ಪಾದಯಾತ್ರೆಯಿಂದಾಗಿ ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿದ ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಮನಬಂದಂತೆ ಜರಿದರು

ಪಾದಯಾತ್ರೆಯಿಂದಾಗಿ ಬೆಂಗಳೂರಿನ ಟ್ರಾಫಿಕ್ನಲ್ಲಿ ಸಿಲುಕಿದ ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಮನಬಂದಂತೆ ಜರಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 03, 2022 | 5:13 PM

ಅವರೆಲ್ಲ ಪಕ್ಕಕ್ಕೆ ಸರಿದು ಕಾರಿಗೆ ಮುಂದೆ ಆಗುವ ಅವಕಾಶ ಮಾಡಿಕೊಡುವ ಪ್ರಯತ್ನ ಮಾಡುತ್ತಾರೆ. ಕಾರಿನ ಮುಂಭಾಗದಲ್ಲಿ ಕುಳಿತಿರುವ ಮಹಿಳೆ ಕಾರಿನ ಸನಿಹದಲ್ಲಿರುವ ಯುವ ಕಾರ್ಯಕರ್ತರಿಗೆ ಮನಸೋ ಇಚ್ಛೆ ಉಗಿಯುತ್ತಾರೆ.

ಈ ರಸ್ತೆಯಲ್ಲಿ ಉಂಟಾಗಿರುವ ಅವ್ಯವಸ್ಥೆ ನೋಡಿ. ಗುರುವಾರ ಸಂಜೆ ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದ (National College Grounds) ಆವರಣದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನು (convention) ಆಯೋಜಿಸಿದೆ. ಪಕ್ಷ ಆಯೋಜಿಸಿದ ಎರಡು ಹಂತದ ಪಾದಯಾತ್ರೆಯು ಈ ಸಮಾವೇಶದೊಂದಿಗೆ ಕೊನೆಗೊಳ್ಳಲಿದೆ. ಆದರೆ, ಸದರಿ ಪಾದಯಾತ್ರೆಯಿಂದ ಬೆಂಗಳೂರಿನ ಜನ ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಸಮಾವೇಶಕ್ಕೆ ಬೇರೆ ಬೇರೆ ಊರುಗಳಿಂದ ಜನ ಬಂದು ಪಾದಯಾತ್ರೆಯ ಅಂತಿಮ ಚರಣದಲ್ಲಿ ಪಾಲ್ಗೊಂಡಿದ್ದರಿಂದ ವಾಹನ ಸಂಚಾರ (traffic movement) ತೀವ್ರ ಸ್ವರೂಪದ ಅಡಚಣೆ ಉಂಟಾಯಿತು. ಈ ವಿಡಿಯೋ ನೋಡಿದರೆ ನಿಮಗೆ ಅರ್ಥವಾಗುತ್ತದೆ. ಹಾಗೆ ನೋಡಿದರೆ, ಇಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಆದರೆ ಜನ ಮತ್ತು ವಾಹನ ಸಂಚಾರ ಪ್ರಭಾವಕ್ಕೊಳಗಾಗಿದೆ.

ನಿಮಗೆ ಬಿಳಿ ಬಣ್ಣದ ಕಾರೊಂದು ವಿಡಿಯೋನಲ್ಲಿ ಕಾಣುತ್ತಿದೆ. ಅದರಲ್ಲಿ ಒಬ್ಬ ಗರ್ಭಿಣಿ ಮಹಿಳೆ ಇದ್ದಾರೆ. ಪ್ರಾಯಶಃ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಕಾರಿಗೆ ಹೋಗಲು ಸ್ಥಳವೇ ಇಲ್ಲ. ಪೊಲೀಸರು ಅಸಹಾಯಕರಾಗಿ ಕೈ ಚೆಲ್ಲಿದ್ದಾರೆ. ಪಾದಯಾತ್ರೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಅದಕ್ಕೂ ತಮಗೂ ಸಂಬಂಧವೇ ಇಲ್ಲವೆನ್ನುವ ಹಾಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಸ್ವಲ್ಪ ಸಮಯದ ಬಳಿಕ ಅವರಿಗೆ ಜ್ಞಾನೋದಯವಾಗುತ್ತದೆ. ಅವರೆಲ್ಲ ಪಕ್ಕಕ್ಕೆ ಸರಿದು ಕಾರಿಗೆ ಮುಂದೆ ಆಗುವ ಅವಕಾಶ ಮಾಡಿಕೊಡುವ ಪ್ರಯತ್ನ ಮಾಡುತ್ತಾರೆ. ಕಾರಿನ ಮುಂಭಾಗದಲ್ಲಿ ಕುಳಿತಿರುವ ಮಹಿಳೆ ಕಾರಿನ ಸನಿಹದಲ್ಲಿರುವ ಯುವ ಕಾರ್ಯಕರ್ತರಿಗೆ ಮನಸೋ ಇಚ್ಛೆ ಉಗಿಯುತ್ತಾರೆ.

ಎದುರುಗಡೆ ಒಬ್ಬ ಪೋಷಕರು ತಮ್ಮ ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮಗು ನಿಸ್ಸಂದೇಹವಾಗಿ ಹಸಿದಿರುತ್ತದೆ. ಆದರೆ ಬೇಗ ಮನೆಗೆ ಹೋಗಲಾಗುತ್ತಿಲ್ಲ.

ನ್ಯಾಶನಲ್ ಕಾಲೇಜು ಮೈದಾನದಲ್ಲಿ ಭಾಷಣ ಬಿಗಿಯುವ ಕಾಂಗ್ರೆಸ್ ನಾಯಕರು ಪಾದಯಾತ್ರೆ ಪ್ರಚಂಡ ಯಶ ಗಳಿಸಿತು ಅಂತ ಹೇಳುತ್ತಾರೆ. ಆದರೆ ತೊಂದರೆ ಅನುಭವಿಸಿದ್ದು ಯಾರು ಮಾರಾಯ್ರೇ?

ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆಯಿಂದ ಟ್ರಾಫಿಕ್ ಜಾಮ್​; ಪ್ರತಿಭಟನೆ,‌ ಮೆರವಣಿಗೆಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ಮಹತ್ವದ ಆದೇಶ