Ukraine Crisis: ‘ನನ್ನಂತೆ ಹಲವು ಜನ ಸಿಲುಕಿದ್ದಾರೆ’; ಕೀವ್​ನಿಂದ ಮರಳುವಾಗ ಗುಂಡೇಟು ತಿಂದು ಆಸ್ಪತ್ರೆಯಲ್ಲಿರುವ ಹರ್ಜೋತ್ ಹೇಳಿಕೆ

Russia Ukraine Crisis | Harjot Singh: ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್​ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಮಾಧ್ಯಮವೊಂದು ಸಂಪರ್ಕಿಸಿದ್ದು, ಪರಿಸ್ಥಿತಿಯ ಭೀಕರತೆಯನ್ನು ಆತ ವಿವರಿಸಿದ್ದಾನೆ.

Ukraine Crisis: ‘ನನ್ನಂತೆ ಹಲವು ಜನ ಸಿಲುಕಿದ್ದಾರೆ’; ಕೀವ್​ನಿಂದ ಮರಳುವಾಗ ಗುಂಡೇಟು ತಿಂದು ಆಸ್ಪತ್ರೆಯಲ್ಲಿರುವ ಹರ್ಜೋತ್ ಹೇಳಿಕೆ
ಗಾಯಗೊಂಡಿರುವ ವಿದ್ಯಾರ್ಥಿ ಹರ್ಜೋತ್ ಸಿಂಗ್
Follow us
TV9 Web
| Updated By: shivaprasad.hs

Updated on:Mar 04, 2022 | 2:39 PM

ಕೀವ್: ಇಂದು (ಶುಕ್ರವಾರ) ರಾಜ್ಯ ಸಚಿವ, ನಿವೃತ್ತ ಜನರಲ್ ವಿಕೆ ಸಿಂಗ್ ಮಾತನಾಡುತ್ತಾ ಕೀವ್​ನಿಂದ ಬರುವಾಗ ಭಾರತೀಯ ವಿದ್ಯಾರ್ಥಿಯೋರ್ವನಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ ಎಂದಿದ್ದರು. ಇದೀಗ ಆ ವಿದ್ಯಾರ್ಥಿಯನ್ನು ಎನ್​ಡಿಟಿವಿ ಸಂಪರ್ಕಿಸಿದೆ. ಅದರ ಮೂಲಕ ವಿದ್ಯಾರ್ಥಿ ರಕ್ಷಣೆಗೆ ಮನವಿ ಮಾಡಿದ್ದು, ಅಸಹಾಯಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾನೆ. ಉಕ್ರೇನ್ ರಾಜಧಾನಿ ಕೀವ್‌ನಿಂದ (Kyiv) ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ ತನಗೆ ಗುಂಡೇಟು ಹಾಗೂ ಪೆಟ್ಟು ಬಿದ್ದಿದ್ದು, ಕಾಲು ಮುರಿದಿದೆ ಎಂದು ವಿದ್ಯಾರ್ಥಿ ಹರ್ಜೋತ್ ಸಿಂಗ್ (Harjot Singh) ಹೇಳಿದ್ದಾರೆ. ‘ಗುಂಡು ನನ್ನ ಭುಜದಿಂದ ಪ್ರವೇಶಿಸಿತು. ಅದನ್ನು ಆಸ್ಪತ್ರೆಯಲ್ಲಿ ಎದೆಯಿಂದ ಹೊರತೆಗೆದರು. ನನ್ನ ಕಾಲು ಮುರಿದಿದೆ’ ಎಂದು ಹರ್ಜೋತ್ ಸಿಂಗ್ ಕೀವ್ ಸಿಟಿ ಆಸ್ಪತ್ರೆಯಿಂದ ಮಾತನಾಡುತ್ತಾ ಹೇಳಿದ್ದಾರೆ. ‘‘ನಾನು ಅಧಿಕಾರಿಗಳಿಗೆ ಕರೆ ಮಾಡುತ್ತಲೇ ಇದ್ದೆ. ನನ್ನನ್ನು ಎಲ್ವಿವ್‌ಗೆ (Lviv) ಕರೆದೊಯ್ಯಲು ಕೆಲವು ಸೌಲಭ್ಯಗಳು ಬೇಕಾಗಿದ್ದವು. ಆದರೆ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ. ಈ ಮಾಧ್ಯಮ ಮಾತ್ರ ನನ್ನನ್ನು ತಲುಪಿದೆ. ಪ್ರಸ್ತುತ ಇದರ ಮೂಲಕವಾದರೂ ನನ್ನ ಕಷ್ಟ ಜಗತ್ತಿಗೆ ತಿಳಿಯಲಿ’’ ಎಂದು ಅವರು ಹೇಳಿದ್ದಾರೆ. ಅಲ್ಲದೇ ತಮ್ಮಂತೆ ಹಲವು ಜನರು ಕೀವ್​ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.

ಹರ್ಜೋತ್ ಸಿಂಗ್ ಅವರಿಗೆ ಗುಂಡು ತಗುಲುವ ಸಂದರ್ಭದಲ್ಲಿ ಕೀವ್​ನಿಂದ ತಪ್ಪಿಸಿಕೊಂಡು ಗಡಿಗೆ ತೆರಳುವ ಸನ್ನಾಹದಲ್ಲಿದ್ದರು. ಕೀವ್​ನಿಂದ ತಪ್ಪಿಸಿಕೊಂಡು ಮತ್ತೊಂದು ನಗರ ಎಲ್ವಿವ್​ಗೆ ತೆರಳಲು ಅವರು ಪ್ರಯತ್ನಿಸುತ್ತಿದ್ದರು. ಈ ಕುರಿತು ವಿವರಿಸಿರುವ ಅವರು, ‘ನಾನು ರಾಯಭಾರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿದೆ. ನನ್ನನ್ನು ಎಲ್ವಿವ್‌ಗೆ ಕರೆದೊಯ್ಯಲು ಅವರು ಸೌಲಭ್ಯವನ್ನು ಒದಗಿಸಬಹುದೇ ಎಂದು ಕೇಳಿದೆ. ಆದರೆ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಬದಲಾಗಿ ಹಲವು ನೆಗೆಟಿವ್ ಕಾಮೆಂಟ್​ಗಳು ನನಗೆ ಸಿಗುತ್ತಿವೆ’ ಎಂದು ಅವರು ಹೇಳಿದ್ದಾರೆ.

ದೆಹಲಿ ಬಳಿಯ ಛತ್ತರ್‌ಪುರದ ವಿದ್ಯಾರ್ಥಿಯಾಗಿರುವ ಅವರು ಮತ್ತಷ್ಟು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ‘‘ನನ್ನಂತೆಯೇ ಇನ್ನೂ ಅನೇಕ ಜನರು ಕೀವ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ’’ ಎಂದಿರುವ ಅವರು, ‘‘ಅನೇಕರು ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಏನಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ನಾನು ನಿರಂತರವಾಗಿ ರಾಯಭಾರ ಕಚೇರಿಯೊಂದಿಗೆ ಮಾತನಾಡಲು ಪ್ರಯತ್ನಿಸಿದ್ದೆ. ಆ ಸಂದರ್ಭದಲ್ಲಿ ಅವರಿಗೆ ನೀವು ನಮಗಿಂತ ಮೊದಲೇ ಕೀವ್ ಬಿಟ್ಟು ಹೊರಟಿದ್ದೀರಿ. ನೀವು ಇಲ್ಲಿಯೇ ಇದ್ದು ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕಾಗಿದೆ ಎಂದು ಹೇಳಿದ್ದೆ’’ ಎಂದಿದ್ಧಾರೆ ಹರ್ಜೋತ್.

ನಾವು ಒಳ್ಳೆಯದಷ್ಟನ್ನೇ ಹಾರೈಸಬಹುದು. ಈ ಮೂಲಕವಾದರೂ ಜನರಿಗೆ ನಿಜ ಸ್ಥಿತಿಯ ಅರಿವಾಗಲಿ ಎಂದಿರುವ ಹರ್ಜೋತ್, ಭಾರತದಲ್ಲಿ ತಾಯಿ ಹಾಗೂ ಕುಟುಂಬದವರು ಕಣ್ಣೀರಿಡುತ್ತಿರುವುದನ್ನು ವಿವರಿಸಿದ್ದಾರೆ. ಭಾರತ ಸರ್ಕಾರದ ಪ್ರಕಾರ ಉಕ್ರೇನ್​ನಲ್ಲಿ 20,000 ಭಾರತೀಯರಿದ್ದರು. ಈ ಪೈಕಿ 17,000 ಜನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ. 6,000 ಜನ ತವರಿಗೆ ಮರಳಿದ್ದು, 1,700 ಜನ ಉಕ್ರೇನ್ ತೊರೆಯಲು ಕಾಯುತ್ತಿದ್ದಾರೆ ಎನ್ನಲಾಗಿತ್ತು.

ಮಂಗಳವಾರದಂದು ಕರ್ನಾಟಕ ಮೂಲದ ನವೀನ್ ರಷ್ಯಾದ ದಾಳಿಗೆ ಖಾರ್ಕಿವ್​ನಲ್ಲಿ ಮೃತಪಟ್ಟಿದ್ದರು. ಉಕ್ರೇನ್​ನಿಂದ ಗಡಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ನೆರೆಯ ದೇಶಗಳ ಮೂಲಕ ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ.

ಇದನ್ನೂ ಓದಿ:

Ukraine Crisis: ಕೀವ್​ನಿಂದ ಆಗಮಿಸುತ್ತಿದ್ದ ಭಾರತದ ವಿದ್ಯಾರ್ಥಿಗೆ ಗುಂಡು; ಆಸ್ಪತ್ರೆಗೆ ದಾಖಲು: ವಿಕೆ ಸಿಂಗ್ ಮಾಹಿತಿ

Russia Ukraine War: ರಷ್ಯಾ- ಉಕ್ರೇನ್ ಕದನ; ಉಕ್ರೇನಿಯನ್ನರ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತಿವೆ ಈ ಫೋಟೋಗಳು

Published On - 2:32 pm, Fri, 4 March 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್