ಫ್ರೆಂಚ್ ಅಧ್ಯಕ್ಷರ ಪ್ರಕಾರ ಪುಟಿನ್ ಯುದ್ಧ ನಿಲ್ಲಿಸುವ ಸೂಚನೆಯೇ ಇಲ್ಲ, ಮುಂಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ!

ಈ ಅನಾಮಧೇಯ ಸಹವರ್ತಿ ಹೇಳುವ ಹಾಗೆ ಪುಟಿನ್ ಗೆ ಯುದ್ಧ ನಿಲ್ಲಿಸುವ ಯೋಚನೆಯೇ ಇಲ್ಲ, ಮುಂದೆ ಇನ್ನೂ ಭೀಕರ ದಿನಗಳು ಎದುರಾಗಲಿವೆ. ಉಕ್ರೇನ್ ಅನ್ನು ಸಂಪೂರ್ಣವಾಗಿ ವಶಡಿಸಿಕೊಳ್ಳುವವರೆಗೆ ಪುಟಿನ್ ಯುದ್ಧ ಮುಂದುವರೆಸುವ ಸಂಕಲ್ಪ ಮಾಡಿಕೊಂಡಿದ್ದಾರೆ.

ಫ್ರೆಂಚ್ ಅಧ್ಯಕ್ಷರ ಪ್ರಕಾರ ಪುಟಿನ್ ಯುದ್ಧ ನಿಲ್ಲಿಸುವ ಸೂಚನೆಯೇ ಇಲ್ಲ, ಮುಂಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ!
ವ್ಲಾದಿಮಿರ್ ಪುಟಿನ್ ಮತ್ತು ಇಮ್ಯಾನುಯೇಲ್ ಮ್ಯಾಕ್ರನ್
Follow us
TV9 Web
| Updated By: ganapathi bhat

Updated on: Mar 04, 2022 | 8:10 AM

ಪ್ಯಾರಿಸ್: ಉತ್ತರ ಕೊರಿಯಾದ ಸರ್ವೋಚ್ಛ ನಾಯಕ ಕಿಮ್ ಜಾಂಗ್-ಉನ್ (Kim Jong-Un) ಕೆಲ ವರ್ಷಗಳ ಹಿಂದೆ ಹುಚ್ಚುಚ್ಚಾಗಿ ಆಡಿದಾಗ, ಯುಎಸ್ (US) ಮೇಲೆ ನ್ಯೂಕ್ಲಿಯರ್ ಬಾಂಬ್ (Nuclear Bomb) ಆ ದೇಶವನ್ನು ನಾಶ ಮಾಡುತ್ತೇನೆ ಅಂತ ಹೇಳಿದಾಗ ಇಡೀ ವಿಶ್ವವೇ ಅವರನ್ನು ಖಂಡಿಸಿತ್ತು. ಆದರೆ ಅವರು ಬರೀ ಬಡಾಯಿ ಕೊಚ್ಚಿಕೊಂಡಿದ್ದು ಅಂತ ವಿಶ್ವಕ್ಕೆ ಗೊತ್ತಾಗಲು ತಡವಾಗಲಿಲ್ಲ. ಆದರೆ, ಕಿಮ್ ಅನ್ನು ಹತ್ತಿರದಿಂದ ಬಲ್ಲವರು ಅವರೊಬ್ಬ ಅಪಾಯಕಾರಿ ವ್ಯಕ್ತಿ ಅಂತ ಈಗಲೂ ಹೇಳುತ್ತಾರೆ. ಇಲ್ಲಿ ಇದನ್ನು ನೆನಪಿಸಿಕೊಳ್ಳುವ ತಾತ್ಪರ್ಯವೇನೆಂದರೆ, ಎಲ್ಲ ರಾಷ್ಟ್ರಗಳು ಕಿಮ್ ರನ್ನು ಖಂಡಿಸಿದ ಹಾಗೆ ಅವರಿಗಿಂತ ಅಪಾಯಕಾರಿಯಾಗಿ ಸಾಬೀತಾಗಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಅವರನ್ನು ಖಂಡಿಸುತ್ತಿಲ್ಲ. ಯುದ್ಧ ಬೇಡ, ಅದನ್ನು ನಿಲ್ಲಿಸಿ, ಯುದ್ಧವಿರಾಮ ಘೋಷಿಸಿ ಅಂತ ಮೃದುವಾಗಿ ಹೇಳುತ್ತಿದ್ದಾರೆಯೇ ಹೊರತು ಕಿಮ್ ಅವರಿಗೆ ಬಳಸಿದ ಕಠೋರ ಶಬ್ದಗಳನ್ನು ಯಾರೂ ಬಳಸುತ್ತಿಲ್ಲ.

ಫ್ರಾನ್ಸ್ ಅಧ್ಯಕ್ಷ ಇಮ್ಮ್ಯಾನುಯೇಲ್ ಮ್ಯಾಕ್ರನ್ ಅವರು ಗುರುವಾರ ಪುಟಿನ್ ಜೊತೆ 90 ನಿಮಿಷ ಮಾತುಕತೆ ನಡೆಸಿದರು. ಮ್ಯಾಕ್ರನ್ ಅವರು ತಮ್ಮ ಆಪ್ತ ಸಹಯೋಗಿ ಒಬ್ಬರೊಂದಿಗೆ ಪುಟಿನ್ ಜೊತೆ ನಡೆದ ಮಾತುಕತೆಯ ವಿವರಗಳನ್ನು ತಿಳಿಸಿದ್ದು ಅವರು ತಮ್ಮ ಹೆಸರು ಬಹಿರಂಗಪಡಿಸಬಾರದೆಂಬ ಷರತ್ತಿನೊಂದಿಗೆ ಮ್ಯಾಕ್ರನ್ ಹೇಳಿರುವ ಸಂಗತಿಗಳನ್ನು ಸುದ್ದಿಗಾರರರಿಗೆ ತಿಳಿಸಿದ್ದಾರೆ.

ಈ ಅನಾಮಧೇಯ ಸಹವರ್ತಿ ಹೇಳುವ ಹಾಗೆ ಪುಟಿನ್ ಗೆ ಯುದ್ಧ ನಿಲ್ಲಿಸುವ ಯೋಚನೆಯೇ ಇಲ್ಲ, ಮುಂದೆ ಇನ್ನೂ ಭೀಕರ ದಿನಗಳು ಎದುರಾಗಲಿವೆ. ಉಕ್ರೇನ್ ಅನ್ನು ಸಂಪೂರ್ಣವಾಗಿ ವಶಡಿಸಿಕೊಳ್ಳುವವರೆಗೆ ಪುಟಿನ್ ಯುದ್ಧ ಮುಂದುವರೆಸುವ ಸಂಕಲ್ಪ ಮಾಡಿಕೊಂಡಿದ್ದಾರೆ.

‘ರಷ್ಯಾ ಅಧ್ಯಕ್ಷ ಪುಟಿನ್ ಆಡಿರುವ ಮಾತುಗಳ ಹಿನ್ನೆಲೆಯಲ್ಲಿ ಹೇಳುವುದಾದರೆ, ಮುಂಬರುವ ದಿನಗಳು ಇನ್ನಷ್ಟು ಭೀಕರವಾಗಿರಲಿವೆ ಅಂತ ಅಧ್ಯಕ್ಷ ಮ್ಯಾಕ್ರನ್ ಆತಂಕ ವ್ಯಕ್ತಪಡಿಸಿದ್ದಾರೆ,’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

‘ಅವರ ಮಾತಿನಲ್ಲಿ ಯುದ್ದ ನಿಲ್ಲಿಸಬಹುದಾದ ಸೂಚನೆಯೇ ಕಾಣಲಿಲ್ಲ, ನಾವು ಸಮಾಧಾನಪಡುವಂಥ, ಆಶಾಕಿರಣ ಮೂಡುವಂಥ ಒಂದೇ ಒಂದು ಮಾತು ಅವರ ಬಾಯಿಂದ ಹೊರಡಲಿಲ್ಲ, ಸೇನಾ ಕಾರ್ಯಾಚರಣೆ ಮುಂದುವರಿಸುವ ಸಂಕಲ್ಪ ಅವರು ಮಾಡಿಕೊಂಡಿದ್ದಾರೆ,’ ಎಂದು ಅನಾಮಧೇಯ ಸಹವರ್ತಿ ಹೇಳಿದ್ದಾರೆ.

‘ಇಡೀ ಉಕ್ರೇನನ್ನು ಪುಟಿನ್ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಹವಣಿಕೆಯಲ್ಲಿದ್ದಾರೆ. ಅವರ ಮಾತಿನಲ್ಲಿ ಆ ದೃಢತೆ ಮತ್ತು ಸಂಕಲ್ಪ ವ್ಯಕ್ತವಾಯಿತು. ಉಕ್ರೇನ್ ಅನ್ನು ನಾಜಿ ಧೋರಣೆ-ಮುಕ್ತ ಮಾಡುವವರೆಗೆ ಸೇನಾ ಕಾರ್ಯಾಚರಣೆ ನಿಲ್ಲಿಸುವುದಿಲ್ಲ ಅಂತ ಅವರು ಹೇಳುತ್ತಿದ್ದಾರೆ,’ ಎಂದು ಸಹವರ್ತಿ ಹೇಳಿದ್ದಾರೆ.

‘ಅವರ ಮಾತುಗಳು ಎಷ್ಟು ಆಘಾತಕಾರಿ ಮತ್ತು ಒಪ್ಪಿಕೊಳ್ಳುವುದುದು ಅಸಾಧ್ಯ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಅಧ್ಯಕ್ಷ ಮ್ಯಾಕ್ರನ್ ಅವರು ಇದೆಲ್ಲ ಸುಳ್ಳು ಅಗಿರಲಿ ಎಂದು ಹೇಳಿದರಂತೆ,’ ಎಂದು ಸಹವರ್ತಿ ಹೇಳಿದ್ದಾರೆ.

‘ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಮತ್ತು ಜನರ ನಡುವೆ ಸಂಪರ್ಕ ಸಾಧ್ಯವಾಗಲು ಅವಕಾಶ ನೀಡುವಂತೆ ಮ್ಯಾಕ್ರನ್, ಪುಟಿನ್ ಅವರನ್ನು ಒತ್ತಾಯಿಸಿದ್ದಾರೆ,’ ಎಂದು ಅವರು ಹೇಳಿದ್ದಾರೆ.

‘ಅಂಥದೊಂದು ಸ್ಥಿತಿ ನಿರ್ಮಾಣಗೊಳ್ಳುವಂತಾಗಲು ನಾನೂ ಬಯಸುತ್ತೇನೆ, ಆದರೆ ಅದರ ಬಗ್ಗೆ ಯಾವುದೇ ಆಶ್ವಾಸನೆ ನೀಡಲಾರೆ, ಬಧ್ಧತೆ ವ್ಯಕ್ತಪಡಿಸಲಾರೆ ಅಂತ ಪುಟನ್ ಹೇಳಿದರೆಂದು ಅಧ್ಯಕ್ಷ ಮ್ಯಾಕ್ರನ್ ತಿಳಿಸಿದ್ದಾರೆ,’ ಎಂದು ಸಹವರ್ತಿ ಸುದ್ದಿಗಾರರಿಗೆ ಹೇಳಿದ್ದಾರೆ. ಉಕ್ರೇನಿನ ನಾಗರಿಕ ಮೂಲ ಸೌಕರ್ಯಗಳು ಮತ್ತು ಜನವಸತಿ ಕಟ್ಟಡಗಳ ಮೇಲೆ ರಷ್ಯನ್ ಪಡೆಗಳು ದಾಳಿ ನಡೆಸುತ್ತಿವೆ ಎನ್ನವುದನ್ನು ಪುಟಿನ್ ತಳ್ಳಿಹಾಕಿದ್ದಾರೆ, ಎಂದು ಅವರು ಹೇಳಿದರು.

ರಷ್ಯಾ ನಡೆಸುತ್ತಿರುವ ದಾಳಿಯ ವೆಚ್ಚ ಹೆಚ್ಚಾಗುವಂತೆ ಮಾಡಲು ಆ ದೇಶದ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರುವಂತೆ ತಾನು ಬೇರೆ ರಾಷ್ಟ್ರಗಳಿಗೆ ಮನವಿ ಮಾಡುವುದಾಗಿ ಮ್ಯಾಕ್ರನ್ ಹೇಳಿದ್ದಾರೆಂದು ಸಹವರ್ತಿ ಹೇಳಿದ್ದಾರೆ. ಮಾತುಕತೆ ಜಾರಿಯಲ್ಲಿರುವಾಗ ಇಬ್ಬರು ನಾಯಕರ ನಡುವೆ ಉದ್ವಿಗ್ನತೆ ಉಂಟಾಗಲಿಲ್ಲ ಎಂದು ಅವರು ಹೇಳಿದರು.

‘ಅಧ್ಯಕ್ಷ ಪುಟಿನ್ ಅವರು ತುಂಬಾ ತಟಸ್ಥ ಮತ್ತು ಅತ್ಯಂತ ಕ್ಲಿನಿಕಲ್ ಆಗಿ ಮಾತನಾಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಕೆಲವೊಮ್ಮೆ ಅವರು ಅಸಹನೆಯ ಲಕ್ಷಣಗಳನ್ನು ತೋರಿಸುತ್ತಾರೆ, ಆದರೆ ಮೂಲಭೂತವಾಗಿ ಮಾತುಕತೆಯ ಸಮಯದಲ್ಲಿ ಉದ್ವಿಗ್ನತೆಯ ಯಾವುದೇ ಬಹಿರಂಗ ಚಿಹ್ನೆಗಳು ಕಾಣಲಿಲ್ಲ,’ ಎಂದು ಸಹವರ್ತಿ ಹೇಳಿದರು.

ಇದನ್ನೂ ಓದಿ:  ಅನಿವಾರ್ಯವಾಗಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸಕ್ಕೆ ಇಳಿದ ರಷ್ಯಾ, ಅತ್ಯಂತ ಅಪಾಯಕಾರಿ ಅಸ್ತ್ರ ಪ್ರಯೋಗಕ್ಕೆ ಸಜ್ಜಾಯಿತು!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ