AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್​ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಿದ ನಟ ಸೋನು ಸೂದ್

ಉಕ್ರೇನ್‌ನಲ್ಲಿ ಯುದ್ಧ ಪೀಡಿತ ಪ್ರದೇಶಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ತಲುಪಲು ಸೋನು ಸೂದ್ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.

ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್​ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಿದ ನಟ ಸೋನು ಸೂದ್
ಸೋನು ಸೂದ್
TV9 Web
| Edited By: |

Updated on:Mar 03, 2022 | 3:56 PM

Share

ಭಾರತದಲ್ಲಿ ಕೊರೊನಾದಿಂದ ಲಾಕ್‌ಡೌನ್ ಆದ ಸಮಯದಲ್ಲಿ ಸಾವಿರಾರು ಜನರಿಗೆ ಬಾಲಿವುಡ್ ನಟ ಸೋನು ಸೂದ್ (Sonu Sood) ಸಹಾಯಹಸ್ತ ಚಾಚಿದ್ದರು. ತಮ್ಮದೇ ಖರ್ಚಿನಲ್ಲಿ ಅದೆಷ್ಟೋ ಬಡವರ್ಗದ ಜನರು, ಕೂಲಿಕಾರ್ಮಿಕರನ್ನು ತಮ್ಮ ಊರುಗಳಿಗೆ ಸೇರಿಸಿದ್ದರು. ಬೇರೆ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಿಮಾನದಲ್ಲಿ ಭಾರತಕ್ಕೆ ವಾಪಾಸ್ ಕರೆತರುವ ವ್ಯವಸ್ಥೆಯನ್ನೂ ಮಾಡಿದ್ದರು. ಈಗ ರಷ್ಯಾ (Russia) ಪ್ರಾರಂಭಿಸಿರುವ ದಾಳಿಯ ಮಧ್ಯೆ ಉಕ್ರೇನ್‌ನಲ್ಲಿ (Ukraine) ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸೋನು ಸೂದ್ ಮುಂದೆ ಬಂದಿದ್ದಾರೆ.

ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಉಕ್ರೇನ್‌ನಲ್ಲಿ ಯುದ್ಧ ಪೀಡಿತ ಪ್ರದೇಶಗಳನ್ನು ತೊರೆದು ಸುರಕ್ಷಿತ ಸ್ಥಳಗಳನ್ನು ತಲುಪಲು ಸೋನು ಸೂದ್ ಹಲವಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಹರ್ಷ ಎಂಬ ವಿದ್ಯಾರ್ಥಿಯು ತಾನು ಮತ್ತು ತನ್ನ ಸ್ನೇಹಿತರು ಕೀವ್‌ನಲ್ಲಿ ಸಿಲುಕಿಕೊಂಡಿದ್ದಾಗ ಸೋನು ಸೂದ್ ಅವರ ತಂಡ ತಮಗೆ ಸಹಾಯ ಮಾಡಿದೆ ಎಂದು ಧನ್ಯವಾದ ಅರ್ಪಿಸಿದ್ದಾರೆ.

ಕೀವ್​ನಿಂದ ಎಲ್ವಿವ್‌ಗೆ ತೆರಳಲು ಸೋನು ತಂಡವು ತನಗೂ ಸಹಾಯ ಮಾಡಿದೆ ಎಂದು ಮತ್ತೊಬ್ಬ ವಿದ್ಯಾರ್ಥಿನಿ ಹೇಳಿದ್ದಾಳೆ. ಅಲ್ಲಿಂದ ತಾನು ಪೋಲೆಂಡ್ ಗಡಿಯನ್ನು ದಾಟಿರುವುದಾಗಿ ಆಕೆ ಹೇಳಿಕೊಂಡಿದ್ದಾಳೆ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಅವರನ್ನು ತಲುಪಿದ ತಕ್ಷಣ, ಸ್ಥಳೀಯ ಟ್ಯಾಕ್ಸಿಗಳನ್ನು ಅವರ ತಂಡವು ರೈಲ್ವೆ ನಿಲ್ದಾಣಗಳನ್ನು ತಲುಪಲು ಅವರ ಸ್ಥಳಗಳಿಗೆ ಕಳುಹಿಸಲಾಗುತ್ತಿದೆ ಎಂದು ಸೋನು ಹಿಂದೂಸ್ತಾನ್ ಟೈಮ್ಸ್‌ಗೆ ತಿಳಿಸಿದ್ದಾರೆ. ಅಲ್ಲಿಂದ, ವಿದ್ಯಾರ್ಥಿಗಳು ರೈಲುಗಳನ್ನು ಹತ್ತಬಹುದು ಮತ್ತು ಎಲ್ವಿವ್‌ನಂತಹ ಸುರಕ್ಷಿತ ಪ್ರದೇಶಗಳಿಗೆ ಹೋಗಬಹುದು. ಹಾಗೇ ಅಲ್ಲಿಂದ ಅವರನ್ನು ಪೋಲಿಷ್ ಗಡಿಗೆ ಸಾಗಿಸಲು ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ನಮ್ಮ ತಂಡವು ಟಿಕೆಟ್ ದರವನ್ನು ಭರಿಸಲಾಗದ ವಿದ್ಯಾರ್ಥಿಗಳಿಗೆ ವಿಮಾನದ ದರವನ್ನು ಸಹ ಪಾವತಿಸುತ್ತಿದೆ ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿ ಭಾರತವನ್ನು ತಲುಪಲು ಸಹಾಯ ಮಾಡಲು ತಮ್ಮ ಶಕ್ತಿಯಿಂದ ಎಲ್ಲವನ್ನೂ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ, ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ತಲುಪಲು ಸಹಾಯ ಮಾಡಿದಾಗ ಸೋನು ಸೂದ್ ರಾಷ್ಟ್ರದ ಎಲ್ಲಾ ಮೂಲೆಗಳಿಂದ ಪ್ರೀತಿ ಮತ್ತು ಮೆಚ್ಚುಗೆಯನ್ನು ಗಳಿಸಿದ್ದಾರೆ. ಉದ್ಯೋಗವನ್ನು ಕಳೆದುಕೊಂಡ ಜನರಿಗೆ, ಆಸ್ಪತ್ರೆಯ ಹಾಸಿಗೆಗಳು ಮತ್ತು ಔಷಧಿಗಳಿಗಾಗಿ ಹುಡುಕುತ್ತಿರುವವರಿಗೆ ಮತ್ತು ಸಹಾಯಕ್ಕಾಗಿ ಯಾರಿಗಾದರೂ ಸೋನು ಸೂದ್ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: Sonu Sood: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ನಟ ಸೋನು ಸೂದ್ ವಿರುದ್ಧ ಎಫ್​ಐಆರ್ ದಾಖಲು

ಜನಪ್ರಿಯ ರಿಯಾಲಿಟಿ ಶೋನ ನಿರೂಪಣೆ ಜವಾಬ್ದಾರಿ ಹೊತ್ತ ಸೋನು ಸೂದ್​​; ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ ಶೂಟ್​

Published On - 3:56 pm, Thu, 3 March 22