AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fitness Certificate: ನಿಮ್ಮ ವಾಹನದ ಮೇಲೆ ಈ ಸ್ಟಿಕರ್ ಇರದಿದ್ದರೆ ಭಾರೀ ದಂಡ; ಸರ್ಕಾರದಿಂದ ಸದ್ಯದಲ್ಲೇ ಹೊಸ ನಿಯಮ ಜಾರಿ

ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ, 10 ವರ್ಷಕ್ಕಿಂತಲೂ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಫಿಟ್​ನೆಸ್​ ಸರ್ಟಿಫಿಕೆಟ್ ಕಡ್ಡಾಯವಾಗಿದೆ.

Fitness Certificate: ನಿಮ್ಮ ವಾಹನದ ಮೇಲೆ ಈ ಸ್ಟಿಕರ್ ಇರದಿದ್ದರೆ ಭಾರೀ ದಂಡ; ಸರ್ಕಾರದಿಂದ ಸದ್ಯದಲ್ಲೇ ಹೊಸ ನಿಯಮ ಜಾರಿ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Mar 03, 2022 | 5:29 PM

Share

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ವಾಹನಗಳ ಫಿಟ್‌ನೆಸ್ ಪ್ರಮಾಣಪತ್ರದ (Fitness Certificate) ವ್ಯಾಲಿಡಿಟಿ ಮತ್ತು ಮೋಟಾರು ವಾಹನದ ನೋಂದಣಿ ಚಿಹ್ನೆಯನ್ನು ಕರಡು ನಿಯಮಗಳಲ್ಲಿ ಸೂಚಿಸಲಾದ ರೀತಿಯಲ್ಲಿ ವಾಹನಗಳ ಮೇಲೆ ಪ್ರದರ್ಶಿಸಬೇಕಾಗುತ್ತದೆ. ಭಾರೀ, ಮಧ್ಯಮ ಮತ್ತು ಲಘು ಸರಕುಗಳು ಅಥವಾ ಪ್ರಯಾಣಿಕ ವಾಹನಗಳ ವಿಂಡ್​ ಸ್ಕ್ರೀನ್​ನ ಎಡಭಾಗದ ಮೇಲ್ಭಾಗದ ತುದಿಯಲ್ಲಿ ಇವುಗಳನ್ನು ಪ್ರದರ್ಶಿಸಬೇಕು ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ, 10 ವರ್ಷಕ್ಕಿಂತಲೂ ಹಳೆಯ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಫಿಟ್​ನೆಸ್​ ಸರ್ಟಿಫಿಕೆಟ್ ಕಡ್ಡಾಯವಾಗಿದೆ. ಈ ಫಿಟ್​ನೆಸ್ ಪ್ಲೇಟ್ ಕೂಡ ನಂಬರ್ ಪ್ಲೇಟ್​​ನಂತೆಯೇ ಇರಲಿದೆ. ಅದರ ಮೇಲೆ ವಾಹನದ ಫಿಟ್​ನೆಸ್ ಮುಕ್ತಾಯಗೊಳ್ಳುವ ದಿನಾಂಕವನ್ನು ನಮೂದಿಸಲಾಗುತ್ತದೆ.

ಆಟೋ-ರಿಕ್ಷಾ, ಇ-ರಿಕ್ಷಾ, ಇ-ಕಾರ್ಟ್ ಮತ್ತು ಕ್ವಾಡ್ರ್‌ಸೈಕಲ್‌ಗಳಲ್ಲಿ ವಿಂಡ್​ ಸ್ಕ್ರೀನ್​ನ ಎಡಭಾಗದ ಮೇಲಿನ ಅಂಚಿನಲ್ಲಿ ಫಿಟ್​ನೆಸ್ ಪ್ಲೇಟ್ ಅಳವಡಿಸಬೇಕು. ಮೋಟಾರು ಸೈಕಲ್‌ಗಾದರೆ ಅದನ್ನು ವಾಹನದ ಎದ್ದು ಕಾಣುವ ಭಾಗದಲ್ಲಿ ಪ್ರದರ್ಶಿಸಬೇಕು. ಏರಿಯಲ್ ಬೋಲ್ಡ್ ಸ್ಕ್ರಿಪ್ಟ್ ಮಾದರಿಯಲ್ಲಿ ನೀಲಿ ಬಣ್ಣದ ಬ್ಯಾಕ್​ಗ್ರೌಂಡ್​ ಇರುವ ಸ್ಟಿಕರ್ ಮೇಲೆ ಹಳದಿ ಬಣ್ಣದಲ್ಲಿ ಫಿಟ್​ನೆಸ್ ಪ್ಲೇಟ್ ತಯಾರಿಸಲಾಗುತ್ತದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮದ ಕರಡು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ 20 ವರ್ಷಕ್ಕಿಂತ ಹಳೆಯ 51 ಲಕ್ಷ ಲಘು ಮೋಟಾರು ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯ 34 ಲಕ್ಷ ವಾಹನಗಳು ಸಂಚರಿಸುತ್ತಿವೆ. ಈ ಕಾನೂನು ಉಲ್ಲಂಘಿಸುವ ವಾಹನ ಮಾಲೀಕರಿಗೆ ಭಾರೀ ದಂಡ ವಿಧಿಸಲು ಸರ್ಕಾರ ಅವಕಾಶ ಕಲ್ಪಿಸುತ್ತಿದೆ.

ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ ಪ್ರಕಾರ, ಸುಮಾರು 17 ಲಕ್ಷ ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು 15 ವರ್ಷಗಳಿಗಿಂತ ಹಳೆಯದಾಗಿದ್ದು, ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಸಂಚರಿಸುತ್ತಿವೆ. ಹೊಸ ನಿಯಮ ಜಾರಿಗೆ ಬಂದ ನಂತರ, ಫಿಟ್ನೆಸ್ ಪ್ರಮಾಣಪತ್ರಗಳಿಲ್ಲದ ಹಳೆಯ ವಾಹನಗಳು ರಸ್ತೆಯಲ್ಲಿ ಚಲಿಸಿದರೆ ಅವುಗಳನ್ನು ತಕ್ಷಣವೇ ರದ್ದುಗೊಳಿಸುವ ಅವಕಾಶವೂ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಬದಲಿಸಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ದೆಹಲಿ ಸರ್ಕಾರ

ವಾಹನ ದಾಖಲೆಗಳ ನವೀಕರಣಕ್ಕೆ ಸೆ. 30ರ ತನಕ ಗಡುವು ವಿಸ್ತರಿಸಿದ ಸರ್ಕಾರ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ