ದೆಹಲಿಯ ಮನೆಯಲ್ಲಿ 3 ಕೆಜಿ ಸ್ಫೋಟಕ ಪತ್ತೆ ಪ್ರಕರಣ; ನಕಲಿ ದಾಖಲೆಗಳನ್ನು ನೀಡಿ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು

TV9 Digital Desk

| Edited By: Sushma Chakre

Updated on: Feb 18, 2022 | 2:45 PM

ದೆಹಲಿ ಪೊಲೀಸ್ ತಂಡ ಈಗಾಗಲೇ ಶಂಕಿತರನ್ನು ಪತ್ತೆಹಚ್ಚಿದೆ ಮತ್ತು ಅವರ ಭಾವಚಿತ್ರಗಳನ್ನು ಸಹ ಪಡೆದುಕೊಂಡಿದೆ. ಈ ಯುವಕರು ಎಲ್ಲಿಂದ ಬಂದವರು ಎಂಬುದು ಇನ್ನೂ ತಿಳಿದುಬಂದಿಲ್ಲ. ಅವರು ಸ್ಲೀಪರ್ ಸೆಲ್‌ನ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ದೆಹಲಿಯ ಮನೆಯಲ್ಲಿ 3 ಕೆಜಿ ಸ್ಫೋಟಕ ಪತ್ತೆ ಪ್ರಕರಣ; ನಕಲಿ ದಾಖಲೆಗಳನ್ನು ನೀಡಿ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯ ಹಳೆಯ ಸೀಮಾಪುರಿಯಲ್ಲಿನ ಮನೆಯೊಂದರಲ್ಲಿ ಗುರುವಾರ ಬ್ಯಾಗ್‌ನೊಳಗೆ 3 ಕೆಜಿ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದರು. ಈ ಕುರಿತು ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಆ ಮನೆಯ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಆ ಮನೆಯಲ್ಲಿದ್ದ ಸ್ಫೋಟಕ ವಸ್ತುಗಳನ್ನು ನಿಷ್ಕ್ರಿಯಗೊಳಿಸಲಾಯಿತು. ಪೊಲೀಸ್ ಮೂಲಗಳ ಪ್ರಕಾರ, ಆ ಮನೆಯಲ್ಲಿ ಬಾಡಿಗೆಗಿದ್ದ ಮೂವರು ಯುವಕರು ನಕಲಿ ದಾಖಲೆಗಳನ್ನು ಬಳಸಿ ದೆಹಲಿಯ ಆ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಹಾಗೇ, ಆ ಜಾಗದ ಮಾಲೀಕರು ಆರೋಪಿಗಳಿಗೆ ತನ್ನ ಮನೆಯನ್ನು ಬಾಡಿಗೆಗೆ ನೀಡುವ ಮೊದಲು ಪೊಲೀಸ್ ಪರಿಶೀಲನೆಯನ್ನು ನಡೆಸಿರಲಿಲ್ಲ.

ಅಪಾರ್ಟ್‌ಮೆಂಟ್‌ನ ಮಾಲೀಕ ಖಾಸಿಂ ಎಂಬಾತ ತನ್ನ ಕಟ್ಟಡದ ಎರಡನೇ ಮಹಡಿಯಲ್ಲಿರುವ ಅಪಾರ್ಟ್‌ಮೆಂಟ್ ಅನ್ನು ಶಕೀಲ್ ಎಂಬ ಪ್ರಾಪರ್ಟಿ ಡೀಲರ್ ಮೂಲಕ ಬಾಡಿಗೆಗೆ ನೀಡಿದ್ದರು. ಅದನ್ನು ಒಬ್ಬ ವ್ಯಕ್ತಿ ತೆಗೆದುಕೊಂಡಿದ್ದ. ಆದರೆ ಇನ್ನೂ ಮೂರು ಯುವಕರು 10 ದಿನಗಳ ಹಿಂದೆ ಅಲ್ಲಿಗೆ ಬಂದಿದ್ದರು. ಅವರೇ ಬ್ಯಾಗ್​ನಲ್ಲಿ ಸ್ಫೋಟಕಗಳನ್ನು ಇಟ್ಟಿರುವ ಸಾಧ್ಯತೆಗಳು ಹೆಚ್ಚಾಗಿವೆ. ಪೊಲೀಸರು ಅಲ್ಲಿಗೆ ತಲುಪುವಷ್ಟರಲ್ಲಿ ಅವರೆಲ್ಲರೂ ಪರಾರಿಯಾಗಿದ್ದರು.

ದೆಹಲಿ ವಿಶೇಷ ಪೊಲೀಸ್ ತಂಡ ಈಗಾಗಲೇ ಶಂಕಿತರನ್ನು ಪತ್ತೆಹಚ್ಚಿದೆ ಮತ್ತು ಅವರ ಭಾವಚಿತ್ರಗಳನ್ನು ಸಹ ಪಡೆದುಕೊಂಡಿದೆ. ಈ ಯುವಕರು ಎಲ್ಲಿಂದ ಬಂದವರು ಎಂಬುದು ಇನ್ನೂ ತಿಳಿದುಬಂದಿಲ್ಲ. ಅವರು ಸ್ಲೀಪರ್ ಸೆಲ್‌ನ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕಳೆದ ತಿಂಗಳು ಗಣರಾಜ್ಯೋತ್ಸವದ ಮೊದಲು ಗಾಜಿಪುರದ ಹೂವಿನ ಮಾರುಕಟ್ಟೆಯಿಂದ ಚೇತರಿಸಿಕೊಂಡ ಸ್ಫೋಟದೊಂದಿಗೆ ಈ ಸ್ಫೋಟಕ ಸಾಮ್ಯತೆ ಹೊಂದಿದ್ದು, ಈ ಎರಡೂ ಪ್ರಕರಣಗಳು ಒಂದೇ ವ್ಯಕ್ತಿಗೆ ಸಂಬಂಧಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೇ, ಜನವರಿ 29ರಂದು ಹಿಮಾಚಲ ಪ್ರದೇಶದ ಕುಲುವಿನಲ್ಲಿ ಕಾರ್ ಪಾರ್ಕಿಂಗ್‌ನಲ್ಲಿ ಸಂಭವಿಸಿದ ಬೃಹತ್ ಬಾಂಬ್ ಸ್ಫೋಟಕ್ಕೂ ಈ ಪ್ರಕರಣವು ಸಂಬಂಧಿಸಿದೆ ಎಂದು ಶಂಕಿಸಲಾಗಿದೆ.

ದೆಹಲಿಯ ಸೀಮಾಪುರಿಯಲ್ಲಿರುವ ಮನೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಆ ಬ್ಯಾಗ್​ ಪರಿಶೀಲಿಸಿದಾಗ ಅದರೊಳಗೆ ಐಇಡಿ (ಸ್ಫೋಟಕ) ಇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾಂಬ್ ಸ್ಕ್ವಾಡ್ ಮತ್ತು ಅಗ್ನಿಶಾಮಕ ದಳದ ತಂಡಗಳು ಧಾವಿಸಿ, ರಾಷ್ಟ್ರೀಯ ಭದ್ರತಾ ದಳವು (ಎನ್​ಎಸ್​ಜಿ) ಆ ಮನೆಯ ಮೇಲೆ ದಾಳಿ ನಡೆಸಿ, ಬಾಂಬ್ ನಿಷ್ಕ್ರಿಯಗೊಳಿಸಿತ್ತು.

ಇದನ್ನೂ ಓದಿ: ಅಹಮದಾಬಾದ್‌ ಸರಣಿ ಬಾಂಬ್‌ ಸ್ಫೋಟ ಪ್ರಕರಣ; 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ

ದೆಹಲಿಯ ಮನೆಯೊಂದರಲ್ಲಿ ಸ್ಫೋಟಕವಿರುವ ಬ್ಯಾಗ್ ಪತ್ತೆ; ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada