Viral Photo: ಯುದ್ಧದ ಭಯವಿಲ್ಲದೆ ಉಕ್ರೇನ್ ಸೈನಿಕರ ಯೂನಿಫಾರಂ ಮೇಲೆ ಮಲಗಿ ನಿದ್ರೆ ಮಾಡಿದ ಮಗು; ಫೋಟೋ ವೈರಲ್
Russia- Ukraine War: ಉಕ್ರೇನಿಯನ್ ಮಗುವೊಂದು ತನ್ನ ದೇಶದ ಸೈನಿಕರ ಯೂನಿಫಾರಂ ಮೇಲೆ ಮಲಗಿ, ನೆಮ್ಮದಿಯಾಗಿ ನಿದ್ರೆ ಮಾಡುತ್ತಿರುವ ಫೋಟೋ ನೋಡಿದವರು ಭಾವುಕರಾಗಿದ್ದಾರೆ.
ನವದೆಹಲಿ: ಉಕ್ರೇನ್ನಲ್ಲಿ (Ukraine) ರಷ್ಯಾದ (Russia) ದಾಳಿ ಇನ್ನೂ ನಿಂತಿಲ್ಲ. ಎರಡೂ ರಾಷ್ಟ್ರಗಳ ನಡುವಿನ ಯುದ್ಧದಲ್ಲಿ ಈಗಾಗಲೇ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉಕ್ರೇನ್ನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಉಕ್ರೇನ್ ತೊರೆದು ಹೋಗಲು ಬೇರೆ ರಾಷ್ಟ್ರಗಳ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಕಾಯುತ್ತಿದ್ದಾರೆ. ಇದರ ನಡುವೆ ಮಿಲಿಟರಿ ಸಮವಸ್ತ್ರದ ಮೇಲೆ ಮಗುವೊಂದು ಮಲಗಿ, ವಿಶ್ರಾಂತಿ ಪಡೆಯುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಉಕ್ರೇನಿಯನ್ ಮಗುವೊಂದು ತನ್ನ ದೇಶದ ಸೈನಿಕರ ಯೂನಿಫಾರಂ ಮೇಲೆ ಮಲಗಿ, ನೆಮ್ಮದಿಯಾಗಿ ನಿದ್ರೆ ಮಾಡುತ್ತಿರುವ ಹೃದಯವಿದ್ರಾವಕ ಫೋಟೋ ನೋಡಿದವರು ಭಾವುಕರಾಗಿದ್ದಾರೆ. ಈ ಫೋಟೋ ವೈರಲ್ ಆಗಿದ್ದು, “ಗುಡ್ ಬೈ ಮೈ ಲಿಟಲ್ ಬಾಯ್.. ಐ ಹೋಪ್ ಸೀ ಯು ಇನ್ ಇನ್ ಟೈಮ್ ಐ ಸರ್ವೈವ್” ಎಂಬ ಕ್ಯಾಪ್ಷನ್ ನೀಡಲಾಗಿದೆ.
ಈ ಫೋಟೋ ಟ್ವಿಟ್ಟರ್‌ನಲ್ಲಿ ವೈರಲ್ ಆಗಿದ್ದು, 46,000ಕ್ಕೂ ಹೆಚ್ಚು ಲೈಕ್ಸ್ ಮತ್ತು 4,100ಕ್ಕೂ ಹೆಚ್ಚು ರೀಟ್ವೀಟ್ ಆಗಿದೆ. ಇದು Instagram, Facebook ಮತ್ತು Redditನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಇದು ನಾನು ನೋಡಿದ ಅತ್ಯಂತ ಹೃದಯವಿದ್ರಾವಕ ಟ್ವೀಟ್. #StandWithUkraine” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು “ಈ ಫೋಟೋ ನೋಡಿದರೆ ಕಣ್ಣು ತುಂಬುತ್ತಿದೆ” ಎಂದು ಟ್ವೀಟ್ ಮಾಡಿದ್ದಾರೆ.
Good bye my little boy..i hope see you an other time i survive#UkraineRussiaWar #Ukraine #UkraineInvasion #UkraineKrieg #Ukrania #Ukriane pic.twitter.com/Pkay40vnWI
— kovak sorava (@denttooth) March 1, 2022
ಇದರ ಮಧ್ಯೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ನೇರ ಮಾತುಕತೆಗೆ ಕರೆ ನೀಡಿದ್ದಾರೆ. “ನೇರಾಗಿ ಮಾತುಕತೆ ನಡೆಸಿ, ಸಮಸ್ಯೆ ಬಗೆಹರಿಸಿಕೊಳ್ಳುವುದೇ ಈ ಯುದ್ಧವನ್ನು ನಿಲ್ಲಿಸುವ ಏಕೈಕ ಮಾರ್ಗವಾಗಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ವಾರ ರಷ್ಯಾದ ಆಕ್ರಮಣದಿಂದ ಕನಿಷ್ಠ 350 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ. ವ್ಯಾಪಕವಾದ ಪುರಾವೆಗಳ ಹೊರತಾಗಿಯೂ, ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಮಾಸ್ಕೋ ಹೇಳಿಕೊಂಡಿದೆ. ರಷ್ಯಾದ ಆಕ್ರಮಣದ ನಂತರ ಒಂದು ವಾರದಲ್ಲಿ ಒಂದು ಮಿಲಿಯನ್ ನಿರಾಶ್ರಿತರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಎರಡನೇ ಸುತ್ತಿನ ಮಾತುಕತೆಯಲ್ಲಿ ರಷ್ಯಾ ಮತ್ತು ಉಕ್ರೇನ್ ತೀವ್ರವಾದ ಸಂಕಷ್ಟದಿಂದಾಗಿ ಪಲಾಯನ ಮಾಡುವ ನಾಗರಿಕರಿಗೆ ಮಾನವೀಯ ಕಾರಿಡಾರ್‌ಗಳನ್ನು ರಚಿಸಲು ಒಪ್ಪಿಕೊಂಡಿವೆ. ಪೋಲೆಂಡ್-ಬೆಲಾರಸ್ ಗಡಿಯಲ್ಲಿ ರಷ್ಯಾ ಮತ್ತು ಉಕ್ರೇನಿಯನ್ ಅಧಿಕಾರಿಗಳ ನಡುವಿನ ಮಾತುಕತೆಗಳು ನಡೆದಿವೆ.
Russia Ukraine War: ರಷ್ಯಾ- ಉಕ್ರೇನ್ ಕದನ; ಉಕ್ರೇನಿಯನ್ನರ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತಿವೆ ಈ ಫೋಟೋಗಳು