ಉಕ್ರೇನ್ನ ಖಾರ್ಕಿವ್ನಲ್ಲಿ ಸಿಲುಕಿರುವ ಉತ್ತರ ಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರ ಸಂಪರ್ಕ ಕಡಿತ, ಹೆಚ್ಚಾದ ಆತಂಕ
ಉಕ್ರೇನ್ನ ಖಾರ್ಕಿವ್ನಲ್ಲಿ ಸಿಲುಕಿರುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಮೆಡಿಕಲ್ ವಿದ್ಯಾರ್ಥಿನಿ ಸ್ನೇಹಾ, ನಾಝಿಯಾ ಎಂಬ ಇಬ್ಬರು ವಿದ್ಯಾರ್ಥಿನಿಯರ ಸಂಪರ್ಕ ಕಡಿತಗೊಂಡಿದೆ.
ಕಾರವಾರ: ಉಕ್ರೇನ್ ಮತ್ತು ರಷ್ಯಾ ನಡುವೆ(Russia Ukraine War) ನಡೀತಿರೋ ರಣಭೀಕರ ಯುದ್ಧ ದಿನೇ ದಿನೇ ರಾಕ್ಷಸ ರೂಪ ಪಡೆಯುತ್ತಿದೆ. ರಷ್ಯಾ ಸೇನೆ ಉಕ್ರೇನ್ ರಸ್ತೆ ರಸ್ತೆಯಲ್ಲೂ ರಕ್ತದೋಕುಳಿ ಆಡ್ತಿದೆ. ಅದರಲ್ಲೂ ಉಕ್ರೇನ್ನ ರಾಜಧಾನಿ ಕೀವ್ ಹಾಗೂ ಖಾರ್ಕಿವ್ ಮೇಲೆ ಬಾಂಬ್, ಮಿಸೈಲ್ಗಳ ಸುರಿಮಳೆ ಇಲ್ಲಿನ ನಾಗರಿಕರನ್ನು ತಲ್ಲಣಗೊಳಿಸಿದೆ. ಜೀವ ಕೈಯಲ್ಲಿ ಹಿಡಿದು ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ. ಆದ್ರೂ ಇಂತಹ ಸನ್ನಿವೇಶದಲ್ಲಿ ಹೊರಗೆ ಬಂದಿದ್ದ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ, 21 ವರ್ಷದ ನವೀನ್ ದುರಂತ ಸಾವಿಗೀಡಾಗಿದ್ದಾರೆ. ನವೀನ್ ಸಾವಿನ ಬಗ್ಗೆ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ. ಸದ್ಯ ಇದು ಹಳೆಯ ಸುದ್ದಿಯಾದ್ರೆ ಇಂದು ಮತ್ತೆ ಇಬ್ಬರು ವಿದ್ಯಾರ್ಥಿನಿಯರ ಸಂಪರ್ಕ ಕಡಿತವಾಗಿದ್ದು ಆತಂಕ ಹೆಚ್ಚಿದೆ.
ಉಕ್ರೇನ್ನ ಖಾರ್ಕಿವ್ನಲ್ಲಿ ಸಿಲುಕಿರುವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಮೆಡಿಕಲ್ ವಿದ್ಯಾರ್ಥಿನಿ ಸ್ನೇಹಾ, ನಾಝಿಯಾ ಎಂಬ ಇಬ್ಬರು ವಿದ್ಯಾರ್ಥಿನಿಯರ ಸಂಪರ್ಕ ಕಡಿತಗೊಂಡಿದೆ. ಓನ್ ರಿಸ್ಕ್ನಲ್ಲಿ ರೊಮೇನಿಯಾ ಬಾರ್ಡರ್ಗೆ ತೆರಳುವಂತೆ ಕೇಂದ್ರ ಗೃಹ ಇಲಾಖೆ ಸಚಿವಾಲಯದ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಇಬ್ಬರು ವಿದ್ಯಾರ್ಥಿನಿಯರು ರೊಮೇನಿಯಾಕ್ಕೆ ತೆರಳಿದ್ದು ನಿನ್ನೆ ರಾತ್ರಿಯಿಂದ ವಿದ್ಯಾರ್ಥಿನಿಯರು ಸಂಪರ್ಕಕ್ಕೆ ಸಿಕ್ಕಿಲ್ಲ. ಜಿಲ್ಲಾಡಳಿತ ಮತ್ತು ಕೇಂದ್ರಸರ್ಕಾರದ ಅಧಿಕಾರಿಗಳ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭಾರತ-ಐರ್ಲೆಂಡ್ ಸರಣಿ ವೇಳಾಪಟ್ಟಿ ಪ್ರಕಟ: ಮತ್ತೆ 2 ತಂಡಗಳಾಗಲಿದೆಯಾ ಟೀಮ್ ಇಂಡಿಯಾ?
Alia Bhatt: ‘ಗಂಗೂಬಾಯಿ ಕಾಠಿಯಾವಾಡಿ’ ಪ್ರಚಾರದ ವೇಳೆ ಎಡವಟ್ಟು; ಸ್ವಲ್ಪದರಲ್ಲೇ ಬಚಾವಾದ ಆಲಿಯಾ