ಅಳುತ್ತಿದ್ದ ಪ್ರಯಾಣಿಕರ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ಗಗನಸಖಿ: ವಿಡಿಯೋ ವೈರಲ್​

ಅಳುತ್ತಿದ್ದ ಪ್ರಯಾಣಿಕರ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ ಗಗನಸಖಿ: ವಿಡಿಯೋ ವೈರಲ್​
ಮಗುವನ್ನು ಸಮಾಧಾನಿಸುತ್ತಿರುವ ಗಗನಸಖಿ

ವಿಮಾನದಲ್ಲಿ  ಪ್ರಯಾಣಿಕರೋರ್ವರ ಮಗು ಒಂದೇ ಸಮನೆ ಅಳುತ್ತಿತ್ತು. ಆಗ ಗಗನ ಸಖಿಯೊಬ್ಬರು ಬಂದು ಮಗುವನ್ನು ಎತ್ತಿಕೊಂಡು ಭುಜಕ್ಕೆ ಆನಿಸಿಕೊಂಡು ಸಾಮಾಧಾನ ಮಾಡಿದ್ದಾರೆ. ವಿಡಿಯೋ ವೈರಲ್​ ಆಗಿದೆ.

TV9kannada Web Team

| Edited By: Pavitra Bhat Jigalemane

Mar 05, 2022 | 5:00 PM

ಗಗನ ಸಖಿಯಾಗಲಿ ಅಥವಾ ಬೇರೆ ಯಾವುದೇ ಹುದ್ದೆಯಲ್ಲಿರಲಿ ಹೆಣ್ಣು ಯಾವತ್ತೂ ಮಾತೃ ಹೃದಯವನ್ನು ಹೊಂದಿರುತ್ತಾಳೆ. ಅದಕ್ಕೆ ಉದಾಹರಣೆ ಎಂಬಂತೆ ಗಗನ ಸಖಿಯೊಬ್ಬರು (Air Hostess) ಆಗಿದೆ. ಬ್ರೆಜಿಲ್ (Brazil)​ ವಿಮಾನವೊಂದರಲ್ಲಿ ಈ ಘಟನೆ ನಡೆದಿದೆ. ಬ್ರೆಸಿಲಿಯಾದಿಂದ ಕ್ಯುಯಾಬಾಕ್ಕೆ ಹೊರಟಿದ್ದ ವಿಮಾನದಲ್ಲಿ  ಪ್ರಯಾಣಿಕರೋರ್ವರ ಮಗು ಒಂದೇ ಸಮನೆ ಅಳುತ್ತಿತ್ತು. ಆಗ ಗಗನಸಖಿಯೊಬ್ಬರು ಬಂದು ಮಗುವನ್ನು ಎತ್ತಿಕೊಂಡು ಭುಜಕ್ಕೆ ಆನಿಸಿಕೊಂಡು ಸಾಮಾಧಾನ ಮಾಡಿದ್ದಾರೆ.

ವಿಡಿಯೋವನ್ನು ಗುಡ್​ ನ್ಯೂಸ್​ ಮೂವ್​ಮೆಂಟ್​ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಗಗನಸಖಿ ಅಳುವ ಮಗುವನ್ನು ಎತ್ತಿಕೊಂಡು ಭುಜಕ್ಕೆ ಒರಗಿಸಿಕೊಂಡಿರುವುದನ್ನು ಕಾಣಬಹುದು.  ಗುಡ್​ ನ್ಯೂಸ್​ ಮೂವ್​ಮೆಂಟ್ ಹಂಚಿಕೊಂಡಿರುವ ಪೋಸ್ಟ್​ಗೆ, ರಮಿಸುವ ಮಗುವನ್ನು ಗಗನಸಖಿಯೊಬ್ಬರು ಮೊದಲು ಸಾಮಾಧಾನಪಡಿಸಲು ನೋಡಿದರು. ಆದರೆ ಮಗು ಅಳು ನಿಲ್ಲಿಸಲಿಲ್ಲ. ಆಗ ಅವರು  ಮಗುವನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡು ಮಗು ಅಳು ನಿಲ್ಲಿಸಿ ನಿದ್ದೆ ಮಾಡಿಸಿದ್ದಾರೆ. ಅವರ ಪ್ರೀತಿ ಕಂಡು ಚಕಿತರಾಗಿದ್ದೇವೆ ಎಂದು ಕ್ಯಾಪ್ಷನ್​ ನೀಡಿದ್ದಾರೆ.

ವೈರಲ್​ ಆದ ವಿಡಿಯೋ 2 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು, ಆಕೆಯು ತಾಯಿ ಎನ್ನುವುದನ್ನು ಇದರಿಂದಲೇ ಕಂಡುಕೊಳ್ಳಬಹುದು ಎಂದು ಬಳಕೆದಾರರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಒಂದೇ ದಿನ ತ್ರಿವಳಿ ಸಹೋದರಿಯರನ್ನು ಮದುವೆಯಾದ ಯುವಕ: ವೈರಲ್​ ಆಯ್ತು ಪೋಟೋ

Follow us on

Related Stories

Most Read Stories

Click on your DTH Provider to Add TV9 Kannada