ಗೆ ಬನ್ನಿ ಅಂತ ಮೆಸೇಜ್ ಕಳುಹಿಸುತ್ತಿದ್ದಾರೆ. ಖಾರ್ಕಿವ್​ನಗರದಿಂದ ಹೊರಗೆ ತೆರಳಲು ಸಾಧ್ಯವಾಗುತ್ತಿಲ್ಲ. ಮೂರು ಪಟ್ಟು ಹಣ ಕೊಟ್ಟು ರೈಲಿನಲ್ಲಿ ಹೋಗ್ತಿದ್ದೀವಿ. ಭಾರತ ರಾಷ್ಟ್ರ ಧ್ವಜ ಇದ್ದರೆ ರೈಲಿನ ಒಳಗೆ ಬೀಡ್ತಿದ್ದಾರೆ. ರಾಷ್ಟ್ರ ಧ್ವಜ ತಯಾರಿಸಲು ಸಾಕಷ್ಟು ಕಷ್ಟಪಡುತ್ತಿದ್ದೇವೆ. ನಮ್ಮ ಬಟ್ಟೆಗಳಿಗೆ ತ್ರಿವರ್ಣ ಧ್ವಜ್ವ ಬಣ್ಣ ಹಚ್ಚುತ್ತಿದ್ದೇವೆ ಎಂದು ಟಿವಿ9ಗೆ ಉಕ್ರೇನ್​ನಲ್ಲಿರುವ ವಿದ್ಯಾರ್ಥಿಯಿಂದ ಮಾಹಿತಿ ಲಭ್ಯವಾಗಿದೆ.

  • 03 Mar 2022 10:43 AM (IST)

    ಅಮೆರಿಕ ಅಧ್ಯಕ್ಷ ಬೈಡೆನ್ ಭೇಟಿಯಾಗಲಿರುವ ಮೋದಿ

    ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭೇಟಿಯಾಗಲಿದ್ದಾರೆ. ಇಂದು ಕ್ವಾಡ್ ನಾಯಕರ ವರ್ಚುವಲ್​ ಸಭೆ ವೇಳೆ ಭೇಟಿ ಮಾಡಲಿದ್ದಾರೆ. ಕ್ವಾಡ್ ನಾಯಕರ ಸಭೆ ವೇಳೆ ಜೋ ಬೈಡೆನ್ ಜತೆ ಮೋದಿ ಚರ್ಚೆ ನಡೆಸಲಿದ್ದಾರೆ.

  • 03 Mar 2022 10:39 AM (IST)

    ರಷ್ಯಾ ಕ್ಷಿಪಣಿ ದಾಳಿಯಲ್ಲಿ ಬಾಂಗ್ಲಾದೇಶದ ಹಡಗು ನಾಶ

    ರಷ್ಯಾ ಕ್ಷಿಪಣಿ ದಾಳಿಯಲ್ಲಿ ಬಾಂಗ್ಲಾದೇಶದ ಹಡಗು ನಾಶವಾಗಿದೆ. ಈ ಬಗ್ಗೆ ಉಕ್ರೇನ್ ಮಾಹಿತಿ ನೀಡಿದೆ. ಉಕ್ರೇನ್ ಬಂದರಿನಲ್ಲಿ ನಿಂತಿದ್ದ ಬಾಂಗ್ಲಾದ ಹಡಗು ಧ್ವಂಸವಾಗಿದೆ. ಬಾಂಗ್ಲಾದ ಹಡಗಿನಲ್ಲಿದ್ದ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ತಿಳಿಸಿದೆ.

  • 03 Mar 2022 10:21 AM (IST)

    ರಷ್ಯಾ ಆಕ್ರಮಣ ವಿರೋಧಿ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ 141 ರಾಷ್ಟ್ರಗಳ ಬೆಂಬಲ; ಮತದಾನದಿಂದ ದೂರ ಉಳಿದ ಭಾರತ

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ರಷ್ಯಾವನ್ನು ತಕ್ಷಣವೇ ಉಕ್ರೇನ್‌ನಿಂದ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುವ ನಿರ್ಣಯವನ್ನು ಬುಧವಾರ ಅಂಗೀಕರಿಸಲಾಗಿದೆ. ಉಕ್ರೇನ್‌ನ ಮೇಲೆ ಮಾಸ್ಕೋದ ಆಕ್ರಮಣವನ್ನು ಪ್ರಬಲ ಪದಗಳಲ್ಲಿ ಖಂಡಿಸುವ ಮತ್ತು ಪರಮಾಣು ಪಡೆಗಳನ್ನು ಎಚ್ಚರವಾಗಿಡುವ ವ್ಲಾಡಿಮಿರ್ ಪುಟಿನ್ ಅವರ ನಿರ್ಧಾರವನ್ನು ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳಲ್ಲಿ 141 ರಾಷ್ಟ್ರಗಳು ಬೆಂಬಲಿಸಿದವು. ಭಾರತ ಮತದಾನದಿಂದ ದೂರ ಉಳಿದಿದೆ.

  • 03 Mar 2022 10:17 AM (IST)

    ರಷ್ಯಾ ದಾಳಿಗೆ ನಲುಗಿದ ಉಕ್ರೇನ್​ನ ನಗರಗಳು

    ಒಖ್ತಿರ್ಕಾ ಮತ್ತು ಖಾರ್ಕಿವ್ ಸೇರಿದಂತೆ ಉಕ್ರೇನ್​ನ ಹಲವು ನಗರಗಳು ರಷ್ಯಾ ದಾಳಿಗೆ ತುತ್ತಾಗಿವೆ. ಇದರಲ್ಲಿ ಮೂರು ಶಾಲೆಗಳು, 12ಕ್ಕೂ ಹೆಚ್ಚು ಜನವಸತಿ ಕಟ್ಟಡಗಳು ಒಖ್ತಿರ್ಕಾದಲ್ಲಿ ನಾಶವಾಗಿವೆ ಎಂದು ದಿ ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ.

  • 03 Mar 2022 10:14 AM (IST)

    ಸರ್ಕಾರದ ನಡೆಯ ವಿರುದ್ಧ ರಷ್ಯಾದಲ್ಲಿ ಜನರ ಪ್ರತಿಭಟನೆ; ವಶಕ್ಕೆ ಪಡೆದ ಪೊಲೀಸರು

    ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವುದನ್ನು ವಿರೋಧಿಸಿ ರಷ್ಯಾದಲ್ಲಿ ಪ್ರತಿಭಟನೆ ಜೋರಾಗಿದೆ. ಅಲೆಕ್ಸಿ ವೆವಲ್ನಿ ಅವರ ಮಾತಿನಂತೆ ಮಾಸ್ಕೋ ಹಾಗೂ ಸೇಂಟ್ ಪೀಟರ್ಸ್​​ಬರ್ಗ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಲವು ಜನರನ್ನು ಪೊಲೀಸರು ಬಂಧಿಸಿದ್ದಾರೆ.

  • 03 Mar 2022 10:07 AM (IST)

    208 ನಾಗರಿಕರನ್ನು ಕರೆತಂದ ಭಾರತೀಯ ವಾಯುಪಡೆಯ ಮೂರನೇ ವಿಮಾನ

    ಉಕ್ರೇನ್‌ನಿಂದ 208 ಭಾರತೀಯ ನಾಗರಿಕರನ್ನು ಹೊತ್ತುತಂದ ಭಾರತೀಯ ವಾಯುಪಡೆಗೆ ಸೇರಿದ ಮೂರನೇ C-17 ವಿಮಾನವು ಪೋಲೆಂಡ್‌ನ ರ್ಜೆಸ್ಜೋವ್‌ನಿಂದ ಇಂದು ದೆಹಲಿಯನ್ನು ತಲುಪಿದೆ. ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ಭಾರತೀಯರನ್ನು ಸ್ವದೇಶಕ್ಕೆ ಕರೆತರುವಲ್ಲಿ ವಾಯುಪಡೆಯು ಸಹಾಯ ಮಾಡುತ್ತಿದೆ.

  • 03 Mar 2022 10:06 AM (IST)

    ಉಕ್ರೇನ್​ನಲ್ಲಿ 752 ನಾಗರಿಕರು ಮೃತಪಟ್ಟಿದ್ದಾರೆ ಎಂದ ವಿಶ್ವಸಂಸ್ಥೆ

    ಉಕ್ರೇನ್ ಮೇಕೆ ರಷ್ಯಾ ನಡೆಸುತ್ತಿರುವ ಯುದ್ಧದಿಂದ ಉಕ್ರೇನ್‌ನಲ್ಲಿ ಮಾ.1ರವರೆಗೆ 752 ನಾಗರಿಕರು ಮೃತಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

  • 03 Mar 2022 10:06 AM (IST)

    ಭಾರತೀಯರ ಸ್ಥಳಾಂತರಕ್ಕೆ ಅಡ್ಡಿಯಾಗುತ್ತಿದೆ; ರಷ್ಯಾಗೆ ಕ್ಷಿಪಣಿ ದಾಳಿ ನಿಲ್ಲಿಸಲು ಹೇಳಿ ಎಂದ ಉಕ್ರೇನ್

    ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ರಷ್ಯಾಗೆ ಸೂಚಿಸಿ. ಶೆಲ್, ಕ್ಷಿಪಣಿ ದಾಳಿಯಿಂದ ಭಾರತೀಯರ ಶಿಫ್ಟ್​ಗೆ ಅಡ್ಡಿಯಾಗುತ್ತಿದೆ. ಖಾರ್ಕಿವ್, ಸುಮೇಯಲ್ಲಿ ದಾಳಿ ನಿಂತರೆ ಸ್ಥಳಾಂತರ ಸುಗಮವಾಗುತ್ತದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯದಿಂದ ಹೇಳಿಕೆ ನೀಡಿದೆ.

  • 03 Mar 2022 10:01 AM (IST)

    ಖಾರ್ಕಿವ್​ನಿಂದ ಹೊರಡಬೇಕಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ಸಮಸ್ಯೆ; ನಡೆದು ಹಳ್ಳಿ ಸೇರಿದ ವಿದ್ಯಾರ್ಥಿಗಳು

    ತುರ್ತಾಗಿ ಖಾರ್ಕಿವ್​ನಿಂದ ಹೊರಡುವಂತೆ ಭಾರತ ತಿಳಿಸಿದ್ದಂತೆ ಅಲ್ಲಿರುವ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತು ಬಾಗಲಕೋಟೆಯ ಕಿರಣ್ ಸವದಿ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ನಗರವನ್ನು ಖಾಲಿ ಮಾಡಲು ಹಲವು ಕಿಲೋ ಮೀಟರ್ ರೈಲ್ವೆ ನಿಲ್ದಾಣ ತಲುಪಿದ್ದೆವು. ಆದರೆ ಅಲ್ಲಿ ನಿರಾಶೆಯಾಯಿತು. ಮೊದಲು ಉಕ್ರೇನ್ ನಾಗರಿಕರಿಗೆ ಆದ್ಯತೆ ನೀಡಲಾಗಿದೆ. ನಂತರ ವಿದ್ಯಾರ್ಥಿನಿಯರಿಗೆ. ನಂತರ ವಿದ್ಯಾರ್ಥಿಗಳಿಗೆ. ಸೀಟ್ ಲಭ್ಯತೆಯ ಮೇಲೆ ಜನರನ್ನು ರೈಲಿನೊಳಗೆ ಬಿಡಲಾಗುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಆಕ್ರೋಶ ಹೊರಹಾಕಿದರೆ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸುತ್ತಾರೆ ಎಂದು ಕಿರಣ್ ತಮ್ಮ ತಂದೆಗೆ ಕಳುಹಿಸಿದ ಮೆಸೇಜ್​ನಲ್ಲಿ ತಿಳಿಸಿದ್ದಾರೆ. ಕೊನೆಗೆ ಭಾರತೀಯ ರಾಯಭಾರ ಕಚೇರಿಯ ಸೂಚನೆಯಂತೆ ರೈಲಿನಲ್ಲಿ ಕಿರಣ್ ಮತ್ತು ಸ್ನೇಹಿತರು ಹಳ್ಳಿಯೊಂದರತ್ತ ತೆರಳಿದ್ಧಾರೆ.

    ಗ್ರಾಮಕ್ಕೆ ತಲುಪಲು ಕಿರಣ್ ಮತ್ತು ಸ್ನೇಹಿತರು ನಡೆಯುತ್ತಿದ್ದು, ಈಗಾಗಲೇ ಸುಮಾರು 10 ಕಿಮೀ ನಡೆದಿದ್ದಾರೆ. ಇನ್ನು 6 ಕಿಮೀ ನಡೆದರೆ ಗ್ರಾಮ ಸಿಗುತ್ತದೆ. ಅದು ಸುರಕ್ಷಿತವಾಗಿದೆ. 800-1000 ಜನರು ಹೀಗೆ ನಡೆಯುತ್ತಿದ್ದಾರೆ ಎಂದು ಕಿರಣ್ ಸ್ನೇಹಿತೆಯೋರ್ವರು ತಿಳಿಸಿದ್ದಾರೆ.

    ತುಮಕೂರಿನ ರೂಪಶ್ರೀ ಎನ್ನುವವರು ಕೂಡ ರೈಲಿನಲ್ಲಿ ಸ್ಥಳ ದೊರಕದ ಕಾರಣ, ಸಮೀಪದ ಹಳ್ಳಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಮೈಸೂರಿನ ದೀಕ್ಷಾ ಎನ್ನುವವರು ತಮ್ಮ 50 ಸ್ನೇಹಿತರೊಂದಿಗೆ ರೈಲ್ವೆ ನಿಲ್ದಾಣದಲ್ಲಿ ಕಾಯುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

  • 03 Mar 2022 09:49 AM (IST)

    ಸಚಿವರು ಸೇಫ್ ಸಿಟಿಯಲ್ಲಿ ಇರುವವರನ್ನು ಕರೆದೊಯ್ಯುತ್ತಿದ್ದಾರೆ, ಖಾರ್ಕಿವ್​ನಲ್ಲಿರುವ ನಮ್ಮ ರಕ್ಷಣೆಗೆ ಯಾರಿಲ್ಲ; ವಿದ್ಯಾರ್ಥಿನಿ ಅಳಲು

    ಖಾರ್ಕಿವ್ ಹಾಗೂ ಸುಮ್ಮಿ ನಗರದಲ್ಲಿರೋ ಕರ್ನಾಟಕದ ವಿದ್ಯಾರ್ಥಿಗಳ ಭಾರೀ ತೊಂದರೆ ಎದುರಾಗುತ್ತಿದೆ ಎಂದು ಹೇಳಲಾಗಿದೆ. ಕೇಂದ್ರ ಸರ್ಕಾರದ ಸಚಿವರು ಸೇಫ್ ಸಿಟಿಯಲ್ಲಿರೋ ವಿದ್ಯಾರ್ಥಿಗಳನ್ನ ಕರೆದುಕೊಂಡು ಹೋಗುತ್ತಿದ್ದಾರೆ. ಖಾರ್ಕಿವ್​ನಲ್ಲಿರೋ ನಮಗೆ ಯಾರೂ ಸಹಾಯ ಮಾಡುತ್ತಿಲ್ಲ. ನೀವು ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಎಂದು ಮೆಸೇಜ್​ಗಳನ್ನು ಹಾಕುತ್ತಿದ್ದಾರೆ. ಖಾರ್ಕಿವ್​ನಿಂದ ಹೊರಗೆ ಬರೋದಕ್ಕೆ ಆಗುತ್ತಿಲ್ಲ. ಒನ್ ಟು ತ್ರಿಬಲ್ ದುಡ್ಡು ಕೊಟ್ಟು ಟ್ರೇನ್​ನಲ್ಲಿ ಹೋಗುತ್ತಿದ್ದೇವೆ. ಭಾರತ ರಾಷ್ಟ್ರ ಧ್ವಜ ಇದ್ದರೆ ಒಳಗೆ ಬಿಡುತ್ತಿದ್ದಾರೆ. ರಾಷ್ಟ್ರ ಧ್ವಜ ತಯಾರಿಸಲು ನಾವು ಸಾಕಷ್ಟು ಪ್ರಯತ್ನ ಪಡುತ್ತಿದ್ದೇವೆ. ನಮ್ಮ ಬಟ್ಟೆ ಗಳಿಗೆ ನಮ್ಮ ರಾಷ್ಟ್ರ ಧ್ವಜ ಬಣ್ಣ ಲೇಪನ ಮಾಡಿದ್ದೇವೆ ಎಂದು ಟಿವಿ9 ಗೆ ಖಾರ್ಕಿವ್​ನಲ್ಲಿರೋ ವಿದ್ಯಾರ್ಥಿನಿ ಮಾಹಿತಿ ನೀಡಿದ್ದಾರೆ. ಖಾರ್ಕಿವ್​ನಿಂದ ಏಕಕಾಲದಲ್ಲಿ ಹೊರ ಬಂದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರಿಂದ ನೂರಾರು ಕಿಮೀ ಟ್ರಾಫಿಕ್ ಜಾಮ್ ಉಂಟಾಗಿದೆ.

  • 03 Mar 2022 09:46 AM (IST)

    ಉಕ್ರೇನ್​ನಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ನಿರ್ಧರಿಸಿಲಿದೆ: ಸಚಿವ ಆರಗ ಜ್ಞಾನೇಂದ್ರ

    ಉಕ್ರೇನ್​ನಲ್ಲಿ ಮೃತಪಟ್ಟ ವಿದ್ಯಾರ್ಥಿಗಳಿಗೆ ಪರಿಹಾರ ನೀಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಪರಿಹಾರ ನೀಡುವ ಬಗ್ಗೆ ರಾಜ್ಯ ಸರ್ಕಾರದಲ್ಲೂ ಚರ್ಚೆ ನಡೆಯುತ್ತಿದೆ ಎಂದ ಅವರು, ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ವಿಚಾರಕ್ಕೆ ಸಂಬಂಧಿಸಿದ ಸಚಿವರು ಮಾತನಾಡುತ್ತಾರೆ ಎಂದು ಆರಗ ಹೇಳಿದ್ದಾರೆ.

  • 03 Mar 2022 09:44 AM (IST)

    ಉಕ್ರೇನ್​ನಲ್ಲಿ ಭಾರತದ ವಿದ್ಯಾರ್ಥಿಗಳು ಒತ್ತೆಯಾಳಾಗಿಲ್ಲ: ಭಾರತ ಸ್ಪಷ್ಟನೆ

    ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳ ಯಾವುದೇ ಒತ್ತೆಯಾಳುಗಳ ವರದಿಯಾಗಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದೆ. ಈ ಹಿಂದೆ ರಷ್ಯಾವು ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಹೋದಾಗ ಉಕ್ರೇನ್ ಸೈನಿಕರು ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ಆರೋಪಿಸಿತ್ತು. ಆದರೆ ಇದನ್ನು ಭಾರತ ಅಲ್ಲಗಳೆದಿದೆ.

  • 03 Mar 2022 09:40 AM (IST)

    ಉಕ್ರೇನ್​ನಿಂದ ಸಾಕುಪ್ರಾಣಿಗಳನ್ನು ತರಲು ಅವಕಾಶ

    ಉಕ್ರೇನ್​​ನಿಂದ ನಾಯಿ, ಬೆಕ್ಕುಗಳನ್ನು ತರಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಈ ಕುರಿತು ಇದ್ದ ನಿಯಮ ಸಡಿಲಿಸಿದ್ದು, ನಾಯಿ, ಬೆಕ್ಕುಗಳ ಆರೋಗ್ಯ ಪರೀಕ್ಷಿಸಿ ತರಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

  • 03 Mar 2022 09:36 AM (IST)

    ಉಕ್ರೇನ್ ನಿಂದ ಈ ವರೆಗೂ ಬೆಂಗಳೂರಿಗೆ ಬಂದ 85 ವಿದ್ಯಾರ್ಥಿಗಳು

    27/02 : ಮೊದಲ ಬ್ಯಾಚ್: 12 ಜನ ಬೆಳಗ್ಗೆ 09 ಗಂಟೆ. 2ನೇ ಬ್ಯಾಚ್: 06 ಜನ ರಾತ್ರಿ 7 ಗಂಟೆ. 3ನೇ ಬ್ಯಾಚ್: 13 ಜನ ರಾತ್ರಿ 09 ಗಂಟೆ.

    28/02: 4ನೇ ಬ್ಯಾಚ್: 05 ಜನ ರಾತ್ರಿ 07:30

    01/03: 5 ನೇ ಬ್ಯಾಚ್: ಬೆಳಗ್ಗೆ 10:45 – 7 ಜನ 6 ನೇ ಬ್ಯಾಚ್: ಮಧ್ಯಾಹ್ನ 04:10 – 5 ಜನ 7 ನೇ ಬ್ಯಾಚ್: ರಾತ್ರಿ 10 ಗಂಟೆ – 06 ವಿದ್ಯಾರ್ಥಿಗಳು

    02/03: 8ನೇ ಬ್ಯಾಚ್: 12:00 ಗಂಟೆ 5 ಜನ 9 ನೇ ಬ್ಯಾಚ್: ಸಂಜೆ 06:30 – 15 ಜನ ದೆಹಲಿಯಿಂದ 10 ನೇ ಬ್ಯಾಚ್: 10:30 ಕ್ಕೆ 7 ಜನ 11ನೇ ಬ್ಯಾಚ್:ಱ ಮಧ್ಯರಾತ್ರಿ 2ಕ್ಕೆ 4 ವಿದ್ಯಾರ್ಥಿಗಳು ದೆಹಲಿಯಿಂದ ಬೆಂಗಳೂರಿಗೆ

  • 03 Mar 2022 09:27 AM (IST)

    ಪ್ರಖ್ಯಾತ ಚೆಲ್ಸಾ ಫುಟ್​ಬಾಲ್ ಕ್ಲಬ್ ಮಾರಾಟ ಮಾಡಿ ಬಂದ ಹಣದಿಂದ ಉಕ್ರೇನ್​ಗೆ ಸಹಾಯ ಮಾಡಲು ಮುಂದಾದ ರಷ್ಯಾ ಉದ್ಯಮಿ

    ರಷ್ಯಾದ ಉದ್ಯಮಿ ಅಬ್ರಮೋವಿಚ್ ಪ್ರಖ್ಯಾತ ಫುಟ್​ಬಾಲ್ ಕ್ಲಬ್​ಗಳಲ್ಲಿ ಒಂದಾದ ಚೆಲ್ಸಾವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಅದರಿಂದ ಬಂದ ಹಣವನ್ನು ಉಕ್ರೇನ್​ಗೆ ಸಹಾಯ ಮಾಡಲು ನೀಡುವುದಾಗಿ ಅವರು ಘೋಷಿಸಿದ್ದಾರೆ. ಈ ಕುರಿತು ಹಲವು ಮಾಧ್ಯಮಗಳು ವರದಿ ಮಾಡಿವೆ.

  • 03 Mar 2022 09:23 AM (IST)

    ಉಕ್ರೇನ್ ಬೆಂಬಲಕ್ಕೆ ನಿಂತ ಅಮೆಜಾನ್

    ಉಕ್ರೇನ್​ಗೆ ಸಹಾಯ ನೀಡುವುದರ ಭಾಗವಾಗಿ ಸರ್ಕಾರ ಹಾಗೂ ನೆರವಿಗೆ ಧಾವಿಸುತ್ತಿರುವವರಿಗೆ ಸೈಬರ್ ಸೆಕ್ಯುರಿಟಿ ಹಾಗೂ ಇತರ ನೆರವನ್ನು ನೀಡುತ್ತಿರುವುದಾಗಿ ಅಮೆಜಾನ್ ಘೋಷಿಸಿದೆ.

  • 03 Mar 2022 09:20 AM (IST)

    ರಷ್ಯಾಗೆ ನೆಟ್​ಫ್ಲಿಕ್ಸ್​ನಿಂದಲೂ ನಿರ್ಬಂಧ; ಏನೆಲ್ಲಾ ಬದಲಾವಣೆ?

    ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಹಲವು ನಿರ್ಬಂಧಗಳನ್ನು ಹೇರಲಾಗುತ್ತಿದೆ. ಇದೀಗ ಒಟಿಟಿ ದೈತ್ಯ ನೆಟ್​ಫ್ಲಿಕ್ಸ್ ರಷ್ಯಾ ಮೂಲದ ತನ್ನೆಲ್ಲಾ ಪ್ರಾಜೆಕ್ಟ್​​ಗಳನ್ನು ನಿಲ್ಲಿಸಿದೆ. ಒಂದು ವರ್ಷದ ಹಿಂದೆ ನೆಟ್​ಫ್ಲಿಕ್ಸ್ ರಷ್ಯಾದಲ್ಲಿ ಪ್ರಾರಮಭವಾಗಿತ್ತು. ಅಲ್ಲಿ ಸುಮಾರು 1 ಮಿಲಿಯನ್​ಗೂ ಹೆಚ್ಚು ಚಂದಾದಾರರಿದ್ದಾರೆ. ಈ ಮೊದಲು ವಾರ್ನರ್ ಬ್ರದರ್ಸ್, ವಾಲ್ಟ್ ಡಿಸ್ನೆ ಹಾಗೂ ಸೋನಿ ಪಿಕ್ಚರ್ಸ್ ಕೂಡ ತಮ್ಮ ಚಿತ್ರಗಳು ರಷ್ಯಾದಲ್ಲಿ ತೆರೆ ಕಾಣುವುದಿಲ್ಲ ಎಂದು ತಿಳಿಸಿದ್ದವು.

  • 03 Mar 2022 09:03 AM (IST)

    ರಷ್ಯಾದಲ್ಲಿ ಸೇವೆ ನಿಲ್ಲಿಸಿದ ಸ್ಪಾಟಿಫೈ

    ಸ್ವೀಡಿಷ್ ಮೂಲದ ಆಡಿಯೋ ಸ್ಟ್ರೀಮಿಂಗ್ ಕಂಪನಿ ಸ್ಪಾಟಿಫೈ ರಷ್ಯಾದಲ್ಲಿ ತನ್ನ ಕಚೇರಿ ಮುಚ್ಚುತ್ತಿರುವುದಾಗಿ ತಿಳಿಸಿದೆ. ಅಲ್ಲದೇ ತನ್ನ ವೇದಿಕೆಯಲ್ಲಿರುವ ರಷ್ಯಾ ಸರ್ಕಾರಿ ಬೆಂಬಲಿತ ಆರ್​​ಟಿ ಹಾಗೂ ಸ್ಪುಟ್ನಿಕ್ ಸೇರಿದಂತೆ ಹಲವು ಚಾನಲ್​ಗಳ ಕಂಟೆಂಟ್ ಅನ್ನು ತೆಗೆಯಲಾಗಿದೆ.

  • 03 Mar 2022 08:57 AM (IST)

    ಖಾರ್ಕಿವ್​ನಲ್ಲಿ ಸಿಲುಕಿರುವ ಕರ್ನಾಟಕದ ಕೆಲ ವಿದ್ಯಾರ್ಥಿಗಳ ಫೋನ್ ಸ್ವಿಚ್ ಆಫ್​

    ಉಕ್ರೇನ್ ಒಳಗೆ ಭಾರತ ಸಹಾಯ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳ ಆಕ್ರೋಶ

    ಉಕ್ರೇನ್ ಹಾಗೂ ರಷ್ಯಾ ಯುದ್ಧ ಹಿನ್ನೆಲೆ ಉಕ್ರೇನ್​ನ ಖಾರ್ಕಿವ್ ಬಿಡುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ಕೊಡಲಾಗಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಉಕ್ರೇನ್​ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ.

    ಇತ್ತ ಭಾರತ ಸರ್ಕಾರ ಮತ್ತು ಎಂಬಸಿ ವಿರುದ್ದ ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬಾರ್ಡರ್​​ನಿಂದ ನಾವೇ ರಿಸ್ಕ್ ತೆಗೆದುಕೊಂಡು ಬಂದಿದ್ದೇವೆ. ಒಳಗಡೆ ನಮಗೆ ಭಾರತ ಸರ್ಕಾರ ಹೆಲ್ಪ್ ಮಾಡುತ್ತಿಲ್ಲ. ನಮಗೆ ಬೇಕಾಗಿರೋದು ಬಾರ್ಡರ್ ಒಳಗಡೆ ಸಹಾಯ. ಡಬಲ್ ದುಡ್ಡು ಕೊಟ್ಟು 700 ಕಿಲೋಮೀಟರ್ ಬಂದಿದ್ದೇವೆ. 1.50 ಲಕ್ಷ ಹಣ ಖರ್ಚು ಮಾಡಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ.

    ಪೂರ್ಣ ವರದಿ ಇಲ್ಲಿದೆ:

  • 03 Mar 2022 08:46 AM (IST)

    ಉಕ್ರೇನ್ ಸೈನಿಕರ ಧೈರ್ಯದ ಗುಣಗಾನ ಮಾಡಿದ ಝೆಲೆನ್ಸ್ಕಿ

    ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿ, ರಷ್ಯಾ ವಿರುದ್ಧ ತಮ್ಮ ದೇಶ ತೋರುತ್ತಿರುವ ಪ್ರತಿರೋಧವನ್ನು ಹೊಗಳಿದ್ದಾರೆ. ಮಾಸ್ಕೋದ ಎಲ್ಲಾ ಯೋಜನೆಗಳನ್ನು ಕೀವ್ ತಲೆಕೆಳಗು ಮಾಡಿದೆ ಎಂದು ಅವರು ಹೇಳಿದ್ದಾರೆ.

  • 03 Mar 2022 08:44 AM (IST)

    ರಷ್ಯಾ ವಿರುದ್ಧದ ಮತಗಳು ಆ ದೇಶದ ವಿರುದ್ಧದ ಜಾಗತಿಕ ತಿರಸ್ಕಾರವನ್ನು ತೋರಿಸುತ್ತಿದೆ: ಬಿಡೆನ್

    ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧದ ನಿರ್ಣಯಕ್ಕೆ ರಾಷ್ಟ್ರಗಳು ನೀಡಿರುವ ಬೆಂಬಲವು ಆ ದೇಶದ ಮೇಲಿನ ಜಾಗತಿಕ ತಿರಸ್ಕಾರವನ್ನು ತೋರಿಸುತ್ತದೆ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

  • 03 Mar 2022 08:41 AM (IST)

    ಉಕ್ರೇನ್ ಯುದ್ಧದಲ್ಲಿ 498 ರಷ್ಯನ್ ಸೈನಿಕರು ಮೃತರಾಗಿದ್ದಾರೆ ಎಂದ ರಷ್ಯಾ

    ರಷ್ಯಾ ಮೊದಲ ಬಾರಿಗೆ ತನ್ನ ಸೈನ್ಯದ ಸಾವು- ನೋವಿನ ಕುರಿತು ಮಾಹಿತಿ ನೀಡಿದೆ. ಅದು ನೀಡಿರುವ ಮಾಹಿತಿಯಂತೆ, ಉಕ್ರೇನ್‌ನಲ್ಲಿ 498 ರಷ್ಯನ್ ಸೈನಿಕರು ಕೊಲ್ಲಲ್ಪಟ್ಟಿದ್ದಾರೆ. ಉಕ್ರೇನ್‌ನ ರಾಜ್ಯ ತುರ್ತು ಸೇವೆ ತಿಳಿಸಿದಂತೆ, ಬುಧವಾರದಂದು 2,000 ಕ್ಕೂ ಹೆಚ್ಚು ನಾಗರಿಕರು (ಮಿಲಿಟರಿ ಸಿಬ್ಬಂದಿಗಳ ಸೇರಿ) ಸಾವನ್ನಪ್ಪಿದ್ದಾರೆ.

    ಆದರೆ ಉಕ್ರೇನ್ ರಷ್ಯನ್ ಸೈನಿಕರ ಸಾವಿನ ಪ್ರಮಾಣದ ಲೆಕ್ಕವನ್ನು ಬೇರೆಯದೇ ರೀತಿಯಲ್ಲಿ ನೀಡಿದೆ. ಆದ್ದರಿಂದ ಎರಡೂ ದೇಶಗಳ ಸಾವಿನ ನಿಖರ ಸಂಖ್ಯೆ ಇನ್ನೂ ತಿಳಿದುಬಂದಿಲ್ಲ. ವಿಶ್ವಸಂಸ್ಥೆಯ ಪ್ರಕಾರ, ಯುದ್ಧದಲ್ಲಿ 227 ನಾಗರಿಕರು ಮೃತಪಟ್ಟಿದ್ದಾರೆ. ನಿರಾಶ್ರಿತರ ಸಂಖ್ಯೆ ಒಂದು ಮಿಲಿಯನ್ ದಾಟಿದೆ.

  • 03 Mar 2022 08:37 AM (IST)

    ತನ್ನ ವಶದಲ್ಲಿರುವ ರಷ್ಯನ್ ಸೈನಿಕರನ್ನು ಕರೆದೊಯ್ಯುವಂತೆ ಅವರ ತಾಯಂದಿರಿಗೆ ಆಹ್ವಾನ ನೀಡಿದ ಉಕ್ರೇನ್

    ಹಲವಾರು ರಷ್ಯನ್ ಸೈನಿಕರನ್ನು ಉಕ್ರೇನ್ ಸೆರೆಹಿಡಿದು ಯುದ್ಧ ಸಮಯದ ಕೈದಿಗಳ ಹಾಗೆ ಬಂಧನದಲ್ಲಿರಿಸಿದೆ. ಆದರೆ ಬುಧವಾರ ಉಕ್ರೇನ್ ತನ್ನ ವಶದಲ್ಲಿರುವ ಸೈನಿಕರ ತಾಯಂದಿರಿಗೆ ಅಪೀಲ್ ಮಾಡಿ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದೆ. ಈ ಕುರಿತು ರಕ್ಷಣಾ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

    ಪೂರ್ಣ ಬರಹ ಇಲ್ಲಿದೆ: ತನ್ನ ವಶದಲ್ಲಿರುವ ರಷ್ಯನ್ ಸೈನಿಕರನ್ನು ಬಂದು ಕರೆದೊಯ್ಯುವಂತೆ ಅವರ ತಾಯಂದಿರಿಗೆ ಉಕ್ರೇನ್ ಆಹ್ವಾನ ನೀಡಿದೆ!

  • 03 Mar 2022 08:34 AM (IST)

    ಉಕ್ರೇನ್ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದೆ: ರಷ್ಯಾ ಆರೋಪ

    ಖಾರ್ಕೀವ್​​ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಡಲಾಗಿದೆ. ದಾಳಿ ತೀವ್ರವಾಗಿರುವ ಖಾರ್ಕೀವ್​​ನಲ್ಲಿರುವ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ರಷ್ಯಾ ಮುಂದಾದಾಗ, ಉಕ್ರೇನ್​ ಸೇನೆ ಅವರನ್ನು ತಡೆಯಿತು ಮತ್ತು ವಾಪಸ್ ಕರೆದುಕೊಂಡುಹೋಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು ಎಂದು ರಷ್ಯಾ ಆರೋಪಿಸಿದೆ.

    ಇನ್ನೊಂದೆಡೆ ಉಕ್ರೇನ್​ ಕೂಡ ಇದೇ ಆರೋಪ ಮಾಡಿದೆ. ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳಗಳನ್ನಾಗಿ ಇಟ್ಟುಕೊಂಡಿದೆ ಎಂದು ಉಕ್ರೇನ್​​ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

    ಪೂರ್ಣ ಮಾಹಿತಿ ಇಲ್ಲಿದೆ: ಉಕ್ರೇನ್​​ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ, ನಾವು ಸ್ಥಳಾಂತರ ಮಾಡಲು ಹೋದಾಗ ಸೇನೆ ತಡೆಯಿತು: ರಷ್ಯಾ ಆರೋಪ

  • 03 Mar 2022 08:29 AM (IST)

    ನ್ಯಾಟೊ ಸಹಕಾರ ಸಿಕ್ಕಿದರೆ ವಿನಾಶಕಾರಿ ಯುದ್ಧ ನಡೆಯಲಿದೆ: ಉಕ್ರೇನ್ ಅಧ್ಯಕ್ಷ

    ಉಕ್ರೇನ್‌ನನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ. ಎಷ್ಟೇ ಶಸ್ತ್ರಾಸ್ತ್ರ ಇದ್ದರೂ ರಷ್ಯಾಗೆ ಉಕ್ರೇನ್ ಗೆಲ್ಲಲು ಆಗಲ್ಲ. NATO ಸಹಕಾರ ಸಿಕ್ಕರೆ ವಿನಾಶಕಾರಿ ಯುದ್ಧ ನಡೆಯಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.

  • 03 Mar 2022 08:22 AM (IST)

    ಇಂದು ಭಾರತಕ್ಕೆ ವಾಪಸ್ಸಾದ 628 ವಿದ್ಯಾರ್ಥಿಗಳು

    ಕರ್ನಾಟಕದ 19 ವಿದ್ಯಾರ್ಥಿಗಳು ಸಂಜೆ ಬೆಂಗಳೂರಿಗೆ ಆಗಮನ

    ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಇಂದು ಹಿಂಡನ್ ಏರ್‌ಬೇಸ್‌ಗೆ 3 IAF ವಿಮಾನಗಳು ವಿದ್ಯಾರ್ಥಿಗಳನ್ನು ಕರೆತಂದಿವೆ. ಅದರಲ್ಲಿ 628 ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ಇದರಲ್ಲಿ 19 ಕರ್ನಾಟಕದ ವಿದ್ಯಾರ್ಥಿಗಳಿದ್ದು, ಸಂಜೆ ವೇಳೆಗೆ ಬೆಂಗಳೂರಿಗೆ ತಲುಪುವ ನಿರೀಕ್ಷೆ ಇದೆ.

  • 03 Mar 2022 08:17 AM (IST)

    ‘ಆಪರೇಷನ್ ಗಂಗಾ’ ಮೂಲಕ 3,000ಕ್ಕೂ ಹೆಚ್ಚು ಜನರು ವಾಪಸ್ಸಾಗಿದ್ದಾರೆ: ಸಚಿವ ಜೈಶಂಕರ್

    ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ನಿನ್ನೆ ಭಾರತಕ್ಕೆ 3000ಕ್ಕೂ ಹೆಚ್ಚು ಜನರು ವಾಪಾಸ್ಸಾಗಿದ್ದಾರೆ. ರೊಮೇನಿಯಾ, ಸ್ಲೋವಾಕಿಯಾ, ಪೋಲೆಂಡ್‌, ಹಂಗೇರಿಯಿಂದ 9 ವಿಮಾನಗಳಲ್ಲಿ ಭಾರತಕ್ಕೆ ಮರಳಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

  • 03 Mar 2022 08:15 AM (IST)

    ಕೀವ್​ ಮೇಲೆ ಮುಂದುವರೆದ ರಷ್ಯಾದ ಕ್ಷಿಪಣಿ ದಾಳಿ

    ನಾಗರಿಕರು ಮನೆಯಿಂದ ಹೊರಗೆ ಬರದಂತೆ ಸೂಚನೆ

    ಉಕ್ರೇನ್ ರಾಜಧಾನಿ ಕೀವ್‌ನಲ್ಲಿ ರಷ್ಯಾ ಕ್ಷಿಪಣಿ ದಾಳಿ ಮುಂದುವರೆಸಿದೆ. ದಕ್ಷಿಣ ರೈಲ್ವೆ ಸ್ಟೇಷನ್, ರಕ್ಷಣಾ ಸಚಿವಾಲಯದ ಬಳಿ ದಾಳಿ ಮಾಡಲಾಗಿದೆ. ರಾಜಧಾನಿ ಕೀವ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ. ಕೀವ್, ಕೀವ್ ಒಬ್ಲಾಸ್ಟ್, ಮೈಕೊಲೈವ್, ವೊಲಿನ್ ಒಬ್ಲಾಸ್ಟ್, ಝೈಟೊಮಿರ್, ಚೆರ್ನಿಹಿವ್, ಚೆರ್ನಿಹಿವ್ ಒಬ್ಲಾಸ್ಟ್, ಇವಾನೊ-ಫ್ರಾಂಕಿವ್ಸ್ಕ್, ಎಲ್ವಿವ್, ಚೆರ್ಕಾಸಿ ಒಬ್ಲಾಸ್ಟ್, ಪೋಲ್ಟವಾ ಒಬ್ಲಾಸ್ಟ್ ಸೇರಿ ಹಲವೆಡೆ ವಾಯುದಾಳಿ ಎಚ್ಚರಿಕೆ ನೀಡಲಾಗಿದ್ದು, ಉಕ್ರೇನ್ ನಾಗರಿಕರು ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ.

  • 03 Mar 2022 08:06 AM (IST)

    ರಷ್ಯಾದಲ್ಲಿ ಸೇವೆ ಸ್ಥಗಿತಗೊಳಿಸಿದ ಒರಾಕಲ್

    ರಷ್ಯಾ: ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಒರಾಕಲ್ ಕಂಪನಿ ರಷ್ಯಾದಲ್ಲಿ ತನ್ನ ಸೇವೆ ಸ್ಥಗಿತಗೊಳಿಸಿದೆ. ಸಾಫ್ಟ್‌ವೇರ್ ಕಂಪನಿಯಾಗಿರುವ ಒರಾಕಲ್ ಕಾರ್ಪೊರೇಷನ್, ಉಕ್ರೇನ್ ಸರ್ಕಾರ, ಜನರನ್ನು ಬೆಂಬಲಿಸಿ ನಿರ್ಧಾರ ತೆಗೆದುಕೊಂಡಿದೆ.

  • 03 Mar 2022 08:00 AM (IST)

    ಉಕ್ರೇನ್ ತೊರೆದಿದ್ದಾರೆ 10 ಲಕ್ಷಕ್ಕೂ ಹೆಚ್ಚು ಜನ: ವಿಶ್ವಸಂಸ್ಥೆ ಮಾಹಿತಿ

    ರಷ್ಯಾ ದಾಳಿಯ ನಂತರ ಸುಮಾರು 10 ಲಕ್ಷಕ್ಕೂ (1 ಮಿಲಿಯನ್) ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಯುಎನ್​ಹೆಚ್​ಸಿಆರ್ ಮಾಹಿತಿಯ ಪ್ರಕಾರ ಉಕ್ರೇನ್ ಜನಸಂಖ್ಯೆಯ 2 ಪ್ರತಿಶತದಷ್ಟು ಜನರು ವಾರದೊಳಗೆ ವಲಸೆ ಹೋಗಿದ್ದಾರೆ ಎಂದು ವರದಿಯಾಗಿದೆ. 2020ರ ಗಣತಿಯ ಅನ್ವಯ ಉಕ್ರೇನ್​ನಲ್ಲಿ 44 ಮಿಲಿಯನ್ (4.4 ಕೋಟಿ) ಜನಸಂಖ್ಯೆಯಿತ್ತು.

  • 03 Mar 2022 07:56 AM (IST)

    ಉಕ್ರೇನ್ ತೊರೆಯಲು ಬಯಸುವ ಏಷ್ಯಾದ ವಿದ್ಯಾರ್ಥಿಗಳಿಗೆ ಸಹಾಯವಾಣಿ

    ಯುದ್ಧ ಪೀಡಿತ ಉಕ್ರೇನ್​ಅನ್ನು ತೊರೆಯಲು ಬಯಸುವ ಆಫ್ರಿಕಾ, ಏಷ್ಯಾದ ವಿದ್ಯಾರ್ಥಿಗಳಿಗೆ ಉಕ್ರೇನ್ ಸಹಾಯವಾಣಿ ಸ್ಥಾಪಿಸಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಗುರುವಾರ ಹೇಳಿದ್ದಾರೆ.

  • Published On - Mar 03,2022 7:47 AM

    Follow us
    ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
    ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
    ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
    ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
    ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
    ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
    ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
    ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್