Zaporizhzhia NPP: ರಷ್ಯಾ ದಾಳಿಯಿಂದ ಜಪೋರಿಝಿಯಾ ಪರಮಾಣು ಸ್ಥಾವರಕ್ಕೆ ಬೆಂಕಿ; ಸ್ಫೋಟಗೊಂಡರೆ ಸಂಪೂರ್ಣ ಯುರೋಪ್​ಗೆ ಅಪಾಯ

Zaporizhzhia NPP: ರಷ್ಯಾ ದಾಳಿಯಿಂದ ಜಪೋರಿಝಿಯಾ ಪರಮಾಣು ಸ್ಥಾವರಕ್ಕೆ ಬೆಂಕಿ; ಸ್ಫೋಟಗೊಂಡರೆ ಸಂಪೂರ್ಣ ಯುರೋಪ್​ಗೆ ಅಪಾಯ
ವಿಡಿಯೋದಿಂದ ಸೆರೆಹಿಡಿಯಲಾದ ಚಿತ್ರ

Russia Ukraine War | Fire in Zaporizhzhia NPP: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರ ರಷ್ಯಾದ ದಾಳಿಯಿಂದ ಯುರೋಪ್​ನಲ್ಲೇ ಅತ್ಯಂತ ದೊಡ್ಡದಾದ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದೆ ಎಂದು ಉಕ್ರೇನ್ ಹೇಳಿದೆ.

TV9kannada Web Team

| Edited By: shivaprasad.hs

Mar 04, 2022 | 8:14 AM

ರಷ್ಯಾ ಉಕ್ರೇನ್ ಮೇಲೆ ಯುದ್ಧ (Russia Ukraine War) ಮುಂದುವರೆಸುತ್ತಿದ್ದು, ಕದನ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಕೆಲ ದಿನಗಳ ಹಿಂದೆ ರಷ್ಯಾವು ಪ್ರಸ್ತುತ ನಿಷ್ಕ್ರಿಯವಾಗಿರುವ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ವಶಪಡಿಸಿಕೊಂಡಿತ್ತು. ಇದೀಗ ರಷ್ಯಾದ ದಾಳಿಯಿಂದ ಯುರೋಪ್​ನಲ್ಲೇ ಅತ್ಯಂತ ದೊಡ್ಡದಾದ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದೆ ಎಂದು ಉಕ್ರೇನ್ ಹೇಳಿದ್ದು, ವಿಡಿಯೋ ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ಸ್ಥಾವರ ಸ್ಫೋಟಗೊಂಡರೆ ಚೆರ್ನೋಬಿಲ್​ ದುರಂತಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಅನುಹಾತವಾಗಲಿದೆ ಎಂದು ಉಕ್ರೇನ್ ಆತಂಕ ಹೊರಹಾಕಿದೆ. ರಷ್ಯಾ ವಶಪಡಿಸಿಕೊಂಡಿರುವ ಉಕ್ರೇನ್‌ನಲ್ಲಿರುವ ಜಪೋರಿಝಿಯಾ ಪರಮಾಣು (Zaporizhzhia NPP) ವಿದ್ಯುತ್ ಸ್ಥಾವರವು ಯುರೋಪಿನಲ್ಲೇ ಅತ್ಯಂತ ದೊಡ್ಡ ಸ್ಥಾವರವಾಗಿದ್ದು, ಶುಕ್ರವಾರ ರಷ್ಯಾದ ದಾಳಿಯ ನಂತರ ಅದರಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗಿದೆ. ಈ ಕುರಿತು ಸಮೀಪದ ಪಟ್ಟಣ ಎನರ್‌ಗೋಡರ್‌ನ ಮೇಯರ್ ಡಿಮಿಟ್ರೋ ಓರ್ಲೋವ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸ್ಥಳೀಯ ಪಡೆಗಳು ಮತ್ತು ರಷ್ಯಾದ ಪಡೆಗಳ ನಡುವೆ ಭೀಕರ ಹೋರಾಟ ನಡೆದಿದೆ. ಸಾವುನೋವುಗಳು ಕೂಡ ಸಂಭವಿಸಿವೆ ಎಂದು ಅವರು ಹೇಳಿದ್ದಾರೆ. ‘ಶತ್ರುಗಳ ನಿರಂತರ ಶೆಲ್ ದಾಳಿಯ ಪರಿಣಾಮವಾಗಿ, ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದೆ’ ಎಂದು ಓರ್ಲೋವ್ ತನ್ನ ಟೆಲಿಗ್ರಾಮ್ ಚಾನೆಲ್​ನಲ್ಲಿ ಹೇಳಿದ್ದು, ಇದು ವಿಶ್ವದ ಭದ್ರತೆಗೆ ದೊಡ್ಡ ಆತಂಕವಾಗಿದೆ ಎಂದಿದ್ದಾರೆ. ರಷ್ಯಾ ಈಗಾಗಲೇ ನಿಷ್ಕ್ರಿಯವಾಗಿರುವ ಚೆರ್ನೋಬಿಲ್ ಸ್ಥಾವರವನ್ನು ವಶಪಡಿಸಿಕೊಂಡಿದೆ.

ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾದ ಜಪೋರಿಝಿಯಾಗೆ ರಷ್ಯಾ ದಾಳಿಯಿಂದ ಬೆಂಕಿ ತಗುಲಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ, ಉಕ್ರೇನ್ ಸಚಿವ ಡಿಮಿಟ್ರೋ ಕುಲೆಬಾ ಒಂದು ವೇಳೆ ಸ್ಥಾವರ ಸ್ಫೋಟಿಸಿದರೆ ಅದರ ಪರಿಣಾಮವು ಚೆರ್ನೋಬಿಲ್​ಗಿಂತಲೂ ಹತ್ತು ಪಟ್ಟು ಭೀಕರವಾಗಿರಲಿದೆ ಎಂದು ಎಚ್ಚರಿಸಿದ್ದಾರೆ. ರಷ್ಯಾ ಅಗ್ನಿಶಾಮಕ ದಳಗಳಿಗೆ ಅನುಮತಿ ನೀಡಬೇಕು. ಭದ್ರತಾ ವಲಯವನ್ನು ಸ್ಥಾಪಿಸಬೇಕು ಎಂದು ಅವರು ಕೋರಿಕೊಂಡಿದ್ದಾರೆ.

ಪರಮಾಣು ಸ್ಥಾವರಕ್ಕೆ ಬೆಂಕಿ ತಗುಲಿರುವ ವಿಡಿಯೋ:

ರಷ್ಯಾದ ವಿರುದ್ಧ ಜಾಗತಿಕ ಒತ್ತಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಾಗ್ಯೂ ರಷ್ಯಾ ದಾಳಿಯಿಂದ ಹಿಂದೆ ಸರಿದಿಲ್ಲ. ಕಳೆದ ಗುರುವಾರ ರಷ್ಯಾ ಘೋಷಿಸಿದ್ದ ಆಕ್ರಮಣ ಇಂದು ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಎರಡೂ ಪಕ್ಷದಲ್ಲಿ ಅಪಾರ ಸಾವುನೋವಾಗಿದೆ. ಕದನ ವಿರಾಮದ ಮಾತುಕತೆಗಳು ಎರಡೂ ದೇಶದ ನಡುವೆ ನಡೆಯುತ್ತಿದ್ದರೂ ಇನ್ನೂ ತೀರ್ಮಾನಕ್ಕೆ ಬರಲಾಗಿಲ್ಲ. ಈ ನಡುವೆ ರಷ್ಯಾ ಯುದ್ಧ ಮುಂದುವರೆಸಿದೆ. ರಾಜತಾಂತ್ರಿಕ ವಿಧಾನದಲ್ಲಿಯೇ ಸಮಸ್ಯೆ ಬಗೆಹರಿಸಬೇಕು ಎಂದು ಭಾರತವು ಒತ್ತಾಯಿಸಿದೆ.

ಇದನ್ನೂ ಓದಿ:

Russia Ukraine War Live: ರಷ್ಯಾದ ದಾಳಿಯಿಂದ ಯುರೋಪ್​ನಲ್ಲೇ ಅತ್ಯಂತ ದೊಡ್ಡದಾದ ಅಣು ವಿದ್ಯುತ್ ಸ್ಥಾವರಕ್ಕೆ ಬೆಂಕಿ ತಗುಲಿದೆ: ಉಕ್ರೇನ್ ಹೇಳಿಕೆ

Russia-Ukraine War: ರಷ್ಯಾ ದಾಳಿಗೆ ಬಲಿಯಾದ ಉಕ್ರೇನ್ ದೇಶದ ಇಬ್ಬರು ಖ್ಯಾತ ಫುಟ್ಬಾಲ್ ಆಟಗಾರರು..!

Follow us on

Related Stories

Most Read Stories

Click on your DTH Provider to Add TV9 Kannada