ಅಣು ಯುದ್ಧದ ಭೀತಿ ವ್ಯಕ್ತಪಡಿಸ್ತಾ ಹಾಲಿ ಅಧ್ಯಕ್ಷ ಝೆಲೆನ್ಸ್ಕಿ ಪದಚ್ಯುತಿಗೆ ರಷ್ಯಾ ಹುನ್ನಾರ ನಡೆಸಿದೆ -ಉಕ್ರೇನ್ ಆತಂಕ
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ.. ಅಣು ಯುದ್ಧದ ಭೀತಿ, ಶಂಕೆಯನ್ನು ವ್ಯಕ್ತಪಡಿಸುತ್ತಿರುವ ಎನಿಮಿ ರಷ್ಯಾವು, ಉಕ್ರೇನ್ ದೇಶದ ಹಾಲಿ ಅಧ್ಯಕ್ಷ ಝೆಲೆನ್ಸ್ಕಿ ಅವರ ಪದಚ್ಯುತಿಗೆ ಹುನ್ನಾರ ನಡೆಸಿದೆ ಎಂದು ಬೊಬ್ಬೆಯಿಟ್ಟಿದೆ. ಝೆಲೆನ್ಸ್ಕಿ ಪದಚ್ಯುತಿಗೆ ಹುನ್ನಾರ ನಡೆಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಮಾಜಿ ಅಧ್ಯಕ್ಷನಿಗೆ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ಗೆ ಪಟ್ಟ ಕಟ್ಟಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ಜಾಗತಿಕ ಬಲಾಢ್ಯ ರಾಷ್ಟ್ರವಾದ ರಷ್ಯಾ ಯುದ್ಧ ಮುಂದುವರಿಸಿದೆ. ದುಃಖಕರ ಸಂಗತಿಯೆಂದರೆ ಉಕ್ರೇನ್ ನ ಹೃದಯ ಭಾಗವಾದ ಖಾರ್ಕಿವ್ನಲ್ಲಿ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಜನವಸತಿ ಪ್ರದೇಶಗಳ ಮೇಲೆ ರಷ್ಯಾದಿಂದ ಏರ್ಸ್ಟ್ರೈಕ್ ನಡೆದಿದೆ. ಈ ಮಧ್ಯೆ, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು 3ನೇ ಮಹಾಯುದ್ಧ (Nuclear Weapons) ಹೆಚ್ಚು ವಿನಾಶಕಾರಿಯಾಗಿರುತ್ತದೆ. ಅಣು ಶಸ್ತ್ರ (Nuclear Weapons) ಬಳಕೆಯಾಗುವ ಸಂಭವವಿದೆ ಎಂದು ಯುದ್ಧ ಭೀಕರತೆಯ ಬಗ್ಗೆ (Russia Ukraine War) ಆತಂಕ ಮೂಡಿಸಿದ್ದಾರೆ.
ಅಮೆರಿಕ ಹೇಳಿದಂತೆ ಉಕ್ರೇನ್ ನಡೆಯುತ್ತಿದೆ ಎಂದು ಕಿಡಿಕಾರಿರುವ ರಷ್ಯಾ ವಿದೇಶಾಂಗ ಸಚಿವ (Russian Foreign Minister) ಸೆರ್ಗೆಯ್ ಲಾವ್ರೊವ್ ಪ್ರಚಲಿತ ಯುದ್ಧ ಸಂದರ್ಭದಲ್ಲಿ ಉಕ್ರೇನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ. ಅಣು ಯುದ್ಧ ತಪ್ಪಿಸಲು ಉಕ್ರೇನ್ ಜತೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಪ್ರಕಟಿಸಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪದಚ್ಯುತಿಗೆ ಹುನ್ನಾರ: ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ.. ಅಣು ಯುದ್ಧದ ಭೀತಿ, ಶಂಕೆಯನ್ನು ವ್ಯಕ್ತಪಡಿಸುತ್ತಿರುವ ಎನಿಮಿ ರಷ್ಯಾವು, ಉಕ್ರೇನ್ ದೇಶದ ಹಾಲಿ ಅಧ್ಯಕ್ಷ ಝೆಲೆನ್ಸ್ಕಿ ಅವರ ಪದಚ್ಯುತಿಗೆ ಹುನ್ನಾರ ನಡೆಸಿದೆ ಎಂದು ಬೊಬ್ಬೆಯಿಟ್ಟಿದೆ. ಝೆಲೆನ್ಸ್ಕಿ ಪದಚ್ಯುತಿಗೆ ಹುನ್ನಾರ ನಡೆಸಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉಕ್ರೇನ್ ಮಾಜಿ ಅಧ್ಯಕ್ಷನಿಗೆ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ಗೆ ಪಟ್ಟ ಕಟ್ಟಲು ತಯಾರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮಿನ್ಸ್ಕ್‌ಗೆ ವಿಕ್ಟರ್ ಯಾನುಕೋವಿಚ್ ಕರೆತಂದಿರುವ ರಷ್ಯಾ ವಿಕ್ಟರ್ನನ್ನ ಉಕ್ರೇನ್ ಹೊಸ ಅಧ್ಯಕ್ಷನ ಮಾಡಲು ಸಿದ್ಧತೆ ನಡೆಸಿದೆ. ತಮ್ಮ ಶ್ರೇಯೋಭಿಲಾಷಿ ವಿಕ್ಟರ್ ಯಾನುಕೋವಿಚ್ ನನ್ನು ಹೊಸ ಅಧ್ಯಕ್ಷ ಎಂದು ಘೋಷಿಸಲು ಪುಟಿನ್ ತಯಾರಿ ನಡೆಸಿದ್ದಾರೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ಉಕ್ರೇನ್ ಸರ್ಕಾರ ಆರೋಪ ಮಾಡಿದೆ.
Also Read: Russia- Ukraine War: ಉಕ್ರೇನ್ ಜೊತೆ ಮತ್ತೆ ಮಾತುಕತೆಗೆ ಸಿದ್ಧ ಎಂದ ರಷ್ಯಾ; 6 ಹೊಸ ಬೆಳವಣಿಗೆಗಳು ಹೀಗಿವೆ
Also Read: ಉಡುಪಿಯ ಸಂತೆಕಟ್ಟೆ ಜಂಕ್ಷನ್ ನಲ್ಲಿ ಕೇರಳ ಬಸ್ ಡಿಕ್ಕಿ: ಮೊಪೆಡ್ ಸ್ಕೂಟರ್ ನಲ್ಲಿದ್ದ ಅಪ್ಪ-ಮಗಳು ಸ್ಥಳದಲ್ಲೇ ಸಾವು
Published On - 5:07 pm, Wed, 2 March 22