AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Petrol Diesel Rate Today: ನಿಮ್ಮೂರಿನಲ್ಲಿ ಲೀಟರ್​ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?

Petrol Diesel Price Today, 10-02-2022: ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡುತ್ತವೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ನಿರ್ಧರಿಸಲಾಗುತ್ತದೆ.

Petrol Diesel Rate Today: ನಿಮ್ಮೂರಿನಲ್ಲಿ ಲೀಟರ್​ ಪೆಟ್ರೋಲ್​, ಡೀಸೆಲ್​ ಬೆಲೆ ಎಷ್ಟಿದೆ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Feb 10, 2022 | 7:53 AM

Petrol Diesel Price Today|ದೆಹಲಿ: ಭಾರತದ ತೈಲ ಕಂಪನಿಗಳು ಇಂದು ಬೆಳಗ್ಗೆ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡಿದ್ದು, ಇಂದು(ಫೆಬ್ರವರಿ 10, ಗುರುವಾರ) ಕೂಡ ಇಂಧನಗಳ ದರದಲ್ಲಿ(Fuel Rate) ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಎರಡೂವರೆ ತಿಂಗಳುಗಳಿಂದಲೂ ತೈಲಗಳ ಬೆಲೆ ಸ್ಥಿರವಾಗಿಯೇ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್​-ಡೀಸೆಲ್​ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್(Petrol price)​ ಪ್ರತಿ ಲೀಟರ್​ಗೆ 95.41 ರೂಪಾಯಿಯೇ ಇದ್ದು, ಡೀಸೆಲ್(Diesel Price)​ ಪ್ರತಿ ಲೀಟರ್​ಗೆ 86.67 ರೂ.ಇದೆ. ತೈಲ ಕಂಪನಿಗಳು ಪ್ರತಿದಿನ ಬೆಳಗ್ಗೆಯೇ ವಿವಿಧ ಪ್ರಮುಖ ನಗರಗಳ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಬಿಡುಗಡೆ ಮಾಡುತ್ತವೆ.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಇರುವ ಬೆಲೆ ಆಧಾರದಲ್ಲಿ ಪೆಟ್ರೋಲ್​-ಡೀಸೆಲ್​ ಬೆಲೆ ನಿರ್ಧರಿಸಲಾಗುತ್ತದೆ.

ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 100.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 85.01 ರೂಪಾಯಿ ದಾಖಲಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 109.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.14 ರೂಪಾಯಿ ಇದೆ. ಅದೇ ರೀತಿ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.40 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 91.53 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 104.67 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡೀಸೆಲ್ ದರ 89.79 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್ನಲ್ಲಿ ಲೀಟರ್ ಪೆಟ್ರೋಲ್ ದರ 108.20 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.62 ರೂಪಾಯಿ ನಿಗದಿಯಾಗಿದೆ. ಗುಜರಾತ್​ನ ಗಾಂಧಿನಗರದಲ್ಲಿ ಲೀಟರ್ ಪೆಟ್ರೋಲ್ ದರ 95.35 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 89.33 ರೂಪಾಯಿ ನಿಗದಿಯಾಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್ಗೆ 106.36 ರೂಪಾಯಿ ಇದ್ದು, ಲೀಟರ್ ಡೀಸೆಲ್ ಬೆಲೆ 93.47 ರೂಪಾಯಿ ನಿಗದಿಯಾಗಿದೆ. ಲಕ್ನೋದಲ್ಲಿ ಲೀಟರ್ ಪೆಟ್ರೋಲ್ ದರ 95.28 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಶ್ರೀಗಂಗಾನಗರದಲ್ಲಿ ಲೀಟರ್ ಪೆಟ್ರೋಲ್​ಗೆ 114.01 ರೂಪಾಯಿ ಹಾಗೂ ಲೀಟರ್ ಡೀಸೆಲ್ಗೆ 98.39 ರೂಪಾಯಿ ದಾಖಲಾಗಿದೆ. ಭೋಪಾಲ್ನಲ್ಲಿ ಲೀಟರ್ ಪೆಟ್ರೋಲ್ ದರ 107.23 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.87 ರೂಪಾಯಿ ಇದೆ. ಗುವಾಹಟಿಯಲ್ಲಿ ಲೀಟರ್ ಪೆಟ್ರೋಲ್ ದರ 94.58 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 86.80 ರೂಪಾಯಿ ನಿಗದಿಯಾಗಿದೆ.

ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ:

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ.

ಇದನ್ನೂ ಓದಿ:

ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html

ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.htm

ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಕಾಲ್ತುಳಿತದಲ್ಲಿ ಮೃತರ ಕುಟುಂಬಗಳಿಗೆ 1 ತಿಂಗಳ ಸಂಬಳ ನೀಡುತ್ತೇವೆ: ಅಶೋಕ್​
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ಹೇಸರಘಟ್ಟದಲ್ಲಿನ ಡ್ರ್ಯಾಗನ್​ ಫ್ರೂಟ್​ ಜಮೀನಿಗೆ ಭೇಟಿ ನೀಡಿದ ಕೇಂದ್ರ ಸಚಿವ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ರೇಣುಕಾ ಸ್ವಾಮಿ ಕೊಲೆಯಾಗಿ ಒಂದು ವರ್ಷ, ಕುಟುಂಬದವರಿಂದ ಪೂಜೆ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
ಆಂಗ್ಲರ ನಾಡಿನಲ್ಲಿ ಸಮರಾಭ್ಯಾಸ ಶುರು ಮಾಡಿದ ಟೀಂ ಇಂಡಿಯಾ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
RCB ಅಂದ್ರೆ ರಿಯಲ್ ಕಲ್ಪ್ರಿಟ್ ಆಫ್ ಬೆಂಗಳೂರು: ಅಶೋಕ್ ಲೇವಡಿ
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ಮಕ್ಕಳಿದ್ದ ಆಟೋ ನ್ಯೂಟ್ರಲ್​ ಮಾಡಿ ಹಿಂದೆ ತಳ್ಳಿ ಬಿಟ್ಟ ಯುವಕ!
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ದರ್ಶನ್ ಸಂಪರ್ಕಿಸುತ್ತಾರೆ ಎಂಬ ನಂಬಿಕೆ ಇಲ್ಲ: ರೇಣುಕಾಸ್ವಾಮಿ ತಂದೆ
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಸಸ್ಪೆಂಡ್ ಆದ ಕಮಿಷನರ್ ದಯಾನಂದ್ ದಕ್ಷತೆ, ಪ್ರಮಾಣಿಕತೆ: ವಿಡಿಯೋ ವೈರಲ್
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಗಾಯಾಳು
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ
ಬೆಂಗಳೂರು ಕಾಲ್ತುಳಿತ: ಅಶೋಕ್ ತುರ್ತು ಸುದ್ದಿಗೋಷ್ಠಿಯ ನೇರಪ್ರಸಾರ