ಉಕ್ರೇನ್​ನಲ್ಲಿ ವಿದ್ಯಾರ್ಥಿ ನವೀನ್​ ಸಾವು; ನಿವಾಸದಲ್ಲಿ 3ನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ 3ನೇ ದಿನದ ಕಾರ್ಯ ನೆರವೇರಿಸಲಾಗಿದೆ. ನವೀನ್ ಕುಟುಂಬಸ್ಥರು, ಮೃತ ನವೀನ್​ ಫೋಟೋಗೆ ಹೂವು ಹಾಕಿ ಪೂಜೆ ಸಲ್ಲಿಸಿದ್ದಾರೆ.

ಉಕ್ರೇನ್​ನಲ್ಲಿ ವಿದ್ಯಾರ್ಥಿ ನವೀನ್​ ಸಾವು; ನಿವಾಸದಲ್ಲಿ 3ನೇ ದಿನದ ಕಾರ್ಯ ನೆರವೇರಿಸಿದ ಕುಟುಂಬಸ್ಥರು
ಮೃತ ವಿದ್ಯಾರ್ಥಿ ನವೀನ್​
Follow us
| Updated By: ganapathi bhat

Updated on:Mar 03, 2022 | 3:08 PM

ಹಾವೇರಿ: ಉಕ್ರೇನ್​ನಲ್ಲಿ ಹಾವೇರಿ ವಿದ್ಯಾರ್ಥಿ ನವೀನ್​ ಸಾವು ಹಿನ್ನೆಲೆ ಚಳಗೇರಿಯ ನವೀನ್ ನಿವಾಸದಲ್ಲಿ 3ನೇ ದಿನದ ಕಾರ್ಯ ನಡೆಸಲಾಗಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ 3ನೇ ದಿನದ ಕಾರ್ಯ ನೆರವೇರಿಸಲಾಗಿದೆ. ನವೀನ್ ಕುಟುಂಬಸ್ಥರು, ಮೃತ ನವೀನ್​ ಫೋಟೋಗೆ ಹೂವು ಹಾಕಿ ಪೂಜೆ ಸಲ್ಲಿಸಿದ್ದಾರೆ.

ಇತ್ತ ಖಾರ್ಕಿವ್ ನಗರದಿಂದ ಮೃತ ನವೀನ್ ಸ್ನೇಹಿತ, ರಾಯಚೂರಿನ ಲಕ್ಷ್ಮೀನಾರಾಯಣ್ ಭಾರತಕ್ಕೆ ವಾಪಸ್ ಆಗಿದ್ದಾರೆ. ಹಾವೇರಿಯ ನವೀನ್, ನಾನು ಒಂದು ವರ್ಷ ಜೊತೆಗಿದ್ದೆವು. ನವೀನ್ ಮೃತದೇಹವನ್ನ ಭಾರತಕ್ಕೆ ತರುವುದು ಸುಲಭವಿಲ್ಲ. ಉಕ್ರೇನ್​ನ ಖಾರ್ಕಿವ್ ನಗರದಲ್ಲಿ ನನ್ನ ಸ್ನೇಹಿತರಿದ್ದಾರೆ. ಬಂಕರ್​ಗಳಲ್ಲಿರುವ ನನ್ನ ಸ್ನೇಹಿತರನ್ನ ರಕ್ಷಿಸಬೇಕಾಗಿದೆ. ಉಕ್ರೇನ್​ನ ಸೈನಿಕರು ನಮಗೆ ಸಹಾಯ ಮಾಡಿದ್ದಾರೆ. ಉಕ್ರೇನ್ ಸೈನಿಕರು ಭಾರತೀಯರನ್ನ ಒತ್ತೆಯಾಳಾಗಿ ಇಟ್ಟಿಲ್ಲ ಎಂದು ದೆಹಲಿಯಲ್ಲಿ ವಿದ್ಯಾರ್ಥಿ ಲಕ್ಷ್ಮೀನಾಯರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.

ಉಕ್ರೇನ್​ನಲ್ಲಿ ಸಿಲುಕಿರುವ ಮಗನನ್ನ ರಕ್ಷಿಸುವಂತೆ ಹಾಸನ ಜಿಲ್ಲಾಧಿಕಾರಿಗೆ ಗಗನ್‌ ಗೌಡ ಎಂಬವರ ಪೋಷಕರು ಮನವಿ ಮಾಡಿದ್ದಾರೆ. ಹಾಸನ ಜಿಲ್ಲಾಧಿಕಾರಿ ಕಚೇರಿ ಬಳಿ ಗಗನ್ ತಾಯಿ ಅಸ್ವಸ್ಥರಾಗಿ ಕುಸಿದುಬಿದ್ದಿದ್ದಾರೆ. ತಾಯಿ ಸುಜಾತ ಮಗ ಗಗನ್​ ಗೌಡ ಬಗ್ಗೆ ಕನವರಿಸುತ್ತಿದ್ದಾರೆ. ಕೆಲ ಕಾಲ ಪ್ರಜ್ಞೆ ತಪ್ಪಿದ್ದ ಗಗನ್ ಗೌಡ ತಾಯಿ ಸುಜಾತ ಮಗನನ್ನು ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಿದ್ದಾರೆ.

ರಷ್ಯಾ, ಉಕ್ರೇನ್​ ಯುದ್ಧದಲ್ಲಿ ನವೀನ್ ಮೃತಪಟ್ಟಿದ್ದು ದುರಂತ. ಬಹಳ ಪ್ರತಿಭಾವಂತ ವಿದ್ಯಾರ್ಥಿಯನ್ನು ಕಳೆದುಕೊಂಡಿದ್ದೇವೆ. ಉಕ್ರೇನ್​ನಲ್ಲಿ ಇನ್ನೂ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಸಂಕಷ್ಟದಲ್ಲಿರುವವರನ್ನು ಕರೆತರುವಂತೆ ಶಂಕರಪ್ಪ ಹೇಳಿದ್ದಾರೆ. ಮೃತ ವಿದ್ಯಾರ್ಥಿ ನವೀನ್ ತಂದೆ ಶಂಕರಪ್ಪ ಒತ್ತಾಯಿಸಿದ್ದಾರೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ನವೀನ್​ ಮನೆಗೆ ಭೇಟಿ ವೇಳೆ ಮಾಜಿ ಸಚಿವ ಶಂಕರ್​ ಹೇಳಿಕೆ ನೀಡಿದ್ದಾರೆ. ನವೀನ್ ತಂದೆ, ಅಣ್ಣ, ಕುಟುಂಬಸ್ಥರಿಗೆ ಆರ್.ಶಂಕರ್ ಸಾಂತ್ವನ ಹೇಳಿದ್ದಾರೆ.

ಉಕ್ರೇನ್​ನಿಂದ ವಿದ್ಯಾರ್ಥಿ ನವೀನ್ ಮೃತದೇಹ ತರುವ ವಿಚಾರವಾಗಿ ವಿದೇಶಾಂಗ ಇಲಾಖೆ ಮೃತದೇಹ ತರುವ ಕೆಲಸ ಮಾಡ್ತಿದೆ. ಜೀವಂತವಾಗಿರುವವರನ್ನೇ ಏರ್​ಲಿಫ್ಟ್ ಮಾಡುವುದು ಕಷ್ಟ. ಸಾಧ್ಯವಾದರೆ ನವೀನ್ ಮೃತದೇಹ ತರುವ ಕೆಲಸ ಆಗಲಿದೆ. ವಿಮಾನದಲ್ಲಿ ಮೃತದೇಹ ತರಲು ಹೆಚ್ಚು ಜಾಗ‌ಬೇಕು. ಮೃತದೇಹದ ಜಾಗದಲ್ಲಿ 8 ರಿಂದ 10 ಜನ ಬರಬಹುದು ಎಂದು ಧಾರವಾಡದಲ್ಲಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್​​ ಹೇಳಿದ್ದಾರೆ.

ಇದನ್ನೂ ಓದಿ: 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ಭಾರತಕ್ಕೆ ವಾಪಸ್, ಬೇಕಾಗಿರೋದು ಉಕ್ರೇನ್ ಒಳಗಡೆ ಸಹಾಯ ಎಂದು ಆಕ್ರೋಶ

ಇದನ್ನೂ ಓದಿ: Russia Ukraine War Live: ಉಕ್ರೇನ್​​ನಲ್ಲಿದ್ದ 20,000 ಭಾರತೀಯ ವಿದ್ಯಾರ್ಥಿಗಳ ಪೈಕಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್​

Published On - 1:04 pm, Thu, 3 March 22

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್