Operation Ganga: ಉಕ್ರೇನ್​ ಸಂಘರ್ಷ; ಪ್ರಧಾನಿ ಮೋದಿ ನೇತೃತ್ವದಲ್ಲಿ 5ನೇ ಬಾರಿಗೆ ಉನ್ನತ ಮಟ್ಟದ ಸಭೆ

Operation Ganga: ಉಕ್ರೇನ್​ ಸಂಘರ್ಷ; ಪ್ರಧಾನಿ ಮೋದಿ ನೇತೃತ್ವದಲ್ಲಿ 5ನೇ ಬಾರಿಗೆ ಉನ್ನತ ಮಟ್ಟದ ಸಭೆ
ನರೇಂದ್ರ ಮೋದಿ

ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಹೊರತಾಗಿಯೂ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರದ ಕುರಿತು ಚರ್ಚಿಸಲು ಭಾನುವಾರ ಸಂಜೆಯಿಂದ ಪ್ರತಿದಿನ ಸಭೆಗಳನ್ನು ನಡೆಸುತ್ತಿದ್ದಾರೆ.

TV9kannada Web Team

| Edited By: Sushma Chakre

Mar 04, 2022 | 5:57 PM

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ‘ಆಪರೇಷನ್ ಗಂಗಾ’ (Operation Ganga) ಅಡಿಯಲ್ಲಿ ಉಕ್ರೇನ್‌ನಿಂದ ನಡೆಯುತ್ತಿರುವ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಐದನೇ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ಇಂದು ನಡೆದ ಎಸ್ ಜೈಶಂಕರ್ ಮತ್ತು ಶ್ರೀಗ್ಲಾ ಅವರು ಸ್ಥಳಾಂತರಿಸುವ ಕಾರ್ಯಾಚರಣೆಯ ಪ್ರಗತಿಯ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಿದರು. ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೊರಡಿಸಿದ ಆರಂಭಿಕ ಸಲಹೆಗಳನ್ನು ಹೊರಹಾಕಿದಾಗಿನಿಂದ 18,000ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ, ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ರಷ್ಯಾದ ಗಡಿಗೆ ಸಮೀಪವಿರುವ ಒಡೆಸ್ಸಾ ಮತ್ತು ಸುಮಿ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಲುಕಿರುವ ಭಾರತೀಯರ ಸ್ಥಿತಿಯ ಬಗ್ಗೆಯೂ ಪ್ರಧಾನ ಮಂತ್ರಿಗೆ ವಿವರಿಸಲಾಯಿತು. ಅವರ ಸುರಕ್ಷಿತ ಸ್ಥಳಾಂತರಕ್ಕೆ ಸಂಭವನೀಯ ಮಾರ್ಗಗಳ ಕುರಿತು ಚರ್ಚಿಸಲಾಯಿತು. ಸುಮಿ ರಷ್ಯಾದ ಗಡಿಗೆ ಸಮೀಪದಲ್ಲಿದೆ ಮತ್ತು ಅಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ.

ನರೇಂದ್ರ ಮೋದಿ ಅವರು ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರದ ಹೊರತಾಗಿಯೂ ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರದ ಕುರಿತು ಚರ್ಚಿಸಲು ಭಾನುವಾರ ಸಂಜೆಯಿಂದ ಪ್ರತಿದಿನ ಸಭೆಗಳನ್ನು ನಡೆಸುತ್ತಿದ್ದಾರೆ. ನಾಲ್ವರು ಕೇಂದ್ರ ಸಚಿವರುಗಳು ಉಕ್ರೇನ್‌ನ ನೆರೆಯ ರಾಷ್ಟ್ರಗಳಿಗೆ ಆಪರೇಷನ್ ಗಂಗಾ ಮೇಲ್ವಿಚಾರಣೆಗೆ ತೆರಳಿದ ಬೆನ್ನಲ್ಲೇ ಸ್ಥಳಾಂತರ ಪ್ರಕ್ರಿಯೆ ಚುರುಕುಗೊಂಡಿದೆ.

ಇದರ ನಡುವೆ ಸ್ಲೋವಾಕಿಯಾದಲ್ಲಿನ ಭಾರತೀಯ ಮಿಷನ್‌ನಲ್ಲಿರುವ ಅಧಿಕಾರಿಗಳು ಉಕ್ರೇನ್‌ನ ಉಜ್ಹೋರೋಡ್‌ಗೆ ಸಮೀಪವಿರುವ ವೈಸ್ನೆ ನೆಮೆಕೆಯಲ್ಲಿ ಹೊಸ ಚೆಕ್‌ಪಾಯಿಂಟ್ ಅನ್ನು ಗುರುತಿಸಿದ್ದಾರೆ. ಹಂಗೇರಿಯ ಬುಡಾಪೆಸ್ಟ್‌ಗೆ ಹೋಗುವ ಬದಲು ಸ್ಲೋವಾಕಿಯಾಕ್ಕೆ ತೆರಳಲು ಸಲಹೆ ನೀಡಲಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿ ಮಾಡಲಾದ ವ್ಯವಸ್ಥೆಯನ್ನು ವೀಕ್ಷಿಸಲು ಕೇಂದ್ರ ಸಚಿವ ಕಿರಣ್ ರಿಜಿಜು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ: Viral Photo: ಯುದ್ಧದ ಭಯವಿಲ್ಲದೆ ಉಕ್ರೇನ್ ಸೈನಿಕರ ಯೂನಿಫಾರಂ ಮೇಲೆ ಮಲಗಿ ನಿದ್ರೆ ಮಾಡಿದ ಮಗು; ಫೋಟೋ ವೈರಲ್

Operation Ganga: ವಿಶೇಷ ವಿಮಾನದ ಮೂಲಕ ಉಕ್ರೇನ್​ನಿಂದ 6,200 ಭಾರತೀಯರ ಶಿಫ್ಟ್​; ಇನ್ನೆರಡು ದಿನದಲ್ಲಿ 7,400 ಜನರ ಸ್ಥಳಾಂತರ

Follow us on

Related Stories

Most Read Stories

Click on your DTH Provider to Add TV9 Kannada