ಉಕ್ರೇನ್: ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್ ಸಹಾಯ; ಮತ್ತೆ ರಿಯಲ್ ಹೀರೋ ಆದ ನಟ
ಉಕ್ರೇನ್ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ವಾಪಸ್ ಬರಲು ಹರಸಾಹಸ ಪಡುತ್ತಿದ್ದಾರೆ. ಅಂಥವರಿಗೆ ಸೋನು ಸೂದ್ ನೆರವು ನೀಡುತ್ತಿದ್ದಾರೆ.
ಖ್ಯಾತ ನಟ ಸೋನು ಸೂದ್ ಅವರು ಮತ್ತೆ ರಿಯಲ್ ಹೀರೋ (Real Hero Sonu Sood) ಎನಿಸಿಕೊಂಡಿದ್ದಾರೆ. ಈ ಹಿಂದೆ ಲಾಕ್ಡೌನ್ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಸೋನು ಸೂದ್ ಅವರು ಸಾಕಷ್ಟು ಸಹಾಯ ಮಾಡಿದ್ದರು. ಆ ನಂತರವೂ ಅವರ ಸಮಾಜಮುಖಿ ಕಾರ್ಯ ಮುಂದುವರಿದಿತ್ತು. ಈಗ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸೋನು ಸೂದ್ (Sonu Sood) ಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಅನೇಕರು ವಿಡಿಯೋ ಮೂಲಕ ಧನ್ಯವಾದ ತಿಳಿಸುತ್ತಿದ್ದಾರೆ. ಈ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ. ಸದ್ಯ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ (Ukraine Russia War) ತೀವ್ರಗೊಂಡಿದೆ. ‘ಸೋನು ಸೂದ್ ಅವರ ತಂಡದವರು ನಮಗೆ ಸಹಾಯ ಮಾಡಿದರು. ಎಲ್ಲ ಸಂದರ್ಭದಲ್ಲೂ ಸೂಕ್ತವಾಗಿ ಮಾರ್ಗದರ್ಶನ ನೀಡಿದರು. ಈ ರೈಲಿನಲ್ಲಿರುವ ಎಲ್ಲರೂ ಭಾರತೀಯರು. ಸೋನು ಸೂದ್ ಅವರಿಗೆ ನಾವು ಧನ್ಯವಾದ ಅರ್ಪಿಸುತ್ತೇವೆ’ ಎಂದು ಯುವತಿಯೊಬ್ಬರು ಈ ವಿಡಿಯೋದಲ್ಲಿ ಹೇಳಿದ್ದಾರೆ. ಉಕ್ರೇನ್ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರು ವಾಪಸ್ ಬರಲು ಹರಸಾಹಸ ಪಡುತ್ತಿದ್ದಾರೆ. ಅಂಥವರಿಗೆ ಸೋನು ಸೂದ್ ನೆರವು ನೀಡುತ್ತಿದ್ದಾರೆ.
ಇದನ್ನೂ ಓದಿ:
ಯುದ್ಧದಿಂದ ಕಂಗೆಟ್ಟಿರುವ ಉಕ್ರೇನ್ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳ ರಕ್ಷಣೆಗೆ ಧಾವಿಸಿದ ನಟ ಸೋನು ಸೂದ್
ಭಾರತೀಯರನ್ನು ಉಕ್ರೇನ್ನಿಂದ ಮೊದಲೇ ಯಾಕೆ ಕರೆತರಲಿಲ್ಲ?; ಮೋದಿ ವಿರುದ್ಧ ಮಮತಾ ಬ್ಯಾನರ್ಜಿ ವಾಗ್ದಾಳಿ
Published on: Mar 04, 2022 09:39 AM
ಮಾಜಿ ಸಂಸದೆ ಸುಮಲತಾ ಅಂಬರೀಶ್ ಬಗ್ಗೆ ರೇವಣ್ಣ ಅಚ್ಚರಿಯ ಹೇಳಿಕೆ
ಪರಿಷತ್ ಚುನಾವಣೆ: ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು
ಬಿಗ್ಬಾಸ್ಗೆ ಹೋಗಲು ರೆಡಿ ಆಗಿದ್ದಾರಾ ಸೂರಜ್: ಹಾಸ್ಯ ನಟ ಹೇಳಿದ್ದೇನು?
ನಿರ್ದೇಶಕ ಓಂ ಪ್ರಕಾಶ್ ಹೇಳಿದ ಉಪ್ಪಿಟ್ಟು ಮತ್ತು ದರ್ಶನ್ ಕತೆ: ವಿಡಿಯೋ

