Karan Johar: ‘ಯಾವುದೇ ಯಶಸ್ಸು ಪಡೆಯದವರೂ ₹ 20- 30 ಕೋಟಿ ಡಿಮ್ಯಾಂಡ್ ಮಾಡುತ್ತಾರೆ’; ಕರಣ್ ತಿವಿದಿದ್ದು ಯಾರಿಗೆ?

Dharma Productions: ಬಾಲಿವುಡ್ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ನಟರ ಸಂಭಾವನೆ ಕುರಿತು ಮಾತನಾಡಿ ಅಸಮಾಧಾನ ಹೊರಹಾಕಿದ್ದಾರೆ. ಕರಣ್ ಹೇಳಿದ್ದು ಯಾರನ್ನು ಗುರಿಯಾಗಿಸಿ?

Karan Johar: ‘ಯಾವುದೇ ಯಶಸ್ಸು ಪಡೆಯದವರೂ ₹ 20- 30 ಕೋಟಿ ಡಿಮ್ಯಾಂಡ್ ಮಾಡುತ್ತಾರೆ’; ಕರಣ್ ತಿವಿದಿದ್ದು ಯಾರಿಗೆ?
ಕರಣ್ ಜೋಹರ್
Follow us
TV9 Web
| Updated By: shivaprasad.hs

Updated on: Dec 28, 2021 | 3:17 PM

ಬಾಲಿವುಡ್​ನಲ್ಲಿ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್ (Karan Johar) ಅವರ ಗರಡಿಯಲ್ಲಿ ಕೆಲಸ ಮಾಡಲು ನಟ- ನಟಿಯರು ಬಹಳ ಕಾತರದಿಂದ ಕಾಯುತ್ತಾರೆ. ನೆಪೋಟಿಸಂ (Nepotism) ಕುರಿತ ಹಲವು ಆರೋಪಗಳು ಕರಣ್ ಮೇಲಿದ್ದರೂ ಈಗಲೂ ಅವರ ‘ಧರ್ಮ ಪ್ರೊಡಕ್ಷನ್ಸ್’ (Dharma Productions) ಹಾಗೂ ಕರಣ್ ನಿರ್ದೇಶನದ ಚಿತ್ರಗಳಿಗೆ ಬೇಡಿಕೆ ಇದ್ದೇ ಇದೆ. ಇತ್ತೀಚೆಗೆ ಕರಣ್ ಜೋಹರ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು, ಹೊಸ ಪೀಳಿಗೆಯ ನಟರ ಸಂಭಾವನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಕೊರೊನಾ ಕಾಲದಲ್ಲೂ ಸಂಭಾವನೆ ಏರಿಸಿದ್ದಾರೆ ಎಂದು ದೂರಿರುವ ಕರಣ್, ”ಹಳೆಯ ಚಿತ್ರಗಳ ಯಶಸ್ಸಿನ ಬಗ್ಗೆ ಕೇಳಿದರೆ ಕೊರೊನಾದಿಂದ (Corona) ಬ್ಯುಸಿನೆಸ್ ಮಾಡಿಲ್ಲ ಎನ್ನುತ್ತಾರೆ. ಅಥವಾ ಅದೇ ಕಾರಣದಿಂದ ಇನ್ನೂ ಬಿಡುಗಡೆಯಾಗಿಲ್ಲ ಎನ್ನುತ್ತಾರೆ. ಆದರೆ ಸಂಭಾವನೆ ಏರಿಸುತ್ತಾರೆ” ಎಂದು ದೂರಿದ್ದಾರೆ.

ಫಿಲ್ಮ್ ಕಂಪಾನಿಯನ್ ಜತೆ ಮಾತನಾಡಿದ ಕರಣ್ ಜೋಹರ್, ತಮ್ಮ ಸಂಸ್ಥೆ ಹೊಸ ಪೀಳಿಗೆಯ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಸಂಭಾವನೆಯ ಕುರಿತು ಅರ್ಥಮಾಡಿಸಲು ಪ್ರಯತ್ನಿಸುತ್ತದೆ. ಚಿತ್ರ ಬಿಡುಗಡೆ, ಅದರಿಂದ ಮರಳುವ ಮೊತ್ತ ಮೊದಲಾದವುಗಳ ಕುರಿತು ವಿವರವಾಗಿ ತಿಳಿಸಿದರೂ ಅವರ ಬೇಡಿಕೆ ಅತಾರ್ಕಿಕವಾಗಿರುತ್ತದೆ ಎಂದಿದ್ದಾರೆ. ಇದಕ್ಕೆ ಜೋಯಾ ಅಖ್ತರ್ ಕೂಡ ದನಿಗೂಡಿಸಿದ್ದು, ತಂತ್ರಜ್ಞರು ಹಾಗೂ ಹೊಸ ಕಲಾವಿದರ ಬೇಡಿಕೆಗಳ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ರೀಮಾ ಕಾಗ್ಟಿ ಕೂಡ ಇದೇ ವೇಳೆ ಉಪಸ್ಥಿತರಿದ್ದರು. ಅವರೂ ಕೂಡ ಈ ಕುರಿತು ಮಾತನಾಡಿ, ಹೊಸ ಪೀಳಿಗೆಯ ನಟರು ಸಂಭಾವನೆಯ ಕುರಿತ ಕಷ್ಟಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಎಂದು ದೂರಿದರು.

ಕರಣ್ ಅಸಮಾಧಾನ ಯಾವುದರ ವಿರುದ್ಧ? ಕರಣ್ ಮಾತನಾಡುತ್ತಾ ಯಾಕೆ ಮೆಗಾಸ್ಟಾರ್​ಗಳನ್ನೇ ಹಾಕಿಕೊಂಡು ಸಿನಿಮಾ ಮಾಡುವುದು ಎನ್ನುವುದನ್ನೂ ವಿವರಿಸಿದರು. ಕೊನೆಯ ಪಕ್ಷ ಸ್ಟಾರ್ ನಟರಿಗೆ ಹೆಚ್ಚು ಸಂಭಾವನೆ ನೀಡಿದರೂ ಚಿತ್ರಗಳು ಒಳ್ಳೆಯ ಬ್ಯುಸಿನೆಸ್ ಮಾಡುತ್ತವೆ. ಆದರೆ ಹೊಸಬರ ಬೇಡಿಕೆಗಳನ್ನು ನೋಡಿ ರೋಸಿ ಹೋಗಿದ್ದೇನೆ ಎಂದಿದ್ದಾರೆ.

ಧರ್ಮ ಪ್ರೊಡಕ್ಷನ್ಸ್​​ನಲ್ಲಿ ನೀಡುವ ಸಂಭಾವನೆಯ ಕುರಿತು ಕರಣ್ ಮಾತನಾಡುತ್ತಾ ಹಲವು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ‘‘ಹೊಸ ಪೀಳಿಗೆಯ ಕಲಾವಿದರು ಇನ್ನೂ ಬಾಕ್ಸಾಫೀಸ್​ನಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕಿರುತ್ತದೆ. ಆದರೆ ಅಂಥವರು ₹ 20 ಕೋಟಿಯಿಂದ ₹ 30 ಕೋಟಿಯವರೆಗೆ ಸಂಭಾವನೆ ಕೇಳುತ್ತಾರೆ. ಇವುಗಳಿಗೆ ಯಾವುದೇ ಆಧಾರವಿರುವುದಿಲ್ಲ. ಅಂಥವರಿಗೆ ಅವರ ಹಳೆಯ ಚಿತ್ರಗಳ ರಿಪೋರ್ಟ್ ಕಾರ್ಡ್ ತೋರಿಸಿ, ಅವರ ಚಿತ್ರ ಎಷ್ಟು ಗಳಿಸಿದೆ ಎಂದು ಮನದಟ್ಟು ಮಾಡಿಸಬೇಕಾಗುತ್ತದೆ’’ ಎಂದಿದ್ದಾರೆ ಕರಣ್.

ಧರ್ಮ ಪ್ರೊಡಕ್ಷನ್ಸ್​​ನಂತಹ ನಿರ್ಮಾಣ ಸಂಸ್ಥೆ ನಟರನ್ನು ನಿರಾಕರಿಸಲು ಹೇಗೆ ಸಾಧ್ಯವಿಲ್ಲ ಎಂಬ ಪ್ರಶ್ನೆಗೆ ಕರಣ್ ಉತ್ತರಿಸುತ್ತಾ, ಇತರ ನಿರ್ಮಾಣ ಸಂಸ್ಥೆಗಿಂತ ನಾವು ಉತ್ತಮ ಹಣ ಕೊಡಬಹುದು. ಆದರೆ ಅದು ಸರಿಯಾಗುವುದಿಲ್ಲ ಎಂದಿದ್ದಾರೆ. ವಾಸ್ತವವಾಗಿ ತಂತ್ರಜ್ಞರು ಚಿತ್ರವನ್ನು ಮತ್ತಷ್ಟು ಅಂದವಾಗಿಸುತ್ತಾರೆ ಆದರೆ ಅವರಿಗೆ ಕಡಿಮೆ ಹಣ ಕೊಡಲಾಗುತ್ತದೆ. ಆದರೆ ನಮ್ಮ ನಿರ್ಮಾಣ ಸಂಸ್ಥೆಯಲ್ಲಿ ಅವರಿಗೆ ಜಾಸ್ತಿ ಹಣ ನೀಡುತ್ತೇವೆ ಎಂದಿದ್ದಾರೆ. ಅಲ್ಲದೇ ನಟರು ₹ 15 ಕೋಟಿ ಪಡೆಯುವುದು ಹಾಗೂ ಒಬ್ಬ ಎಡಿಟರ್ 55 ಲಕ್ಷ ರೂ ಪಡೆಯುವ ಪದ್ಧತಿಗೆ ಕರಣ್ ಆಶ್ಚರ್ಯವನ್ನೂ ಹೊರಹಾಕಿದ್ದಾರೆ.

ಕರಣ್ ಜೋಹರ್ ತಮ್ಮ ಬ್ಯಾನರ್​ನಲ್ಲಿ ಹಲವು ಸ್ಟಾರ್-ಕಿಡ್​ಗಳನ್ನು ಬಾಲಿವುಡ್​ಗೆ ಪರಿಚಯಿಸಿದ್ದಾರೆ. 2012 ರಲ್ಲಿ ಆಲಿಯಾ ಭಟ್, 2019 ರಲ್ಲಿ ಅನನ್ಯಾ ಪಾಂಡೆ ಮತ್ತು 2018 ರಲ್ಲಿ ಜಾನ್ವಿ ಕಪೂರ್ ಸೇರಿದಂತೆ ಹಲವರು ಕರಣ್ ಜೋಹರ್ ನಿರ್ಮಾಣ ಸಂಸ್ಥೆಯ ಮೂಲಕವೇ ಪದಾರ್ಪಣೆ ಮಾಡಿದವರು. ಸಂಜಯ್ ಕಪೂರ್ ಅವರ ಮಗಳು ಶನಾಯಾ ಕಪೂರ್ ಅವರನ್ನೂ ಬಾಲಿವುಡ್​ಗೆ ಪರಿಚಯಿಸಲು ಪ್ರಸ್ತುತ ಕರಣ್ ಸಿದ್ಧತೆ ನಡೆಸಿದ್ದಾರೆ. ಉಳಿದಂತೆ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿರುವ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದ ಮೂಲಕ ಕರಣ್ ಜೋಹರ್ ನಿರ್ದೇಶನಕ್ಕೆ ಮರಳಲಿದ್ದಾರೆ.

ಇದನ್ನೂ ಓದಿ:

Shiva Rajkumar: ಶಿವಣ್ಣ ಹೃದಯವಂತಿಕೆಗಿಲ್ಲ ಸರಿಸಾಟಿ; ಮಕ್ಕಳೊಂದಿಗೆ ಖೋ ಖೋ ಆಡುತ್ತಿರುವ ಅಪರೂಪದ ವಿಡಿಯೋ ಇಲ್ಲಿದೆ

ಸಿದ್ದಾರ್ಥ್​ ಮಲ್ಹೋತ್ರಾ- ಕಿಯಾರಾ ಅಡ್ವಾಣಿ ಪ್ರೇಮಕ್ಕೆ ಸಿಕ್ತು ಮತ್ತೊಂದು ಸಾಕ್ಷ್ಯ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ