694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ಭಾರತಕ್ಕೆ ವಾಪಸ್, ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ ಎಂದು ಆಕ್ರೋಶ

ನಮಗೆ ಬೇಕಾಗಿರೋದು ಬಾರ್ಡರ್ ಒಳಗಡೆ ಸಹಾಯ. ಡಬಲ್ ದುಡ್ಡು ಕೊಟ್ಟು 700 ಕಿಲೋಮೀಟರ್ ಬಂದಿದ್ದೇವೆ. 1.50 ಲಕ್ಷ ಹಣ ಖರ್ಚು ಮಾಡಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ.

694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ಭಾರತಕ್ಕೆ ವಾಪಸ್, ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ ಎಂದು ಆಕ್ರೋಶ
ಉಕ್ರೇನ್ ನಗರಗಳಲ್ಲಿ ಹೋರಾಟ ತೀವ್ರಗೊಂಡಿದೆ
Follow us
| Updated By: ganapathi bhat

Updated on:Mar 03, 2022 | 8:40 AM

ಬೆಂಗಳೂರು: ಉಕ್ರೇನ್ ಹಾಗೂ ರಷ್ಯಾ ಯುದ್ಧ ಹಿನ್ನೆಲೆ ಉಕ್ರೇನ್​ನ ಖಾರ್ಕಿವ್ ಬಿಡುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ಕೊಡಲಾಗಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ. ಉಕ್ರೇನ್​ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ. 694 ಜನ ವಿದ್ಯಾರ್ಥಿಗಳ ಕುಟುಂಬಸ್ಥರಿಂದ ಸರ್ಕಾರ ಮಾಹಿತಿ ಪಡೆಯುತ್ತಿದೆ.

ಇತ್ತ ಭಾರತ ಸರ್ಕಾರ ಮತ್ತು ಎಂಬಸಿ ವಿರುದ್ದ ಉಕ್ರೇನ್​ನಿಂದ ಮರಳಿದ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಬಾರ್ಡರ್​​ನಿಂದ ನಾವೇ ರಿಸ್ಕ್ ತೆಗೆದುಕೊಂಡು ಬಂದಿದ್ದೇವೆ. ಒಳಗಡೆ ನಮಗೆ ಭಾರತ ಸರ್ಕಾರ ಹೆಲ್ಪ್ ಮಾಡುತ್ತಿಲ್ಲ. ನಮಗೆ ಬೇಕಾಗಿರೋದು ಬಾರ್ಡರ್ ಒಳಗಡೆ ಸಹಾಯ. ಡಬಲ್ ದುಡ್ಡು ಕೊಟ್ಟು 700 ಕಿಲೋಮೀಟರ್ ಬಂದಿದ್ದೇವೆ. 1.50 ಲಕ್ಷ ಹಣ ಖರ್ಚು ಮಾಡಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ.

ನಮ್ಮ ಎದುರಿಗೆ ಮಿಸೈಲ್​ಗಳು ಸ್ಪೋಟವಾಗುತ್ತಿವೆ. ಬಾರ್ಡರ್ ಕ್ರಾಸ್‌ ಅದ ಮೇಲೆ ಸರ್ಕಾರ ಫ್ಲೈಟ್ ಬುಕ್ ಮಾಡಿದೆ ಅಷ್ಟೇ. ವಿದ್ಯಾರ್ಥಿಗಳಿಗೆ ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ. ಈ ಕೆಲಸ ಭಾರತ ಸರ್ಕಾರ ಮಾಡಬೇಕಿದೆ. ಕಿವ್ ಮತ್ತು ಖಾರ್ಕಿವ್ ನಗರಗಳಲ್ಲಿ ವಿದ್ಯಾರ್ಥಿಗಳ ಪರಿಸ್ಥಿತಿ ಘೋರವಾಗಿದೆ. ತುರ್ತಾಗಿ ವಿದ್ಯಾರ್ಥಿಗಳನ್ನ ಉಕ್ರೇನ್ ಪೂರ್ವಭಾಗದಿಂದ ಕರೆತರಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವೀನ್ ಮೃತಪಟ್ಟು ಮೂರು ದಿನಗಳು ಆಗಿದ್ದರಿಂದ ವೀರಶೈವ ಸಂಪ್ರದಾಯದಂತೆ ಮೂರು ದಿನದ ಕಾರ್ಯ‌

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಮೃತಪಟ್ಟ ಹಿನ್ನೆಲೆ ನವೀನ್ ಪಾರ್ಥೀವ ಶರೀರ ಬರೋದನ್ನು ಕುಟುಂಬಸ್ಥರು ಎದುರು ನೋಡುತ್ತಿದ್ದಾರೆ. ಪಾರ್ಥೀವ ಶರೀರ ಯಾವಾಗ ಬರುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಇವತ್ತು ಪಾರ್ಥೀವ ಶರೀರ ಬರೋದರ ಬಗ್ಗೆ ಮಾಹಿತಿ ಸಿಗಲಿದೆ. ರಾಯಭಾರಿ ಕಚೇರಿಯಿಂದ ಮಾಹಿತಿ ಸಿಗುವ ನಿರೀಕ್ಷೆಯಿದೆ ಎಂದು ಮೃತ ನವೀನ್ ತಂದೆ ಹೇಳಿದ್ದಾರೆ.

ನವೀನ್ ಮೃತಪಟ್ಟು ಮೂರು ದಿನಗಳು ಆಗಿದ್ದರಿಂದ ವೀರಶೈವ ಸಂಪ್ರದಾಯದಂತೆ ಮೂರು ದಿನದ ಕಾರ್ಯ‌ ನಡೆಸುತ್ತೇವೆ. ಸ್ವಾಮಿಗಳನ್ನ ಕೇಳಿಕೊಂಡು ಮೂರು ದಿನದ ಕಾರ್ಯದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಟಿವಿ9ಗೆ ಮೃತ ನವೀನ ತಂದೆ ಶೇಖರಗೌಡ ಗ್ಯಾನಗೌಡರ ಮಾಹಿತಿ ನೀಡಿದ್ದಾರೆ. ನವೀನ್ ನಿವಾಸದ ಮುಂದೆ ಮೂರು ದಿನದ ಕಾರ್ಯದ ಸಿದ್ಧತೆ ನಡೆಸಲಾಗಿದೆ.

ಇದನ್ನೂ ಓದಿ: ಉಕ್ರೇನ್​​ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದೆ, ನಾವು ಸ್ಥಳಾಂತರ ಮಾಡಲು ಹೋದಾಗ ಸೇನೆ ತಡೆಯಿತು: ರಷ್ಯಾ ಆರೋಪ

ಇದನ್ನೂ ಓದಿ: Russia Ukraine War Live: ಉಕ್ರೇನ್​ನ ದಕ್ಷಿಣದಲ್ಲಿರುವ ಖೇರ್ಸನ್ ಈಗ ರಷ್ಯಾ ವಶ: ಉಕ್ರೇನಿಯನ್ ಅಧಿಕಾರಿಗಳ ಮಾಹಿತಿ

Published On - 8:39 am, Thu, 3 March 22

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​