Russia Ukraine War Highlights: ಮೃತ ನವೀನ ನಿವಾಸಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ
Russia Ukraine Conflict Highlights: ರಷ್ಯಾ ಹಾಗೂ ಉಕ್ರೇನ್ ಮಧ್ಯೆ ಯುದ್ಧ ಮುಂದುವರೆದಿದೆ. ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡ ದಾಳಿ ಮುಂದುವರೆದಿದೆ. ಈ ನಡುವೆ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ‘ಆಪರೇಷನ್ ಗಂಗಾ’ ಯೋಜನೆ ಮುಂದುವರೆದಿದೆ. ಈ ಎಲ್ಲಾ ಬೆಳವಣಿಗೆಗಳ ಲೈವ್ ಅಪ್ಡೇಟ್ಸ್ ಇಲ್ಲಿ ಲಭ್ಯವಿದೆ.
Operation Ganga Live | ರಷ್ಯಾ ಉಕ್ರೇನ್ ಮೇಲೆ ಯುದ್ಧ (Russia Ukraine War) ಘೋಷಿಸಿ ವಾರದ ಮೇಲಾಗಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನ್‌ನ ತನ್ನ ಪ್ರತಿರೋಧದಿಂದ ರಷ್ಯಾವನ್ನು ಎದುರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ರಷ್ಯಾದ ಆಕ್ರಮಣ ತೀವ್ರವಾಗಿದ್ದು, ಜನವಸತಿ ಪ್ರದೇಶ ಸೇರಿದಂತೆ ನಾಗರಿಕ ಆವಾಸ ಸ್ಥಾನಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ. ಎರಡೂ ದೇಶಗಳ ನಡುವೆ ಮಾತುಕತೆ ಮುಂದುವರೆದಿದ್ದರೂ ಕೂಡ, ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಈ ನಡುವೆ ಭಾರತವು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಆಪರೇಷನ್ ಗಂಗಾ (Operation Ganga) ಮೂಲಕ ಕಾರ್ಯಾಚರಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ಲೈವ್ ಅಪ್ಡೇಟ್ಸ್ (Russia Ukraine Crisis Live Updates) ಇಲ್ಲಿ ಲಭ್ಯವಿದೆ.
ಉಕ್ರೇನ್‌ನಲ್ಲಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಯುರೋಪಿನಲ್ಲೇ ಅತ್ಯಂತ ದೊಡ್ಡ ಸ್ಥಾವರವಾಗಿದ್ದು, ಶುಕ್ರವಾರ ರಷ್ಯಾದ ದಾಳಿಯ ನಂತರ ಅದರಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ಕುರಿತು ಸಮೀಪದ ಪಟ್ಟಣ ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಈಗಾಗಲೇ ನಿಷ್ಕ್ರಿಯವಾಗಿರುವ ಚೆರ್ನೋಬಿಲ್ ಸ್ಥಾವರವನ್ನು ವಶಪಡಿಸಿಕೊಂಡಿದೆ.
ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾಗೆ ರಷ್ಯಾ ದಾಳಿಯಿಂದ ಬೆಂಕಿ ತಗುಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ ಒಂದು ವೇಳೆ ಸ್ಥಾವರ ಸ್ಫೋಟಿಸಿದರೆ ಅದರ ಪರಿಣಾಮವು ಚೆರ್ನೋಬಿಲ್ಗಿಂತಲೂ ಹತ್ತು ಪಟ್ಟು ಭೀಕರವಾಗಿರಲಿದೆ ಎಂದು ಎಚ್ಚರಿಸಿದ್ದಾರೆ. ರಷ್ಯಾ ಅಗ್ನಿಶಾಮಕ ದಳಗಳಿಗೆ ಅನುಮತಿ ನೀಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಬೇಕು ಎಂದು ಅವರು ಕೋರಿಕೊಂಡಿದ್ದಾರೆ.
ಉಕ್ರೇನ್‌ನ ಜಫೋರಿಝಿಯಾದ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ ನಡೆಸಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ಪರಮಾಣು ಭಯೋತ್ಪಾದನೆ ನಡೆಸಲಾಗುತ್ತಿದ್ದು, ಚೆರ್ನೋಬಿಲ್ ದುರಂತ ಪುನರಾವರ್ತಿಸಲು ರಷ್ಯಾ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಗುರುವಾರ ನಡೆದ ಉಕ್ರೇನ್ ಹಾಗೂ ರಷ್ಯಾ ನಡುವಿನ ಎರಡನೇ ಸುತ್ತಿನ ಮಾತುಕತೆಯಲ್ಲಿ ಯುದ್ಧ, ಕದನ ವಿರಾಮದ ಕುರಿತು ಯಾವುದೇ ನಿರ್ಣಯ ಮೂಡಿಬಂದಿಲ್ಲ. ಆದರೆ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಮಾನವೀಯ ಕಾರಿಡಾರ್ಗಳ ನಿರ್ಮಾಣಕ್ಕೆ ಎರಡೂ ದೇಶಗಳು ಒಪ್ಪಿವೆ.
ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಅಟ್ಯಾಕ್ ಮಾಡಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ. ರಷ್ಯಾದ ಕ್ಷಿಪಣಿಗಳ ದಾಳಿಯ ನಂತರ ಸ್ಥಾವರದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಆದರೂ ಸ್ಥಾವರದ ಅಗತ್ಯ ಉಪಕರಣಗಳಿಗೆ ಹಾನಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ರಷ್ಯಾದ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದ್ದ ಜಫೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಅನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ.
ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿಯಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು ರಷ್ಯಾದ 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಗುರುವಾರ ತಿಳಿಸಿದ್ದಾರೆ.
ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್‌ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಮಾಧ್ಯಮವೊಂದು ಸಂಪರ್ಕಿಸಿದ್ದು, ಪರಿಸ್ಥಿತಿಯ ಭೀಕರತೆಯನ್ನು ಆತ ವಿವರಿಸಿದ್ದಾನೆ. ಅಲ್ಲದೇ ಭಾರತೀಯ ದೂತವಾಸದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ನನ್ನಂತೆ ಹಲವರು ಕೀವ್ನಲ್ಲಿ ಸಿಲುಕಿದ್ದಾರೆ ಎಂದು ಆ ವಿದ್ಯಾರ್ಥಿ ಹೇಳಿದ್ದಾರೆ.
LIVE NEWS & UPDATES
-
ಭಾರತೀಯ ವಿದ್ಯಾರ್ಥಿಗಳು ನೀರಿಗಾಗಿ ಹಿಮದ ಗಡ್ಡೆ ಸಂಗ್ರಹಿಸುವ ವೀಡಿಯೊ ವೈರಲ್
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಪರಿಸ್ಥಿತಿ ಎಷ್ಟು ಹತಾಶವಾಗಿದೆ ಎಂಬುದರ ಸಂಕೇತವಾಗಿ, ಉಕ್ರೇನ್‌ನ ಸುಮಿಯ ಹಾಸ್ಟೆಲ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ನೀರಿಗಾಗಿ ಹಿಮವನ್ನು ಸಂಗ್ರಹಿಸುವ ವೀಡಿಯೊ ವೈರಲ್ ಆಗಿದೆ. ಸುಮಾರು 800-900 ಭಾರತೀಯ ವಿದ್ಯಾರ್ಥಿಗಳು ಒಂದು ವಾರದಿಂದ ಸುಮಿ ಸ್ಟೇಟ್ ಯೂನಿವರ್ಸಿಟಿಯ ವೈದ್ಯಕೀಯ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಬಂಧಿಯಾಗಿದ್ದಾರೆ. ಸದ್ಯ ನೀರು ಮತ್ತು ಆಹಾರದ ಕೊರತೆಯಿದ್ದು, ನೀರಿಗಾಗಿ ಹಿಮದ ತುಂಡುಗಳನ್ನು ಸಂಗ್ರಹಿಸುತ್ತಿದ್ದಾರೆ.
-
ಕೀವ್‌ನಿಂದ ಬೆಂಗಳೂರಿಗೆ ಆಗಮಿಸಿದ ತುಮಕೂರು ಮೂಲದ ಯುವಕ ತೌಕಿರ್
ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ಏರ್ಲಿಪ್ಟ್ ಹಿನ್ನೆಲೆ, ಕೀವ್‌ನಿಂದ ಬೆಂಗಳೂರಿಗೆ ಆಗಮಿಸಿದ ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಯುವಕ ತೌಕಿರ್. ಯುದ್ಧ ನಡೆಯುತ್ತಿದ್ದ ಕೀವ್ನಲ್ಲಿಯೇ ನಾವು ಉಳಿದುಕೊಂಡಿದ್ವಿ, ಕೀವ್ನಲ್ಲಿ ಹೆಚ್ಚು ಅಟ್ಯಾಕ್ ಆಗುತಿತ್ತು. ದಾಳಿಗೂ ಮುನ್ನ ಸೈರನ್ ಹಾಕ್ತಿದ್ರು, ಸೈರನ್ ಹಾಕ್ತಿದ್ದಂತೆ ನಾವು ಬಂಕರ್ಗಳಿಗೆ ಹೋಗಿ ಸೇರಿಕೊಳ್ತಿದ್ವಿ, ಎಂಬ್ಬೆಸ್ಸಿಯ ಮಾರ್ಗದರ್ಶನದಂತೆ ನಾವು ನಡೆದುಕೊಂಡು ಬಂದೆವು. ಸ್ಟೇಷನ್ ಬಳಿಗೆ ಪ್ರಮುಖ ರಸ್ತೆಯಲ್ಲಿ ಹೋಗದೆ ಮನೆಗಳ ನಡುವೆ ಹೋಗಿದ್ವಿ. ಅಟ್ಯಾಕ್ ಮತ್ತು ಪೈರಿಂಗ್ ನಡುವೆ ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡು ಹೋದ್ವಿ, ಯುವತಿಯರಿಗೆ ಬಸ್ ವ್ಯವಸ್ಥೆ ಮಾಡಿದ್ರು ನಾವು ನಡೆದುಕೊಂಡು ಹೋದ್ವಿ. ಕನ್ನಡಿಗೆ ವಿದ್ಯಾರ್ಥಿ ಸಾವನ್ನಪಿದ್ದು ನಮ್ಮಲ್ಲಿ ಆತಂಕ ಮೂಡಿಸಿತ್ತು. ಆದ್ರು ಸೇಪ್ ಆಗಿ ಹೋಗಬೇಕು ಅಂತ ರಿಸ್ಕ್ ತೆಗೆದುಕೊಂಡು ಬಂದ್ವಿ. ಗಡಿಯಲ್ಲಿ ಒಂದಷ್ಟು ಸೈನಿಕರಿಂದ ಉಕ್ರೇನ್ ಪ್ರಜೆಗಳಿಗೆ ಬಿಡಲಿಲ್ಲ ಅಂತ ಸಮಸ್ಯೆಯಾಯ್ತು. ಬ್ರೆಡ್, ರಸ್ಕ್, ಬಿಸ್ಕೆಟ್ ತಿಂದುಕೊಂಡು ಬಂದಿದ್ದೇವೆ ಎಂದು ಯುವಕ ತೌಕಿರ್ ಹೇಳಿಕೆ ನೀಡಿದ್ದಾರೆ.
-
ಉಕ್ರೇನ್ ದೇಶದ ಸುಮಿ ಸಿಟಿಯಲ್ಲಿ ಇನ್ನೂ ನೂರಾರು ಭಾರತೀಯರ ಆಕ್ರಂದನ
ಯುದ್ಧಪೀಡಿತ ಉಕ್ರೇನ್‌ನಲ್ಲಿ ಭಾರತಕ್ಕೆ ಬೇಗ ಕರೆಸಿಕೊಳ್ಳಿ ಎಂದು ಬೆಂಗಳೂರು ವಿದ್ಯಾರ್ಥಿನಿ ಅಳಲು ತೋಡಿಕೊಂಡಿದ್ದಾರೆ. ನಿನ್ನೆಯಿಂದ ಸುಮಿ ಸಿಟಿಯಲ್ಲಿ ಕುಡಿಯುವ ನೀರಿನ ಸಂಪರ್ಕವೂ ಸ್ಥಗಿತವಾಗಿದೆ. ಸುಮಾರು 500ಕ್ಕೂ ಹೆಚ್ಚು ಭಾರತೀಯರು ಸುಮಿ ಸಿಟಿಯಲ್ಲಿ ಲಾಕ್ ಆಗಿದ್ದಾರೆ. ಅಪಾರ್ಟ್ ಮೆಂಟ್, ಹಾಸ್ಟೆಲ್ ಬಿಲ್ಡಿಂಗ್ ಕೆಳಗಡೆ ಬಂಕರ್ಗಳಲ್ಲೇ ಉಳಿದುಕೊಂಡಿದ್ದೇವೆ. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.
ವಾರಾಂತ್ಯದಲ್ಲಿ ರಷ್ಯಾ ಅಧಿಕಾರಿಗಳ ಜೊತೆ 3ನೇ ಸುತ್ತಿನ ಚರ್ಚೆ
ಉಕ್ರೇನ್‌ನಲ್ಲಿ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ವಾರಾಂತ್ಯದಲ್ಲಿ ರಷ್ಯಾ ಅಧಿಕಾರಿಗಳ ಜೊತೆ 3ನೇ ಸುತ್ತಿನ ಚರ್ಚೆ ನಡೆಸಲು ನಿರ್ಧರಿಸಲಾಗಿದೆ. 3ನೇ ಸುತ್ತಿನ ಮಾತುಕತೆ ನಡೆಸಲು ಉಕ್ರೇನ್ ಚಿಂತನೆ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಲಹೆಗಾರ ಮಾಹಿತಿ ನೀಡಿದ್ದಾರೆ.
ಕಳೆದ 24 ಗಂಟೆ ಅವಧಿಯಲ್ಲಿ 18 ವಿಮಾನ ಭಾರತಕ್ಕೆ
ಕಳೆದ 24 ಗಂಟೆ ಅವಧಿಯಲ್ಲಿ 18 ವಿಮಾನ ಭಾರತಕ್ಕೆ ಬಂದಿದೆ. 18 ವಿಮಾನಗಳಲ್ಲಿ 4 ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ. ಇದುವರೆಗೆ 48 ವಿಮಾನಗಳಲ್ಲಿ 10 ಸಾವಿರ ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸಿದ್ದಾರೆ. ಮುಂದಿನ 24 ಗಂಟೆಯಲ್ಲಿ 16 ವಿಮಾನಗಳಲ್ಲಿ ವಿದ್ಯಾರ್ಥಿಗಳ ಏರ್‌ಲಿಫ್ಟ್ ಮಾಡಲಾಗಿದೆ. ಉಕ್ರೇನ್‌ನಲ್ಲಿರುವ ಭಾರತದ ವಿದ್ಯಾರ್ಥಿಗಳ ಸುರಕ್ಷಿತ ತೆರವಿಗೆ ಮಾನವೀಯ ಕಾರಿಡಾರ್ ರಚನೆಯಾಗಿಲ್ಲ. ತಳಮಟ್ಟದಲ್ಲಿ ಮಾನವೀಯ ಕಾರಿಡಾರ್ ರಚನೆಯಾಗಿಲ್ಲ. ಖಾರ್ಕೀವ್ನಲ್ಲಿ 300, ಸುಮಿ ನಗರದಲ್ಲಿ 700 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಗುಂಡಿನ ದಾಳಿಗೊಳಗಾದ ಭಾರತದ ಹರ್ಜೋತ್ ಸಿಂಗ್ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗುಚಿ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ಮೋದಿಜಿಯವರೆ ಮೃತ ದೇಹ ತರಲು ಚಿಂತನೆ ನಡೆಸಿದ್ದಾರೆ: ಮಾಜಿ ಸಿಎಂ ಯಡಿಯೂರಪ್ಪ
ನವೀನ ನಾಲ್ಕನೆ ವರ್ಷ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಹುತಾತ್ಮರಾಗಿದ್ದರೆ. ಅವರ ಆತ್ಮಕ್ಕೆ ಶಾಂತಿ ಕೋರುವೆ. ಯುದ್ಧದ ಗಂಭೀರತೆ ಅಲ್ಲಿ ಜಾಸ್ತಿ ಇದೆ. ತಕ್ಷಣ ಡೆಡ್ ಬಾಡಿ ತರುವುದಕ್ಕೆ ಆಗದೆ ಸಮಸ್ಯೆ ಆಗ್ತಿದೆ. ಪ್ರಧಾನಿ ಮೋದಿಜಿಯವರೆ ಮೃತ ದೇಹ ತರಲು ಚಿಂತನೆ ನಡೆಸಿದ್ದಾರೆ. ವಿಶೇಷ ವಿಮಾನದಲ್ಲಿ ಮೃತ ದೇಹ ತರೋ ಚಿಂತನೆ ನಡೆದಿದೆ. ಪಾರ್ಥೀವ ಶರೀರದ ಮುಖ ನೋಡಬೇಕು ಅನ್ನೋದು ತಂದೆ- ತಾಯಿ ಬಯಕೆ. ಪ್ರಧಾನಿ ಜೊತೆ ನಾನು, ಸಿಎಂ ಬೊಮ್ಮಾಯಿಯವರು ಮಾತನಾಡಿದ್ದೇವೆ. ಆದಷ್ಟು ಬೇಗ ಮೃತ ದೇಹ ತರೋದು ಕೇಂದ್ರ ಮತ್ತು ರಾಜ್ಯ ಸರಕಾರದ ಕರ್ತವ್ಯ. ಅವರ ನೋವಿಗೆ, ಕಣ್ಣೀರಿಗೆ ಸಾಂತ್ವನ ಹೇಳಲು ಪದಗಳು ಬರುತ್ತಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಮೃತ ನವೀನ ನಿವಾಸಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಮೃತಪಟ್ಟಿರೋ ನವೀನ ನಿವಾಸಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ ನಿವಾಸಕ್ಕೆ ಬಿಎಸ್ವೈ ಭೇಟಿ ನೀಡಿದ್ದಾರೆ.
ಅಂದಾಜು 2-3 ಸಾವಿರ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ: ಭಾರತೀಯ ವಿದೇಶಾಂಗ ಇಲಾಖೆ
ಮುಂದಿನ 24 ಗಂಟೆಗಳಲ್ಲಿ 16 ವಿಮಾನಗಳಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಅಂದಾಜು 2-3 ಸಾವಿರ ಭಾರತೀಯರು ಉಕ್ರೇನ್‌ನಲ್ಲಿದ್ದಾರೆ. ಉಕ್ರೇನ್‌ನಲ್ಲಿರುವ ಪ್ರತಿಯೊಬ್ಬ ಭಾರತೀಯರನ್ನೂ ಸ್ಥಳಾಂತರ ಮಾಡಲಾಗುತ್ತದೆ. ಅಲ್ಲಿಯವರೆಗೂ ಆಪರೇಷನ್ ಗಂಗಾ ಕಾರ್ಯಾಚರಣೆ ನಿಲ್ಲಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಿಂದ 10,800 ಭಾರತೀಯರ ಸ್ಥಳಾಂತರ
ಆಪರೇಷನ್ ಗಂಗಾ ಯೋಜನೆಯ ಅಡಿಯಲ್ಲಿ ಉಕ್ರೇನ್‌ನ ನೆರೆಯ ದೇಶಗಳಿಂದ ವಿಶೇಷ ವಿಮಾನಗಳ ಮೂಲಕ ಸುಮಾರು 10,800 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ವಾಯುಪಡೆಯ ಮೂರು C-17 ವಿಮಾನಗಳು ಮತ್ತು 14 ನಾಗರಿಕ ವಿಮಾನಗಳ ಮೂಲಕ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ಮತ್ತೊಂದು ನಾಗರಿಕ ವಿಮಾನವು ಇಂದು ರಾತ್ರಿಯೊಳಗೆ ಆಗಮಿಸುವ ನಿರೀಕ್ಷೆಯಿದೆ.
ಬ್ರಿಕ್ಸ್ನ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ನಿಂದ ರಷ್ಯಾದಲ್ಲಿನ ಎಲ್ಲ ಹೊಸ ವಹಿವಾಟುಗಳ ಸ್ಥಗಿತ
ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ಮುಂದುವರಿದ ಅನಿಶ್ಚಿತತೆ ಮತ್ತು ನಿರ್ಬಂಧಗಳನ್ನು ಉಲ್ಲೇಖಿಸಿ, ಬ್ರಿಕ್ಸ್ ಬ್ಲಾಕ್‌ನ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ (ಎನ್‌ಡಿಬಿ) ರಷ್ಯಾದಲ್ಲಿ ಎಲ್ಲ ಹೊಸ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ. ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ನಿಂದ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರವಾದ ಬೆಲಾರಸ್‌ನಲ್ಲಿ ತನ್ನ ಎಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದ ಒಂದು ದಿನದ ನಂತರ ಎನ್ಡಿಬಿಯ ಈ ಕ್ರಮವು ಬಂದಿದೆ. ಅದರ ಒಪ್ಪಂದದ ಆರ್ಟಿಕಲ್ಸ್ನಲ್ಲಿ ಹೇಳಿರುವಂತೆ ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ತನ್ನ ಎಲ್ಲ ಕಾರ್ಯಾಚರಣೆಗಳಲ್ಲಿ ಉತ್ತಮ ಬ್ಯಾಂಕಿಂಗ್ ತತ್ವಗಳನ್ನು ಅನ್ವಯಿಸುತ್ತದೆ ಎಂದು ಗುರುವಾರ ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ಬ್ಯಾಂಕ್ ತಿಳಿಸಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ದೇಶ ತೊರೆದು ಪರಾರಿಯಾಗಿದ್ದಾರೆ
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ದೇಶ ತೊರೆದು ಪರಾರಿಯಾಗಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಝೆಲೆನ್ಸ್ಕಿ ಪರಾರಿಯಾಗಿರುವ ಬಗ್ಗೆ ರಷ್ಯಾ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿವೆ.
ಉಕ್ರೇನ್‌ನಲ್ಲಿ ಯಾವುದೇ ಭಾರತೀಯ ಒತ್ತೆಯಾಳಾಗಿಲ್ಲ: ವಿದೇಶಾಂಗ ಸಚಿವಾಲಯ
ಯಾವುದೇ ಭಾರತೀಯರನ್ನು ಒತ್ತೆಯಾಳಾಗಿ ಇರಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಭದ್ರತಾ ಕಾರಣಗಳಿಂದ ಅವರು ವಿಶೇಷವಾಗಿ ಖಾರ್ಕಿವ್ನಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಆದರೆ ಒತ್ತೆಯಾಳು ಪರಿಸ್ಥಿತಿ ಇಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಕುರಿತು ಯುಎನ್ಎಸ್ಸಿ ತುರ್ತು ಸಭೆ ನಡೆಸಲಿದೆ
ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದೆ. ಹೀಗಾಗಿ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಕುರಿತು ಯುಎನ್ಎಸ್ಸಿ ಇಂದು ತುರ್ತು ಸಭೆ ನಡೆಸಲಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲೆ ಕಳೆದ ವಾರದಲ್ಲಿ 3 ಬಾರಿ ಕೊಲೆ ಪ್ರಯತ್ನ ನಡೆದಿದೆ
ಕಳೆದ ವಾರ ರಷ್ಯಾ- ಉಕ್ರೇನ್ ಯುದ್ಧ ಆರಂಭವಾಗಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮೇಲೆ ಮೂರು ಬಾರಿ ಕೊಲೆ ಪ್ರಯತ್ನ ನಡೆದಿದ್ದು, ಹೇಗೋ ಬಚಾವ್ ಆಗಿದ್ದಾರೆ. ಉಕ್ರೇನಿಯನ್ ಅಧ್ಯಕ್ಷರನ್ನು ಕೊಲೆ ಮಾಡಲು ಎರಡು ವಿಭಿನ್ನ ಗುಂಪುಗಳನ್ನು ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರೊಮೇನಿಯಾದಿಂದ 5,245 ಭಾರತೀಯರ ಏರ್‌ಲಿಫ್ಟ್
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಈವರೆಗೆ ರೊಮೇನಿಯಾದಿಂದ 5,245 ಭಾರತೀಯರನ್ನು ಏರ್‌ಲಿಫ್ಟ್ ಮಾಡಲಾಗಿದೆ ಎಂದು ಏರ್‌ಲಿಫ್ಟ್ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದ್ದಾರೆ.
ಉಕ್ರೇನ್‌ನಿಂದ ವಾಪಸ್ಸಾದ ಧಾರವಾಡ ಮೂಲದ ಯುವತಿ
ರಷ್ಯಾ ಹಾಗೂ ಉಕ್ರೇನ್ ಯುದ್ಧದ ನಡುವೆ ಸಿಲುಕಿದ್ದ ಧಾರವಾಡದ ಫೌಜಿಯಾ ಮುಲ್ಲಾ ಇಂದು ಮರಳಿದ್ದಾರೆ. ಉಕ್ರೇನ್‌ನಲ್ಲಿ ಮೊದಲ ವರ್ಷದ ಎಂಬಿಬಿಎಸ್ ಮಾಡುತ್ತಿದ್ದ ವಿದ್ಯಾರ್ಥಿನಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಕಳೆದ ರಾತ್ರಿ ದೆಹಲಿಗೆ ಬಂದಿದ್ದ ಫೌಜಿಯಾ, ಇವತ್ತು ದೆಹಲಿಯಿಂದ ಬೆಳಗಾವಿಗೆ ಬಂದಿದ್ದಾರೆ. ವಿದ್ಯಾರ್ಥಿನಿಯನ್ನು ಧಾರವಾಡದಿಂದ ಬೆಳಗಾವಿಗೆ ಕರೆ ತರಲು ಆಕೆಯ ತಾಯಿ ಹೋಗಿದ್ದರು. ಮಗಳನ್ನು ಕಂಡು ಮುದ್ದಿಸಿದ್ದಾರೆ. ಇನ್ನೂ ಕೆಲ ದಿನ ಫೌಜಿಯಾ ಧಾರವಾಡಕ್ಕೆ ಬರುವುದಿಲ್ಲವಂತೆ. ಮಾಧ್ಯಮದವರಿಂದ ದೂರವೇ ಇರಲು ಬಯಸುತ್ತಿದ್ದಾರೆ. ಈ ಮೊದಲು 15 ದಿನ ಬೆಂಗಳೂರಿನಲ್ಲಿಯೇ ಇರೋದಾಗಿ ಹೇಳಿ, ಇದೀಗ ಬೆಳಗಾವಿಗೆ ಕರೆ ತಂದಿದ್ದಾರೆ.
ಚೆರ್ನಿಹಿವ್ ಮೇಲೆ ಶೆಲ್ ದಾಳಿ; 9 ಮಹಿಳೆಯರು ಸೇರಿದಂತೆ 47 ಮಂದಿ ಸಾವು
ಉಕ್ರೇನ್‌ನ ಚೆರ್ನಿಹಿವ್ ಮೇಲಿನ ದಾಳಿಯಲ್ಲಿ 47 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನಿಯನ್ ಮಾಧ್ಯಮ ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ. ಉಕ್ರೇನಿಯನ್ ವರದಿ ಪ್ರಕಾರ, ಮಾರ್ಚ್ 3 ರಂದು ವಸತಿ ಪ್ರದೇಶಗಳ ಮೇಲೆ ರಷ್ಯಾದ ವೈಮಾನಿಕ ದಾಳಿಯಿಂದ 38 ಪುರುಷರು ಮತ್ತು ಒಂಬತ್ತು ಮಹಿಳೆಯರು ಸಾವನ್ನಪ್ಪಿದ್ದಾರೆ. ಚೆರ್ನಿಹಿವ್ 285,000 ಜನರಿರುವ ನಗರವಾಗಿದ್ದು, ಕೀವ್ನ ಉತ್ತರದಲ್ಲಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ನೆರವಿಗೆ ರೊಮೇನಿಯಾ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ಮೂಲದ ವಿದ್ಯಾರ್ಥಿಗಳ ನೆರವಿಗೆ ರೊಮೇನಿಯಾ ರಾಯಭಾರ ಕಚೇರಿ ನಿಂತಿದೆ. ಹೆಲ್ಪ್ಲೈನ್ ನಂಬರ್ ನೀಡಿದ್ದು, ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ತಿಳಿಸಿದೆ.
ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ದಾಳಿ; 3 ಉಕ್ರೇನಿಯನ್ ಸೈನಿಕರ ಸಾವು
ಪರಮಾಣು ಸ್ಥಾವರದ ಮೇಲಿನ ರಷ್ಯಾದ ದಾಳಿಯಲ್ಲಿ 3 ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ.
ಮೋದಿ ಅವರಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್‌ನಿಂದ ರಕ್ಷಿಸುತ್ತಿದ್ದಾರೆ: ಸಂಸದ ಪ್ರತಾಪ್ ಸಿಂಹ
ರಕ್ಷಣಾ ಕಾರ್ಯ ಬಹಳ ಚುರುಕಾಗಿ ನಡೆಯುತ್ತಿದೆ. ಉಕ್ರೇನ್ ಗಡಿ ದಾಟಿದ ಕೂಡಲೇ ಅಲ್ಲಿಂದ ಸುರಕ್ಷಿತವಾಗಿ ಕರೆದು ಕೊಂಡು ಬರುತ್ತಿದ್ದೇವೆ. ಮೂರು ಬಾರಿ ಸಲಹೆ ಕೊಟ್ಟಿದ್ದೆವು ಉಕ್ರೇನ್‌ನಿಂದ ಹೊರಡಿ ಎಂದು. ಆದರೆ ಯಾರು ಕೇಳಲಿಲ್ಲ. ತೆರಿಗೆ ಹಣದಿಂದ ಅವರನ್ನು ವಿಮಾನದಲ್ಲಿ ಕರೆದುಕೊಂಡು ಬರಲಾಗಿದೆ. ಕೆಲವರು ಕೃತಜ್ಞತೆ ಇಲ್ಲದೆ ಮಾತಾಡಿದ್ದಾರೆ. ಅವರ ಮಟ್ಟಕ್ಕೆ ಇಳಿದು ನಾನು ಅವರನ್ನು ಟೀಕೆ ಮಾಡಲ್ಲ. ಮೋದಿ ಅವರಿಗೆ ಗಟ್ಸ್ ಇರುವುದಕ್ಕೆ ರಿಸ್ಕ್ ತೆಗೆದುಕೊಂಡು ದೇಶದ ಜನರನ್ನು ಉಕ್ರೇನ್‌ನಿಂದ ರಕ್ಷಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ಭಾರತಕ್ಕೆ ಹಿಂತಿರುಗಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದ ಮುಂಡಗೋಡದ ಸ್ನೇಹಾ
ಬೆಳಗ್ಗೆ 8 ಗಂಟೆಗೆ ದೆಹಲಿಗೆ ಬಂದು ತಲುಪಿದ್ದೇವೆ. ಸಂಜೆ 7 ಗಂಟೆಗೆ ಬೆಂಗಳೂರಿಗೆ ತೆರಳಲು ವಿಮಾನವಿದೆ. ಭಾರತದ ರಾಯಭಾರಿಗಳು ನಮಗೆ ತುಂಬಾನೇ ಸಹಾಯ ಮಾಡಿದ್ರು. ಸುರಕ್ಷಿತವಾಗಿ ಕರೆದುಕೊಂಡು ಬಂದು ಭಾರತದ ತಲುಪಿಸಿದ್ದಾರೆ. ಭಾರತಕ್ಕೆ ಮತ್ತೆ ಬಂದದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಇನ್ನಷ್ಟು ಜ್ಯೂನಿಯರ್ ವಿದ್ಯಾರ್ಥಿಗಳು ಇನ್ನೂ ಯುಕ್ರೇನ್‌ನಲ್ಲಿ ಸಿಲುಕಿದ್ದಾರೆ. ಭಾರತ ತಲುಪಿದ್ದಕ್ಕೆ ಎಷ್ಟು ಖುಷಿಯಿದೆಯೋ, ಉಳಿದ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎನ್ನುವುದಕ್ಕೆ ಅಷ್ಟೇ ಬೇಜಾರಿದೆ. ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಆದಷ್ಟು ಬೇಗ ಕರೆದುಕೊಂಡು ಬರಬೇಕು. ನಾವು ಬಂದಂತೆ ಅವರು ಕೂಡಾ ಸುರಕ್ಷಿತವಾಗಿ ಬಂದು ತಮ್ಮ ಪೋಷಕರನ್ನು ತಲುಪಬೇಕು ಎಂದು 4ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ಸ್ನೇಹಾ ಹೇಳಿದ್ದಾರೆ.
ಯುದ್ಧ ನಾಡು ಉಕ್ರೇನ್‌ನಿಂದ ತಾನು ಸಾಕಿದ ಬೆಕ್ಕು ಕರೆತಂದ ವಿದ್ಯಾರ್ಥಿನಿ
ಯುದ್ಧ ನಾಡು ಉಕ್ರೇನ್‌ನಿಂದ ಭಾರತಕ್ಕೆ ವಿದ್ಯಾರ್ಥಿನಿ ತನ್ನ ಪ್ರಿತಿಯ ಬೆಕ್ಕು ಕರೆತಂದಿದ್ದಾಳೆ. ಮೈಸೂರು ಮೂಲದ ವಿದ್ಯಾರ್ಥಿನಿ ಶರಣ್ಯ ಬೆಕ್ಕು ಕರೆದಂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಾಕಿದ್ದ ಪ್ರೀತಿಯ ಬೆಕ್ಕು ಬೆಕ್ಕು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬೆಕ್ಕನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಹಾಗಾಗಿ ನಾನು ನನ್ನ ಜೊತೆಯಲ್ಲಿಯೇ ಬೆಕ್ಕು ಕರೆತಂದಿದ್ದೇನೆ. ಕರೆತರುವಾಗ ಏನೂ ಸಮಸ್ಯೆ ಆಗಲಿಲ್ಲ. ನಾನು ಮೈಸೂರಿನ ಮನೆಯಲ್ಲಿಯೇ ಬೆಕ್ಕು ಸಾಕುತ್ತೇನೆ. ಹವಾಮಾನ ಬದಲಾವಣೆ ಆದರೂ ಈ ಬೆಕ್ಕಿಗೆ ಏನು ತೊಂದರೆ ಆಗುವುದಿಲ್ಲ ಎಂದು ವಿದ್ಯಾರ್ಥಿನಿ ಶರಣ್ಯ ಹೇಳಿದ್ದಾರೆ.
ಯುದ್ಧಪೀಡಿತ ಉಕ್ರೇನ್‌ನಿಂದ ಬೆಳಗಾವಿಗೆ ಮರಳಿದ ವೈದ್ಯಕೀಯ ವಿದ್ಯಾರ್ಥಿ
ಯುದ್ಧಪೀಡಿತ ಉಕ್ರೇನ್‌ನಿಂದ ಬೈಲಹೊಂಗಲ ಪಟ್ಟಣದಲ್ಲಿರುವ ಮನೆಗೆ ವಿದ್ಯಾರ್ಥಿ ಪ್ರಜ್ವಲ್ ತಿಪ್ಪಣ್ಣ ತಲುಪಿದ್ದಾರೆ. ಉಕ್ರೇನ್‌ನ ಟೆರ್ನೋಪಿಲ್ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದ ಪ್ರಜ್ವಲ್, ಟೆರ್ನೋಪಿಲ್ನಿಂದ ಮುಂಬೈ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದ್ದಾರೆ. ಪುತ್ರ ಸುರಕ್ಷಿತವಾಗಿ ಆಗಮಿಸಿದಕ್ಕೆ ಕುಟುಂಬಸ್ಥರು, ಸಂಬಂಧಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ವಿಮಾನ ನಿಲ್ದಾಣದಲ್ಲಿ ವಿಶ್ವದ ಅತಿದೊಡ್ಡ ವಿಮಾನ ಆಂಟೊನೊವ್ ಆನ್-225 ನಾಶ
ಟ್ವಿಟ್ಟರ್‌ನಲ್ಲಿ ಸುದ್ದಿ ಸಂಸ್ಥೆಯೊಂದು ಹಂಚಿಕೊಂಡ ವೀಡಿಯೊವು ಉಕ್ರೇನ್‌ನ ಹಾಸ್ಟೊಮೆಲ್ ವಿಮಾನ ನಿಲ್ದಾಣದಲ್ಲಿ ವಿಶ್ವದ ಅತಿದೊಡ್ಡ ವಿಮಾನ ಆಂಟೊನೊವ್ ಆನ್ -225 ನಾಶವಾಗಿದೆ ಎಂದು ದೃಢಪಡಿಸಿದೆ.
Video confirms the world’s largest plane, the Antonov An-225, was destroyed at Hostomel Airport in Ukraine, ending days of conflicting reports pic.twitter.com/0geCjAHWaa
— BNO News (@BNONews) March 4, 2022
ಕೀವ್ನಲ್ಲಿ ಸಿಲುಕಿರುವ ಭಾರತೀಯರ ಕಷ್ಟ ಹೇಳಿಕೊಂಡ ಹರ್ಜೋತ್ ಸಿಂಗ್
ಕೀವ್‌ನಿಂದ ಮರಳುವಾಗ ಹರ್ಜೋತ್ಗೆ ಗುಂಡೇಟು ತಗುಲಿತ್ತು.
ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್‌ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಮಾಧ್ಯಮವೊಂದು ಸಂಪರ್ಕಿಸಿದ್ದು, ಪರಿಸ್ಥಿತಿಯ ಭೀಕರತೆಯನ್ನು ಆತ ವಿವರಿಸಿದ್ದಾನೆ. ಅಲ್ಲದೇ ಭಾರತೀಯ ದೂತವಾಸದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ನನ್ನಂತೆ ಹಲವರು ಕೀವ್ನಲ್ಲಿ ಸಿಲುಕಿದ್ದಾರೆ ಎಂದು ಆ ವಿದ್ಯಾರ್ಥಿ ಹೇಳಿದ್ದಾರೆ.
ಪೂರ್ಣ ವರದಿ ಇಲ್ಲಿದೆ: Ukraine Crisis: ‘ನನ್ನಂತೆ ಹಲವು ಜನ ಸಿಲುಕಿದ್ದಾರೆ’; ಕೀವ್‌ನಿಂದ ಮರಳುವಾಗ ಗುಂಡೇಟು ತಿಂದು ಆಸ್ಪತ್ರೆಯಲ್ಲಿರುವ ಹರ್ಜೋತ್ ಹೇಳಿಕೆ
ಉಕ್ರೇನ್‌ನಲ್ಲಿ ಪ್ರಸ್ತುತ ಸ್ಥಿತಿಗತಿ ಹೇಗಿದೆ? ವಿವರಿಸಿದ ಕರ್ನಾಟಕ ವಿದ್ಯಾರ್ಥಿಗಳು
ಉಕ್ರೇನ್‌ನಿಂದ ಕರ್ನಾಟಕದ 190ಕ್ಕೂ ಅಧಿಕ ವಿದ್ಯಾರ್ಥಿಗಳು ಮರಳಿದ್ದಾರೆ. ಇತ್ತೀಚೆಗೆ ಆಗಮಿಸಿದ ವಿದ್ಯಾರ್ಥಿಗಳು ಅಲ್ಲಿನ ಸ್ಥಿತಿ ಹಾಗೂ ಗಡಿ ತಲುಪಲು ಅವರು ಪಟ್ಟ ಕಷ್ಟ, ಇನ್ನೂ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳು.. ಮೊದಲಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ರಷ್ಯಾದ ದಾಳಿಯಲ್ಲಿ ಮೃತಪಟ್ಟ ನವೀನ್ ಬಗ್ಗೆಯೂ ವಿದ್ಯಾರ್ಥಿಗಳು ಮಾತನಾಡಿದ್ದಾರೆ. ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಡಿಸಿಗಳಿಗೆ ಸೂಚನೆ: ಆರ್ ಅಶೋಕ್
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆಗಳೊಂದಿಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿರುವ ಅವರು, ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಬೇಕು. ಆ ವಿದ್ಯಾರ್ಥಿಗಳ ಕುಟುಂಬದ ನಿರಂತರ ಸಂಪರ್ಕದಲ್ಲಿ ಇರಬೇಕು. ಅವರಿಂದ ವಿದ್ಯಾರ್ಥಿಗಳ ಎಲ್ಲಾ ಮಾಹಿತಿ ಪಡೆದುಕೊಳ್ಳಬೇಕು ಎಂದು ಡಿಸಿಗಳಿಗೆ ಸೂಚನೆ ಕೊಡಲಾಗಿದೆ. ಸೋಮವಾರ ಎಲ್ಲಾ ಮಾಹಿತಿಯನ್ನು ಕಂದಾಯ ಇಲಾಯಿಂದ ಕೊಡುತ್ತೇವೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ರಷ್ಯಾದಲ್ಲಿ ಯುದ್ಧ ವಿರೋಧಿ ಪ್ರತಿಭಟನೆಗೆ ಇಲ್ಲ ಜಾಗ! ಮಸೂದೆ ಅಂಗೀಕಾರ: ವರದಿ
ಸಾಮಾಜಿಕ ಮಾಧ್ಯಮಗಳ ವರದಿಗಳ ಪ್ರಕಾರ, ರಷ್ಯಾದ ನಾಗರಿಕರು ಯುದ್ಧ ವಿರೋಧಿ ಅಥವಾ ರಷ್ಯಾ ವಿರೋಧಿ ಪ್ರತಿಭಟನೆಗೆ ಮುಂದಾದರೆ ಅಥವಾ ರಷ್ಯನ್ ಸೇನೆಯ ಗೌರವಕ್ಕೆ ಚ್ಯುತಿ ಬರುವ ಸಂದೇಶಗಳನ್ನು ಹಂಚಿಕೊಂಡರೆ ಕಠಿಣ ದಂಡ ವಿಧಿಸುವ ಮಸೂದೆಗಳನ್ನು ಅಂಗೀಕರಿಸಲಾಗಿದೆ ಎನ್ನಲಾಗಿದೆ.
ಸುಮಾರು 9,166 ಸೈನಿಕರನ್ನು ಯುದ್ಧದಲ್ಲಿ ನಿಧನ: ಉಕ್ರೇನ್ ಹೇಳಿಕೆ
ಮಾರ್ಚ್ 4ರವರೆಗೆ ರಷ್ಯಾದ ಸುಮಾರು 9,166 ಸೈನಿಕರು, 37 ಹೆಲಿಕಾಪ್ಟರ್ಗಳು, 251 ಟ್ಯಾಂಕರ್ಗಳು ಸೇರಿ ಸೇನೆಯ ಅಪಾರ ಪ್ರಮಾಣದ ಸಾಮಗ್ರಿಗಳನ್ನು ನಾಶಮಾಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ರಷ್ಯಾದ ಹೆಲಿಕಾಪ್ಟರ್ಗಳ ವಿಡಿಯೋ ವೈರಲ್
ರಷ್ಯಾ ಸೇನಾಪಡೆಗಳ ಹೆಲಿಕಾಪ್ಟರ್ಗಳು ಸೈನಿಕರಿಗೆ ಬೆಂಗಾವಲಾಗಿ ಕಾರ್ಯನಿರ್ವಹಿಸುತ್ತಿರುವ ವಿಡಿಯೋವನ್ನು ರಷ್ಯಾ ಹಂಚಿಕೊಂಡಿದೆ.
Russia’s Ministry of Defense shared the footage of military helicopters escorting Russian troops as the conflict in Ukraine continues. pic.twitter.com/LpF63gKPhe
— RT (@RT_com) March 4, 2022
ಪರಮಾಣು ಸ್ಥಾವರವನ್ನು ರಕ್ಷಿಲು ಹೋರಾಡುವ ವೇಳೆ ಹಲವು ಉಕ್ರೇನ್ ಸೈನಿಕರ ಮರಣ
ರಷ್ಯಾ ಸದ್ಯ ವಶಪಡಿಸಿಕೊಂಡಿರುವ ಯುರೋಪ್‌ನ ಅತ್ಯಂತ ದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ರಕ್ಷಣೆಯ ಸಂದರ್ಭದಲ್ಲಿ ಹಲವು ಉಕ್ರೇನಿಯನ್ ಸೈನಿಕರ ಸಾವು-ನೋವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.
Ukrainian side suffered deaths and injuries while trying to defend nuclear power plant, operator says
— BNO News (@BNONews) March 4, 2022
ಉಕ್ರೇನ್‌ನಿಂದ 17,000 ಭಾರತೀಯರ ಸ್ಥಳಾಂತರ: ಸುಪ್ರೀಂ ಕೋರ್ಟ್ಗೆ ಮಾಹಿತಿ
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆ ಸಾಗಿದ್ದು, ಸುಪ್ರೀಂ ಕೋರ್ಟ್ಗೆ ಸರ್ಕಾರ ಈ ಕುರಿತು ಮಾಹಿತಿ ನೀಡಿದೆ. ಉಕ್ರೇನ್‌ನಿಂದ ಸುಮಾರು 17,000 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಎಜಿ ಕೆ.ಕೆ.ವೇಣುಗೋಪಾಲ್ ಮಾಹಿತಿ ನೀಡಿದ್ದಾರೆ.
#RussiaUkraineConflict | Supreme Court says that it’s unfortunate that we have not learned from past mistakes and still resort to war. We don’t have much say but there is anxiety about students. pic.twitter.com/bzRwAd8Hsf
— ANI (@ANI) March 4, 2022
ರಷ್ಯಾ ಮಾರ್ಗವಾಗಿ ಭಾರತೀಯರ ಏರ್‌ಲಿಫ್ಟ್‌ಗೆ ಪ್ಲಾನ್
ರಷ್ಯಾ ಮಾರ್ಗವಾಗಿ ಭಾರತೀಯರ ಏರ್‌ಲಿಫ್ಟ್‌ಗೆ ಪ್ರಯತ್ನ ನಡೆಸಲಾಗುತ್ತಿದೆ. ರಷ್ಯಾ ಗಡಿ ಬಳಿ ಭಾರತೀಯರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದೆ. ಗಡಿಯಿಂದ ರಷ್ಯಾದ ಬೆಲ್ಗೊರೊಡ್‌ಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದ್ದು, ಬೆಲ್ಗೊರೊಡ್‌ನಿಂದ ಭಾರತಕ್ಕೆ ಏರ್‌ಲಿಫ್ಟ್ ಮಾಡಲು ಯೋಜನೆ ರೂಪಿಸಲಾಗಿದೆ.
ಖಾರ್ಕಿವ್ ಮತ್ತು ಸುಮಿಯಿಂದ ಭಾರತೀಯರು ಹಾಗೂ ಇತರ ವಿದೇಶೀಯರ ಸ್ಥಳಾಂತರಕ್ಕೆ ರಷ್ಯಾದ 130 ಬಸ್ ಸಿದ್ಧ
ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿಯಿಂದ ರಷ್ಯಾದ ಬೆಲ್ಗೊರೊಡ್ ಪ್ರದೇಶಕ್ಕೆ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು ರಷ್ಯಾದ 130 ಬಸ್‌ಗಳು ಸಿದ್ಧವಾಗಿವೆ ಎಂದು ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್ ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಗುರುವಾರ ತಿಳಿಸಿದ್ದಾರೆ.
130 Russian buses are ready to evacuate Indian students and other foreigners from Ukraine’s Kharkiv and Sumy to Russia’s Belgorod Region, Russian National Defense Control Center head Colonel General Mikhail Mizintsev announced Thursday: Russian News Agency TASS#RussiaUkraine
— ANI (@ANI) March 4, 2022
ರೊಮೇನಿಯಾ ಗಡಿ ಪ್ರವೇಶಿಸಿದ 1.6 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು
ರಷ್ಯಾ ಯುದ್ಧ ಮುಂದುವರೆಸಿರುವ ಹಿನ್ನೆಲೆಯಲ್ಲಿ ಉಕ್ರೇನಿಯನ್ ನಾಗರಿಕರು ದೇಶವನ್ನು ತೊರೆಯುತ್ತಿದ್ದಾರೆ. ಮೊದಲ 8 ದಿನಗಳಲ್ಲಿ ಸುಮಾರು 1,67,600ಕ್ಕೂ ಹೆಚ್ಚು ಜನರು ರೊಮೇನಿಯಾ ಗಡಿ ಪ್ರವೇಶಿಸಿದ್ದಾರೆ ಎಂದು ಗಡಿ ಪೊಲೀಸರು ತಿಳಿಸಿದ್ದಾರೆ.
ಉಕ್ರೇನ್‌ಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಜಪಾನ್ ನಿರ್ಧಾರ
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಮುಂದುವರೆಯುತ್ತಿದೆ. ವಿವಿಧ ದೇಶಗಳಿಂದ ಉಕ್ರೇನ್‌ಗೆ ಶಸ್ತ್ರಾಸ್ತ್ರ, ಮಾನವೀಯ ಸಹಾಯ ಒದಗಿ ಬರುತ್ತಿದೆ. ಇದೀಗ ಉಕ್ರೇನ್‌ಗೆ ಬುಲೆಟ್ ಪ್ರೂಫ್ ಜಾಕೆಟ್ ನೀಡಲು ಜಪಾನ್ ನಿರ್ಧರಿಸಿದೆ.
ಜಫೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಈಗ ರಷ್ಯಾ ವಶ
ರಷ್ಯಾದ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದ್ದ ಜಫೋರಿಝಿಯಾ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಅನ್ನು ರಷ್ಯಾ ತನ್ನ ವಶಕ್ಕೆ ತೆಗೆದುಕೊಂಡಿದೆ.
ನಿನ್ನೆ ಒಂದೇ ದಿನ ತವರಿಗೆ ಆಗಮಿಸಿದ ಕರ್ನಾಟಕದ 104 ಜನ
ಈವರೆಗೆ ಮರಳಿದ್ದು 190ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಉಕ್ರೇನ್ ನಿಂದ ಭಾರತೀಯರ ಏರ್ ಲಿಪ್ಟ್ ಹಿನ್ನೆಲೆಯಲ್ಲಿ ಇಂದು ಸಹ ಕರುನಾಡಿಗೆ ಕನ್ನಡಿಗರು ಆಗಮಿಸಲಿದ್ದಾರೆ. ಉಕ್ರೇನ್‌ನಿಂದ ದೆಹಲಿಗೆ ಬಂದು ದೆಹಲಿಯಿಂದ ಬೆಂಗಳೂರಿಗೆ ವಿದ್ಯಾರ್ಥಿಗಳು ಬರಲಿದ್ದಾರೆ. ನಿನ್ನೆ ಒಂದೇ ದಿನ 104 ಜನರು ಆಗಮಿಸಿದ್ದರು. ಇಂದು ಸಹ ಬೆಂಗಳೂರಿಗೆ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಬರಲಿದ್ದಾರೆ. ಈವರೆಗೂ ಕರುನಾಡಿಗೆ ಬಂದ 190ಕ್ಕೂ ಅಧಿಕ ಜನ ಕನ್ನಡಿಗ ವಿದ್ಯಾರ್ಥಿಗಳು ಮರಳಿದ್ದಾರೆ. ಏರ್ ಲಿಪ್ಟ್ ಮೂಲಕ ದೆಹಲಿಗೆ ಬಂದವರನ್ನು ಅಧಿಕಾರಿಗಳು ರಾಜ್ಯಕ್ಕೆ ಕರೆತರುತ್ತಿದ್ದಾರೆ. 10 – 20 ಜನ ಬ್ಯಾಚ್ಗಳನ್ನು ಮಾಡಿ ಆ ಮೂಲಕ ರಾಜ್ಯಕ್ಕೆ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ.
ರಷ್ಯಾ- ಉಕ್ರೇನ್ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಪ್ರಧಾನಿ ಚರ್ಚೆ
ರಷ್ಯಾ ಹಾಗೂ ಉಕ್ರೇನ್ ನಡುವಿನ ಸ್ಥಿತಿಗತಿಯ ಕುರಿತು ಪ್ರಧಾನಿ ಮೋದಿ ದೆಹಲಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
#WATCH | Delhi: Prime Minister Narendra Modi chairs a meeting to review the Ukraine-related situation.#RussiaUkraineCrisis pic.twitter.com/jAbLsRLBoR
— ANI (@ANI) March 4, 2022
ಉಕ್ರೇನ್‌ಗೆ ಭಾರತದಿಂದ 6 ಟನ್ ಅಗತ್ಯ ವಸ್ತುಗಳ ಮಾನವೀಯ ನೆರವು
ಉಕ್ರೇನ್‌ಗೆ ಭಾರತದಿಂದ 6 ಟನ್ ಅಗತ್ಯ ವಸ್ತುಗಳ ಮಾನವೀಯ ನೆರವು ನೀಡಲಾಗುತ್ತಿದೆ. ಹಿಂಡನ್ ಏರ್‌ಬೇಸ್‌ನಿಂದ IAF ವಿಮಾನದಲ್ಲಿ ರವಾನೆ ಮಾಡಲಾಗುತ್ತಿದ್ದು, ಬೆಳಗಿನ ಜಾವ ರೊಮೇನಿಯಾಗೆ ವಿಮಾನ ತೆರಳಿದೆ.
Indian Air Force aircraft took off for Romania at 4:05 am from Hindon Airbase, with approximately 6 tons of humanitarian assistance for Ukraine. #RussiaUkraine pic.twitter.com/upIZwutfv4
— ANI (@ANI) March 4, 2022
ಪರಮಾಣು ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಹರಡುವುದನ್ನು ತಡೆಯಲಾಗಿದೆ: ಅಧಿಕಾರಿಗಳು
ಉಕ್ರೇನ್‌ನ ಜಫೋರಿಝಿಯಾದ ಪರಮಾಣು ವಿದ್ಯುತ್ ಸ್ಥಾವರದ ಬಳಿ ರಷ್ಯಾ ದಾಳಿ ವೇಳೆ, ಹೊತ್ತಿಕೊಂಡಿದ್ದ ಬೆಂಕಿ ಹರಡುವುದನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಮೇಲಿನ ದಾಳಿಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ಪರಮಾಣು ವಿದ್ಯುತ್ ಸ್ಥಾವರದ ಅಧಿಕಾರಿಗಳು ಹೇಳಿದ್ದಾರೆ.
ನಾಗರಿಕರ ಸ್ಥಳಾಂತರಕ್ಕೆ ಮಾನವೀಯ ಕಾರಿಡಾರ್; ಎರಡನೇ ಸುತ್ತಿನ ಮಾತುಕತೆಯಲ್ಲಿ ನಿರ್ಣಯ
ಗುರುವಾರ ನಡೆದ ಉಕ್ರೇನ್ ಹಾಗೂ ರಷ್ಯಾ ನಡುವಿನ ಎರಡನೇ ಸುತ್ತಿನ ಮಾತುಕತೆಯಲ್ಲಿ ಯುದ್ಧ, ಕದನ ವಿರಾಮದ ಕುರಿತು ಯಾವುದೇ ನಿರ್ಣಯ ಮೂಡಿಬಂದಿಲ್ಲ. ಆದರೆ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಮಾನವೀಯ ಕಾರಿಡಾರ್ಗಳ ನಿರ್ಮಾಣಕ್ಕೆ ಎರಡೂ ದೇಶಗಳು ಒಪ್ಪಿವೆ.
ಪರಮಾಣು ಸ್ಥಾವರದ ಸುತ್ತ ದಾಳಿ ನಡೆಸದಂತೆ ಮನವಿ ಮಾಡಿದ ಅಮೇರಿಕಾ
ಯುರೋಪಿನ ಅತಿದೊಡ್ಡ ಪರಮಾಣು ಸ್ಥಾವರದ ಮೇಲಿನ ದಾಳಿ ಹಿನ್ನೆಲೆಯಲ್ಲಿ ಆತಂಕ ಹೆಚ್ಚಾಗಿದೆ. ಪಾಶ್ಚಾತ್ಯ ರಾಷ್ಟ್ರಗಳು ಪರಮಾಣು ಸ್ಥಾವರದ ಸುತ್ತ ದಾಳಿ ನಡೆಸದಂತೆ ರಷ್ಯಾಕ್ಕೆ ಒತ್ತಾಯಿಸುತ್ತಿವೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಕೂಡ ಇದಕ್ಕೆ ದನಿಗೂಡಿಸಿದ್ದು, ಪರಮಾಣು ಸ್ಥಾವರದ ಸುತ್ತ ದಾಳಿ ನಡೆಸದಂತೆ ಮನವಿ ಮಾಡಿದ್ದಾರೆ. ಹೊತ್ತಿಕೊಂಡಿರುವ ಬೆಂಕಿ ತುರ್ತು ನಂದಿಸುವಂತೆ ಕೂಡ ಅವರು ಒತ್ತಾಯಿಸಿದ್ದಾರೆ.
ಪುಟಿನ್ ಜತೆ ಮತ್ತೆ ಫ್ರೆಂಚ್ ಅಧ್ಯಕ್ಷರ ಮಾತುಕತೆ; ದಾಳಿ ನಿಲ್ಲಿಸುವಂತೆ ಮನವೊಲಿಕೆ
ಪುಟಿನ್ ಜೊತೆ ಮತ್ತೆ ಮಾತುಕತೆ ನಡೆಸಿರುವ ಫ್ರೆಂಚ್ ಅಧ್ಯಕ್ಷ ಮ್ಯಾಕ್ರೋನ್, ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ದಾಳಿ ನಿಲ್ಲಿಸುವುದಿಲ್ಲ ಎಂದು ಪುಟಿನ್ ಈ ಹಿಂದೆ ಹೇಳಿದ್ದರು. ಪುಟಿನ್ ಮನವೊಲಿಸುವ ಕೆಲಸ ಮುಂದುವರೆಸುವುದಾಗಿ ಮ್ಯಾಕ್ರೋನ್ ಹೇಳಿದ್ದಾರೆ.
ಪರಮಾಣು ಸ್ಥಾವರದ ಅಗತ್ಯ ಉಪಕರಣಗಳಿಗೆ ಹಾನಿಯಾಗಿಲ್ಲ: ಝೆಲೆನ್ಸ್ಕಿ
ಉಕ್ರೇನ್‌ನ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ರಷ್ಯಾ ಅಟ್ಯಾಕ್ ಮಾಡಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತುಕತೆ ನಡೆಸಿದ್ದಾರೆ. ರಷ್ಯಾದ ಕ್ಷಿಪಣಿಗಳ ದಾಳಿಯ ನಂತರ ಸ್ಥಾವರದ ಬಳಿ ಬೆಂಕಿ ಕಾಣಿಸಿಕೊಂಡಿದೆ. ಆದರೂ ಸ್ಥಾವರದ ಅಗತ್ಯ ಉಪಕರಣಗಳಿಗೆ ಹಾನಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿಯ ಬೆನ್ನಲ್ಲೇ ಭದ್ರತಾ ಮಂಡಳಿಯ ತುರ್ತು ಸಭೆ ಕರೆದ ಇಂಗ್ಲೆಂಡ್ ಪ್ರಧಾನಿ
ಉಕ್ರೇನ್ ಮೇಲೆರಷ್ಯಾ ಯುದ್ಧ ಮುಂದುವರಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ಕರೆಯಲಾಗಿದೆ. ರಷ್ಯಾವು ಪರಮಾಣು ಸ್ಥಾವರಗಳನ್ನು ಗುರಿಯಾಗಿಸಿದ ಸಂಬಂಧ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಆತಂಕ ಹೊರಹಾಕಿದ್ದರು. ಇದೀಗ ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ.
ತವರಿಗೆ ಮರಳಿದ 630 ಭಾರತೀಯರು
ಉಕ್ರೇನ್‌ನಲ್ಲಿ ಸಿಲುಕಿದ್ದ 630 ಭಾರತೀಯರ ಏರ್‌ಲಿಫ್ಟ್ ಮಾಡಲಾಗಿದ್ದು, ಐಎಎಫ್‌ನ 3 C-17 ವಿಮಾನಗಳಲ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಆಪರೇಷನ್ ಗಂಗಾ ಹೆಸರಿನಲ್ಲಿ ಏರ್‌ಲಿಫ್ಟ್ ಕಾರ್ಯಾಚರಣೆ ನಡೆಯುತ್ತಿದ್ದು, ಹಿಂಡನ್ ಏರ್‌ಬೇಸ್‌ಗೆ ಭಾರತೀಯರು ವಾಪಸಾಗಿದ್ದಾರೆ.
ಯುರೋಪ್ ಸುರಕ್ಷತೆಗೆ ಪುಟಿನ್ ಬೆದರಿಕೆ ಹಾಕುತ್ತಿದ್ದಾರೆ: ಇಂಗ್ಲಂಡ್ ಪ್ರಧಾನಿ ಆಕ್ರೋಶ
ರಷ್ಯಾ ಪರಮಾಣು ಸ್ಥಾವರಕ್ಕೆ ದಾಳಿ ನಡೆಸಿರುವ ಸಂಬಂಧ ಉಕ್ರೇನ್ ಅಧ್ಯಕ್ಷರ ಜತೆ ಇಂಗ್ಲೆಂಡ್ ಪ್ರಧಾನಿ ಜಾನ್ಸನ್ ಚರ್ಚೆ ನಡೆಸಿದ್ದಾರೆ. ಯುರೋಪ್ ಸುರಕ್ಷತೆಗೆ ಪುಟಿನ್ ಅಜಾಗರೂಕ ಕ್ರಮಗಳಿಂದ ಬೆದರಿಕೆ ಹಾಕುತ್ತಿದ್ದಾರೆ. ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಇಂಗ್ಲಂಡ್ ಪ್ರಧಾನಿ ಝೆಲೆನ್ಸ್ಕಿಗೆ ತಿಳಿಸಿದ್ದಾರೆ.
70 ಕ್ಷಿಪಣಿಗಳನ್ನು ಬೆಲಾರಸ್‌ನಿಂದ ಹಾರಿಸಿದ್ದಾರೆ ಎಂದ ಅಮೇರಿಕಾ
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್ ಮೇಲೆ ರಷ್ಯಾ ಸೇನೆಯಿಂದ ಇದುವರೆಗೆ 480 ಕ್ಷಿಪಣಿ ದಾಳಿ ನಡೆಸಲಾಗಿದ್ದು, ಈ ಪೈಕಿ 70 ಕ್ಷಿಪಣಿಗಳನ್ನ ಬೆಲಾರಸ್‌ನಿಂದ ಹಾರಿಸಿದ್ದಾರೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.
ಬೆಂಗಳೂರಿಗೆ ವಾಪಸ್ಸಾದ 14 ವಿದ್ಯಾರ್ಥಿಗಳು
ಉಕ್ರೇನ್‌ನಲ್ಲಿ ಸಿಲುಕಿದ್ದ 14 ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದಾರೆ. ನವದೆಹಲಿಯಿಂದ ಕೆಐಎಬಿಗೆ ಆಗಮಿಸಿದ ವಿದ್ಯಾರ್ಥಿಗಳು, ಕೀವ್, ಖಾರ್ಕಿವ್ ನಗರಗಳಲ್ಲಿ ಸಿಲುಕಿದ್ದರು. ಎಂಬಿಬಿಎಸ್ ವ್ಯಾಸಂಗಕ್ಕೆ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿಗಳು ಈಗ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸಾಗಿದ್ದು, ಏರ್ಪೋರ್ಟ್ನಲ್ಲಿ ವಿದ್ಯಾರ್ಥಿಗಳನ್ನ ಪೋಷಕರು ಸ್ವಾಗತಿಸಿದ್ದಾರೆ.
ತುಮಕೂರು ಜಿಲ್ಲೆಯ ಒಟ್ಟು 23 ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದರು. ಈ ಪೈಕಿ ಆರು ವಿದ್ಯಾರ್ಥಿಗಳು ವಾಪಸ್ಸಾಗಿದ್ದಾರೆ. ಇನ್ನೂ 17 ಜನ ವಿದ್ಯಾರ್ಥಿಗಳ ಶೀಘ್ರ ಆಗಮನದ ನಿರೀಕ್ಷೆಯಲ್ಲಿ ಪೋಷಕರಿದ್ದಾರೆ.
ಮುಂದುವರೆದ ‘ಆಪರೇಷನ್ ಗಂಗಾ’; ಭಾರತಕ್ಕೆ ಆಗಮಿಸಿದ 210 ವಿದ್ಯಾರ್ಥಿಗಳು
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯ ಮುಂದುವರೆದಿದೆ. ಉಕ್ರೇನ್‌ನಿಂದ ದೆಹಲಿಗೆ 210 ವಿದ್ಯಾರ್ಥಿಗಳು 2 ವಿಮಾನಗಳಲ್ಲಿ ಆಗಮಿಸಿದ್ದಾರೆ. ವಾಯುಸೇನೆಯ 2 C-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ರೊಮೇನಿಯಾದ ಬುಕಾರೆಸ್ಟ್ ಹಾಗೂ ಹಂಗೇರಿಯ ಬುಡಾಪೆಸ್ಟ್‌ನಿಂದ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ಚೆರ್ನಿಹಿವ್‌ನಲ್ಲಿ ವೈಮಾನಿಕ ದಾಳಿ; 33 ಜನರ ಸಾವು
ಉಕ್ರೇನ್ ಮೇಲೆ ರಷ್ಯಾ ಸೇನೆ ಯುದ್ಧ ಮುಂದುವರಿಸಿದೆ. ಚೆರ್ನಿಹಿವ್‌ನಲ್ಲಿ ವೈಮಾನಿಕ ದಾಳಿಯಲ್ಲಿ 33 ಜನರು ಸಾವಿಗೀಡಾಗಿದ್ದು, 18 ಜನರಿಗೆ ಗಾಯವಾಗಿದೆ.
ಪರಮಾಣು ಸ್ಥಾವರದ ಮೇಲೆ ರಷ್ಯಾ ಭಾರಿ ದಾಳಿ ನಡೆಸುತ್ತಿದೆ, ನಿಲ್ಲಿಸಬೇಕು ಎಂದು ಒತ್ತಾಯಿಸಿದ ಉಕ್ರೇನ್
ಉಕ್ರೇನ್‌ನಲ್ಲಿನ ಯುರೋಪ್‌ನ ಅತಿದೊಡ್ಡ ನ್ಯೂಕ್ಲಿಯರ್ ಪವರ್ ಸ್ಟೇಷನ್ ಮೇಲೆ ರಷ್ಯಾ ಸೇನೆ ಶೆಲ್ಲಿಂಗ್ ದಾಳಿ, ಭಾರೀ ಶಸ್ತ್ರಾಸ್ತ್ರ, ಗುಂಡಿನ ದಾಳಿ ನಡೆಸುತ್ತಿದೆ. ಇದನ್ನು ನಿಲ್ಲಿಸಬೇಕೆಂದು ಎನರ್ಹೋಡರ್ ಸ್ಥಾವರದ ವಕ್ತಾರ ಆಂಡ್ರಿ ತುಜ್ ಒತ್ತಾಯಿಸಿದ್ದಾರೆ.
ಉಕ್ರೇನ್‌ನ ಝಪೊರಿಜ್ಜ್ಯಾ ಪರಮಾಣು ಸ್ಥಾವರದ ಬಳಿ ರಷ್ಯಾದ ಕ್ಷಿಪಣಿ ದಾಳಿಯಿಂದ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಸದ್ಯ ಸ್ಥಾವರ ರಕ್ಷಣೆಯಲ್ಲಿದೆ. ಆದರೆ ಅಪಾಯ ಸಂಭವಿಸಿದರೆ ಪರಿಣಾಮ ಭೀಕರವಾಗಿರಲಿದೆ ಎಂದು ಉಕ್ರೇನ್ ಹೇಳಿದೆ.
ಪರಮಾಣು ಸ್ಥಾವರಕ್ಕೆ ದಾಳಿ ಮಾಡಿದ ಸಂಬಂಧ ಝೆಲೆನ್ಸ್ಕಿ ಜತೆ ಮಾತನಾಡಿದ ಬೈಡೆನ್
ಉಕ್ರೇನ್‌ನ ಜಫೋರಿಝಿಯಾದ NPP ಮೇಲೆ ರಷ್ಯಾ ದಾಳಿ ಮಾಡಿರುವ ಸಂಬಂಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಜತೆ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಮಾತನಾಡಿದ್ದಾರೆ. ದೂರವಾಣಿ ಕರೆ ಮಾಡಿ ಮಾತನಾಡಿರುವ ಜೋ ಬೈಡೆನ್, ಸೈನ್ಯ, ಆರ್ಥಿಕ, ಮಾನವೀಯ ಸಹಾಯದ ಬಗ್ಗೆ ಚರ್ಚಿಸಿದ್ದಾರೆ. ಚರ್ಚೆ ಬಳಿಕ ಬಾಂಬ್ ದಾಳಿ ನಿಲ್ಲಿಸಲು ರಷ್ಯಾಗೆ ಮನವಿ ಮಾಡಿದ್ದಾರೆ.
ರಷ್ಯಾದಿಂದ ಮರಮಾಣು ಭಯೋತ್ಪಾದನೆ ನಡೆಸಲಾಗುತ್ತಿದೆ: ಉಕ್ರೇನ್ ಅಧ್ಯಕ್ಷರ ಆಕ್ರೋಶ
ಉಕ್ರೇನ್‌ನ ಜಫೋರಿಝಿಯಾದ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ ನಡೆಸಿರುವುದಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದಿಂದ ಪರಮಾಣು ಭಯೋತ್ಪಾದನೆ ನಡೆಸಲಾಗುತ್ತಿದ್ದು, ಚೆರ್ನೋಬಿಲ್ ದುರಂತ ಪುನರಾವರ್ತಿಸಲು ರಷ್ಯಾ ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕೀವ್‌ನಿಂದ ಬರುತ್ತಿದ್ದ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು; ವಿಕೆ ಸಿಂಗ್ ಮಾಹಿತಿ
ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದ್ದು, ಆತ ಮಾರ್ಗ ಮಧ್ಯದಲ್ಲಿ ವಾಪಸ್ಸಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿರುವ ಜನರಲ್ (ನಿವೃತ್ತ) ವಿಕೆ ಸಿಂಗ್ ಹೇಳಿದ್ದಾರೆ. ಪೋಲೆಂಡ್ನಲ್ಲಿ ಎಎನ್ಐನೊಂದಿಗೆ ಅವರು ಮಾತನಾಡಿದರು.
I received info today that a student coming from Kyiv got shot and was taken back midway. We're trying for maximum evacuation in minimum loss: MoS Civil Aviation Gen (Retd) VK Singh, in Poland#RussiaUkraine pic.twitter.com/cggVEsqfEj
— ANI (@ANI) March 4, 2022
ಜಪೋರಿಝಿಯಾ ಅಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ; ವಿಡಿಯೋ ಇಲ್ಲಿದೆ
ಯುರೋಪ್ನಲ್ಲೇ ಅತ್ಯಂತ ದೊಡ್ಡದಾದ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿರುವ ವಿಡಿಯೋ ಬಿಡುಗಡೆ ಮಾಡಲಾಗಿದೆ. ಉಕ್ರೇನ್ ಅಧ್ಯಕ್ಷರ ಕಚೇರಿಯ ಸಲಹೆಗಾರರು ಟ್ವೀಟ್ ಮಾಡಿದ್ದು, ಅದನ್ನು ಎಎನ್ಐ ಹಂಚಿಕೊಂಡಿದೆ.
#WATCH | Adviser to the Head of the Office of President of Ukraine Volodymyr Zelenskyy tweets a video of "Zaporizhzhia NPP under fire…"#RussiaUkraine pic.twitter.com/R564tmQ4vs
— ANI (@ANI) March 4, 2022
‘ಪರಮಾಣು ಸ್ಥಾವರ ಸ್ಫೋಟಿಸಿದರೆ ಚೆರ್ನೋಬಿಲ್ಗಿಂತ ಹತ್ತು ಪಟ್ಟು ಪರಿಣಾಮ ಭೀಕರವಾಗಿರಲಿದೆ’
ಉಕ್ರೇನ್ ಸಚಿವರ ಹೇಳಿಕೆ
ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾಗೆ ರಷ್ಯಾ ದಾಳಿಯಿಂದ ಬೆಂಕಿ ತಗುಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ ಒಂದು ವೇಳೆ ಸ್ಥಾವರ ಸ್ಫೋಟಿಸಿದರೆ ಅದರ ಪರಿಣಾಮವು ಚೆರ್ನೋಬಿಲ್ಗಿಂತಲೂ ಹತ್ತು ಪಟ್ಟು ಭೀಕರವಾಗಿರಲಿದೆ ಎಂದು ಎಚ್ಚರಿಸಿದ್ದಾರೆ. ರಷ್ಯಾ ಅಗ್ನಿಶಾಮಕ ದಳಗಳಿಗೆ ಅನುಮತಿ ನೀಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಬೇಕು ಎಂದು ಅವರು ಕೋರಿಕೊಂಡಿದ್ದಾರೆ.
ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದೆ: ಉಕ್ರೇನ್
ಒಂದು ವೇಳೆ ಅನಾಹುತವಾದರೆ ಪರಿಣಾಮ ಭೀಕರವಾಗಿರಲಿದೆ ಎಂದ ಉಕ್ರೇನ್
ಉಕ್ರೇನ್‌ನಲ್ಲಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರವು ಯುರೋಪಿನಲ್ಲೇ ಅತ್ಯಂತ ದೊಡ್ಡ ಸ್ಥಾವರವಾಗಿದ್ದು, ಶುಕ್ರವಾರ ರಷ್ಯಾದ ದಾಳಿಯ ನಂತರ ಅದರಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ಕುರಿತು ಸಮೀಪದ ಪಟ್ಟಣ ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ. ಸಾವುನೋವುಗಳು ಕೂಡ ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ‘ಶತ್ರುಗಳ ನಿರಂತರ ಶೆಲ್ ದಾಳಿಯ ಪರಿಣಾಮವಾಗಿ, ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದೆ’ ಎಂದು ಓರ್ಲೋವ್ ತನ್ನ ಟೆಲಿಗ್ರಾಮ್ ಚಾನೆಲ್ನಲ್ಲಿ ಹೇಳಿದ್ದು, ಇದು ವಿಶ್ವದ ಭದ್ರತೆಗೆ ದೊಡ್ಡ ಆತಂಕವಾಗಿದೆ ಎಂದಿದ್ದಾರೆ. ರಷ್ಯಾ ಈಗಾಗಲೇ ನಿಷ್ಕ್ರಿಯವಾಗಿರುವ ಚೆರ್ನೋಬಿಲ್ ಸ್ಥಾವರವನ್ನು ವಶಪಡಿಸಿಕೊಂಡಿದೆ.
Published On - Mar 04,2022 7:38 AM