ಬೆಂಗಾಲಿ ಹುಡುಗಿಯಾಗಿ ಬದಲಾದ ‘ಲವ್ ಮಾಕ್ಟೇಲ್ 2’ ನಟಿ ರೇಚಲ್ ಡೇವಿಡ್
‘ಕಂಟ್ರಿ ಮೇಡ್’ ಹೆಸರಿನ ಸಿನಿಮಾದಲ್ಲಿ ರೇಚಲ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಬೆಂಗಾಲಿ ಹುಡುಗಿಯ ಪಾತ್ರ. ಇಂದು ಈ ಚಿತ್ರದ ಮುಹೂರ್ತ ನೆರವೇರಿದೆ.
ನಟಿ ರೇಚಲ್ ಡೇವಿಡ್ (Rachel David) ಅವರು ‘ಲವ್ ಮಾಕ್ಟೇಲ್ 2’ ಚಿತ್ರದಲ್ಲಿ (Love Mocktail 2) ಸಿಹಿ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಸಿನಿಮಾದಿಂದ ಅವರ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ‘ಕಂಟ್ರಿ ಮೇಡ್’ ಹೆಸರಿನ ಸಿನಿಮಾದಲ್ಲಿ ರೇಚಲ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರದ್ದು ಬೆಂಗಾಲಿ ಹುಡುಗಿಯ ಪಾತ್ರ. ಇಂದು ಈ ಚಿತ್ರದ ಮುಹೂರ್ತ ನೆರವೇರಿದೆ. ದುನಿಯಾ ವಿಜಯ್ ಹಾಗೂ ವಸಿಷ್ಠ ಸಿಂಹ ಅವರು ಈ ಚಿತ್ರಕ್ಕೆ ಶುಭಕೋರಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ರೇಚಲ್, ‘ನನಗೆ ‘ಲವ್ ಮಾಕ್ಟೇಲ್ 2’ ಚಿತ್ರಕ್ಕೆ ಆಫರ್ ಬರುವುದಕ್ಕೂ ಮೊದಲೇ ಈ ಸಿನಿಮಾ ಒಪ್ಪಿಕೊಂಡಿದ್ದೆ. ಈಗ ಚಿತ್ರ ಸೆಟ್ಟೇರಿದೆ. ಬೆಂಗಾಲಿ ಹುಡುಗಿಯಾಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ’ ಎಂದರು. ‘ಲವ್ ಮಾಕ್ಟೇಲ್ 2’ ರೇಚಲ್ ಅವರ ಮೊದಲ ಕನ್ನಡ ಸಿನಿಮಾ. ಮಲಯಾಳಂನ ಮೂರು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ: ‘ಮನಿ ಹೈಸ್ಟ್’ ಮಾದರಿಯಲ್ಲೇ ನೆಟ್ಫ್ಲಿಕ್ಸ್ ಸೆಟ್ಅನ್ನು ದೋಚಿದ ಖದೀಮರು; ಕೋಟ್ಯಂತರ ಬೆಲೆ ಬಾಳುವ ವಸ್ತುಗಳು ಲೂಟಿ
ನಿಧಿ ನೆನಪಲ್ಲೇ ಸಾಗಿದ ‘ಲವ್ ಮಾಕ್ಟೇಲ್ 2’ ; ನೀವಂದುಕೊಂಡಷ್ಟು ಸುಲಭವಿಲ್ಲ ಈ ಕೇಸ್