ಕೂಡಲೇ ಖಾರ್ಕಿವ್ನಿಂದ ಹೊರಟು ಈ ಜಾಗಗಳನ್ನು ಸೇರಿಕೊಳ್ಳಿ; ಉಕ್ರೇನ್ನಲ್ಲಿರುವ ಭಾರತೀಯರಿಗೆ ಸರ್ಕಾರ ಸೂಚನೆ
ಭಾರತದ ಜನರು ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ.
ನವದೆಹಲಿ: ಉಕ್ರೇನ್‌ನ (Ukraine) ಎರಡನೇ ಅತಿ ದೊಡ್ಡ ನಗರದಲ್ಲಿ ರಷ್ಯಾದ ದಾಳಿ ತೀವ್ರಗೊಂಡಿರುವುದರಿಂದ ಖಾರ್ಕಿವ್‌ನಲ್ಲಿರುವ ತನ್ನ ಎಲ್ಲಾ ಪ್ರಜೆಗಳು ತಮ್ಮ ಸುರಕ್ಷತೆಗಾಗಿ ತಕ್ಷಣವೇ ಖಾರ್ಕಿವ್ನಿಂದ ತೆರಳುವಂತೆ ಭಾರತ ಇಂದು ತುರ್ತು ಮನವಿಯನ್ನು ಮಾಡಿದೆ. ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರು ಉಕ್ರೇನಿಯನ್ ಸಮಯ ಸಂಜೆ 6 ಗಂಟೆಯೊಳಗೆ (ಭಾರತೀಯ ಕಾಲಮಾನ ರಾತ್ರಿ 9.30) ಪೆಸೊಚಿನ್, ಬಾಬಾಯೆ ಅಥವಾ ಬೆಜ್ಲ್ಯುಡೋವ್ಕಾವನ್ನು ತಲುಪಬೇಕು ಎಂದು ಭಾರತ ತಿಳಿಸಿದೆ.
ಭಾರತದ ಜನರು ತಮ್ಮ ಸುರಕ್ಷತೆ ಮತ್ತು ಭದ್ರತೆಗಾಗಿ ಕೂಡಲೇ ಖಾರ್ಕಿವ್ ಅನ್ನು ತೊರೆಯಬೇಕು, ಹದಗೆಡುತ್ತಿರುವ ಪರಿಸ್ಥಿತಿಯಲ್ಲಿ ಬೇಗ ಆ ಜಾಗವನ್ನು ಬಿಟ್ಟು ಹೊರಡಬೇಕು ಎಂದು ಭಾರತೀಯ ರಾಯಭಾರ ಕಚೇರಿ ಸೂಚಿಸಿದೆ. 1.4 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಯುದ್ಧ-ಹಾನಿಗೊಳಗಾದ ಖಾರ್ಕಿವ್ ನಗರದಲ್ಲಿ ಸಾರ್ವಜನಿಕ ಸಾರಿಗೆಯ ದೊಡ್ಡ ಕೊರತೆಯ ನಡುವೆ ಈ ಸಲಹೆ ನೀಡಲಾಗಿದೆ.
URGENT ADVISORY TO ALL INDIAN NATIONALS IN KHARKIV. FOR THEIR SAFETY AND SECURITY THEY MUST LEAVE KHARKIV IMMEDIATELY. PROCEED TO PESOCHIN, BABAYE AND BEZLYUDOVKA AS SOON AS POSSIBLE. UNDER ALL CIRCUMSTANCES THEY MUST REACH THESE SETTLEMENTS *BY 1800 HRS (UKRAINIAN TIME) TODAY*.
— India in Ukraine (@IndiainUkraine) March 2, 2022
ರಷ್ಯಾದ ಗಡಿಗೆ ಸಮೀಪದಲ್ಲಿರುವ ಖಾರ್ಕಿವ್ ನಗರದ ಪೂರ್ವ ಭಾಗ ಉಕ್ರೇನ್ನಲ್ಲಿ ಯುದ್ಧ ಆರಂಭವಾದ ದಿನದಿಂದ ತೀವ್ರತರವಾದ ದಾಳಿಯನ್ನು ಎದುರಿಸುತ್ತಿದೆ. ಇಂದು ಮುಂಜಾನೆ, ರಷ್ಯಾದ ಪ್ಯಾರಾಟ್ರೂಪರ್‌ಗಳು ಖಾರ್ಕಿವ್‌ಗೆ ಬಂದಿಳಿದಿದ್ದು, ಬೀದಿಗಳಲ್ಲಿ ಘರ್ಷಣೆಗಳು ನಡೆದಿವೆ ಎಂದು ಉಕ್ರೇನಿಯನ್ ಪಡೆಗಳು ತಿಳಿಸಿವೆ.
URGENT ADVISORY TO INDIAN STUDENTS IN KHARKIV.@MEAIndia @PIB_India @DDNational @DDNewslive pic.twitter.com/2dykst5LDB
— India in Ukraine (@IndiainUkraine) March 2, 2022
ಸುದ್ದಿ ಸಂಸ್ಥೆ AFP ಭದ್ರತಾ, ಪೊಲೀಸ್ ಮತ್ತು ವಿಶ್ವವಿದ್ಯಾಲಯಗಳ ಕಚೇರಿಗಳ ಕಟ್ಟಡಗಳ ಮೇಲೆ ರಾಕೆಟ್ ದಾಳಿಗಳನ್ನು ವರದಿ ಮಾಡಿದೆ. ನಿರಂತರ ಶೆಲ್ ದಾಳಿಯಿಂದಾಗಿ ರಸ್ತೆ ಸಾರಿಗೆ ಲಭ್ಯವಿಲ್ಲ. ರೈಲಿನಲ್ಲಿ ಹೋಗುವುದು ಕೂಡ ಸುಲಭವಲ್ಲ ಎಂದು ಖಾರ್ಕಿವ್ ನಿಲ್ದಾಣದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ವೀಡಿಯೊಗಳಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Breaking: ಉಕ್ರೇನ್ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್ನಿಂದ ಮೃತಪಟ್ಟ ಪಂಜಾಬ್ ಯುವಕ
Russia- Ukraine War: ಉಕ್ರೇನ್ ಜೊತೆ ಮತ್ತೆ ಮಾತುಕತೆಗೆ ಸಿದ್ಧ ಎಂದ ರಷ್ಯಾ; 6 ಹೊಸ ಬೆಳವಣಿಗೆಗಳು ಹೀಗಿವೆ