AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ukraine Crisis: ಕೀವ್​ನಿಂದ ಆಗಮಿಸುತ್ತಿದ್ದ ಭಾರತದ ವಿದ್ಯಾರ್ಥಿಗೆ ಗುಂಡು; ಆಸ್ಪತ್ರೆಗೆ ದಾಖಲು: ವಿಕೆ ಸಿಂಗ್ ಮಾಹಿತಿ

Russia Ukraine Crisis: ಕೀವ್​ನಿಂದ ಮರಳುತ್ತಿದ್ದ ಭಾರತದ ವಿದ್ಯಾರ್ಥಿಯೋರ್ವರಿಗೆ ಗುಂಡು ತಗುಲಿರುವ ಮಾಹಿತಿ ಲಭ್ಯವಾಗಿದೆ. ಅವರನ್ನು ಮರಳಿ ಕರೆದೊಯ್ಯಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಾಜ್ಯ ಸಚಿವ ವಿಕೆ ಸಿಂಗ್ ತಿಳಿಸಿದ್ದಾರೆ.

Ukraine Crisis: ಕೀವ್​ನಿಂದ ಆಗಮಿಸುತ್ತಿದ್ದ ಭಾರತದ ವಿದ್ಯಾರ್ಥಿಗೆ ಗುಂಡು; ಆಸ್ಪತ್ರೆಗೆ ದಾಖಲು: ವಿಕೆ ಸಿಂಗ್ ಮಾಹಿತಿ
ವಿಕೆ ಸಿಂಗ್ (ಸಂಗ್ರಹ ಚಿತ್ರ)
TV9 Web
| Edited By: |

Updated on:Mar 04, 2022 | 9:24 AM

Share

ರಷ್ಯಾ ಮತ್ತು ಉಕ್ರೇನ್ ಯುದ್ಧ (Russia Ukraine War) ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಯುದ್ಧಪೀಡಿತ ಸ್ಥಳಗಳಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಪ್ರಯತ್ನಿಸುತ್ತಿದೆ. ಕಳೆದ ಕೆಲವು ದಿನಗಳ ಹಿಂದೆ ರಷ್ಯಾದ ದಾಳಿಗೆ ಕರ್ನಾಟಕ ಮೂಲದ ವಿದ್ಯಾರ್ಥಿಯೋರ್ವ ಮೃತಪಟ್ಟಿದ್ದ. ಈ ಘಟನೆಯ ಬೆನ್ನಲ್ಲೇ ಇಂದು ಮತ್ತೋರ್ವ ವಿದ್ಯಾರ್ಥಿಗೆ ಗುಂಡು ತಗುಲಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾಗಿರುವ ಜನರಲ್ (ನಿವೃತ್ತ) ವಿಕೆ ಸಿಂಗ್ (General VK Singh) ಮಾಹಿತಿ ನೀಡಿದ್ದಾರೆ. ಪೋಲಂಡ್​ನಲ್ಲಿ ಅವರು ಎಎನ್​ಐನೊಂದಿಗೆ ಮಾತನಾಡಿದರು. ‘ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದ್ದು, ಆತ ಮಾರ್ಗ ಮಧ್ಯದಲ್ಲಿ ವಾಪಸ್ಸಾಗಿದ್ದಾರೆ. ಅವರನ್ನು ಕೀವ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ವಿಕೆ ಸಿಂಗ್ ಹೇಳಿದ್ದಾರೆ.

‘ಭಾರತದ ರಾಯಭಾರ ಕಚೇರಿಯು ಈ ಹಿಂದೆ ಕೀವ್ ತೊರೆಯಬೇಕು ಎಂದು ತಿಳಿಸಿತ್ತು. ಯುದ್ಧದ ಸಂದರ್ಭದಲ್ಲಿ ಧರ್ಮ, ಜಾತೀಯತೆಯನ್ನು ನೋಡುವುದಿಲ್ಲ’ ಎಂದು ವಿಕೆ ಸಿಂಗ್ ಹೇಳಿದ್ದಾರೆ. ಪ್ರಸ್ತುತ ಉಕ್ರೇನ್​ನಲ್ಲಿನ ವಿದ್ಯಾರ್ಥಿಗಳು ಗಡಿ ಪ್ರದೇಶಗಳತ್ತ ತೆರಳಲು ಯತ್ನಿಸುತ್ತಿದ್ದಾರೆ. ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ — ಉಕ್ರೇನ್‌ ಗಡಿ ದೇಶಗಳಲ್ಲಿ ಆಪರೇಷನ್ ಗಂಗಾದ ಜವಾಬ್ದಾರಿ ಹೊತ್ತಿದ್ದಾರೆ.

ಈ ಕುರಿತು ಎಎನ್​ಐ ಟ್ವೀಟ್ ಇಲ್ಲಿದೆ:

ನಿನ್ನೆ ಭಾರತವು ಮಾಹಿತಿ ನೀಡಿ ಉಕ್ರೇನ್​ನಲಿದ್ದ 20,000 ಭಾರತದ ನಾಗರಿಕರಲ್ಲಿ 17,000 ಜನ ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ ಎಂದು ಹೇಳಿತ್ತು. ಗಡಿ ಪ್ರದೇಶ ತಲುಪಿದ ಭಾರತದ ವಿದ್ಯಾರ್ಥಿಗಳನ್ನು ‘ಆಪರೇಷನ್ ಗಂಗಾ’ ಯೋಜನೆಯ ಮೂಲಕ ಭಾರತಕ್ಕೆ ಕರೆತರಲಾಗುತ್ತಿದೆ. ಇದಕ್ಕೆ ಭಾರತೀಯ ವಾಯುಪಡೆಯೂ ಕೈಜೋಡಿಸಿದೆ.

ರಷ್ಯಾ- ಉಕ್ರೇನ್ ಕದನದ ಲೈವ್ ಅಪ್ಡೇಟ್ಸ್ ಇಲ್ಲಿ ಲಭ್ಯವಿದೆ: Russia Ukraine War Live: ಯುರೋಪ್​ ಸುರಕ್ಷತೆಗೆ ಪುಟಿನ್ ಬೆದರಿಕೆ; ಪರಮಾಣು ಸ್ಥಾವರದ ಮೇಲೆ ದಾಳಿ ಬೆನ್ನಲ್ಲೇ ಇಂಗ್ಲೆಂಡ್ ಪ್ರಧಾನಿ ಆಕ್ರೋಶ

ಇದನ್ನೂ ಓದಿ:

Zaporizhzhia NPP: ರಷ್ಯಾ ದಾಳಿಯಿಂದ ಜಪೋರಿಝಿಯಾ ಪರಮಾಣು ಸ್ಥಾವರಕ್ಕೆ ಬೆಂಕಿ; ಸ್ಫೋಟಗೊಂಡರೆ ಸಂಪೂರ್ಣ ಯುರೋಪ್​ಗೆ ಅಪಾಯ

ಫ್ರೆಂಚ್ ಅಧ್ಯಕ್ಷರ ಪ್ರಕಾರ ಪುಟಿನ್ ಯುದ್ಧ ನಿಲ್ಲಿಸುವ ಸೂಚನೆಯೇ ಇಲ್ಲ, ಮುಂಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ!

Published On - 9:07 am, Fri, 4 March 22

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?