Russia-Ukraine War: ರಷ್ಯಾ ದಾಳಿಗೆ ಬಲಿಯಾದ ಉಕ್ರೇನ್ ದೇಶದ ಇಬ್ಬರು ಖ್ಯಾತ ಫುಟ್ಬಾಲ್ ಆಟಗಾರರು..!
Russia-Ukraine War: ರಷ್ಯಾದ ದಾಳಿಯಲ್ಲಿ ಉಕ್ರೇನ್‌ನ ಇಬ್ಬರು ವೃತ್ತಿಪರ ಫುಟ್‌ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ. ವೃತ್ತಿಪರ ಫುಟ್ಬಾಲ್ ಆಟಗಾರರ ಜಾಗತಿಕ ಸಂಸ್ಥೆಯಾದ ಫಿಫ್ಪ್ರೊ ಮಾರ್ಚ್ 3 ಗುರುವಾರದಂದು ಈ ಕುರಿತು ಮಾಹಿತಿ ನೀಡಿ ಹೇಳಿಕೆ ನೀಡಿದೆ.
ಉಕ್ರೇನ್‌ನ ಮೇಲೆ ರಷ್ಯಾ ಆಕ್ರಮಣ (Russia-Ukraine War) ಮಾಡಿ ಒಂದು ವಾರಕ್ಕೂ ಹೆಚ್ಚು ಸಮಯ ಕಳೆದಿದೆ ಮತ್ತು ಈ ಉಗ್ರ ಹೋರಾಟ ಇನ್ನೂ ನಡೆಯುತ್ತಿದೆ. ಎರಡೂ ಕಡೆಯ ನೂರಾರು ಸೈನಿಕರು ಪ್ರಾಣ ಬಿಟ್ಟಿದ್ದಾರೆ. ಅನೇಕ ಮುಗ್ಧ ಉಕ್ರೇನಿಯನ್ ನಾಗರಿಕರು ಸಹ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಷ್ಯಾದ ದಾಳಿಯಿಂದ ನಲುಗಿ ಹೋಗಿರುವ ಉಕ್ರೇನ್‌ನಿಂದ ಇದೀಗ ಆಘಾತಕಾರಿ ಸುದ್ದಿಯೊಂದು ಬಂದಿದೆ. ಮಾಹಿತಿಯ ಪ್ರಕಾರ, ರಷ್ಯಾದ ದಾಳಿಯಲ್ಲಿ ಉಕ್ರೇನ್‌ನ ಇಬ್ಬರು ವೃತ್ತಿಪರ ಫುಟ್‌ಬಾಲ್ ಆಟಗಾರರು ಸಾವನ್ನಪ್ಪಿದ್ದಾರೆ. ವೃತ್ತಿಪರ ಫುಟ್ಬಾಲ್ ಆಟಗಾರರ ಜಾಗತಿಕ ಸಂಸ್ಥೆಯಾದ ಫಿಫ್ಪ್ರೊ (FIFPro) ಮಾರ್ಚ್ 3 ಗುರುವಾರದಂದು ಈ ಕುರಿತು ಮಾಹಿತಿ ನೀಡಿ ಹೇಳಿಕೆ ನೀಡಿದೆ. ಇದರ ಪ್ರಕಾರ, ರಷ್ಯಾದ ದಾಳಿಯಲ್ಲಿ ವಿಟಾಲಿ ಸಪಿಲೋ (21) ಮತ್ತು ಡಿಮಿಟ್ರೋ ಮಾರ್ಟಿನೆಂಕೊ (25) ಪ್ರಾಣ ಕಳೆದುಕೊಂಡಿದ್ದಾರೆ, ಇದು ಈ ಸಂಘರ್ಷದಲ್ಲಿ ಫುಟ್ಬಾಲ್ ಆಟಗಾರರ ಸಾವಿನ ಮೊದಲ ಘಟನೆಯಾಗಿದೆ ಎಂದು ವರದಿ ಮಾಡಿದೆ.
ಕಳೆದ 8 ದಿನಗಳಿಂದ ನಡೆಯುತ್ತಿರುವ ರುಸ್ಸೋ-ಉಕ್ರೇನ್ ಯುದ್ಧದಲ್ಲಿ ಆಟಗಾರರು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ. ಫಿಫ್ಪ್ರೊ ಪ್ರಧಾನ ಕಾರ್ಯದರ್ಶಿ ಜೊನಾಸ್ ಬೇರ್ ಹಾಫ್ಮನ್ ಗುರುವಾರ ಈ ಮಾಹಿತಿಯನ್ನು ನೀಡಿದ್ದಾರೆ. ಈ ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಮೊದಲ ಫುಟ್ಬಾಲ್ ಆಟಗಾರರಾದ ಉಕ್ರೇನಿಯನ್ ಯುವ ಫುಟ್ಬಾಲ್ ಆಟಗಾರರಾದ ವಿಟಾಲಿ ಸೆಪಿಲೊ ಮತ್ತು ಡಿಮಿಟ್ರೋ ಮಾರ್ಟಿನೆಂಕೊ ಅವರ ಕುಟುಂಬ, ಸ್ನೇಹಿತರು ಮತ್ತು ತಂಡದ ಸಹ ಆಟಗಾರರಿಗೆ ನಮ್ಮ ಸಂತಾಪಗಳು ಎಂದು ಫಿಫ್ಪ್ರೊ ಹೇಳಿಕೆಯಲ್ಲಿ ತಿಳಿಸಿದೆ.
Our thoughts are with the families, friends, and teammates of young Ukrainian footballers Vitalii Sapylo (21) and Dmytro Martynenko (25), football’s first reported losses in this war.
May they both rest in peace. pic.twitter.com/f6l9oHHRMr
— FIFPRO (@FIFPRO) March 1, 2022
400 ವಿದೇಶಿ ಆಟಗಾರರ ಬಗ್ಗೆ ಮಾಹಿತಿ ಇಲ್ಲ ಆದಾಗ್ಯೂ, ಹೆಚ್ಚಿನ ಫುಟ್ಬಾಲ್ ಆಟಗಾರರು ಉಕ್ರೇನ್ ತೊರೆದು ಪೋಲೆಂಡ್ ಮತ್ತು ರೊಮೇನಿಯಾದಂತಹ ದೇಶಗಳಿಗೆ ತೆರಳಿದ್ದಾರೆ ಎಂದು ಹಾಫ್ಮನ್ ಹೇಳಿದ್ದಾರೆ. ಆಟಗಾರರ ಗುಂಪುಗಳು ಉಕ್ರೇನ್‌ನಿಂದ ನೆರೆಯ ಪೋಲೆಂಡ್ ಮತ್ತು ರೊಮೇನಿಯಾಕ್ಕೆ ತೆರಳಲು ಯಶಸ್ವಿಯಾಗಿವೆ. ಆದರೆ ಪೂರ್ವ ಯುರೋಪಿಯನ್ ದೇಶದಲ್ಲಿ ನೋಂದಾಯಿಸಲಾದ 400 ವಿದೇಶಿ ಫುಟ್‌ಬಾಲ್ ಆಟಗಾರರು ಎಲ್ಲಿದ್ದಾರೆಂದು ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ.
ಬೆಲಾರಸ್ ವಿರುದ್ಧ UEFA ಕ್ರಮ ಅದೇ ಸಮಯದಲ್ಲಿ, ಫುಟ್ಬಾಲ್ನ ಆಡಳಿತ ಮಂಡಳಿಗಳಿಂದ ರಷ್ಯಾ ಮತ್ತು ಅದರ ಮಿತ್ರರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯುತ್ತಿದೆ. ಯುರೋಪಿಯನ್ ಫುಟ್‌ಬಾಲ್‌ನ ಆಡಳಿತ ಮಂಡಳಿ UEFA ಗುರುವಾರ ರಷ್ಯಾದ ರಾಷ್ಟ್ರೀಯ ತಂಡ ಮತ್ತು ಕ್ಲಬ್‌ಗಳನ್ನು ಅಮಾನತುಗೊಳಿಸಿದ ನಂತರ ಎಲ್ಲಾ ಬೆಲಾರಸ್ ತಂಡಗಳನ್ನು ಅಂತರರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಲ್ಲಿ ಆಡುವುದನ್ನು ನಿಷೇಧಿಸಿದೆ. ಆದರೆ ಉಕ್ರೇನ್‌ನ ಮೇಲಿನ ರಷ್ಯಾದ ಮಿಲಿಟರಿ ದಾಳಿಗೆ ಅದರ ಲಿಂಕ್‌ಗಳಿಗಾಗಿ ದೇಶವನ್ನು ಯುರೋಪಿಯನ್ ಸ್ಪರ್ಧೆಗಳಿಂದ ನಿಷೇಧಿಸಲಾಗಿದೆ. ಬೆಲಾರಸ್ ತನ್ನ ತವರು ಮೈದಾನದಲ್ಲಿ ಏಪ್ರಿಲ್ 7 ರಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಬೇಕಿತ್ತು. 2023 ರ ಮಹಿಳಾ ವಿಶ್ವಕಪ್‌ನ ಅರ್ಹತಾ ಗುಂಪು ಹಂತದ ಪಂದ್ಯಕ್ಕಾಗಿ ಐಸ್‌ಲ್ಯಾಂಡ್‌ನ ತಂಡವು ಬೆಲಾರಸ್‌ನ ಬೊರಿಸೊವ್‌ಗೆ ಹೋಗಬೇಕಿತ್ತು.
ಇದನ್ನೂ ಓದಿ:Edible Oil: ವ್ಯಾಪಾರಿಗಳು ಖಾದ್ಯ ತೈಲದ ಬೆಲೆ ಏರಿಸಲು ರಷ್ಯಾ- ಉಕ್ರೇನ್ ಯುದ್ಧವೇ ಅಸ್ತ್ರ
Published On - 9:50 pm, Thu, 3 March 22