ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರದ ಫಾರ್ಮಾಟನ್ನು ಜಾರಿಮಾಡಿರುವ ಹಿನ್ನೆಲೆಯಲ್ಲಿ ವಾಹನಗಳ ಮಾಲೀಕರು ತಿಳಿಯಬೇಕಿರುವ ಅಂಶಗಳು
ಮೊದಲ ಬಾರಿಗೆ ತಿರಸ್ಕೃತ ಚೀಟಿಯ (ರಿಜೆಕ್ಷನ್ ಸ್ಲಿಪ್) ಪರಿಕಲ್ಪನೆಯನ್ನು ಸಹ ಪರಿಚಯಿಸಲಾಗುತ್ತಿದೆ. ಮಾಲಿನ್ಯ ಪರೀಕ್ಷೆ ನಡೆದಾಗ ಅದರ ರಿಸಲ್ಟ್ ಸಂಬಂಧಿತ ಹೊಗೆಯುಗುಳುವ ಪರಿಮಾಣದ ಗರಿಷ್ಠ ಅಂಗೀಕಾರ್ಹ ಮಟ್ಟಕ್ಕಿಂತ ಜಾಸ್ತಿಯಿದ್ದರೆ ರಿಜೆಕ್ಷನ್ ಸ್ಲಿಪ್ ಅನ್ನು ಆ ವಾಹನದ ಮಾಲೀಕನಿಗೆ ನೀಡಲಾಗುತ್ತದೆ.
ಕೇಂದ್ರೀಯ ಮೋಟಾರು ವಾಹನಗಳ ಕಾಯ್ದೆ 1989ರ ಅಡಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ದೇಶದಾದ್ಯಂತ ಪಿಯುಸಿ (ಪೊಲ್ಯುಷನ್ ಅಂಡರ್ ಕಂಟ್ರೋಲ್, ಮಾಲಿನ್ಯ ನಿಯಂತ್ರಣದಲ್ಲಿದೆ) ಪ್ರಮಾಣ ಪತ್ರವನ್ನು ನೀಡಲು ಒಂದು ಕಾಮನ್ ಫಾರ್ಮಾಟ್ಗಾಗಿ ಜೂನ್ 14, 2021 ರಂದು ನೋಟಿಫಿಕೇಷನ್ವೊಂದನ್ನು ಹೊರಡಿಸಿದೆ. ಈ ಪಿಯುಸಿಸಿಯ ಪ್ರಮುಖ ಅಂಶಗಳು ಕೆಳಗಿನಂತಿವೆ.
ಎ. ಸಮಾನ ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ (ಪಿಯುಸಿಸಿ) ಫಾರ್ಮಾಟ್ ಅನ್ನು ಈಗ ಪರಿಚಯಿಸಲಾಗುತ್ತಿದೆ ಮತ್ತು ಪಿಯುಸಿ ಡಾಟಾಬೇಸ್ ರಾಷ್ಟ್ರೀಯ ರಿಜಿಸ್ಟರ್ನೊಂದಿಗೆ ಲಿಂಕ್ ಮಾಡಲಾಗುತ್ತದೆ.
ಬಿ. ಮೊದಲ ಬಾರಿಗೆ ತಿರಸ್ಕೃತ ಚೀಟಿಯ (ರಿಜೆಕ್ಷನ್ ಸ್ಲಿಪ್) ಪರಿಕಲ್ಪನೆಯನ್ನು ಸಹ ಪರಿಚಯಿಸಲಾಗುತ್ತಿದೆ. ಮಾಲಿನ್ಯ ಪರೀಕ್ಷೆ ನಡೆದಾಗ ಅದರ ರಿಸಲ್ಟ್ ಸಂಬಂಧಿತ ಹೊಗೆಯುಗುಳುವ ಪರಿಮಾಣದ ಗರಿಷ್ಠ ಅಂಗೀಕಾರ್ಹ ಮಟ್ಟಕ್ಕಿಂತ ಜಾಸ್ತಿಯಿದ್ದರೆ ರಿಜೆಕ್ಷನ್ ಸ್ಲಿಪ್ ಅನ್ನು ಆ ವಾಹನದ ಮಾಲೀಕನಿಗೆ ನೀಡಲಾಗುತ್ತದೆ. ಸದರಿ ಚೀಟಿಯನ್ನು, ಪಿಯುಸಿ ಸೆಂಟರ್ ಸರಿಯಾಗಿ ಕೆಲಸ ಮಾಡದ ಸ್ಥಿತಿಯಲ್ಲಿಲ್ಲದಿದ್ದರೆ ವಾಹನದ ಸರ್ವಿಸಿಂಗ್ ಮಾಡಿಸಲು ಸರ್ವಿಸ್ ಸ್ಟೇಶನ್ಗೆ ತೆಗೆದುಕೊಂಡು ಹೋಗಿ ತೋರಿಸಬಹುದಾಗಿದೆ.
ಸಿ. ಈ ಸಂದರ್ಭದಲ್ಲ ಕೆಲ ಮಾಹಿತಿಗಳನ್ನು ಗೌಪ್ಯವಾಗಿಡಬೇಕಾಗುತ್ತದೆ, ಅವು ಯಾವೆಂದರೆ (1) ವಾಹನ ಮಾಲೀಕನ ಮೊಬೈಲ್ ನಂಬರ್ ಮತ್ತು ವಿಳಾಸ, (2) ವಾಹನದ ಎಂಜಿನ್ ಮತ್ತು ಛಾಸಿಸ್ ನಂಬರ್ ( ಕೊನೆಯ ನಾಲ್ಕು ಅಂಕೆಗಳು ಕಾಣುವಂತಿದ್ದರೆ ಸಾಕು, ಉಳಿದ ಅಂಕೆಗಳನ್ನು ಮರೆ ಮಾಡಬಹುದಾಗಿದೆ)
ಡಿ. ವಾಹನ ಮಾಲೀಕನ ಮೊಬೈಲ್ ನಂಬರನ್ನು ಕಡ್ಡಾಯ ಮಾಡಲಾಗಿದೆ, ಅದೇ ನಂಬರಿಗೆ ಪುರಾವೆ ಮತ್ತು ಫೀ ಕುರಿತು ಎಸ್ಎಮ್ಎಸ್ ಅಲರ್ಟ್ ಕಳಿಸಲಾಗುತ್ತದೆ.
ಈ. ಮೋಟಾರು ವಾಹನವೊಂದು ಮಾಲಿನ್ಯ ಪರಿಮಾಣಗಳಿಗೆ ಹೊಂದಿಕೆಯಾಗುತ್ತಿಲ್ಲವೆನ್ನುವ ಅಂಶ ಒಂದು ಪಕ್ಷ ಮಾಲಿನ್ಯ ನಿಯಂತ್ರಣ ಅಧಿಕಾರಿ ಗಮನಕ್ಕೆ ಬಂದರೆ ಅದನ್ನು ಅವನು ಲಿಖಿತ ರೂಪದಲ್ಲಿ ಇಲ್ಲವೇ ವಿದ್ಯುನ್ಮಾನ ಮಾಧ್ಯಮದ ಮೂಲಕ ವಾಹನದ ಚಾಲಕ ಅಥವಾ ಮಾಲೀಕನಿಗೆ ವಾಹನವನ್ನು ಪರೀಕ್ಷೆ ಮಾಡಿಸಲು ಯಾವುದಾದರೂ ಪೊಲ್ಯೂಷನ್ ಅಂಡರ್ ಕಂಟ್ರೋಲ್ (ಪಿಯುಸಿ) ಸೆಂಟರ್ಗೆ ತೆಗೆದುಕೊಂಡು ಹೋಗಬೇಕೆಂದು ಸೂಚಿಸುತ್ತಾನೆ. ಒಂದು ವೇಳೆ ವಾಹನದ ಚಾಲಕ ಇಲ್ಲವೇ ಮಾಲೀಕ ಸದರಿ ವಾಹನವನ್ನು ಪಿಯುಸಿ ಸೆಂಟರ್ಗೆ ತೆಗೆದುಕೊಂಡು ಹೋಗದಿದ್ದರೆ ಅಥವಾ ಅದನ್ನು ನಿಗದಿತ ಮಾಲಿನ್ಯದ ಪರಿಮಾಣಗಳಿಗೆ ಹೊಂದಿಕೊಳ್ಳುವಂಥ ಏರ್ಪಾಟು ಮಾಡಿಕೊಳ್ಳದಿದ್ದರೆ ಅದರ ಮಾಲೀಕ ದಂಡ ತೆರಬೇಕಾಗುತ್ತದೆ
ಎಫ್. ಹಾಗೆಯೇ, ಒಂದು ವೇಳೆ ಈ ನಿಯಮಕ್ಕೆ ಮಾಲೀಕ್ ಸಹಕರಿಸದಿದ್ದರೆ. ನೋಂದಣಿ ಪ್ರಾಧಿಕಾರವು, ಕಾರಣಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿ, ವಾಹನದ ನೋಂದಣಿ ಪ್ರಮಾಣ ಪತ್ರ (ಸರ್ಟಿಫಿಕೇಟ್ ಆಫ್ ರಿಜಿಸ್ಟ್ರೇಷನ್) ಮತ್ತು ಸದರಿ ವಾಹನಕ್ಕೆ ಯಾವುದಾದರೂ ಪರ್ಮಿಟ್ ಲಭ್ಯವಾಗಿದ್ದರೆ; ಪೊಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್ ಪಡೆಯುವರೆಗೆ ಸಸ್ಪೆಂಡ್ ಮಾಡಬಹುದಾಗಿದೆ
ಜಿ. ಹೀಗೆ ಮಾಲಿನ್ಯ ಹೆಚ್ಚಿಸುವ ವಾಹನಗಳನ್ನು ನಿಯಂತ್ರಣದಲ್ಲಿಡಲು ಪ್ರಾಧಿಕಾರವು ಮಾಹಿತಿ ತಂತ್ರಜ್ಞಾನದ ಉಪಕರಣಗಳ ನೆರವಿನೊಂದಿಗೆ ಕೆಲಸ ಮಾಡುತ್ತದೆ.
ಜಿ. ಫಾರಂ ಮೇಲೆ ಕ್ಯೂಆರ್ ಕೋಡನ್ನು ಮುದ್ರಿಸಲಾಗಿರುತ್ತದೆ. ಅದು ಪಿಯುಸಿ ಸೆಂಟರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುತ್ತದೆ.