ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಬದಲಿಸಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ದೆಹಲಿ ಸರ್ಕಾರ

TV9 Digital Desk

| Edited By: Rashmi Kallakatta

Updated on: Feb 20, 2022 | 4:08 PM

ದೆಹಲಿ ಸರ್ಕಾರದ ಸಚಿವರು ಮತ್ತು ಉನ್ನತ ಅಧಿಕಾರಿಗಳು ಬಳಸಲು ಸಾಮಾನ್ಯ ಆಡಳಿತ ಇಲಾಖೆ (GAD) ಇತ್ತೀಚೆಗೆ 12 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ.

ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳನ್ನು ಬದಲಿಸಿ ಎಲೆಕ್ಟ್ರಿಕ್ ವಾಹನಗಳನ್ನು ಹೊಂದಲಿದೆ ದೆಹಲಿ ಸರ್ಕಾರ
ಪ್ರಾತಿನಿಧಿಕ ಚಿತ್ರ

ದೆಹಲಿ: ವಾಯು ಮಾಲಿನ್ಯದ (Air  Pollution) ವಿರುದ್ಧ ಹೋರಾಡಲು ಒತ್ತು ನೀಡುವ ಮೂಲಕ ದೆಹಲಿ ಸರ್ಕಾರವು ತನ್ನ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ರದ್ದುಪಡಿಸಲು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಪ್ರಾರಂಭಿಸಿದೆ. ದೆಹಲಿ  (Delhi) ಸರ್ಕಾರದ ಸಚಿವರು ಮತ್ತು ಉನ್ನತ ಅಧಿಕಾರಿಗಳು ಬಳಸಲು ಸಾಮಾನ್ಯ ಆಡಳಿತ ಇಲಾಖೆ (GAD) ಇತ್ತೀಚೆಗೆ 12 ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದೆ. ಜೀವಿತಾವಧಿಯನ್ನು ಪೂರ್ಣಗೊಳಿಸಿದ ವಾಹನಗಳನ್ನು ಗುಜರಿಗೆ ಹಾಕಲು ಗುರುತಿಸಿ ಕಳುಹಿಸುವ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದ್ದೇವೆ ಎಂದು ಜಿಎಡಿ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಆದೇಶದ ಪ್ರಕಾರ, ದೆಹಲಿಯಲ್ಲಿ ಕ್ರಮವಾಗಿ 10 ವರ್ಷ ಮತ್ತು 15 ವರ್ಷಗಳಿಗಿಂತ ಹಳೆಯದಾದ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಬಳಕೆಯನ್ನು ನಿಷೇಧಿಸಲಾಗಿದೆ. ಆಗಸ್ಟ್ 2020 ರಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಪ್ರಾರಂಭಿಸಿದ ನಂತರ ದೆಹಲಿ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳು ತಮ್ಮ ಫ್ಲೀಟ್‌ಗಳಲ್ಲಿ ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿವೆ.  ಸಾಂಪ್ರದಾಯಿಕ ವಾಹನಗಳಿಗೆ ಹೋಲಿಸಿದರೆ ವಿದ್ಯುತ್ ವಾಹನಗಳ ತುಲನಾತ್ಮಕವಾಗಿ ಹೆಚ್ಚಿನ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಕೇಸ್-ಟು-ಕೇಸ್ ಆಧಾರದ ಮೇಲೆ ಇದನ್ನು ಮಾಡಲಾಗುತ್ತಿದೆ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ, ದೆಹಲಿ ಸರ್ಕಾರವು ತನ್ನ ಎಲ್ಲಾ ಇಲಾಖೆಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ತಮ್ಮ ಫ್ಲೀಟ್‌ಗಳಿಗೆ ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ಬಾಡಿಗೆಗೆ ಅಥವಾ ಖರೀದಿಸಲು ನಿರ್ದೇಶಿಸಿತ್ತು. “ದೆಹಲಿ ಸರ್ಕಾರದ ಎಲ್ಲಾ ಇಲಾಖೆಗಳು ಈಗ ಕೇವಲ ಎಲೆಕ್ಟ್ರಿಕ್ ವಾಹನಗಳನ್ನು ಬಳಸುತ್ತವೆ. 2,000 ಕ್ಕೂ ಹೆಚ್ಚು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳೊಂದಿಗೆ ಬದಲಾಯಿಸಲಾಗುವುದು” ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಜಿಎಡಿಯು ದೆಹಲಿ ಸೆಕ್ರೆಟರಿಯೇಟ್‌ನ ಸಮೀಪದಲ್ಲಿ ನಿಲುಗಡೆ ಮಾಡಲಾದ 0001 ನಂತಹ VIP ಸರಣಿಯ ನೋಂದಣಿ ಸಂಖ್ಯೆಗಳೊಂದಿಗೆ ಹಲವಾರು ಹಳೆಯ ವಾಹನಗಳನ್ನು ಬದಲಾಯಿಸುವ ಕೆಲಸ ಮಾಡುತ್ತಿದೆ. “ಈ ವಾಹನಗಳನ್ನು ರದ್ದುಗೊಳಿಸಲಾಗಿದ್ದರೂ, ಇಲಾಖೆಯಿಂದ ಖರೀದಿಸಬೇಕಾದ ಹೊಸ ವಾಹನಗಳ ನೋಂದಣಿಗಾಗಿ ಅವುಗಳ ವಿಐಪಿ ನೋಂದಣಿ ಸಂಖ್ಯೆಗಳನ್ನು ಉಳಿಸಿಕೊಳ್ಳಲಾಗುತ್ತದೆ” ಎಂದು ಅಧಿಕಾರಿ ಹೇಳಿದರು.

ದೆಹಲಿಯ ಎಲೆಕ್ಟ್ರಿಕ್ ವೆಹಿಕಲ್ ಪಾಲಿಸಿಯ ಅಡಿಯಲ್ಲಿ, 12 ನಾಲ್ಕು-ಚಕ್ರ ವಾಹನ ಮಾದರಿಗಳು ಲಭ್ಯವಿವೆ.

ಇದನ್ನೂ ಓದಿ: ಪರಿಷತ್ ಚುನಾವಣೆಗೆ ಇಬ್ಬರ ಹೆಸರು ದೆಹಲಿಗೆ ರವಾನೆ; ಜೆಡಿಎಸ್ಗೆ ಹೊಡೆತ, ಸಭಾಪತಿ ಬಸವರಾಜ ಹೊರಟ್ಟಿ ಬಿಜೆಪಿ ಸೇರುವ ಸಾಧ್ಯತೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada