ಅಕ್ರಮ ಮರಳು ಗಣಿಗಾರಿಕೆ: ಅರವಿಂದ ಕೇಜ್ರಿವಾಲ್ ಸುಳ್ಳುಗಾರ; ಪಂಜಾಬ್ ಸಿಎಂ ಚನ್ನಿ ತಿರುಗೇಟು

"ಬ್ರಿಟಿಷರು ಭಾರತವನ್ನು ಲೂಟಿ ಮಾಡಲು ಬಂದರು ಅದೇ ರೀತಿ ಕೇಜ್ರಿವಾಲ್ ಮತ್ತು ಅವರ ದೆಹಲಿ ಕುಟುಂಬ ರಾಘವ್ ಚಡ್ಡಾ ಮತ್ತು ಇತರ ಹೊರಗಿನವರು ಪಂಜಾಬ್ ಅನ್ನು ಲೂಟಿ ಮಾಡಲು ಬಂದಿದ್ದಾರೆ. ಆದರೆ ಮೊಘಲರು ಮತ್ತು ಬ್ರಿಟಿಷರಿಗೆ ಮಾಡಿದಂತೆ ಪಂಜಾಬ್ ಅವರಿಗೆ ತಮ್ಮ ಸ್ಥಾನವನ್ನು ತೋರಿಸುತ್ತದೆ" ಎಂದ ಚನ್ನಿ

ಅಕ್ರಮ ಮರಳು ಗಣಿಗಾರಿಕೆ: ಅರವಿಂದ ಕೇಜ್ರಿವಾಲ್ ಸುಳ್ಳುಗಾರ; ಪಂಜಾಬ್ ಸಿಎಂ ಚನ್ನಿ ತಿರುಗೇಟು
ಚರಣ್‌ಜಿತ್ ಸಿಂಗ್ ಚನ್ನಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Feb 13, 2022 | 12:25 PM

ಚಂಡೀಗಢ: ವಿಧಾನಸಭಾ ಚುನಾವಣೆಯ ಮತದಾನದ ದಿನದ ಮೊದಲು ಪಂಜಾಬ್ ಮುಖ್ಯಮಂತ್ರಿ ಅವರ ಕ್ಷೇತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಆರೋಪಗಳನ್ನು ತೆರವುಗೊಳಿಸಿದ ನಂತರ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ಗೆ (Arvind Kejriwal) ಚರಣ್‌ಜಿತ್ ಸಿಂಗ್ ಚನ್ನಿ(Charanjit Singh Channi) ತಿರುಗೇಟು ನೀಡಿದ್ದಾರೆ. ಆಮ್ ಆದ್ಮಿ ಪಕ್ಷ ಅಥವಾ ಎಎಪಿ, ಪಂಜಾಬ್ ರಾಜ್ಯಪಾಲರಿಗೆ ಚನ್ನಿ ಅವರ ಕ್ಷೇತ್ರವಾದ ಚಮ್ಕೌರ್ ಸಾಹಿಬ್‌ನಲ್ಲಿ ನಡೆದಿರುವ ಮರಳು ಗಣಿಗಾರಿಕೆ (Sand Mining) ಪ್ರಕರಣದ ತನಿಖೆ ನಡೆಸುವಂತೆ ವಿನಂತಿಸಿತ್ತು. ರಾಜ್ಯಪಾಲರು ಈ ಮನವಿಯನ್ನು ಪಂಜಾಬ್ ಪೊಲೀಸ್ ಮುಖ್ಯಸ್ಥರಿಗೆ ರವಾನಿಸಿದ್ದಾರೆ. ಚನ್ನಿ ಅವರ ಕ್ಷೇತ್ರದ ಜಿಲ್ಲಾಧಿಕಾರಿ ಮರಳು ಗಣಿಗಾರಿಕೆ ಜಾರಿ ಅಧಿಕಾರಿಗಳಿಗೆ ಕಳುಹಿಸಿರುವ ಸ್ಥಿತಿ ವರದಿಯಲ್ಲಿ ಮರಳು ಗಣಿಗಾರಿಕೆ ಕುರಿತು ಯಾವುದೇ ದೂರು ಅಥವಾ ದಾಖಲೆಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಆದರೂ ಗಣಿ ಇಲಾಖೆ ಹಾಗೂ ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ತನಿಖೆ ಮುಂದುವರಿಯಲಿದೆ.  ಸ್ಥಿತಿ ವರದಿಯನ್ನು ಉಲ್ಲೇಖಿಸಿದ ಚನ್ನಿ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥರು ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಸುಳ್ಳು ಆರೋಪಗಳೊಂದಿಗೆ ತಮ್ಮಗೆ ಕೇಡು ಉಂಟು ಮಾಡಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.  “ಅರವಿಂದ್ ಕೇಜ್ರಿವಾಲ್ ಒಬ್ಬ ಸುಳ್ಳುಗಾರ. ಅವರು ನನ್ನ ವಿರುದ್ಧ ಹಲವಾರು ಆರೋಪಗಳನ್ನು ಮಾಡಲು ಪ್ರಯತ್ನಿಸಿದರು, ಆದರೆ ಯಾವುದೂ ನಿಜವಲ್ಲ. ಅವರು ನನ್ನ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದರು, ಅವರು ತನಿಖೆಗೆ ಆದೇಶಿಸಿದರು. ಸತ್ಯ ಗೆಲ್ಲುತ್ತದೆ ಎಂದು ಚನ್ನಿ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದರು.

“ಬ್ರಿಟಿಷರು ಭಾರತವನ್ನು ಲೂಟಿ ಮಾಡಲು ಬಂದರು ಅದೇ ರೀತಿ ಕೇಜ್ರಿವಾಲ್ ಮತ್ತು ಅವರ ದೆಹಲಿ ಕುಟುಂಬ ರಾಘವ್ ಚಡ್ಡಾ ಮತ್ತು ಇತರ ಹೊರಗಿನವರು ಪಂಜಾಬ್ ಅನ್ನು ಲೂಟಿ ಮಾಡಲು ಬಂದಿದ್ದಾರೆ. ಆದರೆ ಮೊಘಲರು ಮತ್ತು ಬ್ರಿಟಿಷರಿಗೆ ಮಾಡಿದಂತೆ ಪಂಜಾಬ್ ಅವರಿಗೆ ತಮ್ಮ ಸ್ಥಾನವನ್ನು ತೋರಿಸುತ್ತದೆ” ಎಂದು ಚನ್ನಿ ಹೇಳಿದರು.  ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆಗೆ ಮತದಾನ ನಡೆಯಲಿದ್ದು ಚನ್ನಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ.

ಅಕ್ರಮ ಮರಳುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಅವರನ್ನು 14 ದಿನಗಳ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಒಂದು ದಿನದ ವಿಚಾರಣೆಯ ನಂತರ ಜಲಂಧರ್‌ನಿಂದ ಫೆಬ್ರವರಿ 3 ರಂದು ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಶ ಹನಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಜನವರಿ 18 ರಂದು ಹನಿ ಮತ್ತು ಇತರರ ವಿರುದ್ಧ ದಾಳಿ ನಡೆಸಿ ಅವರ ಆಸ್ತಿಯಿಂದ ₹ 7.9 ಕೋಟಿ ಮತ್ತು ಇನ್ನೊಬ್ಬ ಆರೋಪಿ ಸಂದೀಪ್ ಕುಮಾರ್‌ನಿಂದ ₹ 2 ಕೋಟಿ ವಶಪಡಿಸಿಕೊಂಡ ನಂತರ ಇಡಿ ಕ್ರಮವು ಪ್ರಾರಂಭವಾಯಿತು.

ಒಂದು ದಿನದ ವಿಚಾರಣೆಯ ನಂತರ ಜಲಂಧರ್‌ನಿಂದ ಫೆಬ್ರವರಿ 3 ರಂದು ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಹನಿ ಅವರನ್ನು ಜಾರಿ ನಿರ್ದೇಶನಾಲಯ ಅಥವಾ ಇಡಿ ಬಂಧಿಸಿತ್ತು. ಜನವರಿ 18 ರಂದು ಹನಿ ಮತ್ತು ಇತರರ ವಿರುದ್ಧ ದಾಳಿ ನಡೆಸಿ ಅವರ ಆಸ್ತಿಯಿಂದ ₹ 7.9 ಕೋಟಿ ಮತ್ತು ಇನ್ನೊಬ್ಬ ಆರೋಪಿ ಸಂದೀಪ್ ಕುಮಾರ್‌ನಿಂದ ₹ 2 ಕೋಟಿ ಹಣವನ್ನು ಇಡಿ ವಶ ಪಡಿಸಿಕೊಡಿತ್ತು.

ಇದನ್ನೂ ಓದಿ: ರಾಹುಲ್ ಗಾಂಧಿ ರಾಜೀವ್ ಗಾಂಧಿಯವರ ಮಗನೋ ಅಲ್ಲವೋ ಎಂಬುದಕ್ಕೆ ಪುರಾವೆ ಕೇಳಿದ್ದೇವಾ?: ಅಸ್ಸಾಂ ಸಿಎಂ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ