Covid 4th Wave: ಕೊವಿಡ್ 4ನೇ ಅಲೆ ಡೆಲ್ಟಾದಷ್ಟೇ ಅಪಾಯಕಾರಿಯಾಗಿರುತ್ತಾ?; ವಿಜ್ಞಾನಿಗಳ ಉತ್ತರ ಹೀಗಿದೆ
ಭಾರತದಲ್ಲಿ ಕೊರೊನಾ 4ನೇ ಅಲೆಯಲ್ಲಿ ಕಾಣಿಸಿಕೊಳ್ಳುವ ಹೊಸ ರೂಪಾಂತರವು ಡೆಲ್ಟಾದಷ್ಟೇ ಅಪಾಯಕಾರಿಯಾಗಿರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ನವದೆಹಲಿ: ಪ್ರಪಂಚದಾದ್ಯಂತ ಕೊವಿಡ್ -19 ಸಾಂಕ್ರಾಮಿಕದ ಮೂರನೇ ಅಲೆ (Coronavirus 3rd Wave) ಕಡಿಮೆಯಾದ ನಂತರ, ಮುಂಬರುವ ತಿಂಗಳುಗಳಲ್ಲಿ ನಾಲ್ಕನೇ ಅಲೆಯು (Covid 4th Wave) ಅಪ್ಪಳಿಸುವ ಸಾಧ್ಯತೆಯಿದೆ. ಇತ್ತೀಚೆಗೆ ತಜ್ಞರು ನಾಲ್ಕನೇ ಕೋವಿಡ್ -19 ಅಲೆಯು ಮೇ ಅಥವಾ ಜೂನ್‌ನಲ್ಲಿ ಜಗತ್ತನ್ನು ಅಪ್ಪಳಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಕೊವಿಡ್ 4ನೇ ಅಲೆಯು ಡೆಲ್ಟಾ (Delta Virus) ರೂಪಾಂತರದಷ್ಟೇ ತೀವ್ರ ಮತ್ತು ಮಾರಣಾಂತಿಕವಾಗಬಹುದೇ ಎಂಬ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಈ ಅನುಮಾನಗಳಿಗೆ ಉತ್ತರಿಸಿದ ವಿಜ್ಞಾನಿಯೊಬ್ಬರು, 4ನೇ ಅಲೆಯಲ್ಲಿ ಕಾಣಿಸಿಕೊಳ್ಳುವ ಹೊಸ ರೂಪಾಂತರವು ಡೆಲ್ಟಾದಷ್ಟೇ ಅಪಾಯಕಾರಿಯಾಗಿರಲಿದೆ ಎಂದು ಹೇಳಿದ್ದಾರೆ.
ಇಂಗ್ಲೆಂಡ್ನ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಆಂಡ್ರ್ಯೂ ರಾಂಬೌಟ್ ನೇಚರ್ ಜರ್ನಲ್‌ನೊಂದಿಗೆ ಮಾತನಾಡುತ್ತಾ, ಕೋವಿಡ್ -19 ನ ಮುಂದಿನ ರೂಪಾಂತರವು ಆಲ್ಫಾ ಮತ್ತು ಡೆಲ್ಟಾದಂತಹ ಗಂಭೀರ ಸೋಂಕುಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ನಾಲ್ಕನೇ ಅಲೆ ಜೂನ್ ವೇಳೆಗೆ ಭಾರತವನ್ನು ಅಪ್ಪಳಿಸಬಹುದು ಎಂದು ಭಾರತದ ವಿಜ್ಞಾನಿಗಳು ಅನುಮಾನಪಟ್ಟಿದ್ದಾರೆ. ಹೊಸ ರೂಪಾಂತರದ ತೀವ್ರತೆ ಮತ್ತು ಪರಿಣಾಮವು ರೂಪಾಂತರದ ಸೋಂಕು ಮತ್ತು ಮಾರಣಾಂತಿಕತೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಕೊರೊನಾವೈರಸ್ ನಾಲ್ಕನೇ ತರಂಗವು 2022ರ ಜೂನ್ 22ರಿಂದ ಪ್ರಾರಂಭವಾಗುತ್ತದೆ ಹಾಗೇ, ಆಗಸ್ಟ್ 23ರಂದು ಉತ್ತುಂಗವನ್ನು ತಲುಪುತ್ತದೆ, ಅಕ್ಟೋಬರ್ 24ರಂದು ಕೊನೆಗೊಳ್ಳುತ್ತದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಮತ್ತೊಂದು ಸಂಶೋಧನೆಯು ಮುಂದಿನ COVID-19 ರೂಪಾಂತರವು ಎರಡು ವಿಭಿನ್ನ ರೀತಿಯಲ್ಲಿ ಹೊರಹೊಮ್ಮಬಹುದು ಎಂದು ತೋರಿಸಿದೆ. ಮೊದಲನೆಯದಾಗಿ ಒಮಿಕ್ರಾನ್ ವಿಕಸನಗೊಳ್ಳುವುದನ್ನು ಮುಂದುವರೆಸುತ್ತದೆ. ಹೊಸ ಕೊವಿಡ್ ರೂಪಾಂತರವು ಹಿಂದೆ ಗುರುತಿಸಲಾದವುಗಳಿಗಿಂತ ಕಡಿಮೆ ತೀವ್ರವಾಗಿರುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಲೇಖಕರು ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: Covid 4th Wave: ಜೂನ್ 22ರ ವೇಳೆಗೆ ಕೊರೊನಾ 4ನೇ ಅಲೆ ಅಪ್ಪಳಿಸುವ ಸಾಧ್ಯತೆ; ಆ. 23ಕ್ಕೆ ಉತ್ತುಂಗಕ್ಕೇರುವ ಸಾಧ್ಯತೆ
ಭಾರತದಲ್ಲಿ ಕೊವಿಡ್‌ನಿಂದಾಗಿ ಹೆತ್ತವರು, ಪೋಷಕರನ್ನು ಕಳೆದುಕೊಂಡಿದ್ದು 19 ಲಕ್ಷ ಮಕ್ಕಳು
Published On - 7:15 pm, Thu, 3 March 22