ಭಾರತ-ಐರ್ಲೆಂಡ್ ಸರಣಿ ವೇಳಾಪಟ್ಟಿ ಪ್ರಕಟ: ಮತ್ತೆ 2 ತಂಡಗಳಾಗಲಿದೆಯಾ ಟೀಮ್ ಇಂಡಿಯಾ?

ಭಾರತ-ಐರ್ಲೆಂಡ್ ಸರಣಿ ವೇಳಾಪಟ್ಟಿ ಪ್ರಕಟ: ಮತ್ತೆ 2 ತಂಡಗಳಾಗಲಿದೆಯಾ ಟೀಮ್ ಇಂಡಿಯಾ?
India vs Ireland

Indian Cricket Team: ಈ ಸರಣಿಗೂ ಮುನ್ನ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಇದಕ್ಕಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಭೇಟಿ ನೀಡಲಿದೆ.

TV9kannada Web Team

| Edited By: Zahir PY

Mar 02, 2022 | 2:45 PM

ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಗೆದ್ದಿರುವ ಭಾರತ ಕ್ರಿಕೆಟ್ ತಂಡ ಇದೀಗ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿ ಬಳಿಕ ಟೀಮ್ ಇಂಡಿಯಾ ಆಟಗಾರರು ಐಪಿಎಲ್ ಆಡಲಿದ್ದಾರೆ. ಇದಾದ ಬಳಿಕ ಭಾರತ ತಂಡವು ಜೂನ್‌ನಲ್ಲಿ ನೇರವಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದೆ. ಈ ವೇಳೆ ಐರ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಆಡಲಾಗುತ್ತದೆ. ಜೂನ್ ಕೊನೆಯ ವಾರದಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಭಾರತ ತಂಡ ಎರಡು ಟಿ20 ಪಂದ್ಯಗಳನ್ನು ಆಡಲಿದೆ. ಈ ಎರಡೂ ಪಂದ್ಯಗಳು ಜೂನ್ 26 ಮತ್ತು 28 ರಂದು ಮಲಾಹೈಡ್‌ನಲ್ಲಿ ನಡೆಯಲಿವೆ. ವಿಶೇಷ ಎಂದರೆ ಭಾರತ ತಂಡ 4 ವರ್ಷಗಳ ಬಳಿಕ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮೊದಲು, 2018 ರಲ್ಲಿ, ಭಾರತ ತಂಡವು ಟಿ20 ಸರಣಿಗಾಗಿ ಐರ್ಲೆಂಡ್‌ಗೆ ಪ್ರವಾಸ ಕೈಗೊಂಡಿತು.

ಭಾರತ ಮೀಸಲು ತಂಡವನ್ನು ಕಳುಹಿಸುತ್ತದೆಯೇ? ಈ ಸರಣಿಗೂ ಮುನ್ನ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದ್ದು, ಇದಕ್ಕಾಗಿ ದಕ್ಷಿಣ ಆಫ್ರಿಕಾ ತಂಡ ಭಾರತಕ್ಕೆ ಭೇಟಿ ನೀಡಲಿದೆ. ಈ ಪಂದ್ಯಗಳು ಜೂನ್ 9 ರಿಂದ ಜೂನ್ 15 ರವರೆಗೆ ನಡೆಯಲಿವೆ. ಆದರೆ, ಈ ಸರಣಿಗೆ ಟೀಮ್ ಇಂಡಿಯಾ ತನ್ನ ಪ್ರಮುಖ ತಂಡವನ್ನು ಕಳುಹಿಸುತ್ತದೆಯೇ ಅಥವಾ ತನ್ನ ಮೀಸಲು ಆಟಗಾರರ ತಂಡವನ್ನು ಸಿದ್ಧಪಡಿಸಿ ಕಳುಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಹಿಂದೆ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿ ಆಡುತ್ತಿದ್ದ ವೇಳೆ ಬಿಸಿಸಿಐ ಶಿಖರ್ ಧವನ್ ನಾಯಕತ್ವದಲ್ಲಿ ಮತ್ತೊಂದು ತಂಡವನ್ನು ಶ್ರೀಲಂಕಾ ವಿರುದ್ದದ ಸರಣಿಗೆ ಕಳುಹಿಸಿತ್ತು. ಈ ಬಾರಿ ಕೂಡ ಇದೇ ಮಾದರಿಯಲ್ಲಿ ಬಿಸಿಸಿಐ ಎರಡು ತಂಡಗಳನ್ನು ರೂಪಿಸುವ ಸಾಧ್ಯತೆ ಹೆಚ್ಚಿದೆ.

ಐರ್ಲೆಂಡ್ ಬ್ಯಾಕ್ ಟು ಬ್ಯಾಕ್ ಸರಣಿ: ಐರ್ಲೆಂಡ್‌ನ ಈ ‘ಕ್ರಿಕೆಟ್ ಸಮ್ಮರ್’ನಲ್ಲಿ ಭಾರತ ಮಾತ್ರವಲ್ಲದೆ ಇತರ 3 ದೇಶಗಳ ತಂಡಗಳಿಗೂ ಆತಿಥ್ಯ ವಹಿಸಲಿದೆ. ಭಾರತದ ನಂತರ, ಐರಿಶ್ ತಂಡವು ನ್ಯೂಜಿಲೆಂಡ್‌ಗೆ ಆತಿಥ್ಯ ವಹಿಸಲಿದೆ. ಈ ವೇಳೆ 3 ODI ಮತ್ತು 3 T20 ಪಂದ್ಯಗಳನ್ನು ಆಡಲಾಗುತ್ತದೆ. ಈ ಸರಣಿಯ ನಂತರ, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ 2 T20I ಗಳು ಸಹ ನಡೆಯಲಿವೆ. ಆದರೆ ಈ ಎರಡೂ ಪಂದ್ಯಗಳು ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ನಡೆಯಲಿದೆ. ಇವೆರಡರ ಹೊರತಾಗಿ ಅಫ್ಘಾನಿಸ್ತಾನದೊಂದಿಗೆ ಟಿ20 ಸರಣಿಯನ್ನೂ ಕೂಡ ಐರ್ಲೆಂಡ್ ಆಡಲಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(Indian Cricket Team to tour Ireland for 2 T20i matches in June)

Follow us on

Related Stories

Most Read Stories

Click on your DTH Provider to Add TV9 Kannada