Ukraine Crisis: ಆಪರೇಷನ್ ಗಂಗಾ; ಯುದ್ಧಪೀಡಿತ ಉಕ್ರೇನ್​ನಿಂದ 10,800 ಭಾರತೀಯರ ಸ್ಥಳಾಂತರ

Operation Ganga : 7 ಐಎಎಫ್ ವಿಮಾನಗಳು ಒಟ್ಟು 1,428 ಭಾರತೀಯ ಪ್ರಜೆಗಳನ್ನು ಮರಳಿ ಕರೆತಂದಿವೆ ಮತ್ತು ಉಕ್ರೇನ್‌ಗೆ 9.7 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ.

Ukraine Crisis: ಆಪರೇಷನ್ ಗಂಗಾ; ಯುದ್ಧಪೀಡಿತ ಉಕ್ರೇನ್​ನಿಂದ 10,800 ಭಾರತೀಯರ ಸ್ಥಳಾಂತರ
ಏರ್ ಇಂಡಿಯಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 04, 2022 | 6:25 PM

ನವದೆಹಲಿ: ಆಪರೇಷನ್ ಗಂಗಾ (Operation Ganga) ಯೋಜನೆಯ ಅಡಿಯಲ್ಲಿ ಉಕ್ರೇನ್‌ನ (Ukraine) ನೆರೆಯ ದೇಶಗಳಿಂದ ವಿಶೇಷ ವಿಮಾನಗಳ ಮೂಲಕ ಸುಮಾರು 10,800 ಭಾರತೀಯರನ್ನು ಮರಳಿ ಕರೆತರಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಭಾರತೀಯ ವಾಯುಪಡೆಯ (Indian Air Force) ಮೂರು C-17 ವಿಮಾನಗಳು ಮತ್ತು 14 ನಾಗರಿಕ ವಿಮಾನಗಳ ಮೂಲಕ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನಡೆಸಲಾಯಿತು. ಮತ್ತೊಂದು ನಾಗರಿಕ ವಿಮಾನವು ಇಂದು ರಾತ್ರಿಯೊಳಗೆ ಆಗಮಿಸುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ಪ್ರಕಾರ, C-17 ವಿಮಾನವು 630 ಪ್ರಯಾಣಿಕರನ್ನು ಕರೆದೊಯ್ದಿತ್ತು. ಆದರೆ, ನಾಗರಿಕ ವಿಮಾನಗಳು 9,364 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಿದವು. 7 ಐಎಎಫ್ ವಿಮಾನಗಳು ಒಟ್ಟು 1,428 ಭಾರತೀಯ ಪ್ರಜೆಗಳನ್ನು ಮರಳಿ ಕರೆತಂದಿವೆ ಮತ್ತು ಉಕ್ರೇನ್‌ಗೆ 9.7 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ.

ಇಂದು ನಾಗರಿಕ ವಿಮಾನಗಳಲ್ಲಿ ಬುಕಾರೆಸ್ಟ್ (ರೊಮೇನಿಯಾ), 2 ಕೊಸಿಸ್ (ಸ್ಲೋವಾಕಿಯಾ), 4 ಬುಡಾಪೆಸ್ಟ್ (ಹಂಗೇರಿ), 3 ರ್ಜೆಸ್ಜೋವ್ (ಪೋಲೆಂಡ್) ನಿಂದ 4 ವಿಮಾನಗಳು ಸೇರಿದ್ದವು. IAF ಬುಕಾರೆಸ್ಟ್‌ನಿಂದ 2 ಮತ್ತು ಬುಡಾಪೆಸ್ಟ್‌ನಿಂದ 1 ವಿಮಾನಗಳ ಮೂಲಕ ಭಾರತೀಯರನ್ನು ವಾಪಾಸ್ ಕರೆತಂದಿದೆ. ಶನಿವಾರ 11 ವಿಶೇಷ ನಾಗರಿಕ ವಿಮಾನಗಳು 2,200ಕ್ಕೂ ಹೆಚ್ಚು ಭಾರತೀಯರನ್ನು ಮರಳಿ ಕರೆತರುವ ನಿರೀಕ್ಷೆಯಿದೆ. 10 ಹೊಸ ದೆಹಲಿಯಲ್ಲಿ ಮತ್ತು ಒಂದು ಮುಂಬೈನಲ್ಲಿ ಇಳಿಯಲಿದೆ. ಐದು ವಿಮಾನಗಳು ಬುಡಾಪೆಸ್ಟ್‌ನಿಂದ, ಎರಡು ರ್ಜೆಸ್ಜೋವ್‌ನಿಂದ ಮತ್ತು ನಾಲ್ಕು ಸುಸೇವಾದಿಂದ ಸಂಚರಿಸಲಿವೆ.

ಉಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಯ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಾಲ್ವರು ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿ.ಕೆ. ಸಿಂಗ್ ವಹಿಸಿಕೊಂಡಿದ್ದು, ಅದಕ್ಕೆಂದು ಈಗಾಗಲೇ ಉಕ್ರೇನ್‌ಗೆ ಹೊಂದಿಕೊಂಡಿರುವ ದೇಶಗಳಿಗೆ ಹೋಗಿದ್ದಾರೆ. ಭಾರತೀಯ ನಾಗರಿಕ ವಿಮಾನಗಳು ಮತ್ತು ಭಾರತೀಯ ವಾಯುಪಡೆಯ ವಿಮಾನಗಳು ನಿಯಮಿತವಾಗಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರುತ್ತಿವೆ.

ಒಟ್ಟಾರೆಯಾಗಿ, 31 ವಿಮಾನಗಳು ಮಾರ್ಚ್ 8ರವರೆಗೆ ಕಾರ್ಯ ನಿರ್ವಹಿಸಲಿದ್ದು, 6,300ಕ್ಕೂ ಹೆಚ್ಚು ಜನರನ್ನು ಕರೆತರಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ವಿಮಾನಗಳು ಸುಮಾರು 180 ಜನರ ಸಾಮರ್ಥ್ಯವನ್ನು ಹೊಂದಿದ್ದು, ಏರ್ ಇಂಡಿಯಾ ಮತ್ತು ಇಂಡಿಗೋ ಕ್ರಮವಾಗಿ 250 ಮತ್ತು 216 ಪ್ರಯಾಣಿಕರನ್ನು ಸಾಗಿಸಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Operation Ganga: ಉಕ್ರೇನ್​ ಸಂಘರ್ಷ; ಪ್ರಧಾನಿ ಮೋದಿ ನೇತೃತ್ವದಲ್ಲಿ 5ನೇ ಬಾರಿಗೆ ಉನ್ನತ ಮಟ್ಟದ ಸಭೆ

Russia- Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನಿಂದಾಗಿ 13 ವರ್ಷಗಳ ನಂತರ ಅತ್ಯಧಿಕ ಮಟ್ಟಕ್ಕೆ ಏರಿದ ಗೋಧಿ ಬೆಲೆ

Published On - 6:24 pm, Fri, 4 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್