Viral Video: ಹೆಪ್ಪುಗಟ್ಟಿದ ನದಿಯಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆ: ಅಗ್ನಿಶಾಮಕ ಸಿಬ್ಬಂದಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ

ಹೆಪ್ಪುಗಟ್ಟಿದ ನದಿಯಲ್ಲಿ ಸಿಲುಕಿಕೊಂಡ ನಾಯಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Viral Video: ಹೆಪ್ಪುಗಟ್ಟಿದ ನದಿಯಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆ: ಅಗ್ನಿಶಾಮಕ ಸಿಬ್ಬಂದಿ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ
ನಾಯಿಯ ರಕ್ಷಣೆ
Follow us
TV9 Web
| Updated By: Pavitra Bhat Jigalemane

Updated on:Mar 06, 2022 | 2:44 PM

ಪ್ರಾಣಿಗಳೂ ನಮ್ಮಂತೆ ಜೀವಿಗಳು. ಅವುಗಳನ್ನು ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಹೆಪ್ಪುಗಟ್ಟಿದ ನದಿ (Frozen River) ಯಲ್ಲಿ ಸಿಲುಕಿಕೊಂಡ ನಾಯಿಯನ್ನು ಅಗ್ನಿಶಾಮಕ ದಳದಸಿಬ್ಬಂದಿ ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಿಚೆಗಾನ್​​ನ ಡಟ್ರಾಯಿಟ್​ ನದಿ (Detroit River)ಯಲ್ಲಿ ಸಿಲುಕಿದ್ದ ಲ್ಯಾಬ್ರಡೂಡಲ್ (Labradoodle)​ ನಾಯಿಯನ್ನು ರಕ್ಷಿಸಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

ಲೂಸಿ ಎನ್ನುವ ನಾಯಿ ತನ್ನ ಮಾಲೀಕರೊಂದೊಗೆ ವಾಕಿಂಗ್​ ತೆರಳುವಾಗ, ತಪ್ಪಿಸಿಕೊಂಡು ಓಡಿದೆ. ಈ ವೇಳೆ ಅಚಾನಕ್​ ಆಗಿ ಹೆಪ್ಪುಗಟ್ಟಿದ ನದಿಗೆ ಬಿದ್ದಿದೆ. ಇದರಿಂದ ಆತಂಕಗೊಂಡ ಮಾಲೀಕ ತಕ್ಷಣ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ನಾಯಿಯನ್ನು ರಕ್ಷಿಸಿದ್ದಾರೆ. ಈ ಹೃದಯ ಸ್ಪರ್ಶಿ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

ವಿಡಿಯೋದಲ್ಲಿ ಸಿಬ್ಬಂದಿ ಏಣಿ ಮೂಲಕ ಹೆಪ್ಪುಗಟ್ಟಿದ ನದಿಗೆ ಇಳಿದಿದ್ದಾರೆ. ನಂತರ ಕೋಲಿನ ಮೂಲಕ ,ಕೈಚಾಚಿ ನಾಯಿಯ ಕುತ್ತಿಗೆಗೆ ಹಾಕಿ ಎಳೆದಿದ್ದಾರೆ. ಹೆಪ್ಪಿಗಟ್ಟಿದ ನೀರಿನಲ್ಲಿ ಸಿಲುಕಿದ್ದ ನಾಯಿ ಮೊದಲು ಹೊರಬರಲು ಕಷ್ಟಪಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಮತ್ತೆ ನಾಯಿಯನ್ನು ಎಳೆದು ಮೇಲಕ್ಕೆ ಎತ್ತಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಪಟ್ಟೆ ವೈರಲ್​ ಆಗಿದೆ.  47 ಸೆಕೆಂಡುಗಳ ಈ ವಿಡಿಯೋವನ್ನು ಮಾರ್ಚ್​ 2 ರಂದು ಹಂಚಿಕೊಳ್ಳಲಾಗಿದೆ.  ಸಿಬ್ಬಂದಿ ಕೆಲಸಕ್ಕೆ ಜಗತ್ತಿನಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:

300 ವರ್ಷ ಹಳೆಯ ಮತ್ಸ್ಯಕನ್ಯೆ ರೂಪದ ಮಮ್ಮಿ ಪತ್ತೆ: ಅಚ್ಚರಿಗೊಂಡ ವಿಜ್ಞಾನಿಗಳು

Published On - 2:44 pm, Sun, 6 March 22