ಉಡುಪಿಯ ಸಂತೆಕಟ್ಟೆ ಜಂಕ್ಷನ್ ನಲ್ಲಿ ಕೇರಳ ಬಸ್​ ಡಿಕ್ಕಿ: ಮೊಪೆಡ್ ಸ್ಕೂಟರ್ ನಲ್ಲಿದ್ದ ಅಪ್ಪ-ಮಗಳು ಸ್ಥಳದಲ್ಲೇ ಸಾವು

ಉಡುಪಿಯ ಸಂತೆಕಟ್ಟೆ ಜಂಕ್ಷನ್ ನಲ್ಲಿ ಕೇರಳ ಬಸ್​ ಡಿಕ್ಕಿ: ಮೊಪೆಡ್ ಸ್ಕೂಟರ್ ನಲ್ಲಿದ್ದ ಅಪ್ಪ-ಮಗಳು ಸ್ಥಳದಲ್ಲೇ ಸಾವು
ಉಡುಪಿಯ ಸಂತೆಕಟ್ಟೆ ಜಂಕ್ಷನ್ ನಲ್ಲಿ ಕೇರಳ ಬಸ್​ ಡಿಕ್ಕಿ: ಮೊಪೆಡ್ ಸ್ಕೂಟರ್ ನಲ್ಲಿದ್ದ ಅಪ್ಪ-ಮಗಳು ಸ್ಥಳದಲ್ಲೇ ಸಾವು

ಉಡುಪಿ ನಗರದ ಸಂತೆಕಟ್ಟೆ ಜಂಕ್ಷನ್​ನಲ್ಲಿ ದುರ್ಘಟನೆ ಸಂಭವಿಸಿದೆ. ತಂದೆ ಗಣೇಶ್ ಪೈ (58) ಮತ್ತು ಮಗಳು ಗಾಯತ್ರಿ ಪೈ (27) ಮೃತರು. ಗಣೇಶ್ ಪೈ ಅವರು ಕರಾವಳಿ ಕಾವಲು ಪಡೆಯ ಗುಪ್ತಚರ ಇಲಾಖೆಯಲ್ಲಿ ಎಎಸ್ ಐ ಆಗಿ ಸೇವೆ ಸಲ್ಲಿಸಲ್ಲಿಸುತ್ತಿದ್ದರು.

TV9kannada Web Team

| Edited By: sadhu srinath

Mar 02, 2022 | 2:55 PM

ಉಡುಪಿ: ಧಾರವಾಡದ ಗಂಡನ ಮನೆಯಿಂದ ಪೂಜೆಗಾಗಿ ತವರು ಮನೆಗೆ ಬಂದಿದ್ದ ಹೆಣ್ಣುಮಗಳು ತನ್ನ ತಂದೆಯ ಜೊತೆಗೂಡಿ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಕೇರಳದ ಹವಾನಿಯಂತ್ರಿತ ಲಕ್ಷುರಿ ಬಸ್ ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಉಡುಪಿ ನಗರದ ಸಂತೆಕಟ್ಟೆ ಜಂಕ್ಷನ್​ನಲ್ಲಿ (santhekatte junction in udupi) ಈ ದುರ್ಘಟನೆ ಸಂಭವಿಸಿದೆ.

ತಂದೆ ಗಣೇಶ್ ಪೈ (58) ಮತ್ತು ಮಗಳು ಗಾಯತ್ರಿ ಪೈ (27) ಮೃತರು. ಗಣೇಶ್ ಪೈ ಅವರು ಕರಾವಳಿ ಕಾವಲು ಪಡೆಯ ಗುಪ್ತಚರ ಇಲಾಖೆಯಲ್ಲಿ ಎಎಸ್ ಐ ಆಗಿ ಸೇವೆ ಸಲ್ಲಿಸಲ್ಲಿಸುತ್ತಿದ್ದರು. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Kerala state luxury bus accident).

ಕಳೆದ ವರ್ಷವಷ್ಟೇ ಮಗಳ ಮದುವೆಯಾಗಿತ್ತು: ಕಳೆದ ವರ್ಷವಷ್ಟೇ ಮಗಳ ಮದುವೆಯಾಗಿತ್ತು. ಮನೆಯಲ್ಲಿ ನಡೆಯಲಿದ್ದ ಪೂಜೆಗಾಗಿ ತವರಿಗೆ ಮಗಳು ಗಾಯತ್ರಿ ಬರುವವಳಿದ್ದಳು. ತಂದೆ ಗಣೇಶ್ ಮಗಳನ್ನ ಮನೆಗೆ ಕರೆದುಕೊಂಡು ಬರುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ. ಬಸ್ಸು ನಿಲ್ದಾಣದಿಂದ ಮೊಪೆಡ್ ಸ್ಕೂಟರ್ ನಲ್ಲಿ ಮಗಳನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಕೇರಳ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿರುವ ಎಸಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ಸು ಕೊಲ್ಲೂರು ಕಡೆಗೆ ಸಾಗುತಿತ್ತು.

Also Read: ಆಗಸದಿಂದಿಳಿದು ಉಕ್ರೇನ್​ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು

Also Read: ನೀಟ್ ಪರೀಕ್ಷೆ ದೇಶದ ಉತ್ತಮ ವ್ಯವಸ್ಥೆ; ಎಲ್ಲರೂ ಡಾಕ್ಟರ್ ಆಗಲು ಸಾಧ್ಯವಿಲ್ಲ: ಸಚಿವ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ

Follow us on

Related Stories

Most Read Stories

Click on your DTH Provider to Add TV9 Kannada