ಭಾರತ 1947ರಲ್ಲಿ ಹುಟ್ಟಿಲ್ಲ: ಹಿರಿಯ ಸಿಖ್ ನಾಯಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ
ನಾನು ಪಂಜಾಬ್‌ನಲ್ಲಿದ್ದಾಗ ನಾನು (ಕರ್ತಾರ್‌ಪುರ ಸಾಹಿಬ್) ದುರ್ಬೀನು ಬಳಸಿ ನೋಡುತ್ತಿದ್ದೆ. ಆಗ ನಾನು ಯೋಚಿಸುತ್ತಿದ್ದೆ. ಏನಾದರೂ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು
ದೆಹಲಿ: ಭಾರತ 1947ರಲ್ಲಿ ಹುಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Moid) ಹೇಳಿದ್ದಾರೆ. ಭಾನುವಾರ ಪಂಜಾಬ್ ಚುನಾವಣೆಗೆ (Punjab Polls) ಮುನ್ನ ದೆಹಲಿಯ ತಮ್ಮ ಮನೆಯಲ್ಲಿ ಹಿರಿಯ ಸಿಖ್ ನಾಯಕರೊಂದಿಗೆ (Sikh Leaders) ಮೋದಿ ಸಂವಾದ ನಡೆಸಿದ್ದಾರೆ. “ಈ ದೇಶ 1947ರಲ್ಲಿ ಹುಟ್ಟಿದ್ದಲ್ಲ. ನಮ್ಮ ಗುರುಗಳು ಅದೆಷ್ಟು ದಬ್ಬಾಳಿಕೆ ಅನುಭವಿಸಿದ್ದರು . ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಾವೆಷ್ಟು ದಬ್ಬಾಳಿಕೆ ಅನುಭವಿಸಿದ್ದೆವು. ನಾನು ಆಗ ಭೂಗತನಾಗಿದ್ದೆ. ಮರೆಮಾಚಲು ಸಿಖ್ ವೇಷ ಧರಿಸುತ್ತಿದ್ದೆ. ಪಗ್ಡಿ ಧರಿಸುತ್ತಿದ್ದೆ ಎಂದು ಪ್ರಧಾನಿ ಮೋದಿ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ. ಸಿಖ್ ಸಮುದಾಯ ಜತೆ ಮಾತನಾಡಿದ ಪ್ರಧಾನಿ ಮೋದಿ, 1947 ರ ವಿಭಜನೆಯ ಸಮಯದಲ್ಲಿ ಸಿಖ್ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್ ಭಾರತದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದು ತಮ್ಮ ಹೇಳಿಕೆಯನ್ನು ಪುನರಾವರ್ತಿಸಿದರು. ಕರ್ತಾರ್‌ಪುರ ಸಾಹಿಬ್ ಪಾಕಿಸ್ತಾನದಲ್ಲಿದೆ ಮತ್ತು ಪಂಜಾಬ್‌ನಿಂದ ಸುಮಾರು ಆರು ಕಿ.ಮೀ ದೂರದಲ್ಲಿದೆ. “ಆರು ಕಿಮೀ ದೂರದಲ್ಲಿರುವ ಕರ್ತಾರ್‌ಪುರವನ್ನು ತರಲು ಅವರು ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ. ನಾನು ರಾಜತಾಂತ್ರಿಕ ದಾರಿ ಮೂಲಕ ಮಾತುಕತೆ ಪ್ರಾರಂಭಿಸಿದೆ. ನಾನು ಪಂಜಾಬ್‌ನಲ್ಲಿದ್ದಾಗ ನಾನು (ಕರ್ತಾರ್‌ಪುರ ಸಾಹಿಬ್) ದುರ್ಬೀನು ಬಳಸಿ ನೋಡುತ್ತಿದ್ದೆ. ಆಗ ನಾನು ಯೋಚಿಸುತ್ತಿದ್ದೆ. ಏನಾದರೂ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದರು. “ಇದೊಂದು ಪವಿತ್ರ ಕಾರ್ಯವಾಗಿದ್ದು, ಗುರುಗಳ ಆಶೀರ್ವಾದದಿಂದ ನಾವು ಇದನ್ನು ಮಾಡಿದ್ದೇವೆ. ನಾವು ಇಷ್ಟು ಕಡಿಮೆ ಸಮಯದಲ್ಲಿ ಏನು ಮಾಡಿದ್ದೇವೆ, ಇದು ಭಕ್ತಿ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಅವರು ಹೇಳಿದರು. ಅವರು ಅಫ್ಘಾನಿಸ್ತಾನದಿಂದ ಗುರು ಗ್ರಂಥ ಸಾಹಿಬ್ ಅನ್ನು ಮರಳಿ ತರುವ ಬಗ್ಗೆಯೂ ಮಾತನಾಡಿದರು.
“ಗುರು ಗ್ರಂಥ ಸಾಹಿಬ್ ಅನ್ನು ಅಫ್ಘಾನಿಸ್ತಾನದಿಂದ ಹೆಮ್ಮೆಯಿಂದ ಮರಳಿ ತರಬೇಕು. ನಾವು ವ್ಯವಸ್ಥೆ ಮಾಡಿದ್ದೇವೆ ಮತ್ತು ವಿಶೇಷ ವಿಮಾನವನ್ನು ಒದಗಿಸಿದ್ದೇವೆ. ಅದನ್ನು ಗೌರವದಿಂದ ಹಿಂತಿರುಗಿಸಲು ನಾನು ನಮ್ಮ ಮಂತ್ರಿಗಳನ್ನು ಕೇಳಿದ್ದೇನೆ. ಇದು ನಮ್ಮ ಜೀವನದಲ್ಲಿ ಅಮೂಲ್ಯವಾಗಿದೆ. .ಗುಜರಾತಿನವರಾದ ಗುರು ಗೋಬಿಂದ್ ಸಿಂಗ್ ಅವರ ಪುಂಜ್ ಪ್ಯಾರಗಳಲ್ಲಿ ಒಬ್ಬರು. ಗುಜರಾತ್‌ನವರಾಗಿರುವುದರಿಂದ ನಾನು ನಿಮ್ಮೊಂದಿಗೆ ರಕ್ತ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಲು ಬಯಸುತ್ತೇನೆ, ”ಎಂದು ಪ್ರಧಾನಿ ಹೇಳಿದರು. ಊಟದ ಸಮಯದಲ್ಲಿ, ಪ್ರಧಾನ ಮಂತ್ರಿ ಸಿಖ್ ನಾಯಕರಿಗೆ ತಟ್ಟೆಗಳನ್ನು ನೀಡಿ”ನಾನು ಇಂದು ಸೇವೆ ಮಾಡಲು ಬಯಸುತ್ತೇನೆ ಎಂದಿದ್ದಾರೆ.
ನಾಯಕರಿಂದ ಸಿರೋಪಾ ಅಥವಾ ಗೌರವಾನ್ವಿತ ನಿಲುವಂಗಿಯನ್ನು ಸ್ವೀಕರಿಸುತ್ತಿದ್ದಂತೆ, ಪ್ರಧಾನಿ ಮೋದಿ ಅವರು ಸಿಖ್ ಗುರುಗಳಿಂದ ಬಹಳಷ್ಟು ಕಲಿತಿದ್ದಾರೆ ಮತ್ತು ಅವರ ಬೋಧನೆಗಳನ್ನು ಅನುಸರಿಸಲು ಪ್ರಯತ್ನಿಸಿರುವುದಾಗಿ ಎಂದು ಹೇಳಿದರು.
This morning, I met a wide range of people from the Sant Samaj and Sikh community. These are distinguished individuals who are at the forefront of popularising Sikh culture and serving society. pic.twitter.com/h0N5uJWT1o
— Narendra Modi (@narendramodi) February 18, 2022
ನಾಯಕರು ಪ್ರಧಾನಿಯವರಿಗೆ ಕೇಸರಿ ಪಟ್ಕಾ ಅಥವಾ ಸ್ಕಾರ್ಫ್‌ಗಳನ್ನು ಸುತ್ತುವ ಮೂಲಕ ಸ್ವಾಗತಿಸಿದರು. ಪ್ರಧಾನಿಯವರು ತಮ್ಮ ಸಿಬ್ಬಂದಿಗೆ ಬಟ್ಟೆ ನೆಲಕ್ಕೆ ತಾಗದಂತೆ ಹೇಳುತ್ತಿರುವುದು ಕಂಡುಬಂತು. ಸಿಖ್ ನಾಯಕರೊಬ್ಬರು ಪ್ರಧಾನಿ ಮೋದಿಯವರಿಗೆ, ಪ್ರತಿಯೊಬ್ಬರ ಹೃದಯವನ್ನು ತಲುಪಲು ಪ್ರಯತ್ನಿಸುವ “ಮೊದಲ ಪ್ರಧಾನಿ” ಎಂದು ಹೇಳಿದರು. “ಮೋದಿ-ಜಿಯವರ ಹೃದಯ ಸಿಖ್ಖರ ಹೃದಯ” ಎಂದು ಅವರು ಹೇಳಿದರು.
“ಇದು ನಿಮ್ಮ ಮನೆ. ನಿಮ್ಮಂತೆಯೇ ನಾನು ಈ ಸ್ಥಳಕ್ಕೆ ಕಾಲಿಟ್ಟಿದ್ದೇನೆ, ನಾನು ಅದೇ ರೀತಿ ಗುರುದ್ವಾರಕ್ಕೆ ಹೋಗುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು. ಬಿಜೆಪಿ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಸುಖದೇವ್ ಸಿಂಗ್ ಧಿಂಡ್ಸಾ ನೇತೃತ್ವದ ಅಕಾಲಿದಳ ಬಣದೊಂದಿಗೆ ಮೈತ್ರಿ ಮಾಡಿಕೊಂಡು ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ಸಭೆಯಲ್ಲಿ ದೆಹಲಿ ಗುರುದ್ವಾರ ಸಮಿತಿಯ ಅಧ್ಯಕ್ಷ ಹರ್ಮೀತ್ ಸಿಂಗ್ ಕಲ್ಕಾ, ಬಾಬಾ ಬಲ್ಬೀರ್ ಸಿಂಗ್ ಸಿಚೆವಾಲ್, ಮಹಂತ್ ಕರಮ್ಜಿತ್ ಸಿಂಗ್, ಡೇರಾ ಬಾಬಾ ಜಂಗ್ ಸಿಂಗ್ ಬಾಬಾ ಜೋಗಾ ಸಿಂಗ್ ಮತ್ತು ಸಂತ ಬಾಬಾ ಮೆಜೋರ್ ಸಿಂಗ್ ವಾ ಇದ್ದರು.
ಇದನ್ನೂ ಓದಿ: ಬುಲ್ಡೋಜರ್‌ಗಳು ವಿಶ್ರಾಂತಿ ಪಡೆಯುತ್ತಿವೆ, ಯುಪಿ ಚುನಾವಣಾ ಫಲಿತಾಂಶದ ನಂತರ ಚಲಾಯಿಸುತ್ತೇವೆ: ಯೋಗಿ ಆದಿತ್ಯನಾಥ