AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ; ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ರಷ್ಯಾ ದಾಳಿಯ ನಂತರದಲ್ಲಿ ನಡೆಯುತ್ತಿರುವ ಐದನೇ ಸಭೆ ಇದಾಗಿದೆ. ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಎನ್ಎಸ್ಎ ಅಜಿತ್ ದೋವಲ್, ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಪ್ರಧಾನ ಕಾರ್ಯದರ್ಶಿ ಇತರರು ಹಾಜರಿದ್ದರು.

ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿರುವ ರಷ್ಯಾ; ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ
ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ (ಚಿತ್ರ ಕೃಪೆ: ರಿಪಬ್ಲಿಕ್​)
TV9 Web
| Updated By: preethi shettigar|

Updated on:Mar 02, 2022 | 10:04 PM

Share

ರಷ್ಯಾ- ಉಕ್ರೇನ್​ ನಡುವಿನ ಯುದ್ಧಕ್ಕೆ ಸಂಬಂಧಿಸಿದಂತೆ ಉಕ್ರೇನ್​ನಿಂದ ಭಾರತೀಯರನ್ನು ಸ್ಥಳಾಂತರಿಸುವ ನಿಟ್ಟಿನ್ಲಲಿ ಇಂದು (ಮಾರ್ಚ್ 2 ರ ಬುಧವಾರ) ರಾತ್ರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆಯನ್ನು ನಡೆಸಿದ್ದಾರೆ. ರಷ್ಯಾ ದಾಳಿಯ ನಂತರದಲ್ಲಿ ನಡೆಯುತ್ತಿರುವ ಐದನೇ ಸಭೆ ಇದಾಗಿದೆ. ಇದುವರೆಗಿನ ಎಲ್ಲಾ ಸಭೆಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಎನ್ಎಸ್ಎ ಅಜಿತ್ ದೋವಲ್, ಸಂಪುಟ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಪ್ರಧಾನ ಕಾರ್ಯದರ್ಶಿ ಇತರರು ಹಾಜರಿದ್ದರು.

ರಷ್ಯಾ ​ಅಧ್ಯಕ್ಷ ಪುಟಿನ್ ಜತೆ ಮಾತನಾಡಲಿರುವ ಮೋದಿ

ಸಭೆಯ ನಂತರ ಪ್ರಧಾನಿ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನ ಮಂತ್ರಿ ಮೋದಿ, ಅಧ್ಯಕ್ಷ ಪುಟಿನ್ ಅವರಿಗೆ ಕರೆ ಮಾಡಿ, ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಲಿದ್ದಾರೆ. ಜತೆಗೆ ರಾಜತಾಂತ್ರಿಕ ಮಾತುಕತೆಗಳು, ಸಂದಾನದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.

ಕಳೆದ ಬಾರಿ ಪುಟಿನ್​ ಜತೆ ಮಾತನಾಡಿದ ಪ್ರಧಾನಿ ಮೋದಿ ಅವರು, ಉಕ್ರೇನ್‌ನಲ್ಲಿರುವ ಭಾರತೀಯ ನಾಗರಿಕರ, ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಭಾರತದ ಕಳವಳಗಳನ್ನು ತಿಳಿಸಿದ್ದರು. ರಷ್ಯಾದಿಂದ ಭಾರತೀಯರ ಸುರಕ್ಷಿತ ನಿರ್ಗಮನಕ್ಕಾಗಿ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದ್ದರು.

ವಿದ್ಯಾರ್ಥಿಗಳ ಪೋಷಕರಿಗೆ ಪ್ರಧಾನಿ ಮೋದಿ ಧೈರ್ಯ

ಉಕ್ರೇನ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪ್ರಧಾನಿ ಮೋದಿ ಧೈರ್ಯ ಹೇಳಿದ್ದಾರೆ. ಮನೆ ಬಾಗಿಲಿಗೆ ಸರ್ಕಾರ ಎಂದು ಉಕ್ರೇನ್​ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಪೋಷಕರಿಗೆ ಪ್ರಧಾನಿ ಧೈರ್ಯ ಹೇಳಿದ್ದಾರೆ.

ದೂರವಾಣಿ ಕರೆ ಮಾಡಿ ಪುಟಿನ್​ ಜೊತೆಗೆ ಮೋದಿ ಚರ್ಚೆ

ಉಕ್ರೇನ್​ನಲ್ಲಿ ರಷ್ಯಾ ಸೇನೆ ದಾಳಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್​ಗೆ ಪ್ರಧಾನಿ ಮೋದಿ ಕರೆ ಮಾಡಿ ಮಾತನಾಡಿದ್ದಾರೆ.

ಇದನ್ನೂ ಓದಿ: Closing Bell: ರಷ್ಯಾ- ಉಕ್ರೇನ್ ಯುದ್ಧ ಏಳನೇ ದಿನಕ್ಕೆ; ಸೆನ್ಸೆಕ್ಸ್ 779 ಪಾಯಿಂಟ್ಸ್, ನಿಫ್ಟಿ 188 ಪಾಯಿಂಟ್ಸ್ ಇಳಿಕೆ

ಅಣು ಯುದ್ಧದ ಭೀತಿ ವ್ಯಕ್ತಪಡಿಸ್ತಾ ಹಾಲಿ​ ಅಧ್ಯಕ್ಷ ಝೆಲೆನ್​ಸ್ಕಿ ಪದಚ್ಯುತಿಗೆ ರಷ್ಯಾ ಹುನ್ನಾರ ನಡೆಸಿದೆ -ಉಕ್ರೇನ್ ಆತಂಕ

Published On - 9:22 pm, Wed, 2 March 22