BJP Office Attacked: ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​

Tamil Nadu BJP Office Attacked: ತಮಿಳುನಾಡಿನಲ್ಲಿ ಬಿಜೆಪಿ ಕಚೇರಿ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್​ ದಾಳಿ ನಡೆಸಿದ್ದಾರೆ. ಇಂದು ಗುರುವಾರ ಬೆಳಗಿನ ಜಾವ 1 ಗಂಟೆಯಲ್ಲಿ ಈ ದಾಳಿ ನಡೆದಿದೆ.

BJP Office Attacked: ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​
ತಮಿಳುನಾಡಿನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 10, 2022 | 7:38 AM

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಪ್ರಧಾನ ಕಚೇರಿಯ ಮೇಲೆ ಅಪರಿಚಿತರು ಪೆಟ್ರೋಲ್ ಬಾಂಬ್​ ದಾಳಿ ನಡೆಸಿದ್ದಾರೆ. ಇಂದು ಗುರುವಾರ ಬೆಳಗಿನ ಜಾವ ಭಾರತೀಯ ಜನತಾ ಪಕ್ಷದ ಕಚೇರಿ ಮೇಲೆ ಈ ದಾಳಿ ನಡೆದಿದೆ. ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ಕಮಲಾಲಯಂ (Kamalalayam) ಮೇಲೆ ಈ ದಾಳಿ ನಡೆದಿದೆ. ಟಿ. ನಗರ್​ ಏರಿಯಾದಲ್ಲಿ (T Nagar) ಈ ಬಿಜೆಪಿ ಕಚೇರಿಯಿದ್ದು, ಘಟನೆಯು ಮುಖ್ಯಮಂತ್ರಿ ಸ್ಟ್ಯಾಲಿನ್​ ಅಧಿಕೃತ ಕಚೇರಿಯಿಂದ 2 ಕಿಮೀ ದೂರದಲ್ಲಿದೆ. ANI ಸುದ್ದಿ ಸಂಸ್ಥೆ ಈ ಕುರಿತು ಟ್ವೀಟ್​ ಮಾಡಿದೆ.

15 ವರ್ಷಗಳ ಹಿಂದೆಯೂ ಡಿಎಂಕೆ ಆಡಳಿತದಲ್ಲಿದ್ದಾಗ ಇಂತಹುದೇ ಘಟನೆ ನಡೆದಿತ್ತು: ಮಧ್ಯರಾತ್ರಿ 1.30 ರ ವೇಳೆ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ ನಡೆದಿದೆ. 15 ವರ್ಷಗಳ ಹಿಂದೆ ಇದೇ ಡಿಎಂಕೆ ಪಕ್ಷ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಇದೇ ಕಮಲಾಲಯಂ ಕಚೇರಿ ಮೇಲೆ ಇಂತಹುದೇ ದಾಳಿ ನಡೆದಿತ್ತು. ಈ ಘಟನೆಯ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರವನ್ನು ನಾವು ಖಂಡಿಸುತ್ತೇವೆ. ಬಿಜೆಪಿ ಕಾರ್ಯಕರ್ತರು ಇಂತಹ ಘಟನೆಗಳಿಂದ ಎದೆಗುಂದುವುದಿಲ್ಲ. ಪೊಲೀಸರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ ಎಂದು ಬಿಜೆಪಿ ನಾಯಕ ಕರಾಟೆ ತ್ಯಾಗರಾಜನ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮುಂಬೈ ಗೊರೆಗಾವ್​​ನಲ್ಲಿ ಕಾರಿನಲ್ಲಿ ಯುವತಿಯ ಶವ ಪತ್ತೆ: ಮುಂಬೈ: ಗೊರೆಗಾವ್​​ನ ನಿರ್ಜನ ಪ್ರದೇಶದಲ್ಲಿ ಕಾರೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ಪೊಲೀಸರು (Mumbai Goregaon Police Station) ಸ್ಥಳಕ್ಕೆ ಹಾಜರಾಗಿದ್ದು, ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಗೊರೆಗಾವ್​​ನಲ್ಲಿರುವ ರಾಮ ಮಂದಿರ ಸಮೀಪ ರಸ್ತೆಯಲ್ಲಿ ಕಾರು ಪತ್ತೆಯಾಗಿದ್ದು, ಅದರಲ್ಲಿ ಗುರುತು ಸಿಗಲಾರದಷ್ಟು ಕೊಳೆತುಹೋಗಿರುವ ಸ್ಥಿತಿಯಲ್ಲಿ ಈ ಯುವತಿಯ ಶವ ಪತ್ತೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಅಪ್ಪನ ಜೋತೆ ಪತಿ ಸೇರಿ ಪತ್ನಿಯ ಕೊಲೆ: ಹತ್ಯೆಗೂ ಮುನ್ನ ಬೇಗ ಬನ್ನಿ ಎಂದು ತಾಯಿಗೆ ಕರೆ ಮಾಡಿದ್ದ ಮೃತ ರೇಖಾ

ಇದನ್ನೂ ಓದಿ: Human Age: ಅರವತ್ತಕ್ಕೆ ಅರಳು ಮರಳು ಎನ್ನುವುದು ಏಕೆ? ಏನಿದು 60ರ ಲೆಕ್ಕಾಚಾರ?

Published On - 6:43 am, Thu, 10 February 22

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್