AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಳಂದ ಸಂಘರ್ಷ ಪ್ರಕರಣ: ಸದ್ಯ ಶಿವಲಿಂಗ ದರ್ಶನಕ್ಕೂ ಜನರಿಗೆ ನಿರ್ಬಂಧ; ಬಿಗಿ ಪೊಲೀಸ ಬಂದೋಬಸ್ತ್

ಘರ್ಷಣೆ ನಡೆದಿದ್ದಕ್ಕೆ ಪೊಲೀಸರ ವೈಫಲ್ಯ ಕಾರಣವಲ್ಲ. ಕಾರ್ಯಾಚರಣೆಯಲ್ಲಿ ಇಬ್ಬರು ಸತ್ತಿದ್ದಾರೆ ಅನ್ನೋದು ಸುಳ್ಳು. ಇಬ್ಬರ ಸಾವಿಗೂ, ಈ ಸಂಘರ್ಷಕ್ಕೂ ಸಂಬಂಧವಿಲ್ಲ ಎಂದು ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಇಂದು (ಮಾರ್ಚ್ 2) ಹೇಳಿಕೆ ನೀಡಿದ್ದಾರೆ.

ಆಳಂದ ಸಂಘರ್ಷ ಪ್ರಕರಣ: ಸದ್ಯ ಶಿವಲಿಂಗ ದರ್ಶನಕ್ಕೂ ಜನರಿಗೆ ನಿರ್ಬಂಧ; ಬಿಗಿ ಪೊಲೀಸ ಬಂದೋಬಸ್ತ್
ಬೂದಿ ಮುಚ್ಚಿದ ಕೆಂಡವಾದ ಆಳಂದ
TV9 Web
| Updated By: ganapathi bhat|

Updated on: Mar 02, 2022 | 3:12 PM

Share

ಕಲಬುರಗಿ: ಆಳಂದ ಪಟ್ಟಣದಲ್ಲಿ 2 ಗುಂಪುಗಳ ನಡುವೆ ಸಂಘರ್ಷ ವಿಚಾರಕ್ಕೆ ಸಂಬಂಧಿಸಿ ಕಲ್ಲು ತೂರಾಟ ಪ್ರಕರಣದಲ್ಲಿ 167 ಜನರ ಬಂಧನವಾಗಿದೆ. 10 ಮಹಿಳೆಯರು ಸೇರಿದಂತೆ 167 ಜನರ ಬಂಧನ ಮಾಡಲಾಗಿದೆ. ಘರ್ಷಣೆ ನಡೆದಿದ್ದಕ್ಕೆ ಪೊಲೀಸರ ವೈಫಲ್ಯ ಕಾರಣವಲ್ಲ. ಕಾರ್ಯಾಚರಣೆಯಲ್ಲಿ ಇಬ್ಬರು ಸತ್ತಿದ್ದಾರೆ ಅನ್ನೋದು ಸುಳ್ಳು. ಇಬ್ಬರ ಸಾವಿಗೂ, ಈ ಸಂಘರ್ಷಕ್ಕೂ ಸಂಬಂಧವಿಲ್ಲ ಎಂದು ಕಲಬುರಗಿ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಇಂದು (ಮಾರ್ಚ್ 2) ಹೇಳಿಕೆ ನೀಡಿದ್ದಾರೆ.

ಆಳಂದ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆ ಲಾಡ್ಲೇ ಮಶಾಕ್ ದರ್ಗಾಕ್ಕೆ ಜನರ ಎಂಟ್ರಿಗೆ ನಿರ್ಬಂಧ ವಿಧಿಸಲಾಗಿದೆ. ಶಿವಲಿಂಗಕ್ಕೆ ಪೂಜೆ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿತ್ತು. ಹೀಗಾಗಿ, ಇದೀಗ ದರ್ಗಾ ಸೇರಿದಂತೆ ಎಲ್ಲಡೆ ಪೊಲೀಸರ ನಿಯೋಜನೆ ಮಾಡಲಾಗಿದೆ. ದರ್ಗಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿಗಳು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಬಿಗಿ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಆಳಂದ ಪಟ್ಟಣದಲ್ಲಿ ನಿನ್ನೆ ಉದ್ವಿಗ್ನ ವಾತಾವರಣ ಹಿನ್ನೆಲೆ ದರ್ಗಾಕ್ಕೆ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಸದ್ಯ ಶಿವಲಿಂಗ ದರ್ಶನಕ್ಕೂ ಜನರಿಗೆ ನಿರ್ಬಂಧ ವಿಧಿಸಲಾಗಿದೆ. ದರ್ಗಾ ಪ್ರದೇಶ ಜನರಿಲ್ಲದೆ ಬಿಕೋ ಅನ್ನುತ್ತಿದೆ.

ಶಿವಮೊಗ್ಗದಲ್ಲಿ ಶಾಂತಿಗಾಗಿ ಸೌಹಾರ್ದ ಸಭೆ; ಸರ್ವಧರ್ಮದ ಮುಖಂಡರು ಭಾಗಿ

ಇತ್ತ ಶಿವಮೊಗ್ಗ ಸರಕಾರಿ ನೌಕರರ ಭವನದ ಸಭಾಂಗಣದಲ್ಲಿ ಶಾಂತಿಗಾಗಿ ಸೌಹಾರ್ದ ಸಭೆ ನಡೆಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಬಳಿಕ ಗಲಭೆ ಹಿನ್ನಲೆ ಶಾಂತಿಗಾಗಿ ಸೌಹಾರ್ದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೇಲ್ವಮಣಿ, ಎಸ್​ಪಿ ಲಕ್ಷ್ಮಿ ಪ್ರಸಾದ್ ಹಾಗೂ ಎಲ್ಲಾ ಧರ್ಮದ ಧಾರ್ಮಿಕ ಗುರುಗಳು ಭಾಗಿ ಆಗಿದ್ದಾರೆ.

ಸರ್ವಧರ್ಮ ಶಾಂತಿಯ ನೆಲೆ ಮಲೆನಾಡು. ಯಾರೋ ಕಿಡಿಗೇಡಿಗಳು ಮಾಡಿದ ಘಟನೆ ಈ ರೀತಿ ಆಗಿದೆ. ಪ್ರತಿ ದಿನ ಅದನ್ನೆ ಮನಸ್ಸಿನಲ್ಲಿಕೊಂಡು ಬದುಕುವುದು ಬೇಡ ಎಂದು ಸಭೆಯಲ್ಲಿ ಡಿಸಿ ಡಾ. ಸೇಲ್ವಮಣಿ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿ, ಮೌಲ್ವಿಗಳು, ಫಾದರ್ ಎಲ್ಲರೂ ಸಭೆಯಲ್ಲಿ ಭಾಗಿ ಆಗಿದ್ದಾರೆ. ಮತ್ತೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಆಳಂದದಲ್ಲಿ ಕಲ್ಲು ತೂರಾಟ ಪ್ರಕರಣ: 150 ಕ್ಕೂ ಹೆಚ್ಚು ಜನ ಪೊಲೀಸರ ವಶಕ್ಕೆ; ಮಾ.5ರ ವರೆಗೆ ಪಟ್ಟಣದಲ್ಲಿ ನಿಷೇಧಾಜ್ಞೆ

ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡವಾದ ಆಳಂದ: ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ -ಏನಿದು ವಿವಾದ? ಯಾಕಿದು ವಿವಾದ?