ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಸಂಜಯ್​ ಮಗಳು; ಕರಣ್​ ಹೆಗಲಿದೆ ಹೊಸ ಜವಾಬ್ದಾರಿ

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ಸಂಜಯ್​ ಮಗಳು; ಕರಣ್​ ಹೆಗಲಿದೆ ಹೊಸ ಜವಾಬ್ದಾರಿ
ಬೇಧಡಕ್​ ಸಿನಿಮಾ ಪೋಸ್ಟರ್

ಈ ಸಿನಿಮಾವನ್ನು ಶಂಶಾಕ್​ ಖೈತಾನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜಾನ್ವಿ ಕಪೂರ್​ ಹಾಗೂ ಇಶಾನ್​ ಖಟ್ಟರ್​ ಅವರನ್ನು ಪರಿಚಯಿಸಿದ್ದ ‘ಧಡಕ್​’ ಚಿತ್ರವನ್ನು ಶಶಾಂಕ್​ ನಿರ್ದೇಶನ ಮಾಡಿದ್ದರು.

TV9kannada Web Team

| Edited By: Rajesh Duggumane

Mar 03, 2022 | 1:20 PM

ಬಾಲಿವುಡ್​ನ ನಿರ್ಮಾಪಕ ಕರಣ್​ ಜೋಹರ್​ (Karan Johar) ಅನೇಕ ಸ್ಟಾರ್​ ಮಕ್ಕಳಿಗೆ ಗಾಡ್​ ಫಾದರ್​. ಯಾವುದಾದರೂ ಸ್ಟಾರ್ ಕುಟುಂಬದ ಮಕ್ಕಳು ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ ಎಂದರೆ ಅವರನ್ನು ಪರಿಚಯಿಸೋಕೆ ಕರಣ್​ ತುದಿಗಾಲಿನಲ್ಲಿ ನಿಂತಿರುತ್ತಾರೆ. ಸ್ಟಾರ್​ ಕಿಡ್​ಗಳಿಗೆ ಸರಿ ಹೊಂದುವ ಕಥೆಯನ್ನು ಆಯ್ಕೆ ಮಾಡಿಕೊಂಡು ಅವರನ್ನು ಪರಿಚಯಿಸುತ್ತಾರೆ. ನಟಿ ಆಲಿಯಾ ಭಟ್ (Alia Bhatt)​, ಅನನ್ಯಾ ಪಾಂಡೆ (Ananya Panday) ಸೇರಿ ಅನೇಕ ಸ್ಟಾರ್​ ಮಕ್ಕಳಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ ಖ್ಯಾತಿ ಕರಣ್​ಗೆ ಇದೆ. ಈಗ ಮತ್ತೋರ್ವ​ ಸ್ಟಾರ್​ ನಟನ ಮಗಳನ್ನು ಚಿತ್ರರಂಗಕ್ಕೆ ಪರಿಚಯಿಸೋಕೆ ಕರಣ್ ರೆಡಿ ಆಗಿದ್ದಾರೆ. ಇದರ ಫಸ್ಟ್​ ಲುಕ್​ ಕೂಡ ರಿಲೀಸ್​ ಆಗಿದ್ದು, ನಿರೀಕ್ಷೆ ಹುಟ್ಟುಹಾಕಿದೆ.

ಶನಾಯಾ ಕಪೂರ್, ಲಕ್ಷ್ಯ ಲಲ್ವಾಣಿ ಹಾಗೂ ಗುರ್ಫತೇ ಪಿರ್ಜಾದಾ ಅವರನ್ನು ಲಾಂಚ್​ ಮಾಡೋಕೆ ರೆಡಿ ಆಗಿದ್ದಾರೆ ಕರಣ್​. ಈ ಮೂವರು ‘ಬೇಧಡಕ್​’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದ ಪೋಸ್ಟರ್​ ರಿಲೀಸ್​ ಮಾಡಿರುವ ಕರಣ್​, ಈ ಮೂವರನ್ನು ಪರಿಚಯಿಸುತ್ತಿರುವ ಬಗ್ಗೆ ಬರೆದುಕೊಂಡಿದ್ದಾರೆ.

ಈ ಸಿನಿಮಾವನ್ನು ಶಂಶಾಕ್​ ಖೈತಾನ್​ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜಾನ್ವಿ ಕಪೂರ್​ ಹಾಗೂ ಇಶಾನ್​ ಖಟ್ಟರ್​ ಅವರನ್ನು ಪರಿಚಯಿಸಿದ್ದ ‘ಧಡಕ್​’ ಚಿತ್ರವನ್ನು ಶಶಾಂಕ್​ ನಿರ್ದೇಶನ ಮಾಡಿದ್ದರು. ಇದು ರಿಮೇಕ್​ ಆದರೂ ಬಾಲಿವುಡ್​ನ ಶೈಲಿಗೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾ​ ಮಾಡಿದ್ದರು ಶಶಾಂಕ್​. ‘ಧಡಕ್​’ನಿಂದ ಜಾನ್ವಿ ಹಾಗೂ ಇಶಾನ್​ ಇಬ್ಬರಿಗೂ ಹಿಂದಿ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಬಂತು. ಈಗ ಇದೇ ನಿರ್ದೇಶಕನ ಹೆಗಲಿಗೆ ಹೊಸ ಜವಾಬ್ದಾರಿ ನೀಡಿದ್ದಾರೆ ಕರಣ್​ ಜೋಹರ್.

View this post on Instagram

A post shared by Karan Johar (@karanjohar)

ಲಕ್ಷ್ಯ ಈ ಮೊದಲು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ಅವರು ಹೀರೋ ಆಗುತ್ತಿದ್ದಾರೆ. ಶನಾಯಾಗೆ ಚಿತ್ರರಂಗದ ಹಿನ್ನೆಲೆ ಇದೆ. ಅವರು ನಟ ಸಂಜಯ್​ ಕಪೂರ್​ ಮಗಳು. ಶನಾಯಾ ತಮ್ಮ ಮೊದಲ ಸಿನಿಮಾದಲ್ಲಿ ನಿಮೃತ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಲುಕ್​ ಎಲ್ಲರ ಗಮನ ಸೆಳೆಯುತ್ತಿದೆ. ಮಗಳು ಚಿತ್ರರಂಗಕ್ಕೆ ಕಾಲಿಡುತ್ತಿರುವ ಬಗ್ಗೆ ಸಂಜಯ್​ ಕಪೂರ್ ಖುಷಿಪಟ್ಟಿದ್ದಾರೆ.

View this post on Instagram

A post shared by Karan Johar (@karanjohar)

ಈ ಮೊದಲು ನಿರ್ದೇಶಕ ಶಶಾಂಕ್​ ಹಾಗೂ ನಿರ್ಮಾಪಕ ಕರಣ್​ ಅವರು ಹೊಸ ಸಿನಿಮಾ ಘೋಷಣೆ ಬಗ್ಗೆ ಮಾಹಿತಿ ನೀಡಿದ್ದರು. ಸ್ಟಾರ್​ ನಟಿಯ ಮಗಳು ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಸೂಚನೆ ನೀಡಿದ್ದರು.  ಆಲಿಯಾ ಭಟ್​, ವರುಣ್​ ಧವನ್​, ಜಾನ್ವಿ ಕಪೂರ್​ ಸೇರಿ ಅನೇಕರನ್ನು ಬಾಲಿವುಡ್​ಗೆ ಪರಿಚಯಿಸಿದ ಖ್ಯಾತಿ ಕರಣ್​ಗೆ ಇದೆ. ಈಗ ಸಂಜಯ್​ ಕಪೂರ್ ಮಗಳನ್ನೂ ಕರಣ್​ ಲಾಂಚ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: Karan Johar: ‘ಯಾವುದೇ ಯಶಸ್ಸು ಪಡೆಯದವರೂ ₹ 20- 30 ಕೋಟಿ ಡಿಮ್ಯಾಂಡ್ ಮಾಡುತ್ತಾರೆ’; ಕರಣ್ ತಿವಿದಿದ್ದು ಯಾರಿಗೆ?

ಮನಸಾರೆ ದಕ್ಷಿಣ ಭಾರತದ ಸಿನಿಮಾ ಹೊಗಳಿದ ಕರಣ್​ ಜೋಹರ್​; ಸ್ಕ್ರೀನ್​ಶಾಟ್​ ಹಂಚಿಕೊಂಡ ನಟ

Follow us on

Related Stories

Most Read Stories

Click on your DTH Provider to Add TV9 Kannada