Breaking: ಉಕ್ರೇನ್​​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್​​​ನಿಂದ ಮೃತಪಟ್ಟ ಪಂಜಾಬ್​​ ಯುವಕ

Breaking: ಉಕ್ರೇನ್​​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಸಾವು; ಇಸ್ಕೆಮಿಕ್ ಸ್ಟ್ರೋಕ್​​​ನಿಂದ ಮೃತಪಟ್ಟ ಪಂಜಾಬ್​​ ಯುವಕ
ಸಾಂದರ್ಭಿಕ ಚಿತ್ರ

ಮಾರ್ಚ್​ 1ರಂದು ಹಾವೇರಿ ಮೂಲದ ನವೀನ್​ ಖಾರ್ಕೀವ್​​ನಲ್ಲಿ ರಷ್ಯಾದ ಬಾಂಬ್​ ದಾಳಿಗೆ ಬಲಿಯಾಗಿದ್ದರು. ಮುಂಜಾನೆ ಎದ್ದು ತಿಂಡಿ ತರಲೆಂದು ತಾವಿದ್ದ ಬಂಕರ್​ನಿಂದ ಸ್ವಲ್ಪವೇ ದೂರದಲ್ಲಿದ್ದ ಸೂಪರ್​ ಮಾರ್ಕೆಟ್​​ಗೆ ಹೋಗಿದ್ದ ನವೀನ್​ ಮೃತಪಟ್ಟಿದ್ದರು.

TV9kannada Web Team

| Edited By: Lakshmi Hegde

Mar 02, 2022 | 5:20 PM

ಉಕ್ರೇನ್​ನಲ್ಲಿ ಭಾರತದ ಇನ್ನೊಬ್ಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಪಂಜಾಬ್​​ ಮೂಲದ ಚಂದನ್ ಜಿಂದಾಲ್ (22) ಮೃತ ಯುವಕ. ಈತ ಉಕ್ರೇನ್​​(Ukraine)ನಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್​ ಮಾಡುತ್ತಿದ್ದ. ಚಂದನ್​​ಗೆ ಇಸ್ಕೆಮಿಕ್ ಸ್ಟ್ರೋಕ್ ಆಗಿತ್ತು(ಅಂದರೆ ಮಿದುಳಿಗೆ ರಕ್ತ ಪೂರೈಕೆ ಸರಿಯಾಗಿ ಆಗದಾಗ ಉಂಟಾಗುವ ಪಾರ್ಶ್ವವಾಯು​).

ಪಂಜಾಬ್​ನ ಬರ್ನಾಲಾದವರಾದ ಚಂದನ್​ ಜಿಂದಾಲ್​ಗೆ ಪಾರ್ಶವಾಯು ಉಂಟಾಗಿ ಅವರನ್ನು ವಿನ್ನಿಟ್ಸಿಯಾದ ಆಸ್ಪತ್ರೆಯ ತುರ್ತುಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.  ಅವರ ಕುಟುಂಬಕ್ಕೂ ಈಗಾಗಲೇ ವಿಷಯ ತಿಳಿಸಲಾಗಿದ್ದು, ಚಂದನ್ ಮೃತದೇಹವನ್ನು ವಾಪಸ್​ ತರಲು ಸಹಾಯ ಮಾಡುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ. ರಷ್ಯಾ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್​​ನಲ್ಲಿ ಮೃತಪಡುತ್ತಿರುವ ಎರಡನೇ ವಿದ್ಯಾರ್ಥಿ ಚಂದನ್​. ಹಾಗಂತ ಇವರು ರಷ್ಯಾದ ದಾಳಿಗೆ ಬಲಿಯಾಗಲಿಲ್ಲ ಎಂಬುದು ಸ್ಪಷ್ಟವಾಗಿದೆ.

ಮಾರ್ಚ್​ 1ರಂದು ಹಾವೇರಿ ಮೂಲದ ನವೀನ್​ ಖಾರ್ಕೀವ್​​ನಲ್ಲಿ ರಷ್ಯಾದ ಬಾಂಬ್​ ದಾಳಿಗೆ ಬಲಿಯಾಗಿದ್ದರು. ಮುಂಜಾನೆ ಎದ್ದು ತಿಂಡಿ ತರಲೆಂದು ತಾವಿದ್ದ ಬಂಕರ್​ನಿಂದ ಸ್ವಲ್ಪವೇ ದೂರದಲ್ಲಿದ್ದ ಸೂಪರ್​ ಮಾರ್ಕೆಟ್​​ಗೆ ಹೋಗಿದ್ದ ನವೀನ್​ ಮೃತಪಟ್ಟಿದ್ದರು. ಅವರ ಮೃತದೇಹವನ್ನೂ ವಾಪಸ್​ ತರುವ ಪ್ರಯತ್ನಗಳು ನಡೆಯುತ್ತಿವೆ. ಕೊನೇಬಾರಿಗೆ ತಮ್ಮ ಮಗನ ಮುಖ ನೋಡಬೇಕು ಎಂದು ನವೀನ್​ ಕುಟುಂಬದವರು ದುಃಖಿಸುತ್ತಿದ್ದಾರೆ.

ಉಕ್ರೇನ್​​ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ರಕ್ಷಿಸಲು ಕೇಂದ್ರ ಸರ್ಕಾರ ಆಪರೇಶನ್​ ಗಂಗಾ ಪ್ರಾರಂಭಿಸಿದ್ದು, ಇದಕ್ಕೆ ಭಾರತೀಯ ವಾಯುಸೇನೆಯೂ ಸಾಥ್​ ನೀಡಿದೆ. ಉಕ್ರೇನ್​​ನಲ್ಲಿರುವ ಪ್ರತಿಯೊಬ್ಬ ಭಾರತೀಯನನ್ನೂ ವಾಪಸ್ ಕರೆತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇನ್ನು ಮುಂದೆ ರಷ್ಯಾ ಗಡಿಯ ಮೂಲಕವೂ ಭಾರತೀಯರನ್ನು ಸ್ಥಳಾಂತರ ಮಾಡಲು ಅನುಮತಿ ಸಿಕ್ಕಿದ್ದು, ಕಾರ್ಯಾಚರಣೆ ಇನ್ನಷ್ಟು ಚುರುಕಾಗಿ ನಡೆಯಲಿದೆ.

ಇದನ್ನೂ ಓದಿ: ಅಣು ಯುದ್ಧದ ಭೀತಿ ವ್ಯಕ್ತಪಡಿಸ್ತಾ ಹಾಲಿ​ ಅಧ್ಯಕ್ಷ ಝೆಲೆನ್​ಸ್ಕಿ ಪದಚ್ಯುತಿಗೆ ರಷ್ಯಾ ಹುನ್ನಾರ ನಡೆಸಿದೆ -ಉಕ್ರೇನ್ ಆತಂಕ

Follow us on

Related Stories

Most Read Stories

Click on your DTH Provider to Add TV9 Kannada