ವಾಹನ ದಾಖಲೆಗಳ ನವೀಕರಣಕ್ಕೆ ಸೆ. 30ರ ತನಕ ಗಡುವು ವಿಸ್ತರಿಸಿದ ಸರ್ಕಾರ

ದೇಶಾದ್ಯಂತ ಕೊವಿಡ್-19 ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ನಿಯಮ ಜಾರಿಗೊಳಿಸುವ ಎಲ್ಲ ಪ್ರಾಧಿಕಾರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.

ವಾಹನ ದಾಖಲೆಗಳ ನವೀಕರಣಕ್ಕೆ ಸೆ. 30ರ ತನಕ ಗಡುವು ವಿಸ್ತರಿಸಿದ ಸರ್ಕಾರ
ಸಂಗ್ರಹ ಚಿತ್ರ
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 17, 2021 | 6:53 PM

ದೆಹಲಿ: ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್), ನೋಂದಣಿ ಪ್ರಮಾಣಪತ್ರ (ರಿಜಿಸ್ಟ್ರೇಷನ್ ಸರ್ಟಿವಿಫಿಕೇಟ್) ಮತ್ತು ರಹದಾರಿ (ಪರ್ಮಿಟ್​) ದಾಖಲೆಗಳ ಗಡುವನ್ನು ಕೇಂದ್ರ ಸರ್ಕಾರವು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿ ಗುರುವಾರ ಆದೇಶ ಹೊರಡಿಸಿದೆ. ದೇಶಾದ್ಯಂತ ಕೊವಿಡ್-19 ವ್ಯಾಪಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ನಿಯಮ ಜಾರಿಗೊಳಿಸುವ ಎಲ್ಲ ಪ್ರಾಧಿಕಾರಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಫಿಟ್​ನೆಸ್​ ಪ್ರಮಾಣಪತ್ರವೂ ಸೇರಿದಂತೆ ವಾಹನಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳ ಮಾನ್ಯತೆ ಸೆಪ್ಟೆಂಬರ್ 30ರವರೆಗೆ ಊರ್ಜಿತದಲ್ಲಿರುತ್ತದೆ ಎಂದು ಕೇಂದ್ರ ಸಾರಿಗೆ ಇಲಾಖೆ ಹೇಳಿದೆ.

ಫೆಬ್ರುವರಿ 1ರಿಂದ ಸೆಪ್ಟೆಂಬರ್ 30ಎ ನಡುವಣ ಅವಧಿಯಲ್ಲಿ ಗಡುವು ಮುಕ್ತಾಯವಾಗಲಿರುವ ಎಲ್ಲ ದಾಖಲೆಗಳಿಗೂ ಇದು ಅನ್ವಯಿಸುತ್ತದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಸಾರಿಗೆ ಸಂಬಂಧಿತ ಸೇವೆಗಳನ್ನು ಪಡೆದುಕೊಳ್ಳಲು ಇದರಿಂದ ಸುಲಭವಾಗಲಿದೆ ಎಂದು ಕೇಂದ್ರ ಸಾರಿಗೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಸೂಚನೆಯನ್ನು ಅದರ ನಿಜವಾದ ಆಶಯಗಳಿಗೆ ಅನುಗುಣವಾಗಿ ಪಾಲಿಸಬೇಕು. ಈ ಸಂಕಷ್ಟ ಸಮಯದಲ್ಲಿ ಕೆಲಸ ಮಾಡುತ್ತಿರುವ ಸರಕು ಸಾಗಣೆದಾರರು ಮತ್ತು ಇತರ ಸಂಸ್ಥೆಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ಕೇಂದ್ರ ಹೇಳಿದೆ.

ಮೋಟಾರು ವಾಹನಗಳ ಕಾಯ್ದೆ (1988) ಮತ್ತು ಕೇಂದ್ರ ಮೋಟಾರು ವಾಹನಗಳ ನಿಯಮಗಳ (1989) ಅನ್ವಯ ದಾಖಲೆಗಳ ಮಾನ್ಯತೆ ವಿಸ್ತರಣೆಯ ಆದೇಶವನ್ನು 2020ರ ಮಾರ್ಚ್ 30, ಜೂನ್ 9, ಆಗಸ್ಟ್ 24, ಡಿಸೆಂಬರ್ 27 ಮತ್ತು 2021ರ ಮಾರ್ಚ್ 26ರಂದು ಕೇಂದ್ರ ಸರ್ಕಾರವು ಹೊರಡಿಸಿತ್ತು.

(Govt of India extends validity of Most of the motor vehicle documents till Sept 30)

ಇದನ್ನೂ ಓದಿ: ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರದ ಫಾರ್ಮಾಟನ್ನು ಜಾರಿಮಾಡಿರುವ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರು ತಿಳಿಯಬೇಕಿರುವ ಅಂಶಗಳು

ಇದನ್ನೂ ಓದಿ: Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada