ಮನಸಾರೆ ದಕ್ಷಿಣ ಭಾರತದ ಸಿನಿಮಾ ಹೊಗಳಿದ ಕರಣ್​ ಜೋಹರ್​; ಸ್ಕ್ರೀನ್​ಶಾಟ್​ ಹಂಚಿಕೊಂಡ ನಟ

ಟೋವಿನೋ ಥಾಮಸ್​ ನಟನೆಯ ‘ಮಿನ್ನಲ್​ ಮುರಳಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಹಾಲಿವುಡ್​ನಲ್ಲಿ ಸಾಕಷ್ಟು ಸೂಪರ್​ ಹೀರೋ ಚಿತ್ರಗಳು ಬಂದಿವೆ. ಇದೇ ಕಲ್ಪನೆಯಲ್ಲಿ ‘ಮಿನ್ನಲ್​ ಮುರಳಿ’ ಸಿನಿಮಾ ಮೂಡಿಬಂದಿದೆ.

ಮನಸಾರೆ ದಕ್ಷಿಣ ಭಾರತದ ಸಿನಿಮಾ ಹೊಗಳಿದ ಕರಣ್​ ಜೋಹರ್​; ಸ್ಕ್ರೀನ್​ಶಾಟ್​ ಹಂಚಿಕೊಂಡ ನಟ
ಕರಣ್​​-ಟುವಿನೋ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 11, 2022 | 6:00 AM

ನಿರ್ಮಾಪಕ ಕರಣ್​ ಜೋಹರ್​ (Karan Johar) ಅವರು ಬಾಲಿವುಡ್​ನಲ್ಲಿ (Bollywood) ದೊಡ್ಡ ಮಟ್ಟದ ಹವಾ ಸೃಷ್ಟಿ ಮಾಡಿದ್ದಾರೆ. ಹಿಂದಿ ಸಿನಿಮಾಗಳ ಜತೆಗೆ ಅವರಿಗೆ ದಕ್ಷಿಣ ಭಾರತದ ಚಿತ್ರಗಳಮೇಲೂ ಹೆಚ್ಚು ಆಸಕ್ತಿ ಇದೆ. ಇಲ್ಲಿನ ಕೆಲ ಚಿತ್ರಗಳ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ ಉದಾಹರಣೆ ಕೂಡ ಇದೆ. ಟಾಲಿವುಡ್​ ಹೀರೋ ವಿಜಯ್​ ದೇವರಕೊಂಡ ಅವರನ್ನು ಬಾಲಿವುಡ್​ಗೆ ಅವರೇ ಪರಿಚಯಿಸುತ್ತಿದ್ದಾರೆ. ಈಗ ದಕ್ಷಿಣ ಭಾರತದ ಮತ್ತೊಂದು ಸಿನಿಮಾ ಬಗ್ಗೆ ಕರಣ್​ ಜೋಹರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಸಿನಿಮಾದ ಹೀರೋಗೆ ಮೆಸೇಜ್​ ಮಾಡಿ ಶಹಭಾಸ್​ಗಿರಿ ಕೊಟ್ಟಿದ್ದಾರೆ. ಹಾಗಾದರೆ, ಯಾವುದು ಆ ಚಿತ್ರ? ‘ಮಿನ್ನಲ್​ ಮುರಳಿ’.

ಟೋವಿನೋ ಥಾಮಸ್​ ನಟನೆಯ ‘ಮಿನ್ನಲ್​ ಮುರಳಿ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಹಾಲಿವುಡ್​ನಲ್ಲಿ ಸಾಕಷ್ಟು ಸೂಪರ್​ ಹೀರೋ ಚಿತ್ರಗಳು ಬಂದಿವೆ. ಇದೇ ಕಲ್ಪನೆಯಲ್ಲಿ ‘ಮಿನ್ನಲ್​ ಮುರಳಿ’ ಸಿನಿಮಾ ಮೂಡಿಬಂದಿದೆ. ಸೂಪರ್​ ಹೀರೋ ವಿಚಾರವನ್ನು ಇಟ್ಟುಕೊಂಡು ಒಂದು ಅದ್ಭುತ ಫ್ಯಾಂಟಸಿ ಕಥೆಯನ್ನು ಇಲ್ಲಿ ಹೇಳಲಾಗಿದೆ. ಈ ಸಿನಿಮಾವನ್ನು ಕರಣ್​ ಜೋಹರ್​ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, ಟೋವಿನೋ ಥಾಮಸ್​ಗೆ ವಾಟ್ಸಾಪ್​ ಮೂಲಕ ನಾಲ್ಕು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಸ್ಕ್ರೀನ್​ಶಾಟ್​ಅನ್ನು ಟೋವಿನೋ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಹಾಯ್ ಟೋವಿನೋ, ಕೊನೆಗೂ ‘ಮಿನ್ನಲ್ ಮುರಳಿ’ಯನ್ನು ನೋಡುವ ಅವಕಾಶ ಸಿಕ್ಕಿತು. ಸಿನಿಮಾ ನೋಡಿ ತುಂಬಾ ಖುಷಿಯಾಯಿತು. ಈ ಚಿತ್ರವನ್ನು ತುಂಬಾನೇ ಅಚ್ಚುಕಟ್ಟಾಗಿ ತಯಾರಿಸಲಾಗಿದೆ. ಮನರಂಜನೆಯ ಅಂಶವನ್ನು ಸರಿಯಾಗಿ ಇರಿಸಲಾಗಿದೆ. ಇದು ನಿಜಕ್ಕೂ ಅದ್ಭುತ ಸೂಪರ್‌ಹೀರೋ ಚಿತ್ರವಾಗಿತ್ತು. ಅಭಿನಂದನೆಗಳು’ ಎಂದು ಕರಣ್ ತಮ್ಮ ಸಂದೇಶದಲ್ಲಿ ಬರೆದಿದ್ದಾರೆ. ಇದಕ್ಕೆ ಉತ್ತರಿಸಿರುವ ಟೋವಿನೋ, ‘ತುಂಬಾ ಧನ್ಯವಾದಗಳು ಸರ್’ ಎಂದಿದ್ದಾರೆ.

ಬಸಿಲ್​ ಜೋಸೆಫ್​ ಅವರು ‘ಮಿನ್ನಲ್ ಮುರಳಿ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನೇರವಾಗಿ ನೆಟ್​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಿದೆ. ಟೋವಿನೋ ಥಾಮಸ್​ ಅವರು ವೃತ್ತಿ ಜೀವನದಲ್ಲಿ ಭಿನ್ನ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಹೆಚ್ಚು ಮೈಲೇಜ್​ ಸಿಕ್ಕಿದೆ.

ಇದನ್ನೂ ಓದಿ: ‘ಕರಣ್​ ಜೋಹರ್​ ಬಗ್ಗೆ ಕೆಟ್ಟದಾಗಿ ಮಾತಾಡು’ ಎಂದು ಕಾಂಟ್ರವರ್ಸಿ ಖಾನ್​ಗೆ ಮೆಸೇಜ್ ಮಾಡಿದ್ದ ಕಂಗನಾ?

Alia Bhatt: ಕರಣ್​ ಜೋಹರ್​ ಕೇಳಿದ ಸಿಂಪಲ್​ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ