Shocking News: ರಾತ್ರಿ ವೇಳೆ ಬೀದಿ ನಾಯಿ ಮೇಲೆ ಕಾಮುಕನಿಂದ ಅತ್ಯಾಚಾರ!

Shocking News: ರಾತ್ರಿ ವೇಳೆ ಬೀದಿ ನಾಯಿ ಮೇಲೆ ಕಾಮುಕನಿಂದ ಅತ್ಯಾಚಾರ!
ಬೀದಿ ನಾಯಿ (ಸಂಗ್ರಹ ಚಿತ್ರ)

Crime News Today: ಬುಧವಾರ ರಾತ್ರಿ ರಿಜ್ವಾನ್ ತನ್ನ ಮನೆಯ ಎದುರಿದ್ದ ನಾಯಿಗಳಲ್ಲಿ ಒಂದನ್ನು ಬಲವಂತವಾಗಿ ಎಳೆದುಕೊಂಡು ಹೋಗಿ, ಅತ್ಯಾಚಾರ ನಡೆಸಿದಾಗ ಅದರ ಜೊತೆಗಿದ್ದ ಬೇರೆ ಬೀದಿ ನಾಯಿಗಳು ಬೊಗಳುತ್ತಿದ್ದವು.

TV9kannada Web Team

| Edited By: Sushma Chakre

Mar 04, 2022 | 7:58 PM

ಮುಂಬೈ: ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ (Dog). ನಾಯಿಗೆ ನೀವು ಒಂದೆರಡು ತುತ್ತು ಅನ್ನ ಹಾಕಿದರೆ ಅದು ಎಂದಿಗೂ ನಿಮ್ಮನ್ನು ಮರೆಯುವುದಿಲ್ಲ. ಆದರೆ, ಅಮಾಯಕ ನಾಯಿಗಳ ಮೇಲೆ ಮನುಷ್ಯರ ದೌರ್ಜನ್ಯ ಕಡಿಮೆಯಾಗಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧೆಯವರ ಮೇಲೂ ಅತ್ಯಾಚಾರ (Rape) ನಡೆಸುತ್ತಿದ್ದ ಬೀದಿ ಕಾಮಣ್ಣರು ಬೀದಿ ನಾಯಿಗಳ ಮೇಲೂ ತಮ್ಮ ಕಾಮತೃಷೆ ತೀರಿಸಿಕೊಂಡಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಬೀದಿ ನಾಯಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರದ ಅಂಬರ್‌ನಾಥ್‌ನಲ್ಲಿ 45 ವರ್ಷದ ರಿಜ್ವಾನ್ ಶೇಖ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಆರೋಪಿ ತನ್ನ ಮನೆಯ ಎದುರಿನ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಬೀದಿ ನಾಯಿಯನ್ನು ಬಲವಂತವಾಗಿ ಮನೆಯೊಳಗೆ ಎಳೆದುಕೊಂಡು ಹೋಗುವುದನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ನೋಡಿದ್ದರು. ಇದರಿಂದ ಅನುಮಾನಗೊಂಡ ಅವರು ಆತನ ಮೇಲೆ ಒಂದು ಕಣ್ಣಿಟ್ಟಿದ್ದರು. ಬಳಿಕ ಆ ಬೀದಿ ನಾಯಿ ತೀವ್ರ ನೋವಿನಿಂದ ರಸ್ತೆಯಲ್ಲಿ ಬಿದ್ದು ಹೊರಳಾಡುತ್ತಿದ್ದುದನ್ನು ನೋಡಿದ ಅವರು ಆ ನಾಯಿಯನ್ನು ಪಶು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಆ ನಾಯಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂಬುದು ಗೊತ್ತಾಗಿದೆ.

ಆರೋಪಿ ರಿಜ್ವಾನ್ ಶೇಖ್ ಅಂಬರನಾಥದ ಸಿದ್ಧಾರ್ಥನಗರದಲ್ಲಿ ವಾಸಿಸುತ್ತಿದ್ದು, ದಿನಗೂಲಿ ಕೆಲಸ ಮಾಡುತ್ತಿದ್ದ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಬುಧವಾರ ರಾತ್ರಿ ರಿಜ್ವಾನ್ ತನ್ನ ಮನೆಯ ಎದುರಿದ್ದ ನಾಯಿಗಳಲ್ಲಿ ಒಂದನ್ನು ಬಲವಂತವಾಗಿ ತನ್ನ ಮನೆಯೊಳಗೆ ಕರೆದೊಯ್ದಾಗ ಕೆಲವು ಬೀದಿ ನಾಯಿಗಳು ಬೊಗಳುತ್ತಿದ್ದವು. ಆದರೆ, ರಿಜ್ವಾನ್ ಶೇಖ್ ತನ್ನ ಮನೆಯ ಬಾಗಿಲನ್ನು ಲಾಕ್ ಮಾಡಿ, ಆ ಹೆಣ್ಣು ನಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ಮಾರ್ಚ್ 3ರಂದು ರಿಜ್ವಾನ್ ಶೇಖ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿಯ ಮನೆಯ ಬಳಿ ವಾಸಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಮತ್ತು ಆತನ ಕುಟುಂಬದವರು ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ನಾಯಿಯ ಸ್ಥಿತಿ ಹದಗೆಟ್ಟಿರುವುದನ್ನು ಕಂಡ ಅವರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಾಯಿ ಈಗ ಚೇತರಿಸಿಕೊಳ್ಳುತ್ತಿದೆ. ಆರೋಪಿಯ ವಿರುದ್ಧ ಐಪಿಸಿ 377ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದೇವೆ ಎಂದಿದ್ದಾರೆ.

ವ್ಯಕ್ತಿಯೊಬ್ಬ ಪ್ರಾಣಿಯ ಮೇಲೆ ಅತ್ಯಾಚಾರ ನಡೆಸಿರುವುದು ಇದೇ ಮೊದಲೇನಲ್ಲ. 2021ರ ಮಾರ್ಚ್ ತಿಂಗಳಲ್ಲಿ ತರಕಾರಿ ಮಾರಾಟಗಾರನಾಗಿದ್ದ ಮುಂಬೈನ ಜುಹು ಗಲ್ಲಿಯ ನಿವಾಸಿ ಅಹ್ಮದ್ ಶಾ ಅಂಧೇರಿ ಬಳಿ ಹೆಣ್ಣು ಬೀದಿನಾಯಿಯ ಮೇಲೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದ. ಆತನನ್ನು ಬಂಧಿಸಲಾಗಿತ್ತು. 2022ರ ಫೆಬ್ರವರಿಯಲ್ಲಿ ಹಸುವಿನ ಮೇಲೆ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿದ್ದಕ್ಕಾಗಿ ಜುಬೈರ್ ಮತ್ತು ಚುನಾ ಎಂಬುವವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Murder: ಮಗಳನ್ನೇ ಕೊಂದು ಆಕೆಯ ಶವದ ಮೇಲೆ ಅತ್ಯಾಚಾರ ನಡೆಸಿದ ಅಪ್ಪ!

Gang Rape: ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ; 14 ವರ್ಷದ ಬಾಲಕಿಯ ಶವ ಗೋಣಿಚೀಲದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

Follow us on

Related Stories

Most Read Stories

Click on your DTH Provider to Add TV9 Kannada