ಇಶಾನ್​-ಅನನ್ಯಾ ಪಾಂಡೆ ಪ್ರೀತಿ ನಿಜವೇ? ‘ಅವರು ನನ್ನ ಫೇವರಿಟ್​’ ಎಂದ ಸ್ಟಾರ್​ ನಟಿ

ಇಶಾನ್​-ಅನನ್ಯಾ ಪಾಂಡೆ ಪ್ರೀತಿ ನಿಜವೇ? ‘ಅವರು ನನ್ನ ಫೇವರಿಟ್​’ ಎಂದ ಸ್ಟಾರ್​ ನಟಿ
ಇಶಾನ್ ಖಟ್ಟರ್, ಅನನ್ಯಾ ಪಾಂಡೆ

ತಮ್ಮ ಸಂಬಂಧದ ಬಗ್ಗೆ ಇಶಾನ್​ ಖಟ್ಟರ್​ ಮತ್ತು ಅನನ್ಯಾ ಪಾಂಡೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಹಲವು ಬಾರಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದುಂಟು.

TV9kannada Web Team

| Edited By: Madan Kumar

Mar 03, 2022 | 4:36 PM

ಚಿತ್ರರಂಗದಲ್ಲಿ ಒಬ್ಬರ ಜೊತೆ ಇನ್ನೊಬ್ಬರ ಹೆಸರು ತಳುಕು ಹಾಕಿಕೊಳ್ಳುವುದು ಸಾಮಾನ್ಯ ಸಂಗತಿ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಬಾಲಿವುಡ್​ನಲ್ಲೇ ಲವ್ವಿ-ಡವ್ವಿ ಸಮಾಚಾರಗಳು ಜಾಸ್ತಿ. ಬಣ್ಣದ ಲೋಕಕ್ಕೆ ಕಾಲಿಡುತ್ತಲೇ ಬಿ-ಟೌನ್​ (Bollywood) ಸೆಲೆಬ್ರಿಟಿಗಳು ಡೇಟಿಂಗ್​ ಶುರು ಮಾಡಿಕೊಳ್ಳುತ್ತಾರೆ. ನಟ ಇಶಾನ್​ ಖಟ್ಟರ್​ ಅವರು ‘ಧಡಕ್​’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಅವರಿಗೆ ಆರಂಭದಲ್ಲಿಯೇ ಯಶಸ್ಸು ಸಿಕ್ಕಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ನಡುವೆ ಅವರು ನಟಿ ಅನನ್ಯಾ ಪಾಂಡೆ (Ananya Panday) ಜೊತೆಗಿನ ಒಡನಾಟದ ಕಾರಣದಿಂದ ಹೆಚ್ಚು ಸುದ್ದಿ ಆಗುತ್ತಿದ್ದಾರೆ. 2020ರಲ್ಲಿ ತೆರೆಕಂಡ ‘ಖಾಲಿ ಪೀಲಿ’ ಸಿನಿಮಾದಲ್ಲಿ ಇಶಾನ್​ ಖಟ್ಟರ್​ (Ishaan Khatter) ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ನಟಿಸಿದರು. ಆ ಸಿನಿಮಾದ ಶೂಟಿಂಗ್​ ವೇಳೆ ಇಬ್ಬರ ನಡುವೆ ಆಪ್ತತೆ ಬೆಳೆಯಿತು. ತಮ್ಮ ಸಂಬಂಧದ ಬಗ್ಗೆ ಈ ಜೋಡಿ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಹಲವು ಬಾರಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದುಂಟು. ರಿಲೇಷನ್​ಶಿಪ್​ ಕುರಿತಂತೆ ಅಭಿಮಾನಿಗಳ ಕಡೆಯಿಂದ ಅನನ್ಯಾಗೆ ಇತ್ತೀಚೆಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ.

ಅನನ್ಯಾ ಸಿಂಗಲ್​ ಆಗಿದ್ದಾರಾ ಅಥವಾ ರಿಲೇಷನ್​ಶಿಪ್​ನಲ್ಲಿ ಇದ್ದಾರಾ ಎಂಬುದು ಅಭಿಮಾನಿಯ ಪ್ರಶ್ನೆ ಆಗಿತ್ತು. ಅದಕ್ಕೆ ನೇರವಾಗಿ ಉತ್ತರ ನೀಡುವ ಬದಲು ಅನನ್ಯಾ ಪಾಂಡೆ ಹಾರಿಕೆ ಉತ್ತರ ನೀಡಿದ್ದಾರೆ. ‘ನಾನು ಖುಷಿಯಾಗಿದ್ದೇನೆ’ ಎಂದು ಹೇಳುವ ಮೂಲಕ ಅವರು ಜಾರಿಕೊಂಡಿದ್ದಾರೆ. ಹಾಗಾದರೆ ನಿಮ್ಮ ಫೇವರಿಟ್​ ನಟ ಯಾರು ಎಂದು ಕೇಳಲಾಯಿತು. ಅದಕ್ಕೆ ಅವರು ಇಶಾನ್​ ಖಟ್ಟರ್​ ಹೆಸರು ಹೇಳಿದರು. ಬಳಿಕ ತಮ್ಮ ಹೇಳಿಕೆಯನ್ನು ಕೊಂಚ ಬದಲಾಯಿಸಿಕೊಂಡರು. ‘ನನ್ನ ಜೊತೆ ಅಭಿನಯಿಸಿದ ಎಲ್ಲ ನಟರು ನನಗೆ ಇಷ್ಟ. ‘ಗೆಹರಾಯಿಯಾ’ ಬಳಿಕ ‘ಕೋ ಗಯೇ ಹಮ್​ ಕಹಾ’ ಸಿನಿಮಾದಲ್ಲಿ ಸಿದ್ಧಾಂತ್​ ಚತುರ್ವೇದಿ ಜೊತೆ ನಾನು ಮತ್ತೊಮ್ಮೆ ಕೆಲಸ ಮಾಡಲಿದ್ದೇನೆ’ ಎಂದು ಅನನ್ಯಾ ಪಾಂಡೆ ಹೇಳಿದರು.

ಸ್ಟಾರ್​ ನಟ ಶಾಹಿದ್​ ಕಪೂರ್​ ಬರ್ತ್​ಡೇ ಸಂದರ್ಭದಲ್ಲಿ ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಲಾಗಿತ್ತು. ಆ ಪಾರ್ಟಿಗೆ ಇಶಾನ್​ ಖಟ್ಟರ್​ ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ಬಂದಿದ್ದರು. ಈ ವರ್ಷ ಹೊಸ ವರ್ಷವನ್ನು ಇವರಿಬ್ಬರು ಜೊತೆಯಾಗಿ ಆಚರಿಸಿದ್ದರು. ರಣತಂಬೋರ್​ ರಾಷ್ಟ್ರೀಯ ಉದ್ಯಾನದಲ್ಲಿ ಅವರಿಬ್ಬರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವಂತಹ ಕೆಲವು ಫೋಟೋಗಳು ವೈರಲ್​ ಆಗಿದ್ದವು.

ಇಶಾನ್​ ಖಟ್ಟರ್​ ಮತ್ತು ಅನನ್ಯಾ ಪಾಂಡೆ ಅವರು ಈಗ ಬಾಲಿವುಡ್​ನಲ್ಲಿ ಸ್ಟಾರ್​ ಕಲಾವಿದರಾಗಿ ಮಿಂಚುತ್ತಿದ್ದಾರೆ. ಇಶಾನ್​ ಖಟ್ಟರ್​ ನಟನೆಯ ‘ಫೋನ್​ ಭೂತ್​’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಅದೇ ರೀತಿ ಅನನ್ಯಾ ಪಾಂಡೆ ಕೂಡ ಬ್ಯುಸಿ ಆಗಿದ್ದಾರೆ. ವಿಜಯ್​ ದೇವಕೊಂಡ ಜೊತೆ ಅವರು ‘ಲೈಗರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಬಹುಭಾಷೆಯಲ್ಲಿ ಆ ಚಿತ್ರ ಮೂಡಿಬರುತ್ತಿದೆ. ಆ ಸಿನಿಮಾದಿಂದ ಅನನ್ಯಾ ಪಾಂಡೆ ವೃತ್ತಿಜೀವನಕ್ಕೆ ಹೊಸ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಫಸ್ಟ್​ ಗ್ಲಿಂಪ್ಸ್​ ಕಂಡು ಅಭಿಮಾನಿಗಳು ವಾವ್​ ಎಂದಿದ್ದಾರೆ.

ಇದನ್ನೂ ಓದಿ:

Ananya Panday: ಬಿಕಿನಿ ಫೋಟೋಶೂಟ್ ಮೂಲಕ ಮತ್ತೆ ಸುದ್ದಿಯಾದ ಅನನ್ಯಾ ಪಾಂಡೆ; ಚಿತ್ರಗಳು ವೈರಲ್

‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್​ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ

Follow us on

Related Stories

Most Read Stories

Click on your DTH Provider to Add TV9 Kannada