ಡೆಲ್ಟಾ ಸ್ಥಾನವನ್ನು ಒಮಿಕ್ರಾನ್ ಆಕ್ರಮಿಸಿಕೊಂಡರೆ ಮಾ. 11ರ ವೇಳೆಗೆ ಕೊವಿಡ್ ಸ್ಥಳೀಯವಾಗಬಹುದು; ಐಸಿಎಂಆರ್​ ವಿಜ್ಞಾನಿ

ಡೆಲ್ಟಾ ಸ್ಥಾನವನ್ನು ಒಮಿಕ್ರಾನ್ ಆಕ್ರಮಿಸಿಕೊಂಡರೆ ಮಾ. 11ರ ವೇಳೆಗೆ ಕೊವಿಡ್ ಸ್ಥಳೀಯವಾಗಬಹುದು; ಐಸಿಎಂಆರ್​ ವಿಜ್ಞಾನಿ
ಪ್ರಾತಿನಿಧಿಕ ಚಿತ್ರ

ದೆಹಲಿ ಮತ್ತು ಮುಂಬೈ ಕೋವಿಡ್ ಪ್ರಕರಣಗಳ ಉತ್ತುಂಗವನ್ನು ತಲುಪಿದೆಯೇ ಮತ್ತು ಕೆಟ್ಟದು ಮುಗಿದಿದೆಯೇ ಎಂದು ಹೇಳಲು ನಾವು ಇನ್ನೂ ಎರಡು ವಾರ ಕಾಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

TV9kannada Web Team

| Edited By: Sushma Chakre

Jan 19, 2022 | 4:29 PM

ನವದೆಹಲಿ: ಡೆಲ್ಟಾ ವೈರಸ್​ (Delta Virus) ಜೊತೆಗೆ ಇದೀಗ ವಿಶ್ವಾದ್ಯಂತ ಹೆಚ್ಚುತ್ತಿರುವ ಒಮಿಕ್ರಾನ್ (Omicron) ಕೂಡ ಆತಂಕ ಮೂಡಿಸುತ್ತಿದ್ದು, ಮಾರ್ಚ್​ 11ರ ವೇಳೆಗೆ ಕೊವಿಡ್ ಸೋಂಕು ಸ್ಥಳೀಯವಾಗಲಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ಸಮೀರನ್ ಪಾಂಡಾ ಹೇಳಿದ್ದಾರೆ. “ದೆಹಲಿ ಮತ್ತು ಮುಂಬೈನಲ್ಲಿ ಕೊವಿಡ್ ಪ್ರಕರಣಗಳು ಕಡಿಮೆಯಾಗಿದೆಯೇ ಎಂದು ನಾವು ಈಗಲೇ ಹೇಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ. ಕೊರೊನಾವೈರಸ್‌ನ ಓಮಿಕ್ರಾನ್ ಮತ್ತು ಡೆಲ್ಟಾ ರೂಪಾಂತರಗಳು ದೆಹಲಿ ಮತ್ತು ಮುಂಬೈನಲ್ಲಿ ಸರಿಸುಮಾರು 80:20 ಅನುಪಾತವನ್ನು ಹೊಂದಿವೆ ಎಂದು ಪಾಂಡಾ ತಿಳಿಸಿದ್ದಾರೆ.

“ನಾವು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡದಿದ್ದರೆ, ಇನ್ನು ಯಾವುದೇ ಹೊಸ ರೂಪಾಂತರವು ಹೊರಹೊಮ್ಮದಿದ್ದರೆ ಮಾರ್ಚ್ 11ರ ವೇಳೆಗೆ ಕೋವಿಡ್ ಸೋಂಕು ಸ್ಥಳೀಯವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಮಾರ್ಚ್ 11ರಿಂದ ಕೊರೊನಾ ವಿಷಯದಲ್ಲಿ ಸ್ವಲ್ಪ ಪರಿಹಾರವನ್ನು ನೋಡುತ್ತೇವೆ. ದೆಹಲಿ ಮತ್ತು ಮುಂಬೈ ಕೋವಿಡ್ ಪ್ರಕರಣಗಳ ಉತ್ತುಂಗವನ್ನು ತಲುಪಿದೆಯೇ ಮತ್ತು ಕೆಟ್ಟದು ಮುಗಿದಿದೆಯೇ ಎಂದು ಹೇಳಲು ನಾವು ಇನ್ನೂ ಎರಡು ವಾರ ಕಾಯಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿವಿಧ ರಾಜ್ಯಗಳು ಸಾಂಕ್ರಾಮಿಕ ರೋಗದ ವಿವಿಧ ಹಂತಗಳಲ್ಲಿವೆ. ಕೊರೊನಾ ಪರೀಕ್ಷೆಯನ್ನು ಕಡಿಮೆ ಮಾಡಬೇಡಿ ಎಂದು ನಾವು ಎಂದಿಗೂ ರಾಜ್ಯಗಳಿಗೆ ಸೂಚಿಸಿಲ್ಲ. ಹೋಮ್ ಟೆಸ್ಟಿಂಗ್ ಇತ್ಯಾದಿಗಳ ಕುರಿತು ಸ್ಥಳೀಯ ಭಾಷೆಗಳಲ್ಲಿ ಮಾರ್ಗಸೂಚಿಗಳನ್ನು ಲಭ್ಯವಾಗುವಂತೆ ಮಾಡುವುದರಿಂದ ಜನರಿಗೆ ಸಹಾಯಕವಾಗುತ್ತದೆ ಎಂದು ಸಮೀರನ್ ಪಾಂಡಾ ಹೇಳಿದ್ದಾರೆ.

ಅನೇಕ ರಾಜ್ಯಗಳು ಸಾಂಕ್ರಾಮಿಕ ರೋಗದ ವಿವಿಧ ಹಂತಗಳಲ್ಲಿವೆ ಮತ್ತು ವೈರಸ್‌ನಲ್ಲಿನ ಸಾಂಕ್ರಾಮಿಕ ರೋಗಶಾಸ್ತ್ರದ ವ್ಯತ್ಯಾಸಗಳಿಂದಾಗಿ ಮತ್ತು ಸಾಂಕ್ರಾಮಿಕವು ತನ್ನ ವಿಧಾನವನ್ನು ಬದಲಾಯಿಸುವುದರಿಂದ ICMR ತನ್ನ ಪರೀಕ್ಷಾ ತಂತ್ರವನ್ನು ಸಹ ಬದಲಾಯಿಸಿದೆ. ಅಲ್ಲದೆ, ಜೀನೋಮಿಕ್ ಸೀಕ್ವೆನ್ಸಿಂಗ್ ಕುರಿತು ಮಾತನಾಡುವ ಡೈನಾಮಿಕ್ ವಿದ್ಯಮಾನವಾಗಿದೆ ಎಂದು ಪಾಂಡಾ ಹೇಳಿದರು.

ಇದನ್ನೂ ಓದಿ: ಒಂದೇ ದಿನ 2,68,833 ಕೊರೊನಾ ಪ್ರಕರಣಗಳು ಪತ್ತೆ; 6,401ಕ್ಕೇರಿದ ಒಮಿಕ್ರಾನ್ ಪ್ರಕರಣಗಳು

ಬೆಂಗಳೂರಿನ ಎಂಟು ವಲಯಗಳಲ್ಲಿ ಕೊವಿಡ್ ನಿಯಂತ್ರಣಾ ಕೊಠಡಿಗಳು ಲಭ್ಯ ಬಿಬಿಎಂಪಿ ಪ್ರಕಟಣೆ

Follow us on

Related Stories

Most Read Stories

Click on your DTH Provider to Add TV9 Kannada