ನಾನು ಜಗತ್ತಿನ ಸ್ವೀಟೆಸ್ಟ್ ಟೆರರಿಸ್ಟ್ ; ಕುಮಾರ್ ವಿಶ್ವಾಸ್ ಆರೋಪ ನಿರಾಕರಿಸಿದ ಕೇಜ್ರಿವಾಲ್

ಎಲ್ಲರೂ ನಮ್ಮ ವಿರುದ್ಧ ಇದ್ದಾರೆ, ಕೇಜ್ರಿವಾಲ್ ಅವರು ದೇಶವನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ ಮತ್ತು ನಾನು ಒಂದು ಭಾಗದ ಪ್ರಧಾನಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಇದರರ್ಥ ನಾನೊಬ್ಬ ದೊಡ್ಡ ಭಯೋತ್ಪಾದಕ. ಅವರ ಭದ್ರತಾ ಏಜೆನ್ಸಿಗಳು ಏನು ಮಾಡುತ್ತಿದ್ದವು?

ನಾನು ಜಗತ್ತಿನ ಸ್ವೀಟೆಸ್ಟ್ ಟೆರರಿಸ್ಟ್ ; ಕುಮಾರ್ ವಿಶ್ವಾಸ್ ಆರೋಪ ನಿರಾಕರಿಸಿದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 18, 2022 | 3:07 PM

ದೆಹಲಿ:  ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಪ್ರತ್ಯೇಕತಾವಾದಿಗಳ ಪರ ಹೇಳಿಕೆ ನೀಡಿ ಎಂಬ ಆರೋಪಗಳ ವಿರುದ್ಧ ಕಿಡಿಕಾರಿದ್ದು, ಅವುಗಳನ್ನು “ಕಾಮಿಡಿ” ಎಂದು ಕರೆದಿದ್ದಾರೆ.  ಟೀಕೆಗಳಿಗೆ ಪ್ರತಿಕ್ರಿಯಿಸಿ ದ ಅವರು  ತಮ್ಮನ್ನು “ವಿಶ್ವದ ಮಧುರವಾದ ಭಯೋತ್ಪಾದಕ” ಎಂದು ಬಣ್ಣಿಸಿದ್ದಾರೆ.  ಎಎಪಿ ಪಕ್ಷದ ಮಾಜಿ ನಾಯಕ ಕುಮಾರ್ ವಿಶ್ವಾಸ್ (Kumar Vishwas) ಅವರು ಕೇಜ್ರಿವಾಲ್ ಪ್ರತ್ಯೇಕ ರಾಜ್ಯದ ಪ್ರಧಾನಿಯಾಗುವ ಬಗ್ಗೆ ಮಾತನಾಡಿದ್ದಾರೆ ಎಂದು ವಿಡಿಯೊ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ (BJP)ಮತ್ತು ಕಾಂಗ್ರೆಸ್‌ ಕೇಜ್ರಿವಾಲ್ ವಿರುದ್ಧ ಟೀಕಾ ಪ್ರಹಾರ ನಡೆಸಿತ್ತು. “ಅವರೆಲ್ಲರೂ ನನ್ನ ವಿರುದ್ಧ ಗುಂಪು ಗುಂಪಾಗಿ ಸೇರಿಕೊಂಡು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಇದು ಹಾಸ್ಯ – ಇದು ನಗುವ ವಿಷಯ. ಹಾಗಿದ್ದಲ್ಲಿ ಪ್ರಧಾನಿ ನರೇಂದ್ರ  ಮೋದಿ-ಜಿ ನನ್ನನ್ನು ಏಕೆ ಬಂಧಿಸುವುದಿಲ್ಲ?” ಕೇಜ್ರಿವಾಲ್ ಕೇಳಿದ್ದಾರೆ.  “ನಾನು ವಿಶ್ವದ ಸಿಹಿ ಭಯೋತ್ಪಾದಕನಾಗಿರಬೇಕು. ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ರಸ್ತೆಗಳು, ನೀರು ಒದಗಿಸುವ ಭಯೋತ್ಪಾದಕ .,” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು. ನಾನು ವಿಶ್ವದ ಸಿಹಿ ಭಯೋತ್ಪಾದಕನಾಗಿರಬೇಕು, ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ರಸ್ತೆಗಳು, ನೀರು ಒದಗಿಸುವ ಭಯೋತ್ಪಾದಕ  ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು. ಕುಮಾರ್ ವಿಶ್ವಾಸ್ ವಿಡಿಯೊ ಬಹಿರಂಗವಾದ ನಂತರ ಗುರುವಾರ, ಪಿಎಂ ಮೋದಿ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಕೇಜ್ರಿವಾಲ್ ಮತ್ತು ಎಎಪಿ ವಿರುದ್ಧ ಕಿಡಿ ಕಾರಿದ್ದಾರೆ . ವಿಡಿಯೊದಲ್ಲಿ, ವಿಶ್ವಾಸ್ ಅವರು “ಒಂದು ದಿನ, ಅವರು ( ಕೇಜ್ರಿವಾಲ್) ಪಂಜಾಬ್ ಸಿಎಂ ಅಥವಾ ಸ್ವತಂತ್ರ ರಾಷ್ಟ್ರ ಖಾಲಿಸ್ತಾನದ ಮೊದಲ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು. ಅವರು ಯಾವುದೇ ಬೆಲೆ ತೆತ್ತು ಅಧಿಕಾರವನ್ನು ಬಯಸುತ್ತಾರೆ ಎಂದಿದ್ದಾರೆ.

ಎಲ್ಲರೂ ನಮ್ಮ ವಿರುದ್ಧ ಇದ್ದಾರೆ, ಕೇಜ್ರಿವಾಲ್ ಅವರು ದೇಶವನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ ಮತ್ತು ನಾನು ಒಂದು ಭಾಗದ ಪ್ರಧಾನಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಇದರರ್ಥ ನಾನೊಬ್ಬ ದೊಡ್ಡ ಭಯೋತ್ಪಾದಕ. ಅವರ ಭದ್ರತಾ ಏಜೆನ್ಸಿಗಳು ಏನು ಮಾಡುತ್ತಿದ್ದವು? ದೇಶದ ದೊಡ್ಡ ದೊಡ್ಡ ಪಕ್ಷಗಳು ದೇಶದ ಭದ್ರತೆಯ ಬಗ್ಗೆ ಅಪಹಾಸ್ಯ ಮಾಡುತ್ತಿವೆ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಉಲ್ಲೇಖಿಸಿದ ಕೇಜ್ರಿವಾಲ್ ಭಯೋತ್ಪಾದಕರಲ್ಲಿ ಎರಡು ವಿಧಗಳಿವೆ – ಒಂದು ಜನರಲ್ಲಿ ಭಯವನ್ನು ಹರಡುತ್ತದೆ, ಇನ್ನೊಂದು ಭ್ರಷ್ಟರಲ್ಲಿ ಭಯವನ್ನು ಹರಡುತ್ತದೆ. ಇಂದು ಎಲ್ಲಾ ಭ್ರಷ್ಟರು ನನ್ನ ವಿರುದ್ಧ ಒಟ್ಟಾಗಿ ಸೇರಿಕೊಂಡಿದ್ದಾರೆ, ಅವರು ನಿದ್ದೆಯಿಲ್ಲದ ರಾತ್ರಿಗಳಲ್ಲಿ ನನ್ನ ಕನಸು ಕಾಣುತ್ತಾರೆ. 100 ವರ್ಷಗಳ ಹಿಂದೆ ಭಗತ್ ಸಿಂಗ್ ಅವರನ್ನು ಭಯೋತ್ಪಾದಕ ಎಂದು ಕರೆಯಲಾಗುತ್ತಿತ್ತು, ಈಗ 100 ವರ್ಷಗಳ ನಂತರ ಅವರು ಈ ಭಗತ್ ಸಿಂಗ್ ಅನುಯಾಯಿಯನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಎಎಪಿ ವಿರುದ್ಧ ಎಲ್ಲಾ ಪಕ್ಷಗಳು ಒಂದಾಗಿವೆ ಮತ್ತು ಅದನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಪ್ರಯತ್ನಿಸುತ್ತಿವೆ ಎಂದು ಕೇಜ್ರಿವಾಲ್ ಹೇಳಿದರು.

ಪಂಜಾಬ್‌ನಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೇರಲು ಬಯಸುತ್ತಿರುವಾಗ, ಎಎಪಿ ಅದರ ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ.

ಚುನಾವಣಾ ಆಯೋಗವು ಬುಧವಾರ ಕುಮಾರ್ ವಿಶ್ವಾಸ್ ವಿಡಿಯೊವನ್ನು ನಿಷೇಧಿಸಿದ್ದರೂ, ಅದು ಗುರುವಾರ ಕ್ರಮವನ್ನು ಹಿಂಪಡೆದಿದೆ. ಗುರುವಾರ, ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನಲ್ಲಿ ತಮ್ಮ ರ್ಯಾಲಿಯಲ್ಲಿ ಕುಮಾರ್ ವಿಶ್ವಾಸ್ ಆರೋಪಗಳನ್ನು ಉಲ್ಲೇಖಿಸಿದರು.

“ಈ ಜನರು ಪಂಜಾಬ್ ಅನ್ನು ವಿಭಜಿಸುವ ಕನಸು ಕಾಣುತ್ತಿದ್ದಾರೆ. ಅವರು ಅಧಿಕಾರದಲ್ಲಿ ಉಳಿಯಲು ಪ್ರತ್ಯೇಕತಾವಾದಿಗಳೊಂದಿಗೆ ಕೈಜೋಡಿಸಲು ಸಿದ್ಧರಾಗಿದ್ದಾರೆ. ಅವರ ಕಾರ್ಯಸೂಚಿಯು ಪಾಕಿಸ್ತಾನದ ಅಜೆಂಡಾಕ್ಕಿಂತ ಭಿನ್ನವಾಗಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದರು.  ನಂತರ, ಪಂಜಾಬ್ ಮುಖ್ಯಮಂತ್ರಿ ಚರಣ್​ಜಿತ್ ಸಿಂಗ್ ಚನ್ನಿ, ಚುನಾವಣಾ ಆಯೋಗದ ನಿಷೇಧವನ್ನು ಹಿಂತೆಗೆದುಕೊಳ್ಳುವ ಪತ್ರದ ಪ್ರತಿಯನ್ನು ಹಂಚಿಕೊಂಡರು ಮತ್ತು ತನಿಖೆಗೆ ಆದೇಶಿಸುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿದರು.

ಇದನ್ನೂ ಓದಿ: ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಅವರ ಭದ್ರತೆಯನ್ನು ಪರಿಶೀಲಿಸಲಾಗುವುದು: ಸರ್ಕಾರಿ ಮೂಲಗಳು

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್