ಆಗಸದಿಂದಿಳಿದು ಉಕ್ರೇನ್ನ ಮಧ್ಯಪ್ರದೇಶದ ಮೇಲೆ ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ: ಪ್ರಮುಖ 6 ಬೆಳವಣಿಗೆಗಳು

ಉಕ್ರೇನ್ನ ಮಧ್ಯಪ್ರದೇಶದ ಮೇಲೆ ಆಗಸದಿಂದ ಇಳಿದು ಅಧಿಪತ್ಯ ಸಾಧಿಸಿದ್ದೇವೆ ಎಂದು ಬೀಗಿದ ರಷ್ಯಾ
Russia Ukraine War: ಉಕ್ರೇನ್ ನ ಖಾರ್ಖೀವ್ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಪ್ರತಿಕ್ರಿಯಿಸಿದೆ. ಖಾರ್ಖೀವ್ ನಗರ ರಷ್ಯಾದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ರಷ್ಯಾ ಮಾತನಾಡುವವರೇ ವಾಸವಾಗಿದ್ದಾರೆ. ಈ ನಗರವು ಸುಮಾರು 14 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ.
ನವದೆಹಲಿ: ರಷ್ಯಾ ಸೇನಾ ಪಡೆಗಳು ಆನೆ ನಡೆದಿದ್ದೇ ದಾರಿ ಎಂಬಂತೆ, ಹೆಚ್ಚಿನ ಪ್ರತಿರೋಧವಿಲ್ಲದೆ ತನ್ನ ಶತೃ ರಾಷ್ಟ್ರ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದೆ (Russia Ukraine War). ಜನಸಂಖ್ಯೆಯಲ್ಲಿ ಉಕ್ರೇನ್ನ ಎರಡನೆಯ ದೊಡ್ಡ ನಗರವಾದ ಖಾರ್ಖೀವ್ ನೊಳಕ್ಕೆ ರಷ್ಯಾ ಪಡೆಗಳು ನುಸುಳಿವೆ. ಆಗಸದಿಂದ ರಷ್ಯಾ ಪಡೆಗಳು ಖಾರ್ಕಿವ್ ನೊಳಕ್ಕೆ ಬಂದಿಳಿದಿವೆ. ಹಾಗೆ ಖಾರ್ಖೀವ್ ನೊಳಕ್ಕೆ ರಷ್ಯಾ ಪಡೆಗಳು ಹಾರಿಬರುತ್ತಿದ್ದಂತೆ ಉಕ್ರೇನ್ ಯೋಧರು ಪ್ರತಿರೋಧಕ ದಾಳಿ ಆರಂಭಿಸಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಮಾತನಾಡಿದ್ದು ರಷ್ಯಾ ಪಡೆಗಳು ಉಕ್ರೇನ್ ನ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿವೆ. ಈಗಾಗಲೇ ಖಾರ್ಕಿವ್, ಖೈವ್ ಮತ್ತಿತರ ನಗರಗಳ ಮೇಲೆ ಕಬ್ಜಾ ಸಾಧಿಸುತ್ತಾ ಸಾಗುತ್ತಿವೆ. ಆದರೆ ಇದು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ಗೆ (Russia Vladimir Putin) ದೀರ್ಘಕಾಲದ ಕಾದಾಟವಾಗಲಿದೆ. ಆದರೆ ಅಷ್ಟು ಸುಲಭವಾಗಿ ಉಕ್ರೇನ್ ಅವರಿಗೆ ದಕ್ಕುವುದಿಲ್ಲ ಎಂದು ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ.
ಪ್ರಮುಖ ಆರು ಬೆಳವಣಿಗೆಗಳು ಇಲ್ಲಿವೆ:
- ಉಕ್ರೇನ್ ನ ಯುದ್ಧ ಪ್ರದೇಶಗಳಲ್ಲಿ ತಂಗಿರುವ ಭಾರತೀಯರನ್ನು ತಾಯ್ನಾಡಿಗೆ ವಾಪಸ್ ಕರೆತರಲು ಮೂರು C-17 aircraft ಗಳು ಅಲ್ಲಿಗೆ ತೆರಳಿವೆ. ಎಲ್ಲಾ ಭಾರತೀಯರನ್ನೂ ವಾಪಸ್ ಕರೆತರುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಭಾರತೀಯ ವಾಯುಪಡೆಯ ವೈಸ್ ಚೀಫ್ ಏರ್ ಮಾರ್ಷಲ್ ಸಂದೀಪ್ ಸಿಂಗ್ ಹೇಳಿದ್ದಾರೆ.
- ರಷ್ಯಾದ ಸಶಸ್ತ್ರ ಪಡೆಗಳು ಉಕ್ರೇನ್ ನ ಮಧ್ಯ ಪ್ರದೇಶಕ್ಕೂ ನುಗ್ಗಿದೆ. ಉಕ್ರೇನ್ ನ ಕೇಂದ್ರ ಭಾಗದಲ್ಲಿರುವ ಖೆರ್ಸಾನ್ ನಗರದ ಮೇಲೆ ಆಗಸದಿಂದಲೇ ನಮ್ಮ ಪಡೆಗಳು ಅಧಿಪತ್ಯ ಸಾಧಿಸಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೋರ್ ಕೊನಾಷೆನ್ಕೋವ್ ಟೆಲಿವಿಶನ್ ಮಾಧ್ಯಮದ ಮೂಲಕ ತಿಳಿಸಿದ್ದಾರೆ.
- ಉಕ್ರೇನ್ ನ ಖಾರ್ಕಿವ್ ನಗರದ ಮೇಲೆ ರಷ್ಯಾದ ಸಶಸ್ತ್ರ ಪಡೆಗಳು ಇಳಿಯುತ್ತಿದ್ದಂತೆ ನಮ್ಮ ಯೋಧರೂ ತಿರುಗೇಟು ನೀಡುತ್ತಿದ್ದಾರೆ ಎಂದು ಉಕ್ರೇನ್ ಸೇನೆ (Ukrainian Army) ಪ್ರತಿಕ್ರಿಯಿಸಿದೆ. ಖಾರ್ಕಿವ್ ನಗರ ರಷ್ಯಾದ ಗಡಿ ಭಾಗದಲ್ಲಿದ್ದು, ಇಲ್ಲಿ ಹೆಚ್ಚಾಗಿ ರಷ್ಯಾ ಮಾತನಾಡುವವರೇ ವಾಸವಾಗಿದ್ದಾರೆ. ಈ ನಗರವು ಸುಮಾರು 14 ಲಕ್ಷ ಮಂದಿ ಜನಸಂಖ್ಯೆ ಹೊಂದಿದೆ.
- ‘ಡಿಕ್ಟೇಟರ್’ ವ್ಲಾದಿಮಿರ್ ಪುಟಿನ್ ಹೀಗೆಯೇ ಮುಂದುವರಿದರೆ ರಾಜತಾಂತ್ರಿಕ ಮತ್ತು ಆರ್ಥಿಕ ದಿಗ್ಬಂಧನಗಳ ಮೂಲಕ ರಷ್ಯಾ ನಡುಗಡ್ಡೆಯಾಗಲಿದೆ ಎಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಸಿದ್ದಾರೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಜೆಲೆನ್ಸ್ಕೀ ಜೊತೆ ಮಾತನಾಡಿರುವ ಅಧ್ಯಕ್ಷ ಜೋ ಬೈಡನ್ ಅವರು ಯುದ್ಧ ಪರಿಣಾಮಗಳಿಗೆ ರಷ್ಯಾವನ್ನೇ ಕಾರಣೀಭೂತವನ್ನಾಗಿಸಲು ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಹೇಗೆ ಕಾರ್ಯಮಗ್ನವಾಗಿವೆ ಎಂಬುದನ್ನು ಮನದಟ್ಟುಪಡಿಸಿದ್ದಾರೆ.
- ಕಳೆದ ಗುರುವಾರ ಆರಂಭವಾಗಿರುವ ಉಕ್ರೇನ್ ಮೇಲಿನ ರಷ್ಯಾದ ಅತಿಕ್ರಮಮಣದಿಂದಾಗಿ ರಷ್ಯಾದ ಮೇಲೆ ಅನೇಕ ದಿಗ್ಬಂಧನಗಳ ಬಿಗಿ ಸಾಧಿಸಲಾಗಿದೆ. ಅದು ವ್ಯಾಪಾರ ಮತ್ತು ಹಣಕಾಸು ದಂಡದ ರೂಪದಲ್ಲಿವೆ. ಆಪಲ್ ಮತ್ತು ನೈಕ್ ಕಂಪನಿಗಳು ಈಗಾಗಲೇ ರಷ್ಯಾದಲ್ಲಿ ತನ್ನ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.
- ರಷ್ಯಾ ಮೂಲಕ ಭಾರತೀಯರ ಸ್ಥಳಾಂತರಕ್ಕೆ ಅಸ್ತು: ರಷ್ಯಾ ರಾಯಭಾರಿಯ ಮಹತ್ವದ ಹೇಳಿಕೆ