NATO: ಕೈಕೊಟ್ಟ ನ್ಯಾಟೋ! ಉಕ್ರೇನ್ ಪತನ ತಪ್ಪಿಸಲು ಸಾಧ್ಯವಿಲ್ಲ – ಇದು ರಕ್ಷಣಾ ತಜ್ಞರ ಅಭಿಮತ

Russia Ukraine War: ಜಗತ್ತಿನ ಬಲಾಢ್ಯ ದೇಶಗಳ ನ್ಯಾಟೋ ಪಡೆ, ರಷ್ಯಾ ವಿರುದ್ದ ನೇರ ಯುದ್ದಕ್ಕಿಳಿಯದೇ ದೂರ ಉಳಿದಿರುವುದರಿಂದ ಉಕ್ರೇನ್ ಪತನ ತಪ್ಪಿಸಲು ಸಾಧ್ಯವಿಲ್ಲ ಅಂತ ರಕ್ಷಣಾ ತಜ್ಞರು ಹೇಳುತ್ತಿದ್ದಾರೆ.

NATO: ಕೈಕೊಟ್ಟ ನ್ಯಾಟೋ! ಉಕ್ರೇನ್ ಪತನ ತಪ್ಪಿಸಲು ಸಾಧ್ಯವಿಲ್ಲ - ಇದು ರಕ್ಷಣಾ ತಜ್ಞರ ಅಭಿಮತ
NATO: ಕೈಕೊಟ್ಟ ನ್ಯಾಟೋ! ಉಕ್ರೇನ್ ಪತನ ತಪ್ಪಿಸಲು ಸಾಧ್ಯವಿಲ್ಲ -ರಕ್ಷಣಾ ತಜ್ಞರ ಅಭಿಮತ
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Mar 02, 2022 | 5:53 PM

ರಷ್ಯಾ ದಾಳಿಯಿಂದ ಕಂಗಲಾಗಿರುವ ಉಕ್ರೇನ್ ದೇಶದ ಅಧ್ಯಕ್ಷ ವಾಡ್ಲಿಮಿರ್‌ ಜೆಲೆನ್ ಸ್ಕಿ ನ್ಯಾಟೋ ಪಡೆಯು (NATO) ತಮ್ಮ ದೇಶದ ರಕ್ಷಣೆಗೆ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಆ ನಿರೀಕ್ಷೆ ಹುಸಿಯಾಗಿದೆ. ಯೂರೋಪ್ ಹಾಗೂ ಆಮೆರಿಕಾ ಕೆಲ ಶಸ್ತ್ರಾಸ್ತ್ರಗಳನ್ನ ಮಾತ್ರ ಉಕ್ರೇನ್ ಗೆ ನೀಡಿ, ರಷ್ಯಾ ವಿರುದ್ಧ ಯುದ್ಧದ ಅಖಾಡಕ್ಕೆ ಇಳಿಯದೇ ದೂರ ಉಳಿದಿವೆ. ಉಕ್ರೇನ್ ಗೆ ಇನ್ನೂ ನ್ಯಾಟೋ ಸದಸ್ಯತ್ವ ನೀಡಿಲ್ಲ.

ನ್ಯಾಟೋ ರಾಷ್ಟ್ರಗಳಿಗೂ ರಷ್ಯಾದ ಭಯ, ರಷ್ಯಾ ವಿರುದ್ದ ನೇರವಾಗಿ ಯುದ್ಧಕ್ಕಿಳಿಯದ ನ್ಯಾಟೋ ಪಡೆ! ಬಲಾಢ್ಯ ರಷ್ಯಾ ದೇಶ, ಸರ್ವಾಧಿಕಾರಿ ವಾಡ್ಲಿಮಿರ್ ಪುಟಿನ್ ಮಹತ್ವಾಕಾಂಕ್ಷೆಯಿಂದಾಗಿ ಉಕ್ರೇನ್ ಮೇಲೆ ನಡೆಸುತ್ತಿರುವ ಯುದ್ಧ 7ನೇ ದಿನಕ್ಕೆ ಕಾಲಿಟ್ಟಿದೆ. ಈ ಯುದ್ದಕ್ಕೆ ಕಾರಣವೇ ಉಕ್ರೇನ್ ದೇಶವು ನ್ಯಾಟೋ ಸದಸ್ಯತ್ವ ಪಡೆಯಲು ಯತ್ನಿಸಿದ್ದು. ಆದರೆ, ನ್ಯಾಟೋ ರಾಷ್ಟ್ರಗಳು ರಷ್ಯಾ ದೇಶವು ಉಕ್ರೇನ್ ಮೇಲೆ ಕಳೆದ 7 ದಿನಗಳಿಂದ ಯುದ್ಧ ನಡೆಸುತ್ತಿದ್ದರೂ ಇನ್ನೂ ಉಕ್ರೇನ್ ಗೆ ನ್ಯಾಟೋ ಸದಸ್ಯತ್ವ ನೀಡಿಲ್ಲ. ನ್ಯಾಟೋ ಪಡೆಯು ನೇರವಾಗಿ ಯುದ್ಧದ ಅಖಾಡಕ್ಕೆ ಇಳಿದು ರಷ್ಯಾ ವಿರುದ್ಧ ಹೋರಾಟವನ್ನು ನಡೆಸುತ್ತಿಲ್ಲ. ಆಮೆರಿಕಾ, ಯೂರೋಪ್ ರಾಷ್ಟ್ರಗಳು ಕೇವಲ ಮೇಲ್ನೋಟಕ್ಕೆ ಜಗತ್ತಿನ ಜನರ ಕಣ್ಣಲ್ಲಿ ತಾವು ಉಕ್ರೇನ್ ಪರ ಇದ್ದೇವೆ ಎಂದು ತೋರಿಸಲು ಕೆಲವೊಂದು ಶಸ್ತ್ರಾಸ್ತ್ರ, ನೆರವು ಅನ್ನು ಮಾತ್ರ ಉಕ್ರೇನ್ ಗೆ ನೀಡಿವೆ.

ಆಮೆರಿಕಾ, ಯೂರೋಪ್ ರಾಷ್ಟ್ರಗಳಿಗೂ ರಷ್ಯಾದ ಬಗ್ಗೆ ಭಯ ಇದೆ. ಉಕ್ರೇನ್ ವಾಯು ಪ್ರದೇಶವನ್ನು ವಿದೇಶಿ ವಿಮಾನಗಳಿಗೆ ನಿರ್ಬಂಧಿತ ಪ್ರದೇಶ ಎಂದು ಘೋಷಿಸಬೇಕೆಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ , ಆಮೆರಿಕಾ ಹಾಗೂ ನ್ಯಾಟೋಗೆ ಮನವಿ ಮಾಡಿದ್ದರು. ಆದರೇ, ಇದಕ್ಕೆ ಪ್ರತಿಕ್ರಿಯಿಸಿದ ಆಮೆರಿಕಾ ಅಧ್ಯಕ್ಷ ಜೋ ಬೈಡೆನ್, ಆಮೆರಿಕಾವಾಗಲೀ, ನ್ಯಾಟೋ ಪಡೆಗಳಾಗಲೀ, ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಜೆಲೆನ್ ಸ್ಕಿಗೆ ಹೇಳಿದ್ದಾರೆ.

ಉಕ್ರೇನ್ ವಾಯುಪ್ರದೇಶವನ್ನು ವಿದೇಶಿ ವಿಮಾನಗಳಿಗೆ ಹಾರಾಟ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದರೇ, ಪರೋಕ್ಷವಾಗಿ ರಷ್ಯಾ ವಿರುದ್ಧ ಆಮೆರಿಕಾ, ನ್ಯಾಟೋ ಪಡೆಗಳು ಹೋರಾಡಬೇಕಾಗುತ್ತೆ. ಆಮೆರಿಕಾ, ನ್ಯಾಟೋ ಪಡೆಗಳೇ ಆಗ ಉಕ್ರೇನ್ ವಾಯುಪ್ರದೇಶದಲ್ಲಿ ಪೆಟ್ರೋಲಿಂಗ್ ನಡೆಸಿ, ರಷ್ಯಾದ ವಿಮಾನ, ಹೆಲಿಕಾಪ್ಟರ್ ಗಳಿಂದ ರಕ್ಷಿಸಬೇಕಾಗುತ್ತೆ. ಅನಧಿಕೃತ ಯುದ್ದ ವಿಮಾನ, ಹೆಲಿಕಾಪ್ಟರ್ ಗಳನ್ನು ಹೊಡೆದುರುಳಿಸಬೇಕಾಗುತ್ತೆ. ರಷ್ಯಾ, ನ್ಯಾಟೋ ಪಡೆಗಳು ರಷ್ಯಾ ಸೇನೆ ವಿರುದ್ಧ ಉಕ್ರೇನ್ ನಲ್ಲಿ ಯುದ್ಧ ಘೋಷಿಸಬೇಕಾಗುತ್ತೆ.

ಇದಕ್ಕೆ ಆಮೆರಿಕಾ, ನ್ಯಾಟೋ ಪಡೆ ತಯಾರಿಲ್ಲ. ಹೀಗಾಗಿ ಉಕ್ರೇನ್ ವಾಯುಪ್ರದೇಶವನ್ನು ವಿಮಾನ ಹಾರಾಟ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲು ಆಮೆರಿಕಾ, ನ್ಯಾಟೋ ಪಡೆಗಳು ಸಿದ್ದರಿಲ್ಲ. ಕನಿಷ್ಠ ಮುಂಜಾಗ್ರತಾ ಕ್ರಮವಾಗಿಯಾದರೂ, ಉಕ್ರೇನ್ ವಾಯು ಪ್ರದೇಶವನ್ನು ವಿಮಾನ ಹಾರಾಟ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಮನವಿ ಮಾಡಿದ್ದಾರೆ. ಉಕ್ರೇನ್ ಅನ್ನು ವಿಮಾನ ಹಾರಾಟ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದರೇ ಅದು ರಷ್ಯಾ ವಿರುದ್ಧ ಯುದ್ಧ ಘೋಷಣೆಗೆ ಸಮನಾಗುತ್ತೆ ಎಂದು ಆಮೆರಿಕಾದ ಶ್ವೇತಭವನದ ಪ್ರೆಸ್ ಸೆಕ್ರೆಟರಿ ಜೆನ್ ಪೆಸಕಿ ಹೇಳಿದ್ದಾರೆ. ಉಕ್ರೇನ್ ಅನ್ನು ನ್ಯಾಟೋ ಮೈತ್ರಿಕೂಟಕ್ಕೆ ಸೇರ್ಪಡೆ ಮಾಡಿಕೊಳ್ಳುವುದನ್ನು ತ್ವರಿತಗೊಳಿಸಬೇಕು ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಹೇಳಿದ್ದಾರೆ. ಒಂದು ವೇಳೆ ಉಕ್ರೇನ್ ಅನ್ನು ನ್ಯಾಟೋಗೆ ಸೇರ್ಪಡೆ ಮಾಡಿಕೊಳ್ಳದಿದ್ದರೇ, ಪರ್ಯಾಯವಾಗಿ ಉಕ್ರೇನ್ ಗೆ ಭದ್ರತೆಯ ಗ್ಯಾರಂಟಿ ನೀಡಬೇಕು ಎಂದು ಅಧ್ಯಕ್ಷ ಜೆಲೆನ್ ಸ್ಕಿ ಕೇಳಿಕೊಂಡಿದ್ದಾರೆ.

ಉಕ್ರೇನ್ ನೆರೆಹೊರೆಯ ನ್ಯಾಟೋ ರಾಷ್ಟ್ರಗಳಿಗೂ ಮುಂದಿನ ದಿನಗಳಲ್ಲಿ ರಷ್ಯಾದಿಂದ ತೊಂದರೆ ಎದುರಾಗಬಹುದು ಎಂದು ಜೆಲೆನ್ ಸ್ಕಿ ಊಹಿಸಿದ್ದಾರೆ. ರಷ್ಯಾ ದಾಳಿಯಿಂದ ಉಕ್ರೇನ್ ಪತನವಾದರೇ, ಮುಂದಿನ ದಿನಗಳಲ್ಲಿ ರಷ್ಯಾ ಸೇನೆಯು ನಿಮ್ಮ ಗಡಿಗಳಲ್ಲಿ ಬಂದು ನಿಲ್ಲಲಿದೆ, ನೀವು ಕೂಡ ಇದೇ ಪರಿಸ್ಥಿತಿ ಎದುರಿಸುತ್ತೀರಿ ಎಂದು ನ್ಯಾಟೋ ರಾಷ್ಟ್ರಗಳಿಗೆ ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಎಚ್ಚರಿಸಿದ್ದಾರೆ.

ರಷ್ಯಾ ವಿರುದ್ಧ ಜೋ ಬೈಡೆನ್ ವಾಗ್ದಾಳಿ: ಇನ್ನೂ ಆಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಇಂದು ಸ್ಟೇಟ್ ಆಫ್ ಯೂನಿಯನ್ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಪ್ಪು ಲೆಕ್ಕಾಚಾರ ಹಾಕಿ ಪುಟಿನ್ ಉಕ್ರೇನ್ ಮೇಲೆ ಯುದ್ಧ ಘೋಷಿಸಿದ್ದಾರೆ. ಯುದ್ದದಲ್ಲಿ ರಷ್ಯಾ ಗೆಲ್ಲಬಹುದು, ಆದರೆ, ಭವಿಷ್ಯದಲ್ಲಿ ರಷ್ಯಾ ಈ ತಪ್ಪಿಗೆ ತಕ್ಕ ಬೆಲೆ ತೆರಬೇಕಾಗುತ್ತೆ. ದೀರ್ಘಾವಧಿಯಲ್ಲಿ ರಷ್ಯಾ ನಿರಂತವಾಗಿ ಹೆಚ್ಚಿನ ಬೆಲೆ ತೆರಬೇಕಾಗುತ್ತೆ. ಭವಿಷ್ಯ ಏನಾಗಲಿದೆ ಎಂದು ವಾಡ್ಲಿಮಿರ್ ಪುಟಿನ್ ಗೆ ತಿಳಿದಿಲ್ಲ. ಕೆಲವು ನಿರ್ಬಂಧಗಳಿಂದ ರಷ್ಯಾವನ್ನು ಉಸಿರುಗಟ್ಟಿಸುತ್ತಿದ್ದೇವೆ. ಇದು ರಷ್ಯಾದ ಆರ್ಥಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಮುಂಬರುವ ವರ್ಷಗಳಲ್ಲಿ ರಷ್ಯಾ ಮಿಲಿಟರಿ ದುರ್ಬಲಗೊಳ್ಳಲಿದೆ ಎಂದು ಜೋ ಬೈಡೆನ್ ಹೇಳಿದ್ದಾರೆ.

ಮಾತುಕತೆಗೂ ಮುನ್ನ ಯುದ್ಧ ನಿಲ್ಲಿಸಿ ಎಂದ ಉಕ್ರೇನ್‌ ರಷ್ಯಾ-ಉಕ್ರೇನ್ ನಡುವಿನ ಮತ್ತೊಂದು ಸುತ್ತಿನ ಮಾತುಕತೆಗೂ ಮುನ್ನ ಕದನ ವಿರಾಮ ಘೋಷಿಸಿ ಎಂದು ಉಕ್ರೇನ್ ಅಧ್ಯಕ್ಷ ವಾಡ್ಲಿಮಿರ್ ಜೆಲೆನ್ ಸ್ಕಿ ನೇರವಾಗಿ ರಷ್ಯಾಗೆ ಒತ್ತಾಯಿಸಿದ್ದಾರೆ. ರಷ್ಯಾ ಸೇನೆಯು ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ಪರಿಯನ್ನು ನೋಡಿದರೇ, ಒಂದೆರೆಡು ದಿನಗಳಲ್ಲೇ ಉಕ್ರೇನ್ ರಾಜಧಾನಿ ಕೀವ್ ಕೂಡ ರಷ್ಯಾ ವಶವಾಗಬಹುದು. ಜಗತ್ತಿನ ಬಲಾಢ್ಯ ದೇಶಗಳ ನ್ಯಾಟೋ ಪಡೆ, ರಷ್ಯಾ ವಿರುದ್ದ ನೇರ ಯುದ್ದಕ್ಕಿಳಿಯದೇ ದೂರ ಉಳಿದಿರುವುದರಿಂದ ಉಕ್ರೇನ್ ಪತನ ತಪ್ಪಿಸಲು ಸಾಧ್ಯವಿಲ್ಲ ಅಂತ ರಕ್ಷಣಾ ತಜ್ಞರು ಹೇಳುತ್ತಿದ್ದಾರೆ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?